ನವ-ಉದಾರವಾದದ ಬಿಕ್ಕಟ್ಟು ಮತ್ತು ಫ್ಯಾಸಿಸ್ಟ್-ವಿರೋಧಿ ಅರ್ಥಶಾಸ್ತ್ರ: ಡಾ. ಇಸಬೆಲ್ಲಾ ವೆಬರ್ ಒಳನೋಟಗಳು

Date:

ಪ್ರಸ್ತುತ ಜಗತ್ತನ್ನು ಕಾಡುತ್ತಿರುವ ಬೆಲೆ ಏರಿಕೆ, ಆರ್ಥಿಕ ಅಸಮಾನತೆ ಮತ್ತು ಅದರಿಂದಾಗಿ ಜಾಗತಿಕವಾಗಿ ತಲೆ ಎತ್ತುತ್ತಿರುವ ಫ್ಯಾಸಿಸಂ ಪ್ರವೃತ್ತಿಗಳಿಗೆ ಪರ್ಯಾಯ ಆರ್ಥಿಕ ಮಾರ್ಗವನ್ನು ಡಾ. ಇಸಬೆಲ್ಲಾ ವೆಬರ್ ಇಲ್ಲಿ ಚರ್ಚಿಸಿದ್ದಾರೆ.

ಜರ್ಮನಿಯ ಪ್ರಖ್ಯಾತ ಅರ್ಥಶಾಸ್ತ್ರಜ್ಞೆ ಹಾಗೂ ಮ್ಯಾಸಚೂಸೆಟ್ಸ್ ಅಮ್ಹೆರ್ಸ್ಟ್ ವಿಶ್ವವಿದ್ಯಾಲಯದ ಪ್ರಾಧ್ಯಾಪಕಿಯಾದ ಡಾ. ಇಸಬೆಲ್ಲಾ ವೆಬರ್ ಅವರ ಹೊಸ ಕೃತಿ “Anti-Fascist Economics: In Defense of Affordability, Dignity, and Democracy” ವಿಶೇಷ ಆಸಕ್ತಿ ಕೆರಳಿಸಿದೆ. ಆ ಪುಸ್ತಕವನ್ನು ನಾನು ಓದಿಲ್ಲ. ಆ ಬಗ್ಗೆ ಎರಡು ಲೇಖನಗಳನ್ನು ಈ ತಿಂಗಳ ಅರ್ಥದಲ್ಲಿ ಹಂಚಿಕೊಳ್ಳುತ್ತಿದ್ದೇನೆ. ಆ ಪುಸ್ತಕ ನನ್ನ ಕೈಗೆ ಸಿಗುವುದಕ್ಕೆ ಇನ್ನೂ 15 ದಿನ ಬೇಕು. ಅವರ ಹಿಂದಿನ ಪುಸ್ತಕ ಹೌ ಚೈನಾ ಎಸ್ಕೇಪಡ್‌ ಶಾಕ್‌ ಥೆರೆಪಿ ಕೂಡ ಓದಲೇಬೇಕಾದ ಪುಸ್ತಕ. ಆ ಬಗ್ಗೆ ಹಿಂದೆ ಬರೆದಿದ್ದೆ. ಇತ್ತೀಚೆಗೆ ಹೊಸ ಪುಸ್ತಕದ ಬಗ್ಗೆ ಅವರ ಸಂದರ್ಶನವನ್ನು ಓದಿದೆ. ಅದರಲ್ಲಿ ಈ ಪುಸ್ತಕದ ಬಗ್ಗೆ ಆಳವಾಗಿ ಚರ್ಚಿಸಿದ್ದಾರೆ. ಪ್ರಸ್ತುತ ಜಗತ್ತನ್ನು ಕಾಡುತ್ತಿರುವ ಬೆಲೆ ಏರಿಕೆ, ಆರ್ಥಿಕ ಅಸಮಾನತೆ ಮತ್ತು ಅದರಿಂದಾಗಿ ಜಾಗತಿಕವಾಗಿ ತಲೆ ಎತ್ತುತ್ತಿರುವ ಫ್ಯಾಸಿಸಂ ಪ್ರವೃತ್ತಿಗಳಿಗೆ ಪರ್ಯಾಯ ಆರ್ಥಿಕ ಮಾರ್ಗವನ್ನು ಚರ್ಚಿಸಿದ್ದಾರೆ. ಇದು ಅವರ ಬಹುತೇಕ ಬರಹಗಳ ವಿಷಯವೂ ಹೌದು.

