ಚೆನ್ನೈ | ವಿದ್ಯಾರ್ಥಿಗಳ ಪ್ರತಿಭಟನೆ; ಕಲಾಕ್ಷೇತ್ರ ಸ್ಥಗಿತ

Date:

  • 2 ದಿನದಲ್ಲಿ ಕಲಾಕ್ಷೇತ್ರದ ಹಾಸ್ಟೆಲ್ ತೆರವಿಗೆ ಸೂಚನೆ
  • ಪ್ರತಿಭಟನೆ ಹಿನ್ನೆಲೆಯಲ್ಲಿ ಪರೀಕ್ಷೆ ಮುಂದೂಡಿಕೆ

ಲೈಂಗಿಕ ಕಿರುಕುಳ ನೀಡುತ್ತಿದ್ದ ನೃತ್ಯ ಶಿಕ್ಷಕನ ವಿರುದ್ಧ ಕ್ರಮಕ್ಕೆ ಆಗ್ರಹಿಸಿ ಚೆನ್ನೈನ ಕಲಾಕ್ಷೇತ್ರ ಫೌಂಡೇಷನ್ ಶಿಕ್ಷಣ ಸಂಸ್ಥೆಯ ಹಲವು ಸಿಬ್ಬಂದಿ ಮತ್ತು ವಿದ್ಯಾರ್ಥಿಗಳು ಪರೀಕ್ಷೆ ಬಹಿಷ್ಕರಿಸಿ ಗುರುವಾರ (ಮಾರ್ಚ್ 30) ಮೌನ ಪ್ರತಿಭಟನೆ ನಡೆಸಿದರು.

ಪ್ರತಿಭಟನೆಯ ನಂತರ ವಿದ್ಯಾಸಂಸ್ಥೆಯನ್ನು ಮುಚ್ಚಲಾಗಿದೆ. ಪ್ರತಿಭಟನೆಯ ಗಂಟೆಗಳ ನಂತರ ಕಲಾಕ್ಷೇತ್ರ ಮುಚ್ಚಲಾಗಿರುವ ಹಿನ್ನೆಲೆಯಲ್ಲಿ ವಿದ್ಯಾರ್ಥಿಗಳಿಗೆ ವಸತಿಗೃಹಗಳನ್ನು (ಹಾಸ್ಟೆಲ್) ತೆರವುಗೊಳಿಸುವಂತೆ ಕಲಾಕ್ಷೇತ್ರ ಸೂಚಿಸಿದೆ.

ಲಲಿತ ಕಲೆಯ ರುಕ್ಮಿಣಿ ದೇವಿ ಕಾಲೇಜು (ಆರ್‌ಡಿಸಿಎಫ್ಎ) ಮಾರ್ಚ್ 30 ಸಂಜೆ 5.15ರಿಂದ ಏಪ್ರಿಲ್ 6ವರೆಗೆ ಸ್ಥಗಿತಗೊಳ್ಳಲಿದೆ ಎಂದು ಕಲಾಕ್ಷೇತ್ರ ಸುತ್ತೋಲೆ ಹೊರಡಿಸಿದೆ.

ಸುದ್ದಿ ನಿರಂತರವಾಗಿ ಉಚಿತವೇ ಆಗಿರುವುದು ಹೇಗೆ ಸಾಧ್ಯ? ಅದಕ್ಕೆ ನಿಮ್ಮ ಬೆಂಬಲವೂ ನಿರಂತರವಾಗಿ ಇದ್ದಾಗ ಮಾತ್ರ ಸಾಧ್ಯ. ಚಂದಾದಾರರಾಗಿ – ಆ ಮೂಲಕ ಸತ್ಯ, ನ್ಯಾಯ, ಪ್ರೀತಿ ಮೌಲ್ಯಗಳನ್ನು ಎಲ್ಲರಿಗೂ ಹರಡಲು ಜೊತೆಯಾಗಿ.

ಆರೋಪಿ ಶಿಕ್ಷಕನ ವಿರುದ್ಧ ತಕ್ಷಣವೇ ಕ್ರಮ ಕೈಗೊಳ್ಳಲು ಆಗ್ರಹಿಸಿ ಕಾಲೇಜಿನ ಆವರಣದಲ್ಲಿರುವ ಆಲದ ಮರದ ಕೆಳಗೆ ವಿದ್ಯಾರ್ಥಿಗಳು ಗುರುವಾರ ಬೆಳಿಗ್ಗೆಯಿಂದ ಮೌನ ಪ್ರತಿಭಟನೆ ನಡೆಸಿದ್ದಾರೆ. ಸಂಜೆಯ ನಂತರ ಕಾಲೇಜಿನಿಂದ ತಿರುವನ್ಮಯೂರ್ ರಸ್ತೆಯವರೆಗೆ ವಿದ್ಯಾರ್ಥಿಗಳು ಪ್ರತಿಭಟನಾ ಮೆರವಣಿಗೆ ನಡೆಸಿದರು.

