ಧಾರವಾಡ ತಾಲೂಕಿನ ನರೇಂದ್ರ ಗ್ರಾಮದಲ್ಲಿ ಮಹಾಂತ ಶಿವಯೋಗಿಗಳ ಜಾತ್ರೆಯಲ್ಲಿ ಯುವಕನೊಬ್ಬ ದೇವರಿಗೆ ವಿಶಿಷ್ಟ ಮೊರೆ ಇಟ್ಟಿದ್ದು, ‘ಯುದ್ಧ ನಿಲ್ಲಲಿ… ಶಾಂತಿ ನೆಲೆಸಲಿ’ ಎಂದು ಬಾಳೆಹಣ್ಣಿನ ಮೇಲೆ ಬರೆದು ಅದನ್ನು ತೇರಿಗೆ ಎಸೆದು ಸಹೃದಯತೆ ಮೆರೆದಿದ್ದಾನೆ.
ಈ ಮೂಲಕ, ʼಯುದ್ಧ ಶಾಶ್ವತವಾಗಿ ನಿಂತು ಜಗತ್ತಿನ ಎಲ್ಲ ದೇಶಗಳ ಜನತೆ ನೆಮ್ಮದಿಯಿಂದ ಜೀವನ ನಡೆಸುವಂತಾಗಲಿʼ ಎಂದು ತಮ್ಮ ಊರಿನ ದೇವರಿಗೆ ಬೇಡಿಕೊಂಡಿದ್ದಾನೆ. ಆತ ಈ ರೀತಿ ದೇವರಿಗೆ ಬೇಡಿಕೆ ಇಟ್ಟಿರುವ ಫೋಟೊ ಈಗ ವೈರಲ್ ಆಗುತ್ತಿದೆ.
ಈ ಸುದ್ದಿ ಓದಿದ್ದೀರಾ? ಕಲಬುರಗಿ | ಕುಡಿಯುವ ನೀರಿಗೆ ಹಾಹಾಕಾರ: ಮೋಟಾರ್ ದುರಸ್ತಿಗೆ ಶರಣಬಸಪ್ಪ ಮಮಶೆಟ್ಟಿ ಆಗ್ರಹ
ಮಧ್ಯಪ್ರಾಚ್ಯ ಯುದ್ಧ ಸಂಘರ್ಷದಿಂದ ಜಗತ್ತಿನ ಬಹುತೇಕ ದೇಶಗಳು ನಲುಗಿ ಹೋಗಿದ್ದು, ಎಲ್ಲ ದೇಶಗಳ ಮೇಲೂ ಯುದ್ಧದ ವ್ಯತಿರಿಕ್ತ ಪರಿಣಾಮ ಬೀರುತ್ತಿದೆ. ಹೀಗಾಗಿ ಜಗತ್ತಿನಲ್ಲಿ ಶಾಂತಿ ನೆಲೆಸಲು ಬಹುತೇಕ ಸಹೃದಯಿ ಜನತೆ ದೇವರ ಮೊರೆ ಹೋಗುತ್ತಿದ್ದಾರೆ.