- Advertisement -

ನವ-ಉದಾರವಾದವು (Neoliberalism) ಫ್ಯಾಸಿಸಂಗೆ ಹೇಗೆ ದಾರಿ ಮಾಡಿಕೊಡುತ್ತಿದೆ?

ಇನ್ನಷ್ಟು ವಿಶೇಷ ಲೇಖನಗಳಿಗಾಗಿ, ಇಲ್ಲಿ ಕ್ಲಿಕ್ ಮಾಡಿ →

ಕೊಲಂಬಿಯಾ ವಿಶ್ವವಿದ್ಯಾಲಯದಲ್ಲಿ ವಿದ್ಯಾರ್ಥಿಗಳೊಂದಿಗೆ ರಾಹುಲ್ ಗಾಂಧಿ ಅವರ ಶೈಕ್ಷಣಿಕ...

ಭಾರತದ ಆರ್ಥಿಕ ಬಿಕ್ಕಟ್ಟು, ನಿರುದ್ಯೋಗ, ಶಿಕ್ಷಣ, ಯುವಜನರ ಚಳವಳಿಗಳು, ಪ್ರಜಾಪ್ರಭುತ್ವ ಮತ್ತು ಜಾಗತಿಕ ರಾಜಕೀಯದ ಕುರಿತು ಮಹತ್ವದ ವಿಚಾರ ವಿನಿಮಯ ಭಾರತದ ಲೋಕಸಭೆಯ ವಿರೋಧ ಪಕ್ಷದ ನಾಯಕ ರಾಹುಲ್ ಗಾಂಧಿ ಅವರು ನವೆಂಬರ್ 17,...

ಸೋನಿಯಾ ಗಾಂಧಿಯವರ ಪುಸ್ತಕಕ್ಕೆ ನಿಷೇಧದ ಬೇಡಿಕೆ: ಇತಿಹಾಸವನ್ನು ಅಳಿಸಿಹಾಕಲು...

ಸಾವರ್ಕರ್ ಮತ್ತು ಆರ್‌ಎಸ್‌ಎಸ್ ಕುರಿತ ಐತಿಹಾಸಿಕ ಉಲ್ಲೇಖಗಳನ್ನು ವಿರೋಧಿಸಿ ಬಿಜೆಪಿ ಬೆಂಬಲಿತ ಏಕನಾಥ್ ಶಿಂದೆ ನೇತೃತ್ವದ ಶಿವಸೇನೆ ಬಣ ಸೋನಿಯಾ ಗಾಂಧಿಯವರ ಆತ್ಮಕಥನಕ್ಕೆ ನಿಷೇಧ ಹೇರಬೇಕೆಂದು ಒತ್ತಾಯಿಸುತ್ತಿದೆ. ಗಾಂಧೀಜಿಯವರ ಹಂತಕ ಗೋಡ್ಸೆಯನ್ನು ಸಮರ್ಥಿಸುವ...

ಇತಿಹಾಸದ ಕಮಾನು: ಸಮಾನತೆಯಿಂದ ಅಸಮಾನತೆಗೆ, ಮತ್ತೆ ಸಮಾನತೆಯತ್ತವೇ ಮನುಷ್ಯನ...

ಒಂದು ಕಾಲದಲ್ಲಿ ಮನುಷ್ಯನ ಕೈಕೆಲಸವನ್ನು ಯಂತ್ರಗಳು ಬದಲಾಯಿಸಿದವು. ಈಗ ಮನುಷ್ಯನ ಬುದ್ಧಿಶಕ್ತಿಯ ಕೆಲವು ಕೆಲಸಗಳನ್ನೂ ಯಂತ್ರಗಳು ಮಾಡತೊಡಗಿವೆ. ಭಾಷಾಂತರ, ಲೆಕ್ಕಾಚಾರ, ವಿನ್ಯಾಸ, ಮಾಹಿತಿ ವಿಶ್ಲೇಷಣೆ, ವೈದ್ಯಕೀಯ ಪರೀಕ್ಷೆಗಳಿಗೆ ನೆರವು, ಆಡಳಿತದ ನಿರ್ಧಾರಗಳಿಗೆ ಸಹಾಯ...