ಕಲಾಕ್ಷೇತ್ರದ ನಿರ್ದೇಶಕರಾದ ರೇವತಿ ರಾಮಚಂದ್ರನ್ ಅವರು ಪ್ರತಿಭಟನೆ ಕೈಬಿಡುವಂತೆ ವಿದ್ಯಾರ್ಥಿಗಳಿಗೆ ಮನವಿ ಮಾಡಿದರು. ಆದರೆ ಆಡಳಿತ ಮಂಡಳಿ ವಿಷಯವನ್ನು ನಿರ್ವಹಿಸುತ್ತಿರುವ ಬಗ್ಗೆ ವಿದ್ಯಾರ್ಥಿಗಳು ಅಸಮಾಧಾನ ವ್ಯಕ್ತಪಡಿಸಿದ್ದಾರೆ. ರಾಷ್ಟ್ರೀಯ ಮಹಿಳಾ ಆಯೋಗದ ಅಧ್ಯಕ್ಷರು ವಿದ್ಯಾರ್ಥಿನಿಯರ ಸಮಸ್ಯೆ ಆಲಿಸಲು ಬಂದಾಗ ಅವರೊಂದಿಗೆ ಮಾತನಾಡುವುದಕ್ಕೂ ಸೂಕ್ತ ಅವಕಾಶ ಕಲ್ಪಿಸಲಿಲ್ಲ ಎಂದು ವಿದ್ಯಾರ್ಥಿಗಳು ಆರೋಪಿಸಿದ್ದಾರೆ.

“ತಕ್ಷಣದಿಂದ ಅನ್ವಯವಾಗುವಂತೆ ವಿದ್ಯಾರ್ಥಿಗಳು ಎರಡು ದಿನಗಳಲ್ಲಿ ವಸತಿಗೃಹ ತೆರವುಗೊಳಿಸಲು ಮನವಿ ಮಾಡಲಾಗಿದೆ. ಈ ದಿನಗಳಲ್ಲಿನ ಪರೀಕ್ಷೆಗಳನ್ನು ಮುಂದೂಡಲಾಗಿದ್ದು, ಹೊಸ ದಿನಾಂಕಗಳನ್ನು ಶೀಘ್ರ ಪ್ರಕಟಿಸಲಾಗುವುದು” ಎಂದು ಕಾಲೇಜಿನ ಪ್ರಾಂಶುಪಾಲ ಪಕಲಾ ರಾಮ್ದಾಸ್ ಸುತ್ತೋಲೆಯಲ್ಲಿ ತಿಳಿಸಿದ್ದಾರೆ.

ಕಲಾಕ್ಷೇತ್ರ ಆವರಣದಲ್ಲಿ ವಿದ್ಯಾರ್ಥಿಗಳ ಪ್ರತಿಭಟನೆಯ ವಿಡಿಯೋಗಳನ್ನು ನೃತ್ಯಪಟು ಹಾಗೂ ಬರಹಗಾರ್ತಿ ನೃತ್ಯಾ ಪಿಳ್ಳೈ ಅವರು ತಮ್ಮ ಟ್ವಿಟರ್ ಖಾತೆಯಲ್ಲಿ ಹಂಚಿಕೊಂಡಿದ್ದಾರೆ. ಕಲಾಕ್ಷೇತ್ರ ತೆರವುಗೊಳಿಸುವಂತೆ ಸೂಚನೆ ನೀಡಿರುವುದಕ್ಕೆ ವಿದ್ಯಾರ್ಥಿಗಳು ಅಸಮಾಧಾನಗೊಂಡಿದ್ದಾರೆ ಎಂದು ಬರೆದಿದ್ದಾರೆ.

