ಅಸ್ಸಾಂ ಸಿಎಂ ಹಿಮಂತ ಶರ್ಮಾ ಪತ್ನಿ ಮೂರು ಪಾಸ್‌ಪೋರ್ಟ್‌ಗಳನ್ನು ಹೊಂದಿದ್ದಾರೆ: ಪವನ್ ಖೇರಾ ಆರೋಪ

Date:

ಅಸ್ಸಾಂ ಮುಖ್ಯಮಂತ್ರಿ ಹಿಮಂತ ಬಿಸ್ವಾ ಶರ್ಮಾ ಅವರ ಪತ್ನಿ ರಿನಿಕಿ ಶರ್ಮಾ ಅವರು ಮೂರು ದೇಶಗಳ ಪಾಸ್‌ಪೋರ್ಟ್‌ಗಳನ್ನು ಹೊಂದಿದ್ದಾರೆ. ವಿದೇಶಗಳಲ್ಲಿ ಗಮನಾರ್ಹ ಆಸ್ತಿಯನ್ನು ಹೊಂದಿದ್ದಾರೆ ಎಂದು ಕಾಂಗ್ರೆಸ್ ನಾಯಕ ಪವನ್ ಖೇರಾ ಆರೋಪಿಸಿದ್ದು ಅಸ್ಸಾಂನಲ್ಲಿ ರಾಜಕೀಯ ವಿವಾದ ಸೃಷ್ಟಿಯಾಗಿದೆ. ಕಾಂಗ್ರೆಸ್ ಆರೋಪದ ಬಳಿಕ ಅಸ್ಸಾಂ ಮುಖ್ಯಮಂತ್ರಿ ಪ್ರತಿಕ್ರಿಯಿಸಿದ್ದು, ಈ ಆರೋಪಗಳನ್ನು ಆಧಾರರಹಿತ ಮತ್ತು ರಾಜಕೀಯ ಪ್ರೇರಿತ ಎಂದು ಹೇಳಿಕೊಂಡಿದ್ದಾರೆ.

- Advertisement -

ಈ ಬಗ್ಗೆ ಇಂದು ಪತ್ರಿಕಾಗೋಷ್ಠಿ ನಡೆಸಿದ ಖೇರಾ, “ರಿಂಕಿ ಭುಯಾನ್ ಶರ್ಮಾ ಅವರು ಸಂಯುಕ್ತ ಅರಬ್ ಎಮಿರೇಟ್ಸ್ (UAE), ಈಜಿಪ್ಟ್, ಆಂಟಿಗುವಾ, ಬಾರ್ಬುಡಾ ದೇಶಗಳ ಮೂರು ಸಕ್ರಿಯ ಗೋಲ್ಡನ್ ಪಾಸ್‌ಪೋರ್ಟ್‌ಗಳನ್ನು ಹೊಂದಿದ್ದಾರೆ. ಭಾರತವು ದ್ವಿಪೌರತ್ವಕ್ಕೆ ಅವಕಾಶ ನೀಡುವುದಿಲ್ಲ. ಹೀಗಿದ್ದರೂ ಅವರು ವಿದೇಶಿ ಪಾಸ್‌ಪೋರ್ಟ್‌ಗಳನ್ನು ಹೊಂದಿರುವುದು ಕಾನೂನುಬಾಹಿರವಲ್ಲವೇ” ಎಂದು ಪ್ರಶ್ನಿಸಿದ್ದಾರೆ.

ಇನ್ನಷ್ಟು ವಿಶೇಷ ಲೇಖನಗಳಿಗಾಗಿ, ಇಲ್ಲಿ ಕ್ಲಿಕ್ ಮಾಡಿ →

ಬರಗಾಲ | ಕಾಡಿನ ಮೌನದ ಹಿಂದೆ ಅಡಗಿದೆ ಜೀವಸಂಕುಲದ...

ಒಂದು ಆನೆಗೆ ದಿನಕ್ಕೆ ನೂರಾರು ಲೀಟರ್ ನೀರು ಮತ್ತು ನೂರಾರು ಕೆ.ಜಿ. ಆಹಾರ ಬೇಕಾಗುತ್ತದೆ. ಇನ್ನು ಕಾಡಿನಲ್ಲಿರುವ ಸಾವಿರಾರು ಆನೆಗಳು, ಹುಲಿಗಳು, ಚಿರತೆಗಳು, ಜಿಂಕೆಗಳು, ಕಾಡೆಮ್ಮೆಗಳು ಸೇರಿದಂತೆ ವಿವಿಧ ವನ್ಯಜೀವಿಗಳ ಅಗತ್ಯವನ್ನು ಲೆಕ್ಕಹಾಕಿದರೆ...

