ಸರ್ಕಾರಿ ನೌಕರಿಗಾಗಿ ಹೆತ್ತ ತಾಯಿಯ ಕೊಂದ ಮಗಳು; ಇದೀಗ ತಂದೆಯ ಸಾವಿನಲ್ಲೂ ಕೈವಾಡದ ಶಂಕೆ!

Date:

ಅನುಕಂಪದ ಆಧಾರದ ಮೇಲಿನ ಸರ್ಕಾರಿ ನೌಕರಿ ಹಾಗೂ ಆಸ್ತಿಗಾಗಿ ಹೆತ್ತ ತಾಯಿಯನ್ನೇ ಸುಪಾರಿ ಕೊಟ್ಟು ಹತ್ಯೆ ಮಾಡಿಸಿದ್ದ ಜೈಪುರದ 23 ವರ್ಷದ ಯುವತಿ ಆಯುಶಿ ಶರ್ಮಾ ಪ್ರಕರಣ ಇದೀಗ ಹೊಸ ತಿರುವು ಪಡೆದುಕೊಂಡಿದೆ. ಇತ್ತೀಚೆಗಷ್ಟೇ ತಾಯಿಯ ಕೊಲೆ ಪ್ರಕರಣದಲ್ಲಿ ಪೊಲೀಸರಿಂದ ಬಂಧನಕ್ಕೊಳಗಾಗಿರುವ ಮಗಳು, ಕಳೆದ ವರ್ಷ ತನ್ನ ತಂದೆಯನ್ನೂ ಕೊಲೆ ಮಾಡಿದ್ದಾಳೆ ಎಂಬ ಗಂಭೀರ ಆರೋಪ ಇದೀಗ ಕೇಳಿಬಂದಿದ್ದು, ಪ್ರಕರಣ ಮತ್ತಷ್ಟು ಕಗ್ಗಂಟಾಗಿದೆ.

- Advertisement -

ಕಳೆದ ಜುಲೈ 3ರಂದು ಜೈಪುರದ ಪ್ರತಾಪ್ ನಗರ ಪ್ರದೇಶದಲ್ಲಿ 45 ವರ್ಷದ ನೀರಜ್ ಶರ್ಮಾ ಎಂಬುವವರು ತಮ್ಮ ಮಗನನ್ನು ಕೋಚಿಂಗ್ ಸೆಂಟರ್‌ಗೆ ಬಿಟ್ಟು ಬರುತ್ತಿದ್ದಾಗ, ಗಂಟೆಗೆ 130 ಕಿ.ಮೀ ವೇಗದಲ್ಲಿ ಬಂದ ಸ್ಕಾರ್ಪಿಯೋ ಕಾರೊಂದು ಅವರಿಗೆ ಡಿಕ್ಕಿ ಹೊಡೆದಿತ್ತು. ಡಿಕ್ಕಿಯ ರಭಸಕ್ಕೆ ಸುಮಾರು 100 ಅಡಿ ದೂರಕ್ಕೆ ಎಸೆಯಲ್ಪಟ್ಟಿದ್ದ ನೀರಜ್ ಸ್ಥಳದಲ್ಲೇ ಮೃತಪಟ್ಟಿದ್ದರು. ಮೇಲ್ನೋಟಕ್ಕೆ ಇದೊಂದು ರಸ್ತೆ ಅಪಘಾತದಂತೆ ಕಂಡರೂ, ಸಿಸಿಟಿವಿ ದೃಶ್ಯಾವಳಿಗಳನ್ನು ಪರಿಶೀಲಿಸಿದಾಗ ಇದೊಂದು ವ್ಯವಸ್ಥಿತ ಕೊಲೆ ಎಂಬುದು ಪೊಲೀಸರಿಗೆ ಖಚಿತವಾಗಿತ್ತು.