ಅವರು ಹೇಳುವಂತೆ ಕಳೆದ ಹಲವು ದಶಕಗಳಿಂದ ಜಗತ್ತನ್ನು ಆಳುತ್ತಿರುವ ‘ನವ-ಉದಾರವಾದಿ’ ಆರ್ಥಿಕ ನೀತಿಯು ಒಂದು ದೊಡ್ಡ ವಿರೋಧಾಭಾಸವನ್ನು ಸೃಷ್ಟಿಸಿದೆ. ಒಂದೆಡೆ ಸರ್ಕಾರಗಳು ‘ಪ್ರಜಾಪ್ರಭುತ್ವವೇ ಅತ್ಯುತ್ತಮ ವ್ಯವಸ್ಥೆ’ ಎಂದು ಹೇಳುತ್ತವೆ; ಆದರೆ ಜನಸಾಮಾನ್ಯರ ಮೂಲಭೂತ ಅಗತ್ಯಗಳಾದ ಆಹಾರ, ವಸತಿ, ಆರೋಗ್ಯ ಮತ್ತು ಇಂಧನದ ಬೆಲೆಗಳು ಗಗನಕ್ಕೇರಿದಾಗ ‘ಇದರಲ್ಲಿ ಸರ್ಕಾರ ಏನೂ ಮಾಡಲು ಸಾಧ್ಯವಿಲ್ಲ, ಮಾರುಕಟ್ಟೆಯೇ ಎಲ್ಲವನ್ನೂ ನಿರ್ಧರಿಸುತ್ತದೆ’ ಎಂದು ಕೈಚೆಲ್ಲುತ್ತವೆ.

ಅವರು ಮುಖ್ಯವಾಗಿ ವಾದಿಸುವಂತೆ ಮಾರುಕಟ್ಟೆ ತಟಸ್ಥ ವ್ಯವಸ್ಥೆ ಅನ್ನುವುದು ಒಂದು ದೊಡ್ಡ ಸುಳ್ಳು. ಮಾರುಕಟ್ಟೆ ಎಂಬುದು ನೈಸರ್ಗಿಕ ಅಥವಾ ತಟಸ್ಥ ವ್ಯವಸ್ಥೆಯಲ್ಲ; ಅದು ಬೃಹತ್ ಕಾರ್ಪೊರೇಟ್ ಕಂಪನಿಗಳ ಲಾಭದ ಹಿತಾಸಕ್ತಿಗೆ ತಕ್ಕಂತೆ ಕೆಲಸ ಮಾಡುವ ವ್ಯವಸ್ಥೆಯಾಗಿದೆ.

ಅವರು ಒತ್ತಿ ಹೇಳುವ ಇನ್ನೊಂದು ಅಂಶ ಪ್ರತಿದಿನ ಕಷ್ಟಪಟ್ಟು ದುಡಿದರೂ ಮನೆ ಬಾಡಿಗೆ ಕಟ್ಟಲು ಅಥವಾ ಅಗತ್ಯ ವಸ್ತುಗಳನ್ನು ಕೊಳ್ಳಲು ಸಾಧ್ಯವಾಗದ ಸ್ಥಿತಿ ನಿರ್ಮಾಣವಾದಾಗ, ಜನರಲ್ಲಿ ತಮ್ಮ ಸ್ವಾಭಿಮಾನ ಕುಸಿದ ಭಾವನೆ (broken self-worth) ಉಂಟಾಗುತ್ತದೆ. ಪ್ರಜಾಪ್ರಭುತ್ವದ ಮೇಲೆ ನಂಬಿಕೆ ಕಳೆದುಕೊಳ್ಳುವ ಈ ಹತಾಶೆಯೇ ಫ್ಯಾಸಿಸ್ಟ್ ಶಕ್ತಿಗಳಿಗೆ ಫಲವತ್ತಾದ ಭೂಮಿಯಾಗುತ್ತದೆ.

ಈ ಆರ್ಥಿಕ ಅಸುರಕ್ಷತೆಯ ಲಾಭ ಪಡೆಯುವ ಉಗ್ರ ಬಲಪಂಥೀಯ ನಾಯಕರು, ‘ನಾವು ಬಂದರೆ ಎಲ್ಲವನ್ನೂ ಸರಿಪಡಿಸುತ್ತೇವೆ, ಹಿಂದಿನ ಸುವರ್ಣ ಯುಗವನ್ನು ಮರಳಿ ತರುತ್ತೇವೆ’ ಎಂದು ನಂಬಿಸುತ್ತಾರೆ. ಇದಕ್ಕಾಗಿ ಸಮಾಜದಲ್ಲಿ ಬಹುಸಂಖ್ಯಾತರು ಮತ್ತು ಅಲ್ಪಸಂಖ್ಯಾತರು, ವಲಸಿಗರು ಅಥವಾ ದುರ್ಬಲರ ನಡುವೆ ಒಡಕು ಮೂಡಿಸಿ, ಇತರರನ್ನು ಕೀಳಾಗಿ ಕಾಣುವ ಮೂಲಕ ಜನರಿಗೆ ಸುಳ್ಳು ಸ್ವಾಭಿಮಾನವನ್ನು ನೀಡಲು ಯತ್ನಿಸುತ್ತಾರೆ. ‘ನಾವು ಮತ್ತು ಅವರು’ (Us vs Them) ರಾಜಕಾರಣವನ್ನು ಪ್ರಾರಂಭಿಸುತ್ತಾರೆ. ಅಧಿಕಾರಕ್ಕೆ ಬಂದ ನಂತರ ಇವರೂ ಸಹ ಬೃಹತ್ ಕಾರ್ಪೊರೇಟ್ ಕಂಪನಿಗಳ ಹಿತಾಸಕ್ತಿಯನ್ನೇ ಕಾಪಾಡುತ್ತಾರೆ.