ಬಾಗಲಕೋಟೆ | ಸರ್ಕಾರಿ ಮೆಡಿಕಲ್ ಕಾಲೇಜಿನಲ್ಲಿ ತರಗತಿ ಆರಂಭ;...

ಬಾಗಲಕೋಟೆ ಜಿಲ್ಲೆಯ ಜನರ ಬಹುದಿನಗಳ ನಿರೀಕ್ಷೆಗೆ ಕೊನೆಗೂ ಕಾಲ ಕೂಡಿಬಂದಿದೆ. ಬಾಗಲಕೋಟೆಯಲ್ಲಿ ಸರ್ಕಾರಿ ವೈದ್ಯಕೀಯ ಕಾಲೇಜು ಸ್ಥಾಪನೆಯಾಗಬೇಕು ಎಂಬ ದಶಕಗಳ ಬೇಡಿಕೆಗೆ ಸಾಕಾರ ರೂಪ ಸಿಕ್ಕಿದ್ದು, ಪ್ರಸಕ್ತ ಶೈಕ್ಷಣಿಕ ವರ್ಷದಿಂದಲೇ ನಗರದ ಬಹುನಿರೀಕ್ಷಿತ...

18 ವರ್ಷಗಳಲ್ಲೇ ಗರಿಷ್ಠ ಏರಿಕೆ ಕಂಡ ಸಾಂಬಾರ್ ಈರುಳ್ಳಿ;‌...

ಕರ್ನಾಟಕದ ಮಾರುಕಟ್ಟೆಗಳಲ್ಲಿ ದಿನದಿಂದ ದಿನಕ್ಕೆ ಅಗತ್ಯ ವಸ್ತುಗಳ ಬೆಲೆ ಏರಿಕೆಯಾಗುತ್ತಿರುವ ಬೆನ್ನಲ್ಲೇ ಇದೀಗ ಅಡುಗೆ ಮನೆಯ ಪ್ರಮುಖ ಪದಾರ್ಥವಾದ ಸಾಂಬಾರ್ ಈರುಳ್ಳಿ (ಸಣ್ಣ ಈರುಳ್ಳಿ) ಬೆಲೆ ಗ್ರಾಹಕರಿಗೆ ದೊಡ್ಡ ಆಘಾತ ನೀಡಿದೆ. ಚಿಲ್ಲರೆ...

ಇದನ್ನು ಓದಿದ್ದೀರಾ? ಸಂವಿಧಾನದಲ್ಲಿ ‘ಜಾತ್ಯತೀತ ಮತ್ತು ಸಮಾಜವಾದ’ ಪದಗಳು ತೆಗೆಯಬೇಕು: ಅಸ್ಸಾಂ ಸಿಎಂ ಹಿಮಂತ ಬಿಸ್ವಾ ಶರ್ಮಾ

“ಶರ್ಮಾ ಪತ್ನಿ ಅಮೆರಿಕದ ವ್ಯೋಮಿಂಗ್‌ನಲ್ಲಿ ಸುಮಾರು ₹52,000 ಕೋಟಿ ಮೌಲ್ಯದ ಕಂಪನಿಯನ್ನು ಹೊಂದಿದ್ದಾರೆ. ದುಬೈನಲ್ಲಿ ಆಸ್ತಿಗಳನ್ನು ಹೊಂದಿದ್ದಾರೆ. ಈ ಅಂತಾರಾಷ್ಟ್ರೀಯ ಆಸ್ತಿಗಳ ವಿವರಗಳನ್ನು ಮುಖ್ಯಮಂತ್ರಿಗಳು ತಮ್ಮ ಚುನಾವಣಾ ಅಫಿಡವಿಟ್‌ನಲ್ಲಿ ಬಹಿರಂಗಪಡಿಸಿಲ್ಲ” ಎಂದು ದೂರಿದ್ದಾರೆ.

