ರಾಮಮಂದಿರ ದೇಣಿಗೆ ಕನ್ನ: ಹಣ ಎಣಿಸುವಾಗ ನಡೆದಿದ್ದೇನು? ಗಾಬರಿಗೊಳಿಸುತ್ತೆ SIT ವರದಿ!

Date:

ಅಯೋಧ್ಯೆಯ ರಾಮಮಂದಿರ ದೇಣಿಗೆ ಅವ್ಯವಹಾರದ ಹಿನ್ನೆಲೆ SIT ನಡೆಸಿದ ತನಿಖಾ ವರದಿ ಬಿಡುಗಡೆಯಾಗಿದೆ. ಭದ್ರತಾ ಲೋಪಗಳು, ಸಿಸಿಟಿವಿ ನಿಗಾ ಮತ್ತು ನಗದು ಎಣಿಕೆ ಸೇರಿದಂತೆ ವರದಿಯ ಅಂಶಗಳು ದಂಗುಬಡಿಸುತ್ತವೆ. ಕೇವಲ 45 ದಿನಗಳಲ್ಲಿ 70 ಬಾರಿ ಹಣ ಕಳುವಾಗಿರುವುದು SITಯ 9 ಪುಟಗಳ ಪ್ರಾಥಮಿಕ ವರದಿಯಲ್ಲಿ ಬೆಳಕಿಗೆ ಬಂದಿರುವುದನ್ನು ʼದ ಇಂಡಿಯನ್‌ ಎಕ್ಸ್‌ಪ್ರೆಸ್‌ʼ ವರದಿ ಮಾಡಿದೆ.  

- Advertisement -

ಏಪ್ರಿಲ್ 27 ರಿಂದ ಜೂನ್ 6 ರವರೆಗಿನ 45 ದಿನಗಳ ಸಿಸಿಟಿವಿ ದೃಶ್ಯಾವಳಿಗಳನ್ನು ಪರಿಶೀಲಿಸಿದಾಗ, ಸಿಬ್ಬಂದಿಗಳು ಹಣದ ಕಂತೆಗಳನ್ನು ತಮ್ಮ ಬಟ್ಟೆ, ಒಳಉಡುಪು, ಬೂಟುಗಳು ಮತ್ತು ಇತರೆ ಗುಪ್ತ ಸ್ಥಳಗಳಲ್ಲಿ ಬಚ್ಚಿಟ್ಟುಕೊಂಡು ಕಳವು ಮಾಡುತ್ತಿರುವುದು ಕಂಡುಬಂದಿದೆ. ಕೆಲವು ಸಂದರ್ಭಗಳಲ್ಲಿ ಇತರ ಸಿಬ್ಬಂದಿಗಳು ಅವರಿಗೆ ಸಹಾಯ ಮಾಡುತ್ತಿರುವುದು ವಿಡಿಯೋದಲ್ಲಿ ಸೆರೆಯಾಗಿದೆ. ಆದರೆ, ಸಿಸಿಟಿವಿ ದೃಶ್ಯಗಳನ್ನು ಕೇವಲ 45 ದಿನಗಳಿಗೆ ಮಾತ್ರ ಸೀಮಿತಗೊಳಿಸಿರುವುದರಿಂದ, ಅದಕ್ಕೂ ಮುನ್ನ ನಡೆದಿರುವ ಕಳವು ಪ್ರಕರಣಗಳನ್ನು ಪತ್ತೆ ಹಚ್ಚಲು ಸಾಧ್ಯವಾಗುತ್ತಿಲ್ಲ ಎಂದು ವರದಿ ಹೇಳಿದೆ.

ಇನ್ನಷ್ಟು ವಿಶೇಷ ಲೇಖನಗಳಿಗಾಗಿ, ಇಲ್ಲಿ ಕ್ಲಿಕ್ ಮಾಡಿ →

ಭಾರತಕ್ಕೆ ಬರದ ಬುಲೆಟ್ ಟ್ರೈನ್: ತಡವಾಗುತ್ತಿರುವುದು ಮೋದಿಯಿಂದಲೋ, ಜಪಾನ್‌ನವರಿಂದಲೋ?