ಇದನ್ನು ಓದಿದ್ದೀರಾ?: ಷೇರುದಾರರ ಇಂದಿನ ಜಾಗತಿಕ ಮಂತ್ರ- ‘ಅಮೆರಿಕವನ್ನು ನಂಬಿ ಹಣ ಹೂಡಿ’

ಬೆಲೆ ಏರಿಕೆ ಎಂಬುದು ಸಂಪತ್ತಿನ ಮರುಹಂಚಿಕೆಯ ಆಘಾತ

ಕೋವಿಡ್ ಸಾಂಕ್ರಾಮಿಕ, ಹವಾಮಾನ ವೈಪರೀತ್ಯ ಮತ್ತು ಯುದ್ಧಗಳಂತಹ ಬಿಕ್ಕಟ್ಟುಗಳು ಎದುರಾದಾಗ, ಸರಬರಾಜು ವ್ಯತ್ಯಯದ ನೆಪವೊಡ್ಡಿ ಬೃಹತ್ ಕಂಪನಿಗಳು ತಮ್ಮ ಉತ್ಪನ್ನಗಳ ಬೆಲೆಯನ್ನು ಮನಬಂದಂತೆ ಏರಿಸಿವೆ. ವೆಬರ್ ಅವರ ಸಂಶೋಧನೆಯ ಪ್ರಕಾರ, ಇದು ಕೇವಲ ಹಣದುಬ್ಬರವಲ್ಲ, ಬದಲಾಗಿ ‘ಕೆಳವರ್ಗದಿಂದ ಮೇಲ್ವರ್ಗಕ್ಕೆ ಸಂಪತ್ತಿನ ವರ್ಗಾವಣೆ’.

ಬಡವರು ತಮ್ಮ ಸಂಪೂರ್ಣ ಆದಾಯವನ್ನು ದಿನನಿತ್ಯದ ಅಗತ್ಯ ವಸ್ತುಗಳಿಗಾಗಿಯೇ ಖರ್ಚು ಮಾಡುವುದರಿಂದ ಬೆಲೆ ಏರಿಕೆಯ ಬಿಸಿ ಅವರಿಗೆ ನೇರವಾಗಿ ತಟ್ಟುತ್ತದೆ. ಆದರೆ ಕಾರ್ಪೊರೇಟ್ ಲಾಭದ ಶೇಕಡಾ 50ರಷ್ಟು ಭಾಗವು ಸಮಾಜದ ಅತ್ಯಂತ ಶ್ರೀಮಂತ ಶೇಕಡಾ 1ರಷ್ಟು ಜನರ ಜೇಬನ್ನು ಸೇರುತ್ತಿದೆ. 2021ರಲ್ಲಿಯೇ ವೆಬರ್ ಅವರು ಅಗತ್ಯ ವಸ್ತುಗಳ ಬೆಲೆ ನಿಯಂತ್ರಣಕ್ಕೆ ಸರ್ಕಾರ ಮಧ್ಯ ಪ್ರವೇಶಿಸಬೇಕು ಎಂದು ವಾದಿಸಿದಾಗ, ಸಾಂಪ್ರದಾಯಿಕ ಅರ್ಥಶಾಸ್ತ್ರಜ್ಞರು ಅವರನ್ನು ತೀವ್ರವಾಗಿ ಟೀಕಿಸಿದ್ದರು. ಆದರೆ ಇಂದಿನ ಆರ್ಥಿಕ ದತ್ತಾಂಶಗಳು ಅವರ ವಾದವನ್ನು ಸತ್ಯವೆಂದು ಹೇಳುತ್ತಿವೆ.

