ಗಡಿ ಮೀರಿದ ಮಾಲಿನ್ಯ: ಉಸಿರುಗಟ್ಟಿಸುವ ವಿಷಗಾಳಿಯಲ್ಲಿ ಬೆಂದ ದೆಹಲಿ, ಕಂಗೆಟ್ಟ ಲಾಹೋರ್

Date:

ದೇಶದ ರಾಜಧಾನಿ ನವದೆಹಲಿ ನಿಯಮಗಳನ್ನು ಗಾಳಿಗೆ ತೂರಿ ತನ್ನ ಕಾಲ ಮೇಲೆ ತಾನೇ ಕಲ್ಲು ಹಾಕಿಕೊಂಡರೆ, ಇತ್ತ ಗಡಿಯಾಚೆ ಪಾಕಿಸ್ತಾನದ ಪಂಜಾಬ್ ಪ್ರಾಂತ್ಯದ ರಾಜಧಾನಿ ಲಾಹೋರ್ ಕೂಡ ತೀವ್ರ ವಾಯುಮಾಲಿನ್ಯದ ಸುಳಿಯಲ್ಲಿ ಸಿಲುಕಿದೆ. ಸುಪ್ರೀಂ ಕೋರ್ಟ್ ಆದೇಶಗಳ ಸ್ಪಷ್ಟ ಉಲ್ಲಂಘನೆ ಹಾಗೂ ದೀಪಾವಳಿ ಹಬ್ಬದ ಆಚರಣೆಯ ಬೆನ್ನಲ್ಲೇ ಈ ಎರಡೂ ಪ್ರಮುಖ ನಗರಗಳು ದಟ್ಟವಾದ ವಿಷಗಾಳಿಯ ಕಾವಳದಲ್ಲಿ ಮುಳುಗಿವೆ. ಪರಿಸರ ಕಾಳಜಿಯನ್ನು ಕಡೆಗಣಿಸಿದ ಪರಿಣಾಮವಾಗಿ, ಉಭಯ ನಗರಗಳ ಜನತೆ ಇಂದು ಶುದ್ಧ ಗಾಳಿಗಾಗಿ ಪರದಾಡುವಂತಹ ದುಸ್ಥಿತಿ ನಿರ್ಮಾಣವಾಗಿದೆ.

- Advertisement -

ಪಟಾಕಿ ತಯಾರಿಕೆ, ಮಾರಾಟ ಮತ್ತು ಸಿಡಿಸುವಿಕೆ ಮೇಲೆ ಸುಪ್ರೀಂ ಕೋರ್ಟ್ ಕಟ್ಟುನಿಟ್ಟಿನ ನಿರ್ಬಂಧ ಹೇರಿದ್ದರೂ, ದೆಹಲಿಯಲ್ಲಿ ಅದು ಕೇವಲ ಆದೇಶಕ್ಕಷ್ಟೇ ಸೀಮಿತವಾಗಿದೆ. ಮಿತಿಮೀರಿದ ಪಟಾಕಿ ಬಳಕೆಯಿಂದಾಗಿ ವಾಯು ಗುಣಮಟ್ಟ ಸೂಚ್ಯಂಕ (ಎಕ್ಯೂಐ) ತೀವ್ರ ಕುಸಿತ ಕಂಡಿದೆ. ದೀಪಾವಳಿ ಮರುದಿನ ಬೆಳಿಗ್ಗೆ ಕೊಂಚ ಸುಧಾರಣೆಯಾಗಿ 304ರ ಆಸುಪಾಸಿಗೆ ಬಂದರೂ, ಗಾಳಿಯ ಗುಣಮಟ್ಟ ಈಗಲೂ ‘ಅತ್ಯಂತ ಕಳಪೆ’ ಹಂತದಲ್ಲೇ ಮುಂದುವರಿದಿದೆ. ಅತ್ಯಂತ ಆಘಾತಕಾರಿ ಸಂಗತಿಯೆಂದರೆ, ಮಾಲಿನ್ಯ ತೀವ್ರ ಸ್ವರೂಪ ಪಡೆದುಕೊಂಡಿದ್ದ ನಿರ್ಣಾಯಕ ಸಮಯದಲ್ಲೇ ದೆಹಲಿಯ ಹಲವು ವಾಯುಗುಣಮಟ್ಟ ಮಾಪನ ಕೇಂದ್ರಗಳು ಕಾರ್ಯನಿರ್ವಹಿಸದೆ ಮಾಹಿತಿ ನೀಡುವುದನ್ನೇ ಸ್ಥಗಿತಗೊಳಿಸಿದ್ದವು ಎಂದು ವರದಿಗಳು ಬೆಟ್ಟು ಮಾಡಿವೆ.