ಇನ್ನಷ್ಟು ವಿಶೇಷ ಲೇಖನಗಳಿಗಾಗಿ, ಇಲ್ಲಿ ಕ್ಲಿಕ್ ಮಾಡಿ →

ಇದು ಕೇವಲ ಒಂದು ಪಕ್ಷದ ಹೋರಾಟವಲ್ಲ, ವ್ಯವಸ್ಥೆಯ ಮೇಲಿನ...

ಜೆಪಿಯ ಟೀಕೆಗಳು ತೀಕ್ಷ್ಣವಾಗಿದ್ದರೂ, ಅದು ಅಹಿಂಸಾತ್ಮಕವಾಗಿದೆ. ಹೆದ್ದಾರಿ ತಡೆಗಳಿಲ್ಲ, ಬಲವಂತದ ಬಂದ್‌ಗಳಿಲ್ಲ. ವಾಸ್ತವವಾಗಿ, ಶಾಂತಿಯುತ ಸಭೆಗೆ ಜಾಗ ನೀಡದೆ ಸರ್ಕಾರವೇ ಅಡೆತಡೆಗಳನ್ನು ಸೃಷ್ಟಿಸುತ್ತಿದೆ. ಈ ಉದ್ದೇಶವನ್ನು ಬೆಂಬಲಿಸುವ ಜನರು ಹೆಚ್ಚಿನ ಸಂಖ್ಯೆಯಲ್ಲಿ ಬೀದಿಗೆ...

ನೊಬೆಲ್‌ ಪ್ರಶಸ್ತಿ ಸರಣಿ | ಭಾರತೀಯ ಮೂಲದ ದಕ್ಷಿಣ...

ಈ ಬಾರಿಯ ಶಾಂತಿ ನೊಬೆಲ್‌ ಪ್ರಶಸ್ತಿಯನ್ನು ಶಾಂತಿ ಮತ್ತು ಅಂತಾರಾಷ್ಟ್ರೀಯ ಕಾನೂನನ್ನು ಉತ್ತೇಜಿಸುವ ನಿಟ್ಟಿನಲ್ಲಿ ನಡೆಸಿದ ಪ್ರಯತ್ನಗಳಿಗಾಗಿ, ಮಾನವ ಹಕ್ಕುಗಳ ರಕ್ಷಣೆಗಾಗಿ ಜೀವನವನ್ನೇ ಮುಡಿಪಾಗಿಟ್ಟ ಭಾರತೀಯ ಮೂಲದ ದಕ್ಷಿಣ ಆಫ್ರಿಕಾದ ಡಾ. ನವನೀತಮ್‌...

ಗಡುಸಾದ ದನಿಯೊಳಗಿನ ಮೃದು ಮನಸ್ಸು: ʼನಾನಾ ಪಾಟೇಕರ್ʼ ಎಂಬ...

ಅವರ ಗಡುಸಾದ ದನಿಯಲ್ಲಿ ಸಾಮಾನ್ಯ ಮನುಷ್ಯನ ಆಕ್ರೋಶವಿತ್ತು; ಅವರ ತೀಕ್ಷ್ಣ ನೋಟದಲ್ಲಿ ಬದುಕಿನ ಕಹಿ ಸತ್ಯಗಳಿದ್ದವು. ‘ಕ್ರಾಂತಿವೀರ್’ನಲ್ಲಿ ಅನ್ಯಾಯದ ವಿರುದ್ಧ ಸಿಡಿದವರು, ‘ಖಾಮೋಶಿ’ಯಲ್ಲಿ ಮಾತಿಲ್ಲದೆ ಮನಸ್ಸು ತಟ್ಟಿದವರು, ‘ವೆಲ್‌ಕಮ್’ನಲ್ಲಿ ನಗುವಿನ ಹೊಳೆ ಹರಿಸಿದವರು...

