ಅಮೆರಿಕದ ಕಠಿಣ ನಿರ್ಬಂಧದ ನಡುವೆಯೂ ಇರಾನ್‌ಗೆ ಅಕ್ಕಿ ರಫ್ತು ಮುಂದುವರಿಕೆ: ಭಾರತ ವಿಶ್ವಾಸ

Date:

ಅಮೆರಿಕದ ಕಠಿಣ ಆರ್ಥಿಕ ನಿರ್ಬಂಧಗಳು ಹಾಗೂ ಪಶ್ಚಿಮ ಏಷ್ಯಾದಲ್ಲಿನ ಯುದ್ಧದ ಆತಂಕದ ನಡುವೆಯೂ ಇರಾನ್‌ಗೆ ತನ್ನ ಅಕ್ಕಿ ರಫ್ತು ವಹಿವಾಟು ನಿರಂತರವಾಗಿ ಮುಂದುವರಿಯಲಿದೆ ಎಂದು ವಿಶ್ವದ ಅತಿದೊಡ್ಡ ಅಕ್ಕಿ ರಫ್ತುದಾರ ರಾಷ್ಟ್ರವಾಗಿರುವ ಭಾರತ ವಿಶ್ವಾಸ ವ್ಯಕ್ತಪಡಿಸಿದೆ. ಬೆಲೆ ಏರಿಕೆ ಮತ್ತು ಸಾಗಾಟದ ಅಡಚಣೆಗಳ ನಡುವೆಯೂ ಭಾರತದ ಅಕ್ಕಿಗೆ ಇರಾನ್‌ನಲ್ಲಿ ಬೇಡಿಕೆ ಕುಸಿದಿಲ್ಲ.

- Advertisement -

​ಉಭಯ ದೇಶಗಳ ನಡುವಿನ ವಾಣಿಜ್ಯ ವಹಿವಾಟಿನಲ್ಲಿ ಅಕ್ಕಿಯದ್ದೇ ಸಿಂಹಪಾಲು. ಮಾರ್ಚ್‌ಗೆ ಅಂತ್ಯವಾದ ಕಳೆದ ಆರ್ಥಿಕ ವರ್ಷದಲ್ಲಿ ಭಾರತವು ಇರಾನ್‌ಗೆ 1.25 ಬಿಲಿಯನ್ ಡಾಲರ್ (ಸುಮಾರು 10 ಸಾವಿರ ಕೋಟಿ) ಮೌಲ್ಯದ ಸರಕುಗಳನ್ನು ರಫ್ತು ಮಾಡಿದ್ದು, ಇದರಲ್ಲಿ ಸುಮಾರು ಮೂರನೇ ಎರಡರಷ್ಟು ಪಾಲು ಕೇವಲ ಅಕ್ಕಿಯದ್ದಾಗಿದೆ. ಅಲ್ಲದೆ, ಭಾರತದ ಒಟ್ಟು 11.5 ಬಿಲಿಯನ್ ಡಾಲರ್(ಸುಮಾರು 95 ಸಾವಿರ ಕೋಟಿ) ಮೌಲ್ಯದ ಜಾಗತಿಕ ಅಕ್ಕಿ ರಫ್ತಿನಲ್ಲಿ ಇರಾನ್ ಪಾಲು ಶೇ 7ರಷ್ಟಿದೆ ಎಂದು ಸರ್ಕಾರಿ ಅಂಕಿ-ಅಂಶಗಳು ತಿಳಿಸಿವೆ.

ಇನ್ನಷ್ಟು ವಿಶೇಷ ಲೇಖನಗಳಿಗಾಗಿ, ಇಲ್ಲಿ ಕ್ಲಿಕ್ ಮಾಡಿ →

ಅಧಿಕೃತ ಕೆಲಸಕ್ಕೆ WHATSAPP ವೆಬ್ ಅಪಾಯಕಾರಿ ಏಕೆ? ಗೃಹ...