ಇನ್ನಷ್ಟು ವಿಶೇಷ ಲೇಖನಗಳಿಗಾಗಿ, ಇಲ್ಲಿ ಕ್ಲಿಕ್ ಮಾಡಿ →

ಪಾತಾಳ ಸೀಳಿ ಪೈರಾಗಿ ಎದ್ದವನು: ಕನ್ನಡ ಮನಸ್ಸಿನಲ್ಲಿ ಬಲೀಂದ್ರನ...

ಸತ್ಯನಿಷ್ಠೆ, ಮಹೋದಾರತೆ ಮತ್ತು ಶ್ರಮಸಂಸ್ಕೃತಿಯ ಫಲವಂತಿಕೆಯಾಗಿ ಸಾವನ್ನು ಗೆದ್ದು ಜನಮಾನಸದಲ್ಲಿ ನೆಲೆಗೊಂಡಿರುವ ಬಲಿ ಕೇವಲ ಸೋಲಿನ ಸಂಕೇತವಲ್ಲ; ಆತ ಚಾರಿತ್ರಿಕವಾಗಿ ಪ್ರಭುತ್ವದ ವಂಚನೆಯನ್ನು ಬಯಲು ಮಾಡುವ ಜೀವಂತ ಪ್ರತಿರೋಧ. ಊರಿಗೆಲ್ಲ ದೀಪಾವಳಿಯು ಬೆಳಕಿನ ಸಂಭ್ರಮವಾದರೆ,...

ಗದಗ | ಬದುಕ ಬೆಳಗಿತು ಹಣತೆ: ಕುಂಬಾರಿಕೆಗೆ ಮರು...

ಆಧುನಿಕತೆಯ ಭರಾಟೆಯಲ್ಲಿ ಸಾಂಪ್ರದಾಯಿಕ ಕುಂಬಾರಿಕೆ ವೃತ್ತಿ ನಿಧಾನವಾಗಿ ಮರೆಯಾಗುತ್ತಿರುವ ಈ ಸಂದರ್ಭದಲ್ಲಿ, ರೋಣ ತಾಲೂಕಿನ ಕುರಹಟ್ಟಿ ಗ್ರಾಮದ ಮಹಿಳೆಯೊಬ್ಬರು ತಮ್ಮ ಕುಟುಂಬದ ಕುಲಕಸುಬನ್ನೇ ಆದಾಯದ ಪ್ರಮುಖ ಮೂಲವನ್ನಾಗಿಸಿಕೊಂಡು ಸ್ವಾವಲಂಬಿ ಬದುಕಿನತ್ತ ಹೆಜ್ಜೆಯಿಟ್ಟಿದ್ದಾರೆ. ಸಂಜೀವಿನಿ...

ಬೆಳಕಿನ ಹಬ್ಬಕ್ಕೆ ಮಾಲಿನ್ಯದ ಕತ್ತಲು; ದೆಹಲಿ ಜನ ಪಾಠ...

ವರ್ಷಕ್ಕೊಮ್ಮೆ ಬರುವ ದೀಪಾವಳಿ ಹಬ್ಬವನ್ನು ಕೇವಲ ದೀಪಗಳ ಹಬ್ಬವೆಂದು ನೋಡದೆ, ಬೆಳಕಿನ ಸಂಭ್ರಮದ ಪ್ರತೀಕವಾಗಿಯೂ ಪರಿಗಣಿಸಲಾಗಿದೆ. ಆದರೆ ರಾಷ್ಟ್ರ ರಾಜಧಾನಿ ದೆಹಲಿಯಲ್ಲಿ ಈ ಹಬ್ಬ ಪ್ರತಿವರ್ಷವೂ 'ಉಸಿರುಗಟ್ಟಿಸುವ ನರಕಯಾತನೆ'ಯಾಗಿ ಬದಲಾಗುತ್ತಿರುವುದು ಕಟು ಸತ್ಯ....