ನ್ಯಾಯಾಲಯದಲ್ಲಿ ಕೆಳ ಹಂತದ ಗುಮಾಸ್ತೆಯಾಗಿ (ಎಲ್‌ಡಿಸಿ) ಕೆಲಸ ಮಾಡುತ್ತಿದ್ದ ನೀರಜ್ ಅವರ ಕೊಲೆಗೆ, ಅವರ ಸ್ವಂತ ಮಗಳಾದ ಆಯುಷಿ ಶರ್ಮಾ 7 ಲಕ್ಷ ರೂ. ಸುಪಾರಿ ನೀಡಿದ್ದಳು ಎಂಬ ಆಘಾತಕಾರಿ ಸತ್ಯ ತನಿಖೆಯಿಂದ ಬಯಲಾಗಿತ್ತು. ತನ್ನ ಚಿಕ್ಕಪ್ಪ ಮೋಹನ್ ಸ್ವರೂಪ್ ಮತ್ತು ಸಂಬಂಧಿ ಬಲರಾಮ್ (ಈತ ಪರಾರಿಯಾಗಿದ್ದಾನೆ) ಜೊತೆ ಸೇರಿ ಈ ಸಂಚು ರೂಪಿಸಿದ್ದ ಆಯುಷಿ ಹಾಗೂ ಸುಪಾರಿ ಹಂತಕ ಹೇಮಂತ್ ಶರ್ಮಾ ಸೇರಿದಂತೆ ಒಟ್ಟು ಏಳು ಜನರನ್ನು ಪೊಲೀಸರು ಈವರೆಗೆ ಬಂಧಿಸಿದ್ದಾರೆ.

ನೀರಜ್ ಶರ್ಮಾ ಅವರ ಪತಿ, ಕೋರ್ಟ್ ಮಾಸ್ಟರ್ ಆಗಿದ್ದ ವಿಜಯ್ ಶರ್ಮಾ ಕಳೆದ ವರ್ಷವಷ್ಟೇ ಮೃತಪಟ್ಟಿದ್ದರು. ಅವರ ಸಾವಿನ ನಂತರ ಅನುಕಂಪದ ಆಧಾರದ ಮೇಲೆ ಆ ಸರ್ಕಾರಿ ನೌಕರಿಯು ಪತ್ನಿ ನೀರಜ್ ಅವರಿಗೆ ಒಲಿದಿತ್ತು. ಆದರೆ, ಆ ಕೆಲಸ ತನಗೆ ಸಿಗಬೇಕಿತ್ತು ಎಂದು ಮಗಳು ಆಯುಷಿ ಪಟ್ಟು ಹಿಡಿದಿದ್ದಳು. ಇದೇ ವಿಚಾರವಾಗಿ ತಾಯಿ-ಮಗಳ ನಡುವೆ ಆಸ್ತಿ ವಿವಾದವೂ ನಡೆಯುತ್ತಿತ್ತು. ಹೀಗಾಗಿ, ತಾಯಿಯನ್ನು ಮುಗಿಸಿದರೆ ಕೆಲಸ ಮತ್ತು ಆಸ್ತಿ ಎರಡೂ ತನಗೇ ದಕ್ಕುತ್ತದೆ ಎಂಬ ದುರಾಸೆಯಿಂದ ಆಕೆ ಈ ಭೀಕರ ಕೃತ್ಯವೆಸಗಿದ್ದಳು.

ಇದನ್ನು ಓದಿದ್ದೀರಾ? ಈ ದಿನ ಸಂಪಾದಕೀಯ | ಹೆಣ್ಣುಮಕ್ಕಳ ಸುರಕ್ಷತೆ ಕೇವಲ ರಾಜಕೀಯ ಭಾಷಣದ ಸರಕಾಗದಿರಲಿ