ಹಾಗೆಯೇ, “ಈ ವಿಷಯದ ಬಗ್ಗೆ ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರು ವಿಶೇಷ ತನಿಖಾ ದಳ (ಎಸ್‌ಐಟಿ) ರಚಿಸಿ ತನಿಖೆ ನಡೆಸಬೇಕು. ಮುಖ್ಯಮಂತ್ರಿಗಳನ್ನು ಚುನಾವಣೆಯಿಂದ ಅನರ್ಹಗೊಳಿಸಬೇಕು” ಎಂದು ಒತ್ತಾಯಿಸಿದ್ದಾರೆ.

ಆದರೆ ಈ ಆರೋಪಗಳನ್ನು ಹಿಮಂತ ಬಿಸ್ವ ಶರ್ಮಾ ತಳ್ಳಿಹಾಕಿದ್ದು, ಪವನ್ ಖೇರಾ ಪ್ರಸ್ತುತಪಡಿಸಿದ ದಾಖಲೆಗಳು ನಕಲಿ ಎಂದು ಹೇಳಿದ್ದಾರೆ. ಈ ಬಗ್ಗೆ ಎಕ್ಸ್‌ನಲ್ಲಿ ಪೋಸ್ಟ್ ಮಾಡಿದ್ದು, “ಪವನ್ ಖೇರಾ ಅವರ ಇಂದಿನ ಪತ್ರಿಕಾಗೋಷ್ಠಿಯು ಕಾಂಗ್ರೆಸ್ ಪಕ್ಷದೊಳಗಿನ ಆಳವಾದ ಹತಾಶೆ ಮತ್ತು ಭೀತಿಯನ್ನು ಪ್ರತಿಬಿಂಬಿಸುತ್ತದೆ. ಅಸ್ಸಾಂ ಐತಿಹಾಸಿಕ ಜನಾದೇಶದತ್ತ ನಿರ್ಣಾಯಕವಾಗಿ ಸಾಗುತ್ತಿರುವಾಗ, ಇಂತಹ ಹತಾಶ ಮತ್ತು ಆಧಾರರಹಿತ ದಾಳಿಗಳು ಅವರು ಕುಸಿಯುತ್ತಿದ್ದಾರೆ ಎಂಬುದನ್ನು ಬಹಿರಂಗಪಡಿಸುತ್ತವೆ” ಎಂದು ಪೋಸ್ಟ್ ಮಾಡಿದ್ದಾರೆ.

ಮಾನನಷ್ಟ ಮೊಕದ್ದಮೆ ಹೂಡುವುದಾಗಿ ಹೇಳಿದ ಶರ್ಮಾ

48 ಗಂಟೆಗಳ ಒಳಗೆ ಪವನ್ ಖೇರಾ ವಿರುದ್ಧ ಕ್ರಿಮಿನಲ್ ಮತ್ತು ಮಾನನಷ್ಟ ಮೊಕದ್ದಮೆ ಹೂಡುವುದಾಗಿ ಅಸ್ಸಾಂ ಸಿಎಂ ಹಿಮಂತ ಬಿಸ್ವಾ ಶರ್ಮಾ ಹೇಳಿದರು. “ಖೇರಾ ತೋರಿಸಿದ ದಾಖಲೆಗಳು ನಕಲಿ. ಪಾಸ್‌ಪೋರ್ಟ್‌ಗಳು ಮತ್ತು ಸಂಬಂಧಿತ ಗುರುತಿನ ದಾಖಲೆಗಳಲ್ಲಿ ಸ್ಪಷ್ಟ ದೋಷಗಳಿವೆ” ಎಂದು ಹೇಳಿದರು.

“ಶರ್ಮಾ ಉಪಮಾನ ಹೊಂದಾಣಿಕೆಯಾಗುತ್ತಿಲ್ಲ. ಬಯೋಮೆಟ್ರಿಕ್ ಛಾಯಾಚಿತ್ರಗಳಾಗಿ ಪ್ರಸ್ತುತಪಡಿಸಲಾದ ಚಿತ್ರಗಳು ಮತ್ತು ಯುಎಇ, ಈಜಿಪ್ಟ್ ಮತ್ತು ಆಂಟಿಗುವಾ ಮತ್ತು ಬಾರ್ಬುಡಾ ಪಾಸ್‌ಪೋರ್ಟ್‌ಗಳಲ್ಲಿನ ಚಿತ್ರಗಳಲ್ಲಿ ವ್ಯತ್ಯಾಸವಿದೆ” ಎಂದು ದೂರಿದರು.