ದೆಹಲಿಗೆ ಈ ಉಸಿರುಗಟ್ಟುವ ವಾತಾವರಣವೇನೂ ಹೊಸದಲ್ಲ. ಕಳೆದ ಒಂಬತ್ತು ವರ್ಷಗಳ ಅಂಕಿಅಂಶಗಳನ್ನು ವಿಶ್ಲೇಷಿಸಿದರೆ, ಎಂಟು ವರ್ಷಗಳ ಕಾಲ ದೀಪಾವಳಿಯ ಮರುದಿನ ರಾಜಧಾನಿಯ ವಾಯುಗುಣಮಟ್ಟ ಅತ್ಯಂತ ಕಳಪೆ ಮಟ್ಟಕ್ಕೆ ಕುಸಿದಿರುವುದು ದೃಢಪಟ್ಟಿದೆ. ‘ದೆಹಲಿಯಲ್ಲಿ ಮಾಲಿನ್ಯ ನಿಯಂತ್ರಣಕ್ಕೆ ಅಗತ್ಯವಿರುವ ಎಲ್ಲ ನೀತಿ-ನಿಯಮಗಳಿದ್ದರೂ, ಪರಿಣಾಮಕಾರಿ ಅನುಷ್ಠಾನ ಮಾತ್ರ ಎಲ್ಲೂ ಕಾಣುತ್ತಿಲ್ಲ’ ಎಂದು ಪರಿಸರ ಹೋರಾಟಗಾರ್ತಿ ಭವ್ರೀನ್ ಕಂಧಾರಿ ಕಳವಳ ವ್ಯಕ್ತಪಡಿಸಿದ್ದಾರೆ. ಕೈಗಾರಿಕಾ ಹೊರಸೂಸುವಿಕೆ ಮತ್ತು ನಿಯಮಗಳ ಜಾರಿಯಲ್ಲಿ ಆಡಳಿತ ಯಂತ್ರದ ಸಂಪೂರ್ಣ ವೈಫಲ್ಯವೇ ಈ ದುಸ್ಥಿತಿಗೆ ಪ್ರಮುಖ ಕಾರಣ ಎಂಬುದು ತಜ್ಞರ ಸ್ಪಷ್ಟ ಅಭಿಪ್ರಾಯ.

ಇನ್ನೊಂದೆಡೆ, ಪಾಕಿಸ್ತಾನದ ಪಂಜಾಬ್ ಪ್ರಾಂತ್ಯದ ರಾಜಧಾನಿ ಲಾಹೋರ್ ಪರಿಸ್ಥಿತಿ ಕೂಡ ಭಿನ್ನವಾಗಿಲ್ಲ. ಜಗತ್ತಿನ ಅತ್ಯಂತ ಕಲುಷಿತ ನಗರಗಳ ಪಟ್ಟಿಯಲ್ಲಿ ಲಾಹೋರ್ ಅಗ್ರಸ್ಥಾನಕ್ಕೇರಿದೆ. ಭಾರತದ ಪಂಜಾಬ್‌ ಭಾಗದಲ್ಲಿ ಸುಡುವ ಕೃಷಿ ತ್ಯಾಜ್ಯದ ಹೊಗೆ ಹಾಗೂ ದೀಪಾವಳಿ ಪಟಾಕಿಯ ಹೊಗೆ, ಗಾಳಿಯ ದಿಕ್ಕಿಗೆ ಅನುಗುಣವಾಗಿ ಕೇವಲ 5 ರಿಂದ 13 ಗಂಟೆಗಳಲ್ಲಿ ಲಾಹೋರ್‌ಗೆ ತಲುಪುತ್ತಿದೆ. ಗಡಿಯಾಚೆಗಿನ ಈ ಹೊಗೆಯೇ ಲಾಹೋರ್‌ನಲ್ಲಿ ಮಾಲಿನ್ಯ ಉಲ್ಬಣಕ್ಕೆ ಬಹುಮುಖ್ಯ ಕಾರಣ ಎಂದು ಅಲ್ಲಿನ ಪ್ರಾಂತೀಯ ಪರಿಸರ ಇಲಾಖೆ ತೀವ್ರ ಕಳವಳ ವ್ಯಕ್ತಪಡಿಸಿರುವುದು ಸಮಸ್ಯೆಯ ತೀವ್ರತೆಯನ್ನು ತೋರುತ್ತದೆ.