ಮುಂಬೈ ಮತ್ತು ಅಹಮದಾಬಾದ್ ನಡುವಿನ 508 ಕಿ.ಮೀ ಉದ್ದದ ಈ ಮಾರ್ಗವು ಭಾರತೀಯ ರೈಲ್ವೆಯನ್ನು ಆಧುನೀಕರಿಸುವ ಯೋಜನೆಯ ಭಾಗವಾಗಿ ನರೇಂದ್ರ ಮೋದಿಯವರು ಘೋಷಿಸಿದ್ದರು. ಅದಾಗಿ ಹತ್ತು ವರ್ಷವಾದರೂ ಸುದ್ದಿಯೇ ಇಲ್ಲ. ಬುಲೆಟ್ ಟ್ರೈನ್...

ನೊಬೆಲ್‌ ಪ್ರಶಸ್ತಿ ಸರಣಿ | ರಸಾಯನವಿಜ್ಞಾನದ ʼಅಸಮಮಿತಿʼ (Chirality)ಯ...

ರಸಾಯನವಿಜ್ಞಾನದ ನೊಬೆಲ್ ಪ್ರಶಸ್ತಿಯನ್ನು ಈ ಬಾರಿ ಹೆನ್ರಿ ಕಗಾನ್‌ ಮತ್ತು ಕೆನ್ಸೊ ಸುಆಯ್‌ ಅವರಿಗೆ ನೀಡಲಾಗಿದೆ. ಅವರ ಸಂಶೋಧನೆಯ ಕೇಂದ್ರ ಬಿಂದು ರಸಾಯನವಿಜ್ಞಾನದಲ್ಲಿ ಶತಮಾನಗಟ್ಟಲೆ ಅತ್ಯಂತ ಕುತೂಹಲಕಾರಿ ಪ್ರಶ್ನೆಯಾಗಿದ್ದ- ಒಂದಕ್ಕೊಂದು ಕನ್ನಡಿಯ ಪ್ರತಿಬಿಂಬದಂತಿರುವ...

ಅನುದಾನ ಕೊರತೆ: ವಿದ್ಯಾರ್ಥಿಗಳಿಂದ ನಿರ್ವಹಣಾ ಶುಲ್ಕ ವಸೂಲಿ, ಶಿಕ್ಷಕರ...

ಹಾವೇರಿ ಜಿಲ್ಲೆಯಲ್ಲಿ ಸರಕಾರಿ ಶಾಲೆಗಳಿಗೆ ನಿರ್ವಹಣಾ ವೆಚ್ಚದ ಅನುದಾನ ಬಿಡುಗಡೆಯಾಗದ ಹಿನ್ನೆಲೆಯಲ್ಲಿ ಶಿಕ್ಷಕರು ನಿತ್ಯದ ಖರ್ಚು-ವೆಚ್ಚ ಸರಿದೂಗಿಸಲು ಪರದಾಡುವಂತಾಗಿದೆ. ಶಾಲೆ ನಡೆಸಲು ವಿದ್ಯಾರ್ಥಿಗಳಿಂದಲೇ ಹಣ ವಸೂಲಿ ಮಾಡುತ್ತಿರುವ ಆರೋಪ ಕೇಳಿಬಂದಿದ್ದು, ಪೋಷಕರಿಂದ ಮತ್ತು...

