ನಿವೃತ್ತಿ ನಂತರವೂ EPF ಖಾತೆಯಲ್ಲೇ ಹಣ ಉಳಿಸಿ ತಿಂಗಳ ಆದಾಯ ಪಡೆಯುವ ಅವಕಾಶ: ಹೊಸ ಯೋಜನೆ ಪ್ರಸ್ತಾಪ!

Date:

ಉದ್ಯೋಗಿಗಳ ಭವಿಷ್ಯ ನಿಧಿ ಸಂಸ್ಥೆ (EPFO) ತನ್ನ ಸದಸ್ಯರಿಗೆ ನಿವೃತ್ತಿಯ ನಂತರದ ಆರ್ಥಿಕ ಭದ್ರತೆಯನ್ನು ಮತ್ತಷ್ಟು ಬಲಪಡಿಸುವ ನಿಟ್ಟಿನಲ್ಲಿ ಮಹತ್ವದ ಹೆಜ್ಜೆಯಿಟ್ಟಿದೆ. ನಿವೃತ್ತಿಯ ಸಮಯದಲ್ಲಿ ಪಿಎಫ್ (PF) ಮೊತ್ತವನ್ನು ಒಂದೇ ಬಾರಿಗೆ ಹಿಂಪಡೆಯುವ ಬದಲು, ಹಂತ-ಹಂತವಾಗಿ ಹಿಂಪಡೆಯಲು ಅನುವು ಮಾಡಿಕೊಡುವ ‘ಸಿಸ್ಟಮ್ಯಾಟಿಕ್ ವಿತ್‌ಡ್ರಾವಲ್ ಪ್ಲಾನ್’ (SWP – ವ್ಯವಸ್ಥಿತ ಹಿಂಪಡೆಯುವಿಕೆ ಯೋಜನೆ) ಜಾರಿಗೆ ತರಲು EPFO ಚಿಂತನೆ ನಡೆಸಿದೆ.

- Advertisement -

ಗುರುವಾರ ನಡೆಯಲಿರುವ EPFO ಕೇಂದ್ರೀಯ ಟ್ರಸ್ಟಿಗಳ ಮಂಡಳಿ (CBT) ಸಭೆಯಲ್ಲಿ ಈ ಮಹತ್ವದ ಪ್ರಸ್ತಾವನೆ ಚರ್ಚೆಗೆ ಬರಲಿದೆ ಎಂದು ಅಧಿಕೃತ ಮೂಲಗಳು ತಿಳಿಸಿವೆ.

ಇನ್ನಷ್ಟು ವಿಶೇಷ ಲೇಖನಗಳಿಗಾಗಿ, ಇಲ್ಲಿ ಕ್ಲಿಕ್ ಮಾಡಿ →

ನವ-ಉದಾರವಾದದ ಬಿಕ್ಕಟ್ಟು ಮತ್ತು ಫ್ಯಾಸಿಸ್ಟ್-ವಿರೋಧಿ ಅರ್ಥಶಾಸ್ತ್ರ: ಡಾ. ಇಸಬೆಲ್ಲಾ...

ಪ್ರಸ್ತುತ ಜಗತ್ತನ್ನು ಕಾಡುತ್ತಿರುವ ಬೆಲೆ ಏರಿಕೆ, ಆರ್ಥಿಕ ಅಸಮಾನತೆ ಮತ್ತು ಅದರಿಂದಾಗಿ ಜಾಗತಿಕವಾಗಿ ತಲೆ ಎತ್ತುತ್ತಿರುವ ಫ್ಯಾಸಿಸಂ ಪ್ರವೃತ್ತಿಗಳಿಗೆ ಪರ್ಯಾಯ ಆರ್ಥಿಕ ಮಾರ್ಗವನ್ನು ಡಾ. ಇಸಬೆಲ್ಲಾ ವೆಬರ್ ಇಲ್ಲಿ ಚರ್ಚಿಸಿದ್ದಾರೆ. ಜರ್ಮನಿಯ ಪ್ರಖ್ಯಾತ ಅರ್ಥಶಾಸ್ತ್ರಜ್ಞೆ...

ಕೊಲಂಬಿಯಾ ವಿಶ್ವವಿದ್ಯಾಲಯದಲ್ಲಿ ವಿದ್ಯಾರ್ಥಿಗಳೊಂದಿಗೆ ರಾಹುಲ್ ಗಾಂಧಿ ಅವರ ಶೈಕ್ಷಣಿಕ...