ಲಾಹೋರ್‌ನ ಮಾಲಿನ್ಯಕ್ಕೆ ಮೂಲತಃ ಭಾರತದ ಪಂಜಾಬ್ ಪ್ರಾಂತ್ಯದ ಕೃಷಿ ತ್ಯಾಜ್ಯ ಹಾಗೂ ಪಟಾಕಿ ಮೂಲಗಳೇ ಕಾರಣವಾಗಿದೆ. ಇದೇ ವೇಳೆ, ಪಾಕಿಸ್ತಾನದ ಕಡೆಯಿಂದ ಸುಡುವ ಕೃಷಿ ತ್ಯಾಜ್ಯದ ಹೊಗೆಯೂ ದೆಹಲಿ ಮತ್ತು ಎನ್‌ಸಿಆರ್ (NCR) ವ್ಯಾಪ್ತಿಯ ಗಾಳಿಯನ್ನು ಕಲುಷಿತಗೊಳಿಸುವಲ್ಲಿ ತನ್ನದೇ ಆದ ಕೊಡುಗೆ ನೀಡುತ್ತಿದೆ ಎಂದು ಉಪಗ್ರಹ ದತ್ತಾಂಶಗಳು ಸ್ಪಷ್ಟಪಡಿಸುತ್ತವೆ. ಇದು ಉಭಯ ದೇಶಗಳ ನಡುವಿನ ಸಂಕೀರ್ಣ ಪರಿಸರ ಸಮಸ್ಯೆಯಾಗಿದೆ.

ಈ ಗಡಿಯಾಚೆಗಿನ ವಾಯುಮಾಲಿನ್ಯದ ಸಮಸ್ಯೆಗೆ ಸ್ಥಳೀಯ ವಾಹನಗಳ ಹೊಗೆ ಹಾಗೂ ಚಳಿಗಾಲದ ಹವಾಮಾನ ವೈಪರೀತ್ಯಗಳು ಮತ್ತಷ್ಟು ತುಪ್ಪ ಸುರಿದಿವೆ. ಸರ್ಕಾರಗಳು ಕೇವಲ ಕಾಗದದ ಮೇಲಷ್ಟೇ ಕಟ್ಟುನಿಟ್ಟಿನ ಆದೇಶಗಳನ್ನು ಹೊರಡಿಸುತ್ತಿವೆಯೇ ವಿನಃ, ವಾಸ್ತವದಲ್ಲಿ ಅವುಗಳ ಅನುಷ್ಠಾನವಾಗುತ್ತಿಲ್ಲ. ಕಾನೂನುಗಳನ್ನು ಉಲ್ಲಂಘಿಸಿ ಪಟಾಕಿ ಮಾರಾಟ ಮಾಡುವವರಾಗಲಿ ಅಥವಾ ಕೃಷಿ ತ್ಯಾಜ್ಯ ಸುಡುವವರಾಗಲಿ ಯಾವುದೇ ಭಯವಿಲ್ಲದೆ ವರ್ತಿಸುತ್ತಿರುವುದು ಪ್ರಸ್ತುತ ಆಡಳಿತ ವ್ಯವಸ್ಥೆಯ ಅಸಹಾಯಕತೆ ಮತ್ತು ಆಡಳಿತಾತ್ಮಕ ಲೋಪವನ್ನು ಜಗಜ್ಜಾಹೀರುಗೊಳಿಸುತ್ತಿದೆ.