ತಾಯಿಯ ಕೊಲೆ ಪ್ರಕರಣದ ತನಿಖೆ ನಡೆಯುತ್ತಿರುವಾಗಲೇ, ನೀರಜ್ ಅವರ ಸಹೋದರ (ಆಯುಷಿಯ ಸೋದರಮಾವ) ರಾಕೇಶ್ ಶರ್ಮಾ ಅವರು ಪೊಲೀಸರಿಗೆ ಮತ್ತು ನ್ಯಾಯಾಲಯಕ್ಕೆ ಮತ್ತೊಂದು ದೂರು ನೀಡಿದ್ದಾರೆ. 2025ರ ಏಪ್ರಿಲ್‌ನಲ್ಲಿ ಮೃತಪಟ್ಟಿದ್ದ ಆಯುಷಿಯ ತಂದೆ ವಿಜಯ್ ಶರ್ಮಾ ಅವರ ಸಾವು ಸಹಜವಾಗಿರಲಿಲ್ಲ, ಅದರಲ್ಲಿಯೂ ಆಯುಷಿ ಮತ್ತು ಆಕೆಯ ಸಂಬಂಧಿ ಬಲರಾಮ್ ಕೈವಾಡವಿದೆ ಎಂದು ದೂರಿನಲ್ಲಿ ಆರೋಪಿಸಿದ್ದಾರೆ.

2024ರಲ್ಲಿ ಮಿದುಳಿನ ರಕ್ತಸ್ರಾವದಿಂದ ಬಳಲುತ್ತಿದ್ದ ವಿಜಯ್ ಶರ್ಮಾ ನಿಧಾನವಾಗಿ ಚೇತರಿಸಿಕೊಳ್ಳುತ್ತಿದ್ದರು. ಆದರೆ ಆಯುಷಿ ಅವರಿಗೆ ಸರಿಯಾದ ಚಿಕಿತ್ಸೆ ನೀಡದೆ, ಉತ್ತಮ ಚಿಕಿತ್ಸೆ ಕೊಡಿಸುವುದಾಗಿ ಹೇಳಿ ಮನೆಯಿಂದ ಕರೆದೊಯ್ದು, ಸುಮಾರು ಮೂರು ತಿಂಗಳ ಕಾಲ ಅವರ ಬಗ್ಗೆ ಯಾರಿಗೂ ಮಾಹಿತಿ ನೀಡದೆ ಅಡಗಿಸಿಟ್ಟಿದ್ದಳು. ಕೊನೆಗೆ ಜೈಪುರದ ಆಸ್ಪತ್ರೆಗೆ ದಾಖಲಿಸಿದಾಗ ಅವರ ದೇಹಕ್ಕೆ ಶೇ. 90ರಷ್ಟು ಹಾನಿಯಾಗಿತ್ತು ಎಂದು ವೈದ್ಯರು ತಿಳಿಸಿದ್ದರು. ಆನಂತರ ವಿಜಯ್ ಅವರನ್ನು ಮನೆಗೆ ಕರೆತಂದಾಗ ಅವರು ಮೃತಪಟ್ಟಿದ್ದರು ಎಂದು ದೂರಿನಲ್ಲಿ ವಿವರಿಸಲಾಗಿದೆ.

“ತಂದೆಗೆ ಅಳವಡಿಸಿದ್ದ ಫೀಡಿಂಗ್ ಟ್ಯೂಬ್ (ಆಹಾರದ ಕೊಳವೆ) ತೆಗೆದು ಆತನನ್ನು ಸಾಯಿಸಿದಂತೆ, ನಿನ್ನನ್ನೂ ಸಾಯಿಸುವುದು ಬಹಳ ಸುಲಭ” ಎಂದು ಆಯುಷಿ ಒಮ್ಮೆ ತನ್ನ ತಾಯಿಗೆ ಬೆದರಿಕೆ ಹಾಕಿದ್ದಳು ಎಂಬ ಅತ್ಯಂತ ಆಘಾತಕಾರಿ ಅಂಶವನ್ನೂ ರಾಕೇಶ್ ತಮ್ಮ ದೂರಿನಲ್ಲಿ ಉಲ್ಲೇಖಿಸಿದ್ದಾರೆ.

