ಪೆಟ್ರೋಲ್‌ಗೆ ಎಥೆನಾಲ್ ಮಿಶ್ರಣದಿಂದ ರೈತರಿಗೆ ಲಾಭವಿದೆಯೇ?

Date:

ದೇಶದಲ್ಲಿ ಪೆಟ್ರೋಲ್‌ಗೆ ಎಥೆನಾಲ್ ಮಿಶ್ರಣ ಮಾಡುವ (E20) ಯೋಜನೆಯು ಪರಿಸರ ಮಾಲಿನ್ಯ ನಿಯಂತ್ರಣ ಮತ್ತು ಇಂಧನ ಆಮದು ವೆಚ್ಚ ತಗ್ಗಿಸುವ ನಿಟ್ಟಿನಲ್ಲಿ ಮುಖ್ಯ. ಇದರಿಂದ ರೈತರಿಗೆ ಲಾಭವಿದೆ ಎಂಬುದು ಸರ್ಕಾರದ ವಾದ. ಆದರೆ ಇದರಿಂದ ರೈತರಿಗೆ ಯಾವುದೇ ನೇರ ಲಾಭವಿಲ್ಲ” ಎಂಬ ಚರ್ಚೆಗಳು ಇತ್ತೀಚೆಗೆ ಹೆಚ್ಚಾಗಿವೆ. ಕೃಷಿ ಆರ್ಥಿಕ ತಜ್ಞರು ಪೆಟ್ರೋಲ್‌ಗೆ ಎಥೆನಾಲ್ ಮಿಶ್ರಣ ಮಾಡುವುದರಿಂದ ಉಂಟಾಗುವ ಗಂಭೀರ ಆರ್ಥಿಕ ಹಾಗೂ ಪರಿಸರ ಸವಾಲುಗಳನ್ನು ಬಹಿರಂಗಪಡಿಸಿದ್ದಾರೆ.

- Advertisement -

ಕೇಂದ್ರ ಪೆಟ್ರೋಲಿಯಂ ಸಚಿವಾಲಯ ಹೇಳುವಂತೆಯೇ ಎಥೆನಾಲ್ ಖರೀದಿಯಿಂದ ಹರಿದುಬಂದ ಹಣದಲ್ಲಿ ಬಹುದೊಡ್ಡ ಪಾಲು ಸಕ್ಕರೆ ಕಾರ್ಖಾನೆಗಳು ಮತ್ತು ಎಥೆನಾಲ್ ಉತ್ಪಾದನಾ ಘಟಕಗಳಿಗೆ (Distilleries) ಹೋಗುತ್ತಿದೆಯೇ ಹೊರತು ಕಬ್ಬು ಮತ್ತು ಜೋಳ ಬೆಳೆಯುವ ರೈತರ ಕೈ ಸೇರುತ್ತಿಲ್ಲ.

ಇನ್ನಷ್ಟು ವಿಶೇಷ ಲೇಖನಗಳಿಗಾಗಿ, ಇಲ್ಲಿ ಕ್ಲಿಕ್ ಮಾಡಿ →

ಭಾರತಕ್ಕೆ ಬರದ ಬುಲೆಟ್ ಟ್ರೈನ್: ತಡವಾಗುತ್ತಿರುವುದು ಮೋದಿಯಿಂದಲೋ, ಜಪಾನ್‌ನವರಿಂದಲೋ?

ಮುಂಬೈ ಮತ್ತು ಅಹಮದಾಬಾದ್ ನಡುವಿನ 508 ಕಿ.ಮೀ ಉದ್ದದ ಈ ಮಾರ್ಗವು ಭಾರತೀಯ ರೈಲ್ವೆಯನ್ನು ಆಧುನೀಕರಿಸುವ ಯೋಜನೆಯ ಭಾಗವಾಗಿ ನರೇಂದ್ರ ಮೋದಿಯವರು ಘೋಷಿಸಿದ್ದರು. ಅದಾಗಿ ಹತ್ತು ವರ್ಷವಾದರೂ ಸುದ್ದಿಯೇ ಇಲ್ಲ. ಬುಲೆಟ್ ಟ್ರೈನ್...