“ಸತ್ಯವು ಮೇಲುಗೈ ಸಾಧಿಸುತ್ತದೆ. ತಪ್ಪು ಮಾಹಿತಿಯನ್ನು ಹರಡುವವರನ್ನು ಹೊಣೆಗಾರರನ್ನಾಗಿ ಮಾಡಲಾಗುತ್ತದೆ. ಪವನ್ ಖೇರಾ ಅವರ ಸುಳ್ಳು ಪ್ರಚಾರವು ಅಂತ್ಯಗೊಳ್ಳುವ ಹಂತದಲ್ಲಿದೆ ಎಂದು ನನಗೆ ವಿಶ್ವಾಸವಿದೆ. ಅಂತಿಮವಾಗಿ, ಖೇರಾ ಜೈಲಿಗೆ ಹೋಗುತ್ತಾರೆ” ಎಂದೂ ಹೇಳಿದರು.

WhatsApp Image 2025 11 17 at 3.21.17 PM
ಈ ದಿನ ಡೆಸ್ಕ್
+ posts

<p><iframe src="https://www.youtube.com/embed/8qwx4L0lKFQ?autoplay=1&mute=1&loop=1&playlist=8qwx4L0lKFQ&controls=0&modestbranding=1&showinfo=0" width="560" height="315" frameborder="0" allowfullscreen="allowfullscreen"></iframe></p>

ಪೋಸ್ಟ್ ಹಂಚಿಕೊಳ್ಳಿ:

ಪೋಸ್ಟ್ ಹಂಚಿಕೊಳ್ಳಿ:

ಈ ಹೊತ್ತಿನ ಪ್ರಮುಖ ಸುದ್ದಿ

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ತೀವ್ರ ಹೃದಯಾಘಾತ; ಬಿಜೆಪಿ ರಾಜ್ಯಸಭಾ ಸಂಸದ ರಾಮರಾವ್ ವಡ್ಕುಟೆ ನಿಧನ

ಬಿಜೆಪಿಯ ಹಿರಿಯ ನಾಯಕ ಮತ್ತು ಮಹಾರಾಷ್ಟ್ರದ ರಾಜ್ಯಸಭಾ ಸಂಸದ ರಾಮರಾವ್ ಸಖಾರಾಮ್...

ಮಧ್ಯಪ್ರಾಚ್ಯ ಸಂಘರ್ಷ: ಅಕ್ಟೋಬರ್‌ನಲ್ಲಿ ಭಾರತದ ತೈಲ, ಅನಿಲ ಆಮದು ವೆಚ್ಚ 60% ಹೆಚ್ಚಳ; LPG ಬಳಕೆಯಲ್ಲಿ ಭಾರೀ ಇಳಿಕೆ

ಮಧ್ಯಪ್ರಾಚ್ಯದಲ್ಲಿನ ಸಂಘರ್ಷ ಮತ್ತು ಹಾರ್ಮುಜ್ ಜಲಸಂಧಿಯ ಮೂಲಕ ಸಾಗುವ ಇಂಧನ ಪೂರೈಕೆಯಲ್ಲಿ...

ಯಲ್ಲಾಪುರ | ಪ್ರಜಾಸೇವಾ ಆಂದೋಲನಕ್ಕೆ ಜನರಿಂದ ಉತ್ತಮ ಸ್ಪಂದನೆ: ಲಕ್ಷ್ಮಣ ಸವದಿ

ಪ್ರಜಾಸೇವಾ ಆಂದೋಲನ ಸಭೆಗಳ ಮೂಲಕ ಸಾರ್ವಜನಿಕರ ಸಮಸ್ಯೆಗಳಿಗೆ ತ್ವರಿತವಾಗಿ ಪರಿಹಾರ ದೊರೆಯುತ್ತಿದ್ದು,...

ಲಡಾಖ್ ಚುನಾವಣೆ: ಗ್ರಾಮೀಣ ಭಾಗದಲ್ಲಿ ಶೇ. 70ರಷ್ಟು, ಪಟ್ಟಣಗಳಲ್ಲಿ ಬರೀ ಶೇ.52.4 ಮತದಾನ; ಯಾಕಿಷ್ಟು ಕುಸಿತ?

2019ರಲ್ಲಿ ಜಮ್ಮು ಮತ್ತು ಕಾಶ್ಮೀರದಿಂದ ಬೇರ್ಪಟ್ಟು ಪ್ರತ್ಯೇಕ ಕೇಂದ್ರಾಡಳಿತ ಪ್ರದೇಶವಾಗಿ (UT)...