ಭಾರತದ ಆರ್ಥಿಕ ಬಿಕ್ಕಟ್ಟು, ನಿರುದ್ಯೋಗ, ಶಿಕ್ಷಣ, ಯುವಜನರ ಚಳವಳಿಗಳು, ಪ್ರಜಾಪ್ರಭುತ್ವ ಮತ್ತು ಜಾಗತಿಕ ರಾಜಕೀಯದ ಕುರಿತು ಮಹತ್ವದ ವಿಚಾರ ವಿನಿಮಯ ಭಾರತದ ಲೋಕಸಭೆಯ ವಿರೋಧ ಪಕ್ಷದ ನಾಯಕ ರಾಹುಲ್ ಗಾಂಧಿ ಅವರು ನವೆಂಬರ್ 17,...

ಸೋನಿಯಾ ಗಾಂಧಿಯವರ ಪುಸ್ತಕಕ್ಕೆ ನಿಷೇಧದ ಬೇಡಿಕೆ: ಇತಿಹಾಸವನ್ನು ಅಳಿಸಿಹಾಕಲು...

ಸಾವರ್ಕರ್ ಮತ್ತು ಆರ್‌ಎಸ್‌ಎಸ್ ಕುರಿತ ಐತಿಹಾಸಿಕ ಉಲ್ಲೇಖಗಳನ್ನು ವಿರೋಧಿಸಿ ಬಿಜೆಪಿ ಬೆಂಬಲಿತ ಏಕನಾಥ್ ಶಿಂದೆ ನೇತೃತ್ವದ ಶಿವಸೇನೆ ಬಣ ಸೋನಿಯಾ ಗಾಂಧಿಯವರ ಆತ್ಮಕಥನಕ್ಕೆ ನಿಷೇಧ ಹೇರಬೇಕೆಂದು ಒತ್ತಾಯಿಸುತ್ತಿದೆ. ಗಾಂಧೀಜಿಯವರ ಹಂತಕ ಗೋಡ್ಸೆಯನ್ನು ಸಮರ್ಥಿಸುವ...

ಏನಿದು ಹೊಸ ಪ್ರಸ್ತಾವನೆ? 

ಪ್ರಸ್ತುತ ನಿಯಮದ ಪ್ರಕಾರ, EPFO ಸದಸ್ಯರು 58 ವರ್ಷ ತುಂಬಿದ ನಂತರ ತಮ್ಮ ಸಂಪೂರ್ಣ ಪಿಎಫ್ ಹಣವನ್ನು ಹಿಂಪಡೆಯಲು ಮತ್ತು ಕನಿಷ್ಠ 10 ವರ್ಷಗಳ ಸೇವೆಯ ನಂತರ ಮಾಸಿಕ ಪಿಂಚಣಿ (EPS) ಪಡೆಯಲು ಅರ್ಹರಾಗಿರುತ್ತಾರೆ. ಆದರೆ, ಹೊಸ SWP ಯೋಜನೆ ಜಾರಿಯಾದರೆ, ನಿವೃತ್ತ ಸದಸ್ಯರು ತಮ್ಮ ಉಳಿತಾಯದ ಹಣವನ್ನು EPF ವ್ಯವಸ್ಥೆಯಲ್ಲೇ ಉಳಿಸಿಕೊಂಡು, ಉಳಿದ ಮೊತ್ತದ ಮೇಲೆ ಬಡ್ಡಿಯನ್ನು ಗಳಿಸುತ್ತಲೇ ನಿಯಮಿತವಾಗಿ ನಿವೃತ್ತಿ ನಂತರದ ಆದಾಯವನ್ನು ಪಡೆಯಬಹುದು.

ಈ ಯೋಜನೆಯಡಿ ಸದಸ್ಯರಿಗೆ ಮೂರು ಆಯ್ಕೆಗಳನ್ನು ನೀಡಲು ಉದ್ದೇಶಿಸಲಾಗಿದೆ. 

ಸಂಪೂರ್ಣ ಮೊತ್ತವನ್ನು ಹಂತ-ಹಂತವಾಗಿ (SWP) ಹಿಂಪಡೆಯುವುದು.

ಸ್ವಲ್ಪ ಮೊತ್ತವನ್ನು ಒಮ್ಮೆಲೇ ಪಡೆದು, ಉಳಿದ ಹಣಕ್ಕೆ SWP ಆಯ್ಕೆ ಮಾಡಿಕೊಳ್ಳುವುದು.

ಅಸಲು ಹಣವನ್ನು ಹಾಗೆಯೇ ಉಳಿಸಿ, ಕೇವಲ ಬಡ್ಡಿಯನ್ನು ಮಾತ್ರ ಹಿಂಪಡೆಯುವುದು.