ಪುಸ್ತಕದ ತಿರುಳು: ‘ಫ್ಯಾಸಿಸ್ಟ್-ವಿರೋಧಿ ಅರ್ಥಶಾಸ್ತ್ರ’ದ ಪ್ರಮುಖ ಅಂಶಗಳು

‘ಮಾರುಕಟ್ಟೆಗೆ ಪರ್ಯಾಯವಿಲ್ಲ’ (There is no alternative) ಎಂಬ ನವ-ಉದಾರವಾದಿ ಘೋಷಣೆಯನ್ನು ಇಸಬೆಲ್ಲಾ ವೆಬರ್ ತಿರಸ್ಕರಿಸುತ್ತಾರೆ. ಬದಲಿಗೆ ‘ಎಲ್ಲರ ಘನತೆಗಾಗಿ ಆರ್ಥಿಕತೆ’ (An economy for the dignity of all) ಎಂಬ ಸ್ಪಷ್ಟ ಪರ್ಯಾಯವನ್ನು ಮುಂದಿಡುತ್ತಾರೆ. ಫ್ಯಾಸಿಸ್ಟರು ಸರ್ಕಾರದ ಶಕ್ತಿಯನ್ನು ಕೇವಲ ಒಂದು ಗುಂಪಿನ (‘ನಮ್ಮವರು’) ರಕ್ಷಣೆಗೆ ಬಳಸಿದರೆ, ಫ್ಯಾಸಿಸ್ಟ್-ವಿರೋಧಿ ಅರ್ಥಶಾಸ್ತ್ರವು ಜಾತಿ, ಧರ್ಮ, ಲಿಂಗ ಅಥವಾ ದೇಶದ ಭೇದವಿಲ್ಲದೆ ಪ್ರತಿಯೊಬ್ಬ ಮನುಷ್ಯನ ಘನತೆಯನ್ನು ಎತ್ತಿಹಿಡಿಯುತ್ತದೆ. ಈ ಪರ್ಯಾಯ ಅರ್ಥಶಾಸ್ತ್ರವು ನಾಲ್ಕು ನೀತಿಗಳನ್ನು ಆಧರಿಸಿದೆ.

