ಪಾಸ್‌ಪೋರ್ಟ್ ಪೌರತ್ವದ ಪುರಾವೆಯಲ್ಲ ಎಂದ ಕೇಂದ್ರಕ್ಕೆ ನೆಟ್ಟಿಗರಿಂದ ವಾಗ್ದಾಳಿ

Date:

ಪಾಸ್‌ಪೋರ್ಟ್ ಪ್ರಾಥಮಿಕವಾಗಿ ಕೇವಲ ಒಂದು ಪ್ರಯಾಣದ ದಾಖಲೆಯಾಗಿದ್ದು, ಅದನ್ನು ಭಾರತೀಯ ಪೌರತ್ವದ ಪುರಾವೆ ಎಂದು ಪರಿಗಣಿಸಬಾರದು ಎಂದು ವಿದೇಶಾಂಗ ವ್ಯವಹಾರಗಳ ಸಚಿವಾಲಯದ (MEA) ಹಿರಿಯ ಅಧಿಕಾರಿಯೊಬ್ಬರು ಸ್ಪಷ್ಟಪಡಿಸಿದ್ದಾರೆ. ದೇಶಾದ್ಯಂತ ಪಾಸ್‌ಪೋರ್ಟ್ ಸೇವೆಗಳ ವಿಸ್ತರಣೆಯನ್ನು ಬಿಂಬಿಸಲು ಆಯೋಜಿಸಲಾಗಿದ್ದ 14ನೇ ‘ಪಾಸ್‌ಪೋರ್ಟ್ ಸೇವಾ ದಿವಸ್’ ಕಾರ್ಯಕ್ರಮದಲ್ಲಿ ಬುಧವಾರ ಅವರು ಈ ಕುರಿತು ಮಾಹಿತಿ ನೀಡಿದರು.

- Advertisement -

ಭಾರತೀಯರು ವಿದೇಶದಲ್ಲಿರುವಾಗ ಪಾಸ್‌ಪೋರ್ಟ್ ಅವರ ರಾಷ್ಟ್ರೀಯತೆಯನ್ನು ದೃಢೀಕರಿಸುತ್ತದೆಯೇ ವಿನಃ, ಅದು ಪೌರತ್ವವನ್ನು ಸಾಬೀತುಪಡಿಸುವ ದಾಖಲೆಯಲ್ಲ ಎಂದು ಅಧಿಕಾರಿಗಳು ಪ್ರಶ್ನೆಯೊಂದಕ್ಕೆ ಉತ್ತರಿಸುವಾಗ ಸ್ಪಷ್ಟನೆ ನೀಡಿದ್ದಾರೆ. ಸಚಿವಾಲಯದ ಈ ಹೇಳಿಕೆಯು ‘ಎಕ್ಸ್’ (X) ಜಾಲತಾಣದಲ್ಲಿ ಭಾರೀ ಚರ್ಚೆಗೆ ಗ್ರಾಸವಾಗಿದೆ. ಪಾಸ್‌ಪೋರ್ಟ್, ಆಧಾರ್ ಕಾರ್ಡ್ ಹಾಗೂ ಮತದಾರರ ಗುರುತಿನ ಚೀಟಿಗಳೇ ಪೌರತ್ವದ ಸಾಕ್ಷ್ಯವಲ್ಲವೆಂದಾದರೆ, ಭಾರತದಲ್ಲಿ ಪೌರತ್ವವನ್ನು ದೃಢೀಕರಿಸುವ ನಿರ್ಣಾಯಕ ಹಾಗೂ ಅಧಿಕೃತ ದಾಖಲೆಗಳು ಯಾವುವು ಎಂದು ನೆಟ್ಟಿಗರು ಪ್ರಶ್ನಿಸುತ್ತಿದ್ದಾರೆ.

ಇನ್ನಷ್ಟು ವಿಶೇಷ ಲೇಖನಗಳಿಗಾಗಿ, ಇಲ್ಲಿ ಕ್ಲಿಕ್ ಮಾಡಿ →

ಪಾತಾಳ ಸೀಳಿ ಪೈರಾಗಿ ಎದ್ದವನು: ಕನ್ನಡ ಮನಸ್ಸಿನಲ್ಲಿ ಬಲೀಂದ್ರನ...