ಕಚೇರಿ, ಸಾರ್ವಜನಿಕ ಅಥವಾ ಹಲವರು ಹಂಚಿಕೊಂಡು ಬಳಸುವ ಕಂಪ್ಯೂಟರ್‌ಗಳಲ್ಲಿ WHATSAPP ವೆಬ್ ಬಳಸುವವರಿಗೆ ಕೇಂದ್ರ ಗೃಹ ಸಚಿವಾಲಯ ಮಹತ್ವದ ಭದ್ರತಾ ಎಚ್ಚರಿಕೆ ನೀಡಿದೆ. ಸಚಿವಾಲಯದ ಅಧೀನದ ಭಾರತೀಯ ಸೈಬರ್ ಅಪರಾಧ ಸಮನ್ವಯ ಕೇಂದ್ರದ...

ಆನೆ ಓಡಿಸಲು ಜೇನುನೊಣ ಸಾಕು! ಏನಿದು ತಂತ್ರ?

ದಕ್ಷಿಣ ಕನ್ನಡ ಜಿಲ್ಲೆಯ ಸುಳ್ಯದ ಕೃಷಿಕರು ಆನೆ ಹಾವಳಿ ತಡೆಗೆ ಸರಳ ಮತ್ತು ವಿನೂತನ ಪ್ರಯೋಗಕ್ಕೆ ಮುಂದಾಗಿದ್ದಾರೆ. ಆನೆ ಬರುವ ದಾರಿಯಲ್ಲಿ ಜೇನು ಪೆಟ್ಟಿಗೆಗಳನ್ನಿಟ್ಟು ಗಜಪಡೆಯನ್ನು ಹಿಮ್ಮೆಟ್ಟಿಸುವ ಮಾರ್ಗವಿದು. ಆನೆಗಳ ಸೊಂಡಿಲಿನ ಒಳಭಾಗ...

ವೈದ್ಯರಿಲ್ಲ, ಔಷಧವೂ ಇಲ್ಲ! ದಶಕ ಕಳೆದರೂ ಚೇತರಿಸದ ಗಜೇಂದ್ರಗಡ...

ಗಜೇಂದ್ರಗಡ ತಾಲೂಕು ಘೋಷಣೆಯಾಗಿ ದಶಕ ಕಳೆದರೂ ಇಂದಿಗೂ ಸಮುದಾಯ ಆರೋಗ್ಯ ಕೇಂದ್ರವನ್ನು ಮೇಲ್ದರ್ಜೆಗೆ ಏರಿಸಿಲ್ಲ. ವೈದ್ಯರ ಕೊರತೆ, ಅಗತ್ಯ ಔಷಧಿಗಳ ಕೊರತೆ, ಸಿಬ್ಬಂದಿಗಳ ಕೊರತೆ ಇರುವುದರಿಂದ, ಇಲ್ಲಿಗೆ ಬರುವ ರೋಗಿಗಳಿಗೆ ಸರಿಯಾದ ಚಿಕತ್ಸೆ,...

​ಅಮೆರಿಕದ ಡೊನಾಲ್ಡ್ ಟ್ರಂಪ್ ಆಡಳಿತವು ಇತ್ತೀಚೆಗಷ್ಟೇ 60ಕ್ಕೂ ಹೆಚ್ಚು ಸಂಸ್ಥೆಗಳ ಮೇಲೆ ದಿಗ್ಬಂಧನ ವಿಧಿಸಿದೆ. ಅಲ್ಲದೆ, ಇರಾನ್ ಜೊತೆ ವಹಿವಾಟು ನಡೆಸುವ ಯಾವುದೇ ದೇಶದ ವಿರುದ್ಧ ಆರ್ಥಿಕ ದಿಗ್ಬಂಧನ ಹೇರುವ ಎಚ್ಚರಿಕೆಯನ್ನೂ ನೀಡಿದೆ. ಇದರ ನಡುವೆಯೂ ಇರಾನ್‌ಗೆ ಅಕ್ಕಿ ರಫ್ತು ನಿರ್ಬಾಧಿತವಾಗಿ ಮುಂದುವರಿಯಲಿದೆ ಎಂದು ‘ಅಖಿಲ ಭಾರತ ಅಕ್ಕಿ ರಫ್ತುದಾರರ ಸಂಘ’ದ ಪ್ರಧಾನ ಕಾರ್ಯದರ್ಶಿ ಅಜಯ್ ಭಲೋಟಿಯಾ ವಿಶ್ವಾಸ ವ್ಯಕ್ತಪಡಿಸಿದ್ದಾರೆ. ಆಹಾರ ಭದ್ರತೆಯ ಕಾರಣಗಳಿಗಾಗಿ ಇರಾನ್ ನಿರಂತರವಾಗಿ ಭಾರತದಿಂದ ಅಕ್ಕಿ ಖರೀದಿಸುತ್ತಿದೆ ಎಂದು ಅವರು ತಿಳಿಸಿದ್ದಾರೆ.