  1. ಕನಿಷ್ಠ ಭದ್ರತೆಯ ನೆಲಗಟ್ಟು ಮತ್ತು ಗರಿಷ್ಠ ಸಂಪತ್ತಿಗೆ ಮಿತಿ (A Floor and a Ceiling):
    ಯಾರೂ ಹಸಿವಿನಿಂದ ಅಥವಾ ಮೂಲಭೂತ ಸೌಕರ್ಯಗಳಿಲ್ಲದೆ ನರಳದಂತೆ ನೋಡಿಕೊಳ್ಳುವುದು. ಇದಕ್ಕಾಗಿ ಕೇವಲ ಬೆಲೆ ನಿಯಂತ್ರಿಸಿದರೆ ಸಾಲುವುದಿಲ್ಲ. ಉತ್ತಮ ಕನಿಷ್ಠ ವೇತನ ಮತ್ತು ‘ಉದ್ಯೋಗದ ಹಕ್ಕು’ ಜಾರಿಗೆ ತರಬೇಕು.
    ಪ್ರಜಾಪ್ರಭುತ್ವವನ್ನು ಖರೀದಿಸುವಷ್ಟು ಮಟ್ಟಿಗೆ ಸಂಪತ್ತು ಮತ್ತು ಆರ್ಥಿಕ ಅಧಿಕಾರ ಕೆಲವೇ ಕೆಲವರ ಕೈಯಲ್ಲಿ ಕೇಂದ್ರೀಕೃತವಾಗುವುದನ್ನು ತಡೆಯುವುದು. ಇದಕ್ಕಾಗಿ ಅತಿ ಶ್ರೀಮಂತರು, ಬಹುರಾಷ್ಟ್ರೀಯ ಕಂಪನಿಗಳು ಮತ್ತು ಬೃಹತ್ ಪಿತ್ರಾರ್ಜಿತ ಆಸ್ತಿಗಳ ಮೇಲೆ ಹೆಚ್ಚಿನ ತೆರಿಗೆ ವಿಧಿಸುವುದು ಹಾಗೂ ಏಕಸ್ವಾಮ್ಯವನ್ನು ಮುರಿಯುವ ನಿಟ್ಟಿನಲ್ಲಿ ಕ್ರಮತೆಗೆದುಕೊಳ್ಳಬೇಕು.
  2. ಆಹಾರ, ಇಂಧನ, ವಸತಿ, ಸಾರಿಗೆ ಮತ್ತು ಆರೈಕೆ (Care) ಇತ್ಯಾದಿ ಅಗತ್ಯ ವಲಯಗಳನ್ನು ಕೇವಲ ಲಾಭದ ಸರಕುಗಳಾಗಿ ನೋಡದೆ, ಸಾರ್ವಜನಿಕ ಸೇವೆಗಳಾಗಿ ಪರಿವರ್ತಿಸಬೇಕು. ಎಲ್ಲವನ್ನೂ ರಾಷ್ಟ್ರೀಕರಣ ಮಾಡುವ ಬದಲು, ಖಾಸಗಿ ಕಂಪನಿಗಳಿಗೆ ಪೈಪೋಟಿ ನೀಡಲು ಸರ್ಕಾರವೇ ‘ಸಾರ್ವಜನಿಕ ಆಯ್ಕೆಗಳನ್ನು’ (Public Options) ಸೃಷ್ಟಿಸಬೇಕು. ಉದಾಹರಣೆಗೆ: ನ್ಯೂಯಾರ್ಕ್‌ನಲ್ಲಿ ಪ್ರಸ್ತಾಪಿಸಲಾದ ಸರ್ಕಾರಿ ದಿನಸಿ ಅಂಗಡಿಗಳು ಅಥವಾ ರೋಮ್ ನಗರದಲ್ಲಿ ಯುವಕರಿಗಾಗಿ ಸ್ಥಾಪಿಸಲಾದ ಸರ್ಕಾರಿ ಕ್ರೀಡಾ ಸಂಸ್ಥೆಗಳು. ಇವು ಕಡಿಮೆ ದರದಲ್ಲಿ ಉತ್ತಮ ಸೇವೆ ನೀಡಿದಾಗ, ಖಾಸಗಿ ಕಂಪನಿಗಳೂ ಅನಿವಾರ್ಯವಾಗಿ ತಮ್ಮ ಬೆಲೆಗಳನ್ನು ಇಳಿಸಬೇಕಾಗುತ್ತದೆ.
  3. ಸಾರ್ವತ್ರಿಕ ಮೂಲಭೂತ ಸೇವೆಗಳು (Universal Basic Services- UBS): ಜನರ ಕೈಗೆ ಕೇವಲ ಹಣ ನೀಡುವ (Universal Basic Income) ಬದಲು, ಗುಣಮಟ್ಟದ ಶಿಕ್ಷಣ, ಆರೋಗ್ಯ, ಸಾರಿಗೆ ಮತ್ತು ವಸತಿಯನ್ನು ಎಲ್ಲರಿಗೂ ಕೈಗೆಟುಕುವ ದರದಲ್ಲಿ ಸಾರ್ವತ್ರಿಕವಾಗಿ ಒದಗಿಸಬೇಕು. ಸೌಲಭ್ಯಗಳನ್ನು ಕೇವಲ ‘ಬಡವರಿಗೆ ಮಾತ್ರ’ ಸೀಮಿತಗೊಳಿಸಿದಾಗ, ‘ನಮ್ಮ ತೆರಿಗೆ ಹಣದಲ್ಲಿ ಬೇರೆಯವರು ಬದುಕುತ್ತಿದ್ದಾರೆ’ ಎಂಬ ದ್ವೇಷದ ಭಾವನೆಯನ್ನು ಬಲಪಂಥೀಯರು ಹುಟ್ಟುಹಾಕುತ್ತಾರೆ. ಎಲ್ಲರಿಗೂ ಸೇವೆಗಳು ಲಭ್ಯವಿದ್ದಾಗ ಸಮಾಜದಲ್ಲಿ ಸಾಮರಸ್ಯ ಬೆಳೆಯುತ್ತದೆ ಮತ್ತು ಸರ್ಕಾರದ ಸಾಮರ್ಥ್ಯವೂ ವೃದ್ಧಿಸುತ್ತದೆ.
  4. ಬಫರ್ ಸ್ಟಾಕ್‌ಗಳು (Buffer Stocks) ಮತ್ತು ಹವಾಮಾನ ನ್ಯಾಯ: ಆಹಾರ ಮತ್ತು ಇಂಧನದಂತಹ ಅಗತ್ಯ ವಸ್ತುಗಳ ಬೆಲೆ ಏರಿಳಿತವನ್ನು ತಡೆಯಲು ಸರ್ಕಾರವು ‘ಬಫರ್ ಸ್ಟಾಕ್’ (ತುರ್ತು ದಾಸ್ತಾನು) ವ್ಯವಸ್ಥೆಯನ್ನು ಸ್ಥಾಪಿಸಬೇಕು. ಬೆಲೆ ಕುಸಿದಾಗ ರೈತರಿಂದ ನೇರವಾಗಿ ಖರೀದಿಸಿ ಅವರಿಗೆ ರಕ್ಷಣೆ ನೀಡುವುದು ಮತ್ತು ಬೆಲೆ ಏರಿದಾಗ ದಾಸ್ತಾನನ್ನು ಮಾರುಕಟ್ಟೆಗೆ ಬಿಡುಗಡೆ ಮಾಡಿ ಬೆಲೆ ನಿಯಂತ್ರಿಸುವುದು ಇದರ ಉದ್ದೇಶ. ಈ ಖರೀದಿ ಪ್ರಕ್ರಿಯೆಯ ಮೂಲಕ ಪರಿಸರ ಸ್ನೇಹಿ ಮತ್ತು ಸುಸ್ಥಿರ ಕೃಷಿಯನ್ನು ಪ್ರೋತ್ಸಾಹಿಸಬಹುದು. ಇದು ನಗರದ ಕಾರ್ಮಿಕರು ಮತ್ತು ಗ್ರಾಮೀಣ ರೈತರ ನಡುವೆ ಆರ್ಥಿಕ ಸೇತುವೆಯಾಗುತ್ತದೆ.
  5. ಅಂತಾರಾಷ್ಟ್ರೀಯ ಸಹಕಾರ ಮತ್ತು ಶಾಂತಿ: ಇಸಬೆಲ್ಲಾ ಹೇಳುವಂತೆ ಕೈಗೆಟುಕುವ ದರ ಎಂಬುದು ಜಾಗತಿಕ ಶಾಂತಿಯ ಪ್ರಶ್ನೆಯೂ ಹೌದು. ಯುದ್ಧಗಳು ಮತ್ತು ಸಂಪನ್ಮೂಲಗಳ ಲೂಟಿಯು ಜಾಗತಿಕ ದಕ್ಷಿಣದ (Global South) ಬಡ ರಾಷ್ಟ್ರಗಳ ಬದುಕನ್ನು ಬಲಿಪಶುಗಳನ್ನಾಗಿ (Collateral damage) ಮಾಡುತ್ತಿವೆ. ಆದ್ದರಿಂದ, ಶ್ರೀಮಂತ ರಾಷ್ಟ್ರಗಳಿಗೆ ಮಾತ್ರ ಕಲ್ಯಾಣ ಕಾರ್ಯಕ್ರಮಗಳನ್ನು ಸೀಮಿತಗೊಳಿಸದೆ, ಜಾಗತಿಕ ಮಟ್ಟದಲ್ಲಿ ಸರಕುಗಳ ಬೆಲೆ ಸ್ಥಿರೀಕರಣ ಮತ್ತು ಕಾರ್ಮಿಕ-ಪರ ವ್ಯಾಪಾರ ಒಪ್ಪಂದಗಳನ್ನು ರೂಪಿಸಬೇಕು.