ವಿದ್ಯಾರ್ಥಿಗಳು ಕಲಾಕ್ಷೇತ್ರದ ಆವರಣದಲ್ಲಿ ಜಮಾಯಿಸಿ ಪೊಲೀಸರ ಸುಪರ್ದಿಯಲ್ಲಿ ಪ್ರತಿಭಟನೆ ನಡೆಸಿದರು. ಅನೇಕ ಪೊಲೀಸ್ ವಾಹನಗಳು ಅಲ್ಲಿದ್ದವು. ಈ ಕುರಿತ ಫೋಟೋಗಳು ಎಲ್ಲೆಡೆ ಹರಿದಾಡಿವೆ. ಪೊಲೀಸರು ವಿದ್ಯಾರ್ಥಿಗಳ ಬೇಡಿಕೆಗಳನ್ನು ಆಲಿಸಲು ಮುಂದಾಗಿದ್ದಾರೆ.

ಕಲಾಕ್ಷೇತ್ರದ ನಾಲ್ವರು ಅಧ್ಯಾಪಕರ ವಿರುದ್ಧ ಲೈಂಗಿಕ ದೌರ್ಜನ್ಯದ ಆರೋಪ ಮಾಡಿರುವ ವಿದ್ಯಾರ್ಥಿಗಳು, ಗುರುವಾರ ಬೆಳಿಗ್ಗೆಯಿಂದ ಪ್ರತಿಭಟನೆ ನಡೆಸಿದರು. ಪತ್ರಿಕೆಯೊಂದಕ್ಕೆ ಹೇಳಿಕೆ ನೀಡಿರುವ ವಿದ್ಯಾರ್ಥಿಗಳು, ಹರಿ ಪದ್ಮನ್ ಎಂಬ ವ್ಯಕ್ತಿಯನ್ನು ಆರೋಪಿಯನ್ನಾಗಿ ಹೆಸರಿಸಿದ್ದಾರೆ. ಅಲ್ಲದೆ ವಿದ್ಯಾರ್ಥಿಗಳು ಕಲಾಕ್ಷೇತ್ರದ ಆರು ಸಿಬ್ಬಂದಿಯನ್ನು ಹೆಸರಿಸಿದ್ದಾರೆ. ಆರೋಪಿ ಕಾಲೇಜು ಸಿಬ್ಬಂದಿ ಹರಿ ಪದ್ಮನ್ ಬೆಳಗಿನ ಪ್ರಾರ್ಥನೆ ವೇಳೆ ಕಾಲೇಜು ಆವರಣಕ್ಕೆ ಆಗಮಿಸಿದ ನಂತರ ವಿದ್ಯಾರ್ಥಿಗಳು ಪ್ರತಿಭಟನೆ ಆರಂಭಿಸಿದ್ದರು.

ಈ ಸುದ್ದಿ ಓದಿದ್ದೀರಾ? ಬಾಂಬೆ ಐಐಟಿ ದಲಿತ ವಿದ್ಯಾರ್ಥಿ ದರ್ಶನ್ ತಂದೆಗೆ ಪೊಲೀಸರಿಂದ ಕಿರುಕುಳ; ಮಹಾರಾಷ್ಟ್ರ ಸಿಎಂಗೆ ಪತ್ರ

ಹರಿ ಪದ್ಮನ್ ಹಾಗೂ ಇತರ ಮೂವರು ಅಧ್ಯಾಪಕರ ವಿರುದ್ಧ ಆರೋಪಗಳ ಹೊರತಾಗಿಯೂ ಕ್ರಮ ಕೈಗೊಳ್ಳದ ಕಲಾಕ್ಷೇತ್ರ ವಿದ್ಯಾ ಸಂಸ್ಥೆಯ ನಿಷ್ಕ್ರಿಯತೆ ಖಂಡಿಸಿ ಪ್ರತಿಭಟನಾ ರೂಪದಲ್ಲಿ, ಬೆಳಿಗ್ಗೆ 8.30ಕ್ಕೆ ತಪೋವನದ ಆಲದ ಮರದ ಕೆಳಗೆ ನಿತ್ಯವೂ ನಡೆಯುತ್ತಿದ್ದ ಧ್ಯಾನ ಹಾಗೂ ಪ್ರಾರ್ಥನಾ ಸಭೆಯನ್ನು ವಿದ್ಯಾರ್ಥಿಗಳು ಬಹಿಷ್ಕರಿಸಿದ್ದಾರೆ.