ಈ ಹೊಸ ದೂರಿನ ಹಿನ್ನೆಲೆಯಲ್ಲಿ ಜೈಪುರ ಪೊಲೀಸರು ವಿಜಯ್ ಶರ್ಮಾ ಅವರ ಸಾವಿನ ಕುರಿತೂ ಇದೀಗ ಮರುತನಿಖೆ ಆರಂಭಿಸಿದ್ದಾರೆ. ಒಂದೊಮ್ಮೆ ತಂದೆಯ ಸಾವಿನಲ್ಲೂ ಆಯುಷಿಯ ಪಾತ್ರ ಸಾಬೀತಾದರೆ, ಆಕೆಯ ಮೇಲೆ ಮತ್ತೊಂದು ಪ್ರತ್ಯೇಕ ಕೊಲೆ ಪ್ರಕರಣ ದಾಖಲಾಗುವ ಸಾಧ್ಯತೆಯಿದೆ.

eedina
ಈ ದಿನ ಡೆಸ್ಕ್‌
Website |  + posts

ಪೋಸ್ಟ್ ಹಂಚಿಕೊಳ್ಳಿ:

ಪೋಸ್ಟ್ ಹಂಚಿಕೊಳ್ಳಿ:

ಈ ಹೊತ್ತಿನ ಪ್ರಮುಖ ಸುದ್ದಿ

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ನಮ್ಮ‌ ಪ್ರಸ್ತಾಪಗಳನ್ನು ರಾಷ್ಟ್ರಪತಿ ನಿರಾಕರಿಸಿದ್ದು ಅಚ್ಚರಿ ಮೂಡಿಸಿದೆ, ಸಾಕ್ಷ್ಯ ಕೇಳಿದ್ದಾರೆ – ಕೊಡುತ್ತೇವೆ: ರಾಹುಲ್ ಗಾಂಧಿ

ಮತದಾರರ ಪಟ್ಟಿಯಿಂದ ಹೆಸರುಗಳನ್ನು ಅಕ್ರಮವಾಗಿ ತೆಗೆದುಹಾಕಿರುವ ಕುರಿತು ನಾವು ಎತ್ತಿರುವ ವಿಷಯವನ್ನು...

ರಾಷ್ಟ್ರಪತಿ ಭವನದತ್ತ ‘ಇಂಡಿಯಾ’ ಒಕ್ಕೂಟದ ಮೆರವಣಿಗೆ, ವಿಜಯ್ ಚೌಕ್‌ನಲ್ಲಿ ದಿಢೀರ್ ಧರಣಿ

​ಎಸ್.ಐ.ಆರ್. ನಲ್ಲಿ (SIR) ಭಾರಿ ಅಕ್ರಮಗಳು ನಡೆದಿವೆ ಎಂದು ಗಂಭೀರವಾಗಿ ಆರೋಪಿಸಿರುವ...

ಜಿಎಸ್‌ಟಿ ಕರಾಳ ಶಾಸನಕ್ಕೆ ತೇಪೆ ಹಾಕುವ ಯತ್ನ: ತಮ್ಮದೇ ಆರ್ಥಿಕ ವೈಫಲ್ಯಗಳನ್ನು ಮುಚ್ಚಿಹಾಕಲು ಕೇಂದ್ರದ ಹೊಸ ನಾಟಕ!

ಜಿಎಸ್‌ಟಿಗೆ ಸಂಬಂಧಿಸಿದ "ಶೇಕಡಾ 99ರಷ್ಟು ಸಮಸ್ಯೆಗಳು" ಬಗೆಹರಿದಿವೆ ಮತ್ತು ಮುಂದಿನ ಬದಲಾವಣೆಗಳಿಗೆ...

ಬೀದರ್‌ | ʼಕರೇಜ್‌ʼ ದೇಶದ ಜಲಸಂರಕ್ಷಣೆಗೆ ಮಾದರಿ : ಕೇಂದ್ರದ ಅಧಿಕಾರಿಗಳ ಮೆಚ್ಚುಗೆ

ಬೀದರ್‌ನ ಐತಿಹಾಸಿಕ ʼಕರೇಜ್‌ʼ ಜಲವ್ಯವಸ್ಥೆ ದೇಶದ ಜಲಸಂರಕ್ಷಣೆಗೆ ಮಾದರಿಯಾಗಬಲ್ಲದು ಎಂದು ಕೇಂದ್ರ...