6.32 ಲಕ್ಷ ಸದಸ್ಯರಿಗೆ ನೇರ ಲಾಭ ಮತ್ತು ನಾಮಿನಿ ಹಕ್ಕುಗಳು EPFO ಆಂತರಿಕ ಅಂದಾಜಿನ ಪ್ರಕಾರ, 55 ವರ್ಷ ಮೇಲ್ಪಟ್ಟ ಹಾಗೂ 5 ಲಕ್ಷ ರೂ.ಗಿಂತ ಹೆಚ್ಚಿನ ಪಿಎಫ್ ಮೊತ್ತ ಹೊಂದಿರುವ ಸುಮಾರು 6.32 ಲಕ್ಷ ಸದಸ್ಯರಿಗೆ ಈ ಯೋಜನೆಯಿಂದ ನೇರ ಪ್ರಯೋಜನವಾಗಲಿದೆ.

SWP ಅವಧಿಯಲ್ಲಿ ಖಾತೆಯಲ್ಲಿ ಉಳಿಯುವ ಹಣಕ್ಕೆ EPF ಬಡ್ಡಿ ದರ ಅನ್ವಯವಾಗುತ್ತಲೇ ಇರುತ್ತದೆ. ಅಲ್ಲದೆ, ನಿವೃತ್ತರು ತಮಗೆ ಅಗತ್ಯವಿದ್ದಾಗ ಯಾವುದೇ ಹಂತದಲ್ಲಿ SWP ರದ್ದುಗೊಳಿಸಿ ಉಳಿದ ಸಂಪೂರ್ಣ ಹಣವನ್ನು ಹಿಂಪಡೆಯುವ ಸ್ವಾತಂತ್ರ್ಯ ಹೊಂದಿರುತ್ತಾರೆ.

SWP ಅವಧಿಯಲ್ಲಿ ಸದಸ್ಯರು ಮೃತಪಟ್ಟರೆ, ಉಳಿದ ಪಿಎಫ್ ಮೊತ್ತದ ಮೇಲೆ ಅದೇ ನಿಯಮಗಳ ಅಡಿಯಲ್ಲಿ ಸಂಗಾತಿ ಅಥವಾ ನಾಮಿನಿಗೆ ಹಣ ಪಡೆಯುವ ಹಕ್ಕನ್ನು ಮುಂದುವರಿಸುವ ಅವಕಾಶವನ್ನೂ ಈ ಪ್ರಸ್ತಾವನೆಯಲ್ಲಿ ಸೇರಿಸಲಾಗಿದೆ.

ಉದ್ಯೋಗದಾತರ ಪಾತ್ರವಿಲ್ಲದೆಯೇ, ಸದಸ್ಯರು ನೇರವಾಗಿ ಡಿಜಿಟಲ್ ಮಾಧ್ಯಮಗಳ ಮೂಲಕ ತಮ್ಮ EPF ಖಾತೆಗೆ ಸ್ವಯಂಪ್ರೇರಿತ ದೇಣಿಗೆ ಪಾವತಿಸುವ ಅವಕಾಶವನ್ನೂ ಈ ಪ್ರಸ್ತಾವನೆ ಒಳಗೊಂಡಿದೆ. ಇದು ಆದಾಯ ತೆರಿಗೆ ಕಾಯ್ದೆ ಮತ್ತು CBT ನಿಗದಿಪಡಿಸುವ ಮಿತಿಗಳಿಗೆ ಒಳಪಟ್ಟಿರುತ್ತದೆ.

ಇದರೊಂದಿಗೆ, ಗಿಗ್ ಕಾರ್ಮಿಕರು, ಪ್ಲಾಟ್‌ಫಾರ್ಮ್ ಕಾರ್ಮಿಕರು, ಕಟ್ಟಡ ಕಾರ್ಮಿಕರು, ಮನೆಗೆಲಸದವರು ಮತ್ತು ಬೀದಿ ಬದಿ ವ್ಯಾಪಾರಿಗಳಂತಹ ಅಸಂಘಟಿತ ವಲಯದವರಿಗೂ ಸಾಮಾಜಿಕ ಭದ್ರತೆ ಒದಗಿಸಲು EPFO ಮುಂದಾಗಿದೆ. ಗ್ರಾಹಕರು ನೀಡುವ ಟಿಪ್ಸ್, ಉಡುಗೊರೆ ಅಥವಾ ಇತರ ಸಣ್ಣ ಮೊತ್ತದ ಪಾವತಿಗಳನ್ನು ಯುಎಎನ್ ಆಧಾರಿತ ಡಿಜಿಟಲ್ ಪಾವತಿ ವ್ಯವಸ್ಥೆಯ ಮೂಲಕ ನೇರವಾಗಿ ಇವರ ಪಿಎಫ್ ಖಾತೆಗೆ ‘ಮೈಕ್ರೋ-ಕಾಂಟ್ರಿಬ್ಯೂಷನ್’ ರೂಪದಲ್ಲಿ ಜಮೆ ಮಾಡುವ ವ್ಯವಸ್ಥೆ ತರಲು ಉದ್ದೇಶಿಸಲಾಗಿದೆ.