ನೊಬೆಲ್‌ ಪ್ರಶಸ್ತಿ ಸರಣಿ | ರಸಾಯನವಿಜ್ಞಾನದ ʼಅಸಮಮಿತಿʼ (Chirality)ಯ...

ರಸಾಯನವಿಜ್ಞಾನದ ನೊಬೆಲ್ ಪ್ರಶಸ್ತಿಯನ್ನು ಈ ಬಾರಿ ಹೆನ್ರಿ ಕಗಾನ್‌ ಮತ್ತು ಕೆನ್ಸೊ ಸುಆಯ್‌ ಅವರಿಗೆ ನೀಡಲಾಗಿದೆ. ಅವರ ಸಂಶೋಧನೆಯ ಕೇಂದ್ರ ಬಿಂದು ರಸಾಯನವಿಜ್ಞಾನದಲ್ಲಿ ಶತಮಾನಗಟ್ಟಲೆ ಅತ್ಯಂತ ಕುತೂಹಲಕಾರಿ ಪ್ರಶ್ನೆಯಾಗಿದ್ದ- ಒಂದಕ್ಕೊಂದು ಕನ್ನಡಿಯ ಪ್ರತಿಬಿಂಬದಂತಿರುವ...

ಅನುದಾನ ಕೊರತೆ: ವಿದ್ಯಾರ್ಥಿಗಳಿಂದ ನಿರ್ವಹಣಾ ಶುಲ್ಕ ವಸೂಲಿ, ಶಿಕ್ಷಕರ...

ಹಾವೇರಿ ಜಿಲ್ಲೆಯಲ್ಲಿ ಸರಕಾರಿ ಶಾಲೆಗಳಿಗೆ ನಿರ್ವಹಣಾ ವೆಚ್ಚದ ಅನುದಾನ ಬಿಡುಗಡೆಯಾಗದ ಹಿನ್ನೆಲೆಯಲ್ಲಿ ಶಿಕ್ಷಕರು ನಿತ್ಯದ ಖರ್ಚು-ವೆಚ್ಚ ಸರಿದೂಗಿಸಲು ಪರದಾಡುವಂತಾಗಿದೆ. ಶಾಲೆ ನಡೆಸಲು ವಿದ್ಯಾರ್ಥಿಗಳಿಂದಲೇ ಹಣ ವಸೂಲಿ ಮಾಡುತ್ತಿರುವ ಆರೋಪ ಕೇಳಿಬಂದಿದ್ದು, ಪೋಷಕರಿಂದ ಮತ್ತು...

ರೈತರಿಗೆ ಕಬ್ಬಿನ ಬಾಕಿ ಹಣ ಪಾವತಿಯಾಗುತ್ತಿದೆಯಾದರೂ, ಕಚ್ಚಾ ವಸ್ತುವನ್ನು ಒದಗಿಸುವ ರೈತನಿಗೆ ಸಿಗುವ ‘ಕನಿಷ್ಠ ಬೆಂಬಲ ಬೆಲೆ’ ಅಂದರೆ ಎಂಎಸ್‌ಪಿ ಅಥವಾ ‘ನ್ಯಾಯೋಚಿತ ಮತ್ತು ಲಾಭದಾಯಕ ಬೆಲೆ’ (FRP) ಯಲ್ಲಿ ಯಾವುದೇ ಗಣನೀಯ ಏರಿಕೆಯಾಗಿಲ್ಲ. ಅಂದರೆ ಸರ್ಕಾರದ ದಾಖಲೆಗಳು ಹೇಳುವಂತೆಯೇ ಸಕ್ಕರೆ ಕಾರ್ಖಾನೆಗಳು ಮತ್ತು ಡಿಸ್ಟಿಲರಿಗಳಿಗೆ ಮಾತ್ರ ಸಿಂಹಪಾಲು, ರೈತರಿಗಲ್ಲ! ಜತೆ ಜತೆಗೆ ಕೇಂದ್ರ ಸಚಿವ ನಿತಿನ್ ಗಡ್ಕರಿ ಅವರ ಮಕ್ಕಳ ಎಥೆನಾಲ್ ಕಂಪನಿಯ ಬಗ್ಗೆ ನಾವು ಮರೆಯುವಂತಿಲ್ಲ!