ಎಣಿಕೆ ಕೊಠಡಿಗೆ ಬರುವ ಮತ್ತು ಹೋಗುವ ಸಿಬ್ಬಂದಿಯನ್ನು ಸರಿಯಾಗಿ ತಪಾಸಣೆ ಮಾಡುತ್ತಿರಲಿಲ್ಲ. ನಿಗದಿಪಡಿಸಿದ ಡ್ರೆಸ್ ಕೋಡ್ ಪಾಲಿಸುತ್ತಿರಲಿಲ್ಲ ಮತ್ತು ಸಿಬ್ಬಂದಿಗಳು ತಮ್ಮ ವೈಯಕ್ತಿಕ ವಸ್ತುಗಳನ್ನು ಒಳಗೆ ತರುವುದನ್ನು ನಿರ್ಬಂಧಿಸಿರಲಿಲ್ಲ. ಭಕ್ತರ ದೇಣಿಗೆಯನ್ನು ಎಣಿಕೆ ಮಾಡುವಾಗ ಪ್ರತಿಯೊಂದು ಹುಂಡಿಯನ್ನು ಪ್ರತ್ಯೇಕವಾಗಿ ಎಣಿಸದೆ, ಎಲ್ಲವನ್ನೂ ಒಟ್ಟಿಗೆ ಸೇರಿಸಿ ಎಣಿಸುತ್ತಿದ್ದುದರಿಂದ ಅವ್ಯವಹಾರಕ್ಕೆ ದಾರಿ ಮಾಡಿಕೊಡಲಾಗಿತ್ತು.

ದೇಣಿಗೆ ಪೆಟ್ಟಿಗೆಯ ಕೀಲಿಗಳು ಯಾರ ಸುಪರ್ದಿಯಲ್ಲಿರಬೇಕು ಎಂಬುದಕ್ಕೆ ಯಾವುದೇ ಲಿಖಿತ ಆದೇಶವಿರಲಿಲ್ಲ. ಆರೋಪಿ ರಾಮಶಂಕರ್ ಯಾದವ್ ಅಲಿಯಾಸ್ ಟಿನ್ನು ಎಂಬಾತ ಯಾವುದೇ ಅಧಿಕೃತ ಅನುಮತಿಯಿಲ್ಲದೆ ಈ ವ್ಯವಹಾರಗಳನ್ನು ನಿಯಂತ್ರಿಸುತ್ತಿದ್ದ. ಈತ ಟ್ರಸ್ಟ್‌ನ ಮಾಜಿ ಪ್ರಧಾನ ಕಾರ್ಯದರ್ಶಿ ಚಂಪತ್ ರಾಯ್ ಅವರ ಆಪ್ತ ವಲಯದಲ್ಲಿ ಗುರುತಿಸಿಕೊಂಡಿದ್ದ ಎನ್ನಲಾಗಿದೆ.

ಇದನ್ನೂ ಓದಿ: ರಾಮಮಂದಿರ ಲೂಟಿ | ತನಿಖೆ-ಬಂಧನದಿಂದ RSSನ ತಿಮಿಂಗಿಲಗಳು ಪಾರು!

2024ರ ಸೆಪ್ಟೆಂಬರ್‌ನಲ್ಲಿ ಕಠಿಣ ನಿಯಮಗಳಿದ್ದರೂ, 2025ರ ಫೆಬ್ರವರಿ 6ರಂದು ಹೊರಡಿಸಿದ ನೂತನ ಎಸ್‌ಒಪಿ (SOP) ಅನ್ವಯ, ತಪಾಸಣೆಯನ್ನು ರ್ಯಾಂಡಮ್ ಆಗಿ ಮಾಡುವಂತೆ ಸಡಿಲಗೊಳಿಸಲಾಗಿತ್ತು. ಈ ಬದಲಾವಣೆಯನ್ನು ಮಾಡಿದ್ದ ಮಾಜಿ ಟ್ರಸ್ಟಿ ಅನಿಲ್ ಮಿಶ್ರಾ ಸೂಕ್ತ ಮೇಲ್ವಿಚಾರಣೆ ಮಾಡದಿರುವುದು ವರದಿಯಲ್ಲಿ ಉಲ್ಲೇಖವಾಗಿದೆ.