ಸತ್ಯನಿಷ್ಠೆ, ಮಹೋದಾರತೆ ಮತ್ತು ಶ್ರಮಸಂಸ್ಕೃತಿಯ ಫಲವಂತಿಕೆಯಾಗಿ ಸಾವನ್ನು ಗೆದ್ದು ಜನಮಾನಸದಲ್ಲಿ ನೆಲೆಗೊಂಡಿರುವ ಬಲಿ ಕೇವಲ ಸೋಲಿನ ಸಂಕೇತವಲ್ಲ; ಆತ ಚಾರಿತ್ರಿಕವಾಗಿ ಪ್ರಭುತ್ವದ ವಂಚನೆಯನ್ನು ಬಯಲು ಮಾಡುವ ಜೀವಂತ ಪ್ರತಿರೋಧ. ಊರಿಗೆಲ್ಲ ದೀಪಾವಳಿಯು ಬೆಳಕಿನ ಸಂಭ್ರಮವಾದರೆ,...

ಗದಗ | ಬದುಕ ಬೆಳಗಿತು ಹಣತೆ: ಕುಂಬಾರಿಕೆಗೆ ಮರು...

ಆಧುನಿಕತೆಯ ಭರಾಟೆಯಲ್ಲಿ ಸಾಂಪ್ರದಾಯಿಕ ಕುಂಬಾರಿಕೆ ವೃತ್ತಿ ನಿಧಾನವಾಗಿ ಮರೆಯಾಗುತ್ತಿರುವ ಈ ಸಂದರ್ಭದಲ್ಲಿ, ರೋಣ ತಾಲೂಕಿನ ಕುರಹಟ್ಟಿ ಗ್ರಾಮದ ಮಹಿಳೆಯೊಬ್ಬರು ತಮ್ಮ ಕುಟುಂಬದ ಕುಲಕಸುಬನ್ನೇ ಆದಾಯದ ಪ್ರಮುಖ ಮೂಲವನ್ನಾಗಿಸಿಕೊಂಡು ಸ್ವಾವಲಂಬಿ ಬದುಕಿನತ್ತ ಹೆಜ್ಜೆಯಿಟ್ಟಿದ್ದಾರೆ. ಸಂಜೀವಿನಿ...

ಬೆಳಕಿನ ಹಬ್ಬಕ್ಕೆ ಮಾಲಿನ್ಯದ ಕತ್ತಲು; ದೆಹಲಿ ಜನ ಪಾಠ...

ವರ್ಷಕ್ಕೊಮ್ಮೆ ಬರುವ ದೀಪಾವಳಿ ಹಬ್ಬವನ್ನು ಕೇವಲ ದೀಪಗಳ ಹಬ್ಬವೆಂದು ನೋಡದೆ, ಬೆಳಕಿನ ಸಂಭ್ರಮದ ಪ್ರತೀಕವಾಗಿಯೂ ಪರಿಗಣಿಸಲಾಗಿದೆ. ಆದರೆ ರಾಷ್ಟ್ರ ರಾಜಧಾನಿ ದೆಹಲಿಯಲ್ಲಿ ಈ ಹಬ್ಬ ಪ್ರತಿವರ್ಷವೂ 'ಉಸಿರುಗಟ್ಟಿಸುವ ನರಕಯಾತನೆ'ಯಾಗಿ ಬದಲಾಗುತ್ತಿರುವುದು ಕಟು ಸತ್ಯ....