ಇದನ್ನು ಓದಿದ್ದೀರಾ?: ಜಿಡಿಪಿ ಅಂಕಿಅಂಶಗಳ ಆಚೆಗಿನ ವಾಸ್ತವ: ಭಾರತದ ಆರ್ಥಿಕ ಸವಾಲುಗಳ ಕುರಿತು ರಘುರಾಮ್ ರಾಜನ್ ಒಳನೋಟ

ಒಟ್ಟಾರೆಯಾಗಿ ಡಾ. ಇಸಬೆಲ್ಲಾ ವೆಬರ್ ಅವರ ಪ್ರಕಾರ, ಅರ್ಥಶಾಸ್ತ್ರ ಎಂಬುದು ಕೇವಲ ಅಂಕಿ-ಅಂಶಗಳ ಆಟವಲ್ಲ; ಅದು ಪ್ರಜಾಪ್ರಭುತ್ವವನ್ನು ಉಳಿಸುವ ಸಾಧನ. ಸರ್ಕಾರವು ಜನರ ಪರವಾಗಿ ಕೆಲಸ ಮಾಡಬಲ್ಲದು ಎಂಬ ನಂಬಿಕೆಯನ್ನು ಮರಳಿ ಸ್ಥಾಪಿಸಿದಾಗ ಮಾತ್ರ, ದ್ವೇಷ ಮತ್ತು ವಿಭಜನೆಯ ರಾಜಕಾರಣ ಮಾಡುವ ಫ್ಯಾಸಿಸ್ಟ್ ಶಕ್ತಿಗಳನ್ನು ಸೋಲಿಸಲು ಸಾಧ್ಯ. ಮನುಷ್ಯನ ಘನತೆ ಮತ್ತು ಪ್ರಕೃತಿಯ ಉಳಿವಿಗೆ ಪೂರಕವಾದ ಆರ್ಥಿಕ ನೀತಿಗಳೇ ನಿಜವಾದ ‘ಫ್ಯಾಸಿಸ್ಟ್-ವಿರೋಧಿ ಅರ್ಥಶಾಸ್ತ್ರ’ದ ಜೀವಾಳವಾಗಿದೆ.