ಪ್ರಸ್ತುತ ಈ SWP ಯೋಜನೆಯು ಕೇವಲ ಶಾಸನಬದ್ಧ ನಿಧಿಯ ಸದಸ್ಯರಿಗೆ ಮಾತ್ರ ಸೀಮಿತವಾಗಿರಲಿದ್ದು, ಸ್ವಂತ ಪಿಎಫ್ ಟ್ರಸ್ಟ್‌ಗಳನ್ನು ನಿರ್ವಹಿಸುವ ವಿನಾಯಿತಿ ಪಡೆದ ಸಂಸ್ಥೆಗಳ ಸದಸ್ಯರಿಗೆ ಅನ್ವಯಿಸುವುದಿಲ್ಲ. ಸದಸ್ಯರ ಸ್ವಂತ ಉಳಿತಾಯದ ಹಣವನ್ನೇ ಹಂತ-ಹಂತವಾಗಿ ನೀಡುವುದರಿಂದ, ಇದರಿಂದ ಕೇಂದ್ರ ಸರ್ಕಾರಕ್ಕಾಗಲಿ ಅಥವಾ EPFO ಗಾಗಲಿ ಯಾವುದೇ ಹೆಚ್ಚುವರಿ ಆರ್ಥಿಕ ಹೊರೆ ಬೀಳುವುದಿಲ್ಲ ಎಂದು ಅಧಿಕಾರಿಗಳು ಸ್ಪಷ್ಟಪಡಿಸಿದ್ದಾರೆ.

eedina
ಈ ದಿನ ಡೆಸ್ಕ್‌
Website | + posts

<p><iframe src="https://www.youtube.com/embed/8qwx4L0lKFQ?autoplay=1&mute=1&loop=1&playlist=8qwx4L0lKFQ&controls=0&modestbranding=1&showinfo=0" width="560" height="315" frameborder="0" allowfullscreen="allowfullscreen"></iframe></p>

ಪೋಸ್ಟ್ ಹಂಚಿಕೊಳ್ಳಿ:

ಪೋಸ್ಟ್ ಹಂಚಿಕೊಳ್ಳಿ:

ಈ ಹೊತ್ತಿನ ಪ್ರಮುಖ ಸುದ್ದಿ

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ಬಾಗಲಕೋಟೆ | ಸೇತುವೆ ಮೇಲಿನ ಗುಂಡಿ ಸರಿಪಡಿಸಲು ಆಗ್ರಹ

ಬಾಗಲಕೋಟೆ ಜಿಲ್ಲೆಯ ಕಲಾದಗಿ - ಅಂಕಲಗಿ ಸೇತುವೆ ಮೇಲೆ ಬೃಹತ್‌ ಪ್ರಮಾಣದ...

ಆರ್‌ಎಸ್‌ಎಸ್ ಮುಖ್ಯಸ್ಥರ ಮಣಿಪುರ ಭೇಟಿ; ಶಾಂತಿ ಸ್ಥಾಪನೆಗೆ ಏನು ಪ್ರಯೋಜನ: ಕಾಂಗ್ರೆಸ್ ಪ್ರಶ್ನೆ

ರಾಷ್ಟ್ರೀಯ ಸ್ವಯಂಸೇವಕ ಸಂಘದ (ಆರ್‌ಎಸ್‌ಎಸ್) ಮುಖ್ಯಸ್ಥ ಮೋಹನ್ ಭಾಗವತ್ ಅವರ ಮೂರು...

ಭಾರತದಲ್ಲಿ ʼಮಾಲಿನ್ಯʼ ಚುನಾವಣಾ ವಿಷಯವಾಗುತ್ತಿಲ್ಲ ಏಕೆ?

ಭಾರತದಲ್ಲಿ ವಾಯುಮಾಲಿನ್ಯವು ಅತ್ಯಂತ ಗಂಭೀರ ಸಾರ್ವಜನಿಕ ಆರೋಗ್ಯ ತುರ್ತುಪರಿಸ್ಥಿತಿಯಾಗಿ ಮಾರ್ಪಟ್ಟಿದ್ದರೂ, ಅದು...