ನ್ಯಾಯಾಲಯದ ಹಿಂದಿನ ತೀರ್ಪುಗಳಲ್ಲಿ ಉಲ್ಲೇಖಿಸಲಾದ ಕಾನೂನು ನಿಲುವನ್ನೇ ವಿದೇಶಾಂಗ ವ್ಯವಹಾರಗಳ ಸಚಿವಾಲಯವು ಇದೀಗ ಪುನರುಚ್ಚರಿಸಿದೆ. ಚುನಾವಣಾ ಆಯೋಗವು ಕೈಗೊಂಡಿರುವ ಮತದಾರರ ಪಟ್ಟಿಯ ವಿಶೇಷ ಪರಿಷ್ಕರಣೆ (ಎಸ್‌ಐಆರ್ – SIR) ಸಂದರ್ಭದಲ್ಲಿ ನಡೆಯುತ್ತಿರುವ ಪೌರತ್ವದ ಚರ್ಚೆಗಳ ಹಿನ್ನೆಲೆಯಲ್ಲಿ ಈ ಸ್ಪಷ್ಟನೆ ಹೆಚ್ಚಿನ ಮಹತ್ವ ಪಡೆದುಕೊಂಡಿದೆ. ಆಗಸ್ಟ್ 12, 2025ರಂದು ಬಿಹಾರದ ಎಸ್‌ಐಆರ್ ಪ್ರಕರಣದ ವಿಚಾರಣೆ ನಡೆಸಿದ್ದ ನ್ಯಾಯಮೂರ್ತಿ ಸೂರ್ಯಕಾಂತ್ ಮತ್ತು ನ್ಯಾಯಮೂರ್ತಿ ಜಾಯ್‌ಮಾಲ್ಯ ಬಗ್ಚಿ ಅವರನ್ನೊಳಗೊಂಡ ಸುಪ್ರೀಂ ಕೋರ್ಟ್ ಪೀಠವು, “ಹಕ್ಕುಗಳು ಮತ್ತು ಆಕ್ಷೇಪಣೆಗಳನ್ನು ಸಲ್ಲಿಸುವಾಗ ಆಧಾರ್ ಬಳಕೆಯನ್ನು ಕೇವಲ ಗುರುತಿನ ಪುರಾವೆಯಾಗಿ ಪರಿಗಣಿಸಬೇಕೇ ಹೊರತು, ಭಾರತೀಯ ಪೌರತ್ವದ ಸಾಕ್ಷ್ಯವಾಗಿ ಅಲ್ಲ” ಎಂದು ಸ್ಪಷ್ಟವಾಗಿ ತಿಳಿಸಿತ್ತು.

ಈ ಹೇಳಿಕೆಯ ಬಳಿಕ ಸಾರ್ವಜನಿಕರಲ್ಲಿ ಗೊಂದಲ ಏರ್ಪಟ್ಟಿದ್ದು, ಸಚಿವಾಲಯದ ಹೇಳಿಕೆಗೆ ತೀಕ್ಷ್ಣ ಪ್ರತಿಕ್ರಿಯೆಗಳು ವ್ಯಕ್ತವಾಗುತ್ತಿವೆ. ಪಾಸ್‌ಪೋರ್ಟ್‌ನಲ್ಲಿ ‘ಭಾರತೀಯ’ ಎಂದು ರಾಷ್ಟ್ರೀಯತೆಯನ್ನು ನಮೂದಿಸಿರುವ ಚಿತ್ರವನ್ನು ಹಂಚಿಕೊಂಡಿರುವ ಬಳಕೆದಾರರೊಬ್ಬರು, “ಹಾಗಾದರೆ ಇದೇನು?” ಎಂದು ಅಸಮಾಧಾನ ವ್ಯಕ್ತಪಡಿಸಿದ್ದಾರೆ. “ಪಾಸ್‌ಪೋರ್ಟ್, ಆಧಾರ್ ಕಾರ್ಡ್ ಹಾಗೂ ವೋಟರ್ ಐಡಿ ಪೌರತ್ವದ ದಾಖಲೆಗಳಲ್ಲ ಅಂದರೆ, ಬೇರೆ ಮತ್ಯಾವುದು ಪೌರತ್ವದ ದಾಖಲೆ?” ಎಂದು ಮತ್ತೊಬ್ಬರು ಪ್ರಶ್ನಿಸಿದ್ದಾರೆ. ವಿದೇಶದಲ್ಲಿ ಭಾರತೀಯರು ಎಂದು ಸಾಬೀತುಪಡಿಸಲು ಪಾಸ್‌ಪೋರ್ಟ್ ನೀಡುವ ಸಚಿವಾಲಯವೇ ಈಗ ಅದು ಪೌರತ್ವದ ಪುರಾವೆಯಲ್ಲ ಎನ್ನುತ್ತಿರುವುದು ವಿಚಿತ್ರವಾಗಿದೆ. ನಮ್ಮದೇ ದೇಶದಲ್ಲಿ ನಮ್ಮ ಪಾಸ್‌ಪೋರ್ಟ್‌ಗೆ ಯಾವುದೇ ಬೆಲೆ ಇಲ್ಲವೇ? ಎಂದು ಹಲವರು ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಪೌರತ್ವವನ್ನು ದೃಢೀಕರಿಸಲು ಕಾನೂನುಬದ್ಧವಾಗಿ ಮಾನ್ಯವಾಗಿರುವ ದಾಖಲೆಗಳು ಯಾವುವು ಎಂಬ ಬಗ್ಗೆ ಇನ್ನೂ ಸ್ಪಷ್ಟತೆಯ ಕೊರತೆ ಎದ್ದು ಕಾಣುತ್ತಿದೆ. ಈ ಹಿಂದೆ, ರಾಷ್ಟ್ರೀಯ ಪೌರತ್ವ ನೋಂದಣಿಗೆ (NRC) ಸಂಬಂಧಿಸಿದ ಪ್ರಶ್ನೋತ್ತರದಲ್ಲಿ ಸರ್ಕಾರದ ‘ಪ್ರೆಸ್ ಇನ್ಫರ್ಮೇಷನ್ ಬ್ಯೂರೋ’ (PIB), ಡಿಸೆಂಬರ್ 20, 2019 ರಂದು ಒಂದು ಪ್ರಕಟಣೆ ನೀಡಿತ್ತು. ಅದರಲ್ಲಿ, “ಹುಟ್ಟಿದ ದಿನಾಂಕ ಮತ್ತು ಹುಟ್ಟಿದ ಸ್ಥಳಕ್ಕೆ ಸಂಬಂಧಿಸಿದ ಯಾವುದೇ ದಾಖಲೆಗಳನ್ನು ಸಲ್ಲಿಸುವ ಮೂಲಕ ಪೌರತ್ವವನ್ನು ಸಾಬೀತುಪಡಿಸಬಹುದು. ಆದರೆ, ಅಂಗೀಕಾರಾರ್ಹವಾದ ಅಂತಹ ದಾಖಲೆಗಳ ಬಗ್ಗೆ ಇನ್ನೂ ಅಂತಿಮ ನಿರ್ಧಾರ ಕೈಗೊಳ್ಳಲಾಗಿಲ್ಲ” ಎಂದು ತಿಳಿಸಿತ್ತು.