ದೆಹಲಿ ಮತ್ತು ಲಾಹೋರ್ ನಗರಗಳು ಇಂದು ಮನುಷ್ಯನೇ ಸೃಷ್ಟಿಸಿಕೊಂಡ ಪರಿಸರ ವಿಪತ್ತಿಗೆ ಮೂಕಸಾಕ್ಷಿಯಾಗಿವೆ. ಮಾಲಿನ್ಯ ಎಂಬುದು ಗಡಿಗಳನ್ನು ಮೀರಿದ ಜಾಗತಿಕ ಸಮಸ್ಯೆಯಾಗಿದ್ದು, ಕೇವಲ ನಿಯಮಗಳ ರಚನೆ ಅಥವಾ ಪರಸ್ಪರ ಗೂಬೆ ಕೂರಿಸುವಿಕೆಯಿಂದ ಇದು ಬಗೆಹರಿಯುವುದಿಲ್ಲ. ಸರ್ಕಾರಗಳ ರಾಜಕೀಯ ಇಚ್ಛಾಶಕ್ತಿ, ಕಟ್ಟುನಿಟ್ಟಿನ ಕಾನೂನು ಜಾರಿ ಹಾಗೂ ಸಾರ್ವಜನಿಕರ ಜವಾಬ್ದಾರಿಯುತ ನಡವಳಿಕೆ ಇಲ್ಲದಿದ್ದರೆ, ಭವಿಷ್ಯದಲ್ಲಿ ಈ ಎರಡೂ ನಗರಗಳ ಜನತೆ ಪ್ರತಿವರ್ಷವೂ ವಿಷಗಾಳಿಯನ್ನು ಉಸಿರಾಡುತ್ತಾ ತಮ್ಮ ಆರೋಗ್ಯದ ರೂಪದಲ್ಲಿ ಭಾರಿ ಬೆಲೆ ತೆರಬೇಕಾಗುತ್ತದೆ.

eedina
ಈ ದಿನ ಡೆಸ್ಕ್‌
Website | + posts

<p><iframe src="https://www.youtube.com/embed/8qwx4L0lKFQ?autoplay=1&mute=1&loop=1&playlist=8qwx4L0lKFQ&controls=0&modestbranding=1&showinfo=0" width="560" height="315" frameborder="0" allowfullscreen="allowfullscreen"></iframe></p>

ಪೋಸ್ಟ್ ಹಂಚಿಕೊಳ್ಳಿ:

ಪೋಸ್ಟ್ ಹಂಚಿಕೊಳ್ಳಿ:

ಈ ಹೊತ್ತಿನ ಪ್ರಮುಖ ಸುದ್ದಿ

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ಪಾತಾಳ ಸೀಳಿ ಪೈರಾಗಿ ಎದ್ದವನು: ಕನ್ನಡ ಮನಸ್ಸಿನಲ್ಲಿ ಬಲೀಂದ್ರನ ಬಹುರೂಪ

ಸತ್ಯನಿಷ್ಠೆ, ಮಹೋದಾರತೆ ಮತ್ತು ಶ್ರಮಸಂಸ್ಕೃತಿಯ ಫಲವಂತಿಕೆಯಾಗಿ ಸಾವನ್ನು ಗೆದ್ದು ಜನಮಾನಸದಲ್ಲಿ ನೆಲೆಗೊಂಡಿರುವ...

ಮೋದಿ, ಶಾ ಮಾನಸಿಕ ಸಮತೋಲನ ಕಳೆದುಕೊಂಡಿದ್ದಾರೆ: ಪ್ರಧಾನಿಯ ‘ವೈಚಾರಿಕ ನಕ್ಸಲರು’ ಹೇಳಿಕೆಗೆ ಬಘೇಲ್ ತಿರುಗೇಟು

ಪ್ರಧಾನಮಂತ್ರಿ ನರೇಂದ್ರ ಮೋದಿ ಅವರು ಇತ್ತೀಚೆಗೆ ಕಾಂಗ್ರೆಸ್ ಮತ್ತು ಪ್ರತಿಪಕ್ಷಗಳ ವಿರುದ್ಧ...

ಸಿದ್ದರಾಮಯ್ಯ ಮತ್ತು ನನ್ನ ನಡುವೆ ಯಾವುದೇ ಮುನಿಸಿಲ್ಲ: ಸಿಎಂ ಡಿ ಕೆ ಶಿವಕುಮಾರ್

ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಮತ್ತು ನನ್ನ ನಡುವೆ ದೊಡ್ಡ ಮುನಿಸೂ ಇಲ್ಲ,...