​ಆಹಾರ ಪದಾರ್ಥಗಳು ‘ಮಾನವೀಯ ವಿನಾಯಿತಿ’ (Humanitarian exception) ಅಡಿಯಲ್ಲಿ ಬರುವುದರಿಂದ ರಫ್ತಿಗೆ ಅಡ್ಡಿಯಾಗುವ ಸಾಧ್ಯತೆ ಕಡಿಮೆ. ಇರಾನ್ ಜನತೆಯ ದೈನಂದಿನ ಆಹಾರ ಪದ್ಧತಿಯಲ್ಲಿ ಅಕ್ಕಿ ಪ್ರಮುಖ ಪಾತ್ರ ವಹಿಸುತ್ತದೆ. ಕಳೆದ ಆರ್ಥಿಕ ವರ್ಷದಲ್ಲಿ ಇರಾನ್ ಭಾರತದಿಂದ 10 ಲಕ್ಷ ಟನ್‌ಗೂ ಅಧಿಕ ಅಕ್ಕಿ ಖರೀದಿಸಿದ್ದು, ಇದು ಹಿಂದಿನ ವರ್ಷಕ್ಕಿಂತ ಶೇ 17ರಷ್ಟು ಹೆಚ್ಚಾಗಿದೆ. ಇರಾನ್ ಬ್ಯಾಂಕ್‌ಗಳೊಂದಿಗೆ ನೇರ ವಹಿವಾಟು ನಡೆಸುವ ಬದಲು ಯುಎಇ, ಜರ್ಮನಿ, ಚೀನಾ ಹಾಗೂ ಇತ್ತೀಚೆಗೆ ಟರ್ಕಿ ದೇಶಗಳ ಆರ್ಥಿಕ ಮಾರ್ಗಗಳ ಮೂಲಕ ಪಾವತಿಗಳನ್ನು ಇತ್ಯರ್ಥಪಡಿಸಿಕೊಳ್ಳಲು ಭಾರತೀಯ ವ್ಯಾಪಾರಿಗಳು ಕಂಡುಕೊಂಡಿರುವ ಪರ್ಯಾಯ ವ್ಯವಸ್ಥೆಗಳು ಯಶಸ್ವಿಯಾಗಿ ಕಾರ್ಯನಿರ್ವಹಿಸುತ್ತಿವೆ ಎಂದು ಭಲೋಟಿಯಾ ವಿವರಿಸಿದ್ದಾರೆ.

​ಅಕ್ಕಿಯ ಹೊರತಾಗಿ ಔಷಧ, ಚಹಾ, ಬಾಳೆಹಣ್ಣು, ಧಾನ್ಯಗಳು, ಮಾಂಸ ಮತ್ತು ಕೆಲವು ರಾಸಾಯನಿಕಗಳ ರಫ್ತಿಗೂ ಯಾವುದೇ ಅಡ್ಡಿಯಾಗುವ ಸಾಧ್ಯತೆಗಳಿಲ್ಲ ಎಂದು ರಫ್ತುದಾರರು ಅಭಿಪ್ರಾಯಪಟ್ಟಿದ್ದಾರೆ. ಈ ಪದಾರ್ಥಗಳ ಪೂರೈಕೆಗೆ ಇರಾನ್‌ಗೆ ಬೇರೆ ಪರ್ಯಾಯ ಆಯ್ಕೆಗಳು ಕಡಿಮೆಯಿರುವುದು ಕೂಡ ಭಾರತಕ್ಕೆ ವರದಾನವಾಗಿದೆ. 2019ರ ಬಳಿಕ ಅಮೆರಿಕದ ನಿರ್ಬಂಧಗಳ ಹಿನ್ನೆಲೆಯಲ್ಲಿ ಭಾರತವು ಇರಾನ್‌ನಿಂದ ಕಚ್ಚಾ ತೈಲ ಆಮದನ್ನು ಬಹುತೇಕ ನಿಲ್ಲಿಸಿತ್ತಾದರೂ, ಈ ವರ್ಷ ಅಮೆರಿಕ ನೀಡಿದ ವಿನಾಯಿತಿ ಕಾರಣದಿಂದಾಗಿ ಅಲ್ಪ ಪ್ರಮಾಣದಲ್ಲಿ ತೈಲ ಆಮದು ಮಾಡಿಕೊಳ್ಳಲಾಗಿತ್ತು.

