ಅಬಕಾರಿ ನೀತಿ ಹಗರಣದಲ್ಲಿ ಬಂಧನಗೊಂಡಿದ್ದ ದೆಹಲಿಯ ಮಾಜಿ ಉಪಮುಖ್ಯಮಂತ್ರಿ, ಎಎಪಿ ನಾಯಕ ಮನೀಶ್ ಸಿಸೋಡಿಯಾ 17 ತಿಂಗಳುಗಳ ನಂತರ ಜೈಲಿನಿಂದ ಹೊರಬಂದಿದ್ದಾರೆ.
ಮನೀಶ್ ಸಿಸೋಡಿಯಾ ಜೈಲಿನಿಂದ ಹೊರಬರುತ್ತಿದ್ದಂತೆ ದೆಹಲಿ ಸಚಿವೆ ಅತಿಶಿ, ಸೇರಿದಂತೆ ಹಲವಾರು ಎಎಪಿ ನಾಯಕರು, ಕಾರ್ಯಕರ್ತರು ಮನೀಶ್ ಸಿಸೋಡಿಯಾ ಅವರನ್ನು ಬರಮಾಡಿಕೊಂಡರು.
“ಕಳೆದ 17 ತಿಂಗಳುಗಳಿಂದ ನಾನು (ಒಂಟಿಯಾಗಿ) ಜೈಲಿನಲ್ಲಿ ಇರಲಿಲ್ಲ. ಆದರೆ ದೆಹಲಿಯ ಪ್ರತಿಯೊಬ್ಬರು, ದೆಹಲಿಯ ಶಾಲಾ ಮಕ್ಕಳು ಭಾವನಾತ್ಮಕವಾಗಿ ನನ್ನೊಂದಿಗಿದ್ದರು” ಎಂದು ಮನೀಶ್ ಸಿಸೋಡಿಯಾ ಹೇಳಿದ್ದಾರೆ.
ಇದನ್ನು ಓದಿದ್ದೀರಾ? ದೆಹಲಿ ಅಬಕಾರಿ ಹಗರಣ: ಮನೀಶ್ ಸಿಸೋಡಿಯಾಗೆ ಸುಪ್ರೀಂ ಜಾಮೀನು
“ನಾನು ಸುಪ್ರೀಂ ಕೋರ್ಟ್‌ಗೆ ಹೃತ್ಪೂರ್ವಕ ಧನ್ಯವಾದ ಹೇಳಲು ಬಯಸುತ್ತೇನೆ. ಸುಪ್ರೀಂ ಕೋರ್ಟ್ ಸರ್ವಾಧಿಕಾರದ ಮುಖಕ್ಕೆ ಕಪಾಳಮೋಕ್ಷ ಮಾಡಲು ಸಂವಿಧಾನದ ಅಧಿಕಾರವನ್ನು ಬಳಸಿತು. ಬಾಬಾ ಸಾಹೇಬ್ (ಅಂಬೇಡ್ಕರ್) ಅವರಿಗೂ ನಾನು ಆಭಾರಿಯಾಗಿದ್ದೇನೆ” ಎಂದು ಎಎಪಿ ನಾಯಕ ತಿಳಿಸಿದರು.
“ಈ 17 ತಿಂಗಳಲ್ಲಿ ನಾನೊಬ್ಬನ್ನೇ ನೋವನ್ನು ಸಹಿಸಿಲ್ಲ, ನೀವೆಲ್ಲರೂ ನೋವು ಅನುಭವಿಸಿದ್ದೀರಿ. ಈ 17 ತಿಂಗಳಲ್ಲಿ ಈ ದೇಶದಲ್ಲಿ ನನ್ನನ್ನು ಪ್ರೀತಿಸುವ ಜನರ ಸಂಖ್ಯೆ ಹಲವಾರು ಪಟ್ಟು ಹೆಚ್ಚಾಗಿದೆ ಎಂದು ನನಗೆ ತಿಳಿದಿದೆ” ಎಂದರು.
“ಬಾಬಾಸಾಹೇಬ್ ಅಂಬೇಡ್ಕರ್ ಅವರ ಮೇಲಿನ ಋಣವನ್ನು ಹೇಗೆ ಮರುಪಾವತಿಸುವುದು ಎಂದು ನನಗೆ ಅರ್ಥವಾಗುತ್ತಿಲ್ಲ. ಸರ್ವಾಧಿಕಾರಿ ಸರ್ಕಾರ ಅಮಾಯಕರನ್ನು ಜೈಲಿಗೆ ಹಾಕಿದರೆ, ಸಂವಿಧಾನವು ಅಮಾಯಕರನ್ನು ಉಳಿಸುತ್ತದೆ ಎಂದು ಅಂಬೇಡ್ಕರ್ ಅಂದೇ ನಿರ್ಧರಿಸಿದ್ದರು” ಎಂದು ಶ್ಲಾಘಿಸಿದರು.
VIDEO | “I was not (alone) in jail for the past 17 months, but every Delhiite and schoolchildren of Delhi were with me emotionally. I want to thank the Supreme Court from the bottom of my heart. It used the power of Constitution to slap the face of dictatorship. I am also… pic.twitter.com/Z49fJ8S9pe
— Press Trust of India (@PTI_News) August 9, 2024