ದೇಣಿಗೆ ಪೆಟ್ಟಿಗೆಗಳನ್ನು ಸಾಗಿಸುವಾಗ ಅವುಗಳಿಗೆ ಯಾವುದೇ ಕ್ರಮಸಂಖ್ಯೆ ಇರಲಿಲ್ಲ. ಯಾವ ಪೆಟ್ಟಿಗೆ ಯಾವ ದಿನ ಬಂದಿದೆ, ಎಷ್ಟು ಹಣವಿದೆ ಎಂಬುದನ್ನು ದಾಖಲಿಸುವ ಯಾವುದೇ ವ್ಯವಸ್ಥಿತ ಪದ್ಧತಿ ಇರಲಿಲ್ಲ. ಇದರಿಂದಾಗಿ ಆಡಿಟ್ ಮತ್ತು ಹೊಣೆಗಾರಿಕೆಯಲ್ಲಿ ಗಂಭೀರ ಲೋಪ ಉಂಟಾಗಿದೆ.

TIE‌ ವರದಿಯ ಪ್ರಕಾರ, ದೇಣಿಗೆ ಎಣಿಕೆಯ ಸಮಯದಲ್ಲಿ ಟ್ರಸ್ಟ್ ಮತ್ತು ಬ್ಯಾಂಕ್ ಪ್ರತಿನಿಧಿಗಳಿಬ್ಬರು ಹಾಜರಿದ್ದರೂ, ಇಂತಹ ಕೃತ್ಯಗಳು ಎಗ್ಗಿಲ್ಲದೆ ಮುಂದುವರಿದಿರುವುದು ವ್ಯವಸ್ಥೆಯ ಸಂಪೂರ್ಣ ವೈಫಲ್ಯವನ್ನು ತೋರಿಸುತ್ತದೆ ಎಂದು SIT ಆತಂಕ ವ್ಯಕ್ತಪಡಿಸಿದೆ.

eedina
ಈ ದಿನ ಡೆಸ್ಕ್‌
Website |  + posts

ಪೋಸ್ಟ್ ಹಂಚಿಕೊಳ್ಳಿ:

ಪೋಸ್ಟ್ ಹಂಚಿಕೊಳ್ಳಿ:

ಈ ಹೊತ್ತಿನ ಪ್ರಮುಖ ಸುದ್ದಿ

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

‘8 ಯುದ್ಧಗಳನ್ನು ನಿಲ್ಲಿಸಿದ್ದೇನೆ, ನನಗೇ ನೊಬೆಲ್ ಕೊಡಿ’: ಟ್ರಂಪ್ ಮತ್ತೆ ಪಟ್ಟು

ನಾರ್ವೇಜಿಯನ್ ನೊಬೆಲ್ ಸಮಿತಿಯು ಈ ಸಾಲಿನ ಪ್ರತಿಷ್ಠಿತ ‘ನೊಬೆಲ್ ಶಾಂತಿ ಪ್ರಶಸ್ತಿ’ಯನ್ನು...

ಆಲಗೂರ ಪುನರ್ವಸತಿ ಕೇಂದ್ರವನ್ನು ಮರಳಿ ಗ್ರಾಮ ಪಂಚಾಯತಿಗೆ ಸೇರಿಸಲು ಆಗ್ರಹ

ಬಾಗಲಕೋಟೆ ಜಿಲ್ಲೆಯ ಜಮಖಂಡಿ ನಗರಸಭೆ ವ್ಯಾಪ್ತಿಗೆ ಸೇರಿಸಲಾಗಿರುವ ಆಲಗೂರ ಪುನರ್ವಸತಿ ಕೇಂದ್ರವನ್ನು...

ಬೀದರ್‌ | ಜಿಲ್ಲಾ ಪಂಚಾಯತಿ 34, ತಾಲೂಕು ಪಂಚಾಯತಿ 123 ಸ್ಥಾನಗಳಿಗೆ ಮೀಸಲಾತಿ ಪ್ರಕಟ

ರಾಜ್ಯ ಸರ್ಕಾರವು ಬೀದರ್ ಜಿಲ್ಲಾ ಪಂಚಾಯತಿ ಹಾಗೂ ಜಿಲ್ಲೆಯ ಎಂಟು ತಾಲ್ಲೂಕು...