ಕನ್ನಡಕ್ಕೆ: ಟಿ.ಎಸ್. ವೇಣುಗೋಪಾಲ್

eedina
ಈ ದಿನ ಡೆಸ್ಕ್‌
Website | + posts

<p><iframe src="https://www.youtube.com/embed/8qwx4L0lKFQ?autoplay=1&mute=1&loop=1&playlist=8qwx4L0lKFQ&controls=0&modestbranding=1&showinfo=0" width="560" height="315" frameborder="0" allowfullscreen="allowfullscreen"></iframe></p>

ಪೋಸ್ಟ್ ಹಂಚಿಕೊಳ್ಳಿ:

ಪೋಸ್ಟ್ ಹಂಚಿಕೊಳ್ಳಿ:

ಈ ಹೊತ್ತಿನ ಪ್ರಮುಖ ಸುದ್ದಿ

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

HDK ‘ಡಿನೋಟಿಫಿಕೇಶನ್’ ಪ್ರಕರಣ: ವಿಶೇಷ ಕೋರ್ಟ್‌ನಲ್ಲಿ ವಿರುದ್ಧ ಸಾಕ್ಷ್ಯ ನುಡಿದ ನಿವೃತ್ತ IASಗಳು

ಸುಮಾರು ಎರಡು ದಶಕಗಳಷ್ಟು ಹಳೆಯದಾದ ಭೂ ಡಿನೋಟಿಫಿಕೇಶನ್ ಭ್ರಷ್ಟಾಚಾರ ಪ್ರಕರಣದಲ್ಲಿ ಮಹತ್ವದ...

ಚುನಾವಣಾ ಅಕ್ರಮಗಳ ವಿರುದ್ಧ ವ್ಯವಸ್ಥೆಯೊಳಗೇ ಇದ್ದು ಹೋರಾಟ: ಅಮೆರಿಕ ಸಂವಾದದಲ್ಲಿ ರಾಹುಲ್ ಗಾಂಧಿ ಹೇಳಿಕೆ

ಚುನಾವಣಾ ಅಕ್ರಮಗಳ ಆರೋಪಗಳ ನಡುವೆಯೂ ಕಾಂಗ್ರೆಸ್ ಪಕ್ಷವು ಚುನಾವಣೆಗಳನ್ನು ಬಹಿಷ್ಕರಿಸುವುದಿಲ್ಲ ಎಂದು...

ಕೊಲಂಬಿಯಾ ವಿಶ್ವವಿದ್ಯಾಲಯದಲ್ಲಿ ವಿದ್ಯಾರ್ಥಿಗಳೊಂದಿಗೆ ರಾಹುಲ್ ಗಾಂಧಿ ಅವರ ಶೈಕ್ಷಣಿಕ ಸಂವಾದ

ಭಾರತದ ಆರ್ಥಿಕ ಬಿಕ್ಕಟ್ಟು, ನಿರುದ್ಯೋಗ, ಶಿಕ್ಷಣ, ಯುವಜನರ ಚಳವಳಿಗಳು, ಪ್ರಜಾಪ್ರಭುತ್ವ ಮತ್ತು...

ಅಕ್ವಾನ್ ಚಂಡಮಾರುತ: ರಾಜ್ಯದ 11 ಜಿಲ್ಲೆಗಳಲ್ಲಿ ಮುಂದಿನ 6 ದಿನ ಭಾರೀ ಮಳೆ

ಬಂಗಾಳ ಕೊಲ್ಲಿಯಲ್ಲಿ ರೂಪುಗೊಂಡಿರುವ ‘ಅಕ್ವಾನ್’ ಚಂಡಮಾರುತದಿಂದಾಗಿ ರಾಜ್ಯದಲ್ಲಿ ಹಿಂಗಾರು ಮಳೆ ಮತ್ತೆ...