ಆರೋಪಿಗಳನ್ನು ಕೆಲಸದಿಂದ ಅಮಾನತುಗೊಳಿಸಿ ಮುಕ್ತವಾಗಿ ಅಭಿಪ್ರಾಯ ಹಂಚಿಕೊಳ್ಳಲು ಕಲಾಕ್ಷೇತ್ರದ ಆವರಣವನ್ನು ಭೀತಿರಹಿತ ಸುರಕ್ಷಿತ ವಾತಾವರಣವಾಗಿಸುವಂತೆ ವಿದ್ಯಾರ್ಥಿಗಳು ಒತ್ತಾಯಿಸಿದ್ದಾರೆ.

ಪೋಸ್ಟ್ ಹಂಚಿಕೊಳ್ಳಿ:

LEAVE A REPLY

Please enter your comment!
Please enter your name here

ಪೋಸ್ಟ್ ಹಂಚಿಕೊಳ್ಳಿ:

ನಮ್ಮನ್ನು ಬೆಂಬಲಿಸಿ

ಹೆಚ್ಚು ಓದಿಸಿಕೊಂಡ ಲೇಖನಗಳು

ವಿಡಿಯೋ

ಸುದ್ದಿ ನಿರಂತರವಾಗಿ ಉಚಿತವೇ ಆಗಿರುವುದು ಹೇಗೆ ಸಾಧ್ಯ? ಅದಕ್ಕೆ ನಿಮ್ಮ ಬೆಂಬಲವೂ ನಿರಂತರವಾಗಿ ಇದ್ದಾಗ ಮಾತ್ರ ಸಾಧ್ಯ. ಚಂದಾದಾರರಾಗಿ – ಆ ಮೂಲಕ ಸತ್ಯ, ನ್ಯಾಯ, ಪ್ರೀತಿ ಮೌಲ್ಯಗಳನ್ನು ಎಲ್ಲರಿಗೂ ಹರಡಲು ಜೊತೆಯಾಗಿ.
Related

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ಕೇದಾರನಾಥ ದೇಗುಲದಿಂದ 228 ಕೆಜಿ ಚಿನ್ನ ನಾಪತ್ತೆ: ಸ್ವಾಮಿ ಅವಿಮುಕ್ತೇಶ್ವರಾನಂದ ಸರಸ್ವತಿ

"ಕೇದಾರನಾಥ ದೇವಸ್ಥಾನದಲ್ಲಿದ್ದ ಚಿನ್ನ ನಾಪತ್ತೆಯಾಗಿದೆ, 228 ಕೆಜಿ ಚಿನ್ನದ ಹಗರಣ ನಡೆದಿದೆ. ಆದರೆ...

ಕೇರಳ | ಆಸ್ಪತ್ರೆಗೆ ತಪಾಸಣೆಗೆಂದು ತೆರಳಿ 2 ದಿನಗಳ ಕಾಲ ಲಿಫ್ಟ್‌ನಲ್ಲಿ ಸಿಲುಕಿದ ವ್ಯಕ್ತಿ!

ವ್ಯಕ್ತಿಯೊಬ್ಬರು ಸರ್ಕಾರಿ ವೈದ್ಯಕೀಯ ಕಾಲೇಜಿನಲ್ಲಿ ಆಸ್ಪತ್ರೆಯಲ್ಲಿ ತಪಾಸಣೆಗೆಂದು ತೆರಳಿ 2 ದಿನಗಳ...

ಮೋದಿ ನೇತೃತ್ವದಲ್ಲಿ ಟೈಟಾನಿಕ್ ಹಡಗಿನಂತೆ ಶಾಶ್ವತವಾಗಿ ಮುಳಗಲಿರುವ ಬಿಜೆಪಿ: ಸುಬ್ರಮಣಿಯನ್ ಸ್ವಾಮಿ

ಪ್ರಧಾನ ಮಂತ್ರಿ ನರೇಂದ್ರ ಮೋದಿ ನೇತೃತ್ವದಲ್ಲಿ ಬಿಜೆಪಿಯು ಟೈಟಾನಿಕ್ ಹಡಗಿನಂತೆ ಮುಳುಗುತ್ತದೆ...

ಅರವಿಂದ್ ಕೇಜ್ರಿವಾಲ್ ಕೋಮಾಗೆ ಜಾರಬಹುದು ಎಂದ ಎಎಪಿ, ತಿಹಾರ್ ಜೈಲು ಹೇಳುವುದೇನು?

ಆಮ್ ಆದ್ಮಿ ಪಕ್ಷದ (ಎಎಪಿ) ರಾಜ್ಯಸಭಾ ಸಂಸದ ಸಂಜಯ್ ಸಿಂಗ್ ಸೋಮವಾರ...