​ಈ ಬಗ್ಗೆ ಪ್ರತಿಕ್ರಿಯಿಸಿರುವ ಭಾರತೀಯ ರಫ್ತು ಸಂಸ್ಥೆಗಳ ಒಕ್ಕೂಟದ (FIEO) ಅಧ್ಯಕ್ಷ ಎಸ್.ಸಿ. ರಲ್ಹಾನ್, “ಇರಾನ್‌ಗೆ ನಡೆಯುವ ಭಾರತದ ರಫ್ತಿನ ಮೇಲೆ ಯಾವುದೇ ವ್ಯತಿರಿಕ್ತ ಪರಿಣಾಮ ಬೀರಬಾರದು. ಮಾನವೀಯತೆಯ ಆಧಾರದ ಮೇಲೆ ಸರ್ಕಾರವು ತಕ್ಷಣವೇ ಮಧ್ಯಪ್ರವೇಶಿಸಿ ರಫ್ತುದಾರರಿಗೆ ಪೂರಕ ವ್ಯವಸ್ಥೆ ಕಲ್ಪಿಸಲು ಮುಂದಾಗಬೇಕು” ಎಂದು ಒತ್ತಾಯಿಸಿದ್ದಾರೆ.

eedina
ಈ ದಿನ ಡೆಸ್ಕ್‌
Website | + posts

<p><iframe src="https://www.youtube.com/embed/8qwx4L0lKFQ?autoplay=1&mute=1&loop=1&playlist=8qwx4L0lKFQ&controls=0&modestbranding=1&showinfo=0" width="560" height="315" frameborder="0" allowfullscreen="allowfullscreen"></iframe></p>

ಪೋಸ್ಟ್ ಹಂಚಿಕೊಳ್ಳಿ:

ಪೋಸ್ಟ್ ಹಂಚಿಕೊಳ್ಳಿ:

ಈ ಹೊತ್ತಿನ ಪ್ರಮುಖ ಸುದ್ದಿ

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ಮಂಗಳೂರು | ವಾಣಿಜ್ಯ ಮಳಿಗೆಗಳಿಗೆ ರಾತ್ರಿ 11.45ರಿಂದ ಬೆಳಗ್ಗೆ 5.30ರವರೆಗೆ ನಿರ್ಬಂಧ!

ನಗರದಲ್ಲಿ ಕಾನೂನು ಸುವ್ಯವಸ್ಥೆ ಕಾಪಾಡುವುದು ಹಾಗೂ ತಡರಾತ್ರಿ ನಡೆಯುವ ಅಹಿತಕರ ಘಟನೆಗಳನ್ನು...

ಮಂಗಳೂರು | ಪ್ರತಿಭಟನಾಕಾರರ ಅಹವಾಲು ಆಲಿಸಲು ಸಚಿವರ ನಿಯೋಜನೆ: ಸಲೀಂ ಅಹ್ಮದ್

ಡಿಸೆಂಬರ್ 2ರಿಂದ 11ರವರೆಗೆ ಬೆಳಗಾವಿಯ ಸುವರ್ಣ ವಿಧಾನಸೌಧದಲ್ಲಿ ನಡೆಯಲಿರುವ ವಿಧಾನಮಂಡಲದ ಚಳಿಗಾಲದ...

ಅಧಿಕೃತ ಕೆಲಸಕ್ಕೆ WHATSAPP ವೆಬ್ ಅಪಾಯಕಾರಿ ಏಕೆ? ಗೃಹ ಸಚಿವಾಲಯದ ಎಚ್ಚರಿಕೆಯ ಹಿಂದಿನ ವಾಸ್ತವ

ಕಚೇರಿ, ಸಾರ್ವಜನಿಕ ಅಥವಾ ಹಲವರು ಹಂಚಿಕೊಂಡು ಬಳಸುವ ಕಂಪ್ಯೂಟರ್‌ಗಳಲ್ಲಿ WHATSAPP ವೆಬ್...