eedina
ಈ ದಿನ ಡೆಸ್ಕ್‌
Website | + posts

<p><iframe src="https://www.youtube.com/embed/8qwx4L0lKFQ?autoplay=1&mute=1&loop=1&playlist=8qwx4L0lKFQ&controls=0&modestbranding=1&showinfo=0" width="560" height="315" frameborder="0" allowfullscreen="allowfullscreen"></iframe></p>

ಪೋಸ್ಟ್ ಹಂಚಿಕೊಳ್ಳಿ:

ಪೋಸ್ಟ್ ಹಂಚಿಕೊಳ್ಳಿ:

ಈ ಹೊತ್ತಿನ ಪ್ರಮುಖ ಸುದ್ದಿ

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ಪಾತಾಳ ಸೀಳಿ ಪೈರಾಗಿ ಎದ್ದವನು: ಕನ್ನಡ ಮನಸ್ಸಿನಲ್ಲಿ ಬಲೀಂದ್ರನ ಬಹುರೂಪ

ಸತ್ಯನಿಷ್ಠೆ, ಮಹೋದಾರತೆ ಮತ್ತು ಶ್ರಮಸಂಸ್ಕೃತಿಯ ಫಲವಂತಿಕೆಯಾಗಿ ಸಾವನ್ನು ಗೆದ್ದು ಜನಮಾನಸದಲ್ಲಿ ನೆಲೆಗೊಂಡಿರುವ...

ಮೋದಿ, ಶಾ ಮಾನಸಿಕ ಸಮತೋಲನ ಕಳೆದುಕೊಂಡಿದ್ದಾರೆ: ಪ್ರಧಾನಿಯ ‘ವೈಚಾರಿಕ ನಕ್ಸಲರು’ ಹೇಳಿಕೆಗೆ ಬಘೇಲ್ ತಿರುಗೇಟು

ಪ್ರಧಾನಮಂತ್ರಿ ನರೇಂದ್ರ ಮೋದಿ ಅವರು ಇತ್ತೀಚೆಗೆ ಕಾಂಗ್ರೆಸ್ ಮತ್ತು ಪ್ರತಿಪಕ್ಷಗಳ ವಿರುದ್ಧ...

ಸಿದ್ದರಾಮಯ್ಯ ಮತ್ತು ನನ್ನ ನಡುವೆ ಯಾವುದೇ ಮುನಿಸಿಲ್ಲ: ಸಿಎಂ ಡಿ ಕೆ ಶಿವಕುಮಾರ್

ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಮತ್ತು ನನ್ನ ನಡುವೆ ದೊಡ್ಡ ಮುನಿಸೂ ಇಲ್ಲ,...