ಇದನ್ನೂ ಓದಿ: ವಾಹನಗಳಲ್ಲಿ ಶೇ.100 ಎಥೆನಾಲ್: ರೈತರಿಗೆ ಲಾಭ ನೆಪ; ಗಡ್ಕರಿ ಮಕ್ಕಳ ಕಂಪನಿಗೆ ಲಾಟರಿ!

ಇವಿಷ್ಟು ಮಾತ್ರವಲ್ಲದೆ ರೈತರದ ಭವಿಷ್ಯಕ್ಕೂ ಈ ಎಥೆನಾಲ್ ಕಂಟಕವಾಗಿದೆ. ನೀತಿ ಆಯೋಗದ ಪ್ರಕಾರ 1 ಲೀಟರ್ ಎಥೆನಾಲ್ ಉತ್ಪಾದಿಸಲು ಸುಮಾರು 2,800 ರಿಂದ 3,000 ಲೀಟರ್‌ಗಳಷ್ಟು ನೀರು ಬೇಕಾಗುತ್ತದೆ. ಅಂದರೆ ಕಬ್ಬು ಮತ್ತು ಭತ್ತದಂತಹ ಅತಿ ಹೆಚ್ಚು ನೀರು ಬೇಡುವ ಬೆಳೆಗಳನ್ನೇ ಎಥೆನಾಲ್ ಪೂರೈಕೆಗೆ ಬಳಸಲಾಗುತ್ತಿದೆ.

ಮೆಕ್ಕೆಜೋಳಕ್ಕೆ ಭತ್ತ ಮತ್ತು ಕಬ್ಬಿಗೆ ಹೋಲಿಸಿದರೆ ಕೇವಲ ಶೇ. 30 ರಿಂದ 40 ರಷ್ಟು ಮಾತ್ರ ನೀರು ಸಾಕು. ಆದಾಗ್ಯೂ, ದೇಶದಲ್ಲಿ ಶೇ. 70 ಕ್ಕೂ ಹೆಚ್ಚು ಎಥೆನಾಲ್ ಇನ್ನೂ ಕಬ್ಬಿನ ಉಪ ಉತ್ಪನ್ನಗಳಿಂದಲೇ ಬರುತ್ತಿರುವುದರಿಂದ ಅಂತರ್ಜಲದ ಮೇಲಿನ ಒತ್ತಡ ತೀವ್ರವಾಗಿದೆ.

ಇದರಿಂದಾಗಿ ಮಹಾರಾಷ್ಟ್ರ, ಕರ್ನಾಟಕ ಹಾಗೂ ಪಂಜಾಬ್‌ನಂತಹ ರಾಜ್ಯಗಳಲ್ಲಿ ಅಂತರ್ಜಲ ಮಟ್ಟ ತೀವ್ರವಾಗಿ ಕುಸಿಯುತ್ತಿದೆ. ನೀರಿಲ್ಲದೆ ಮುಂದಿನ ದಿನಗಳಲ್ಲಿ ಕೃಷಿಯೇ ಮಾಡಲಾಗದ ಪರಿಸ್ಥಿತಿ ನಿರ್ಮಾಣವಾಗುತ್ತಿದ್ದು, ಇದು ರೈತರನ್ನು ಮತ್ತಷ್ಟು ಸಾಲದ ಸುಳಿಗೆ ದೂಡುತ್ತಿದೆ.

ಇವೆಲ್ಲವುದಕ್ಕೂ ಮುಖ್ಯವಾಗಿ ಇಲ್ಲಿ ಆಹಾರ ಭದ್ರತೆಯ, ಮಾರುಕಟ್ಟೆ ಅಸ್ಥಿರಗೊಳ್ಳುವ ಆತಂಕವೂ ಇದೆ. ಎಥೆನಾಲ್ ಉತ್ಪಾದನೆಗಾಗಿ ಆಹಾರ ಧಾನ್ಯಗಳಾದ ಜೋಳ ಮತ್ತು ಅಕ್ಕಿಯನ್ನು (Broken Rice) ದೊಡ್ಡ ಪ್ರಮಾಣದಲ್ಲಿ ಬಳಸಲಾಗುತ್ತಿದೆ. ಕೃಷಿ ಮಾರುಕಟ್ಟೆ ತಜ್ಞರ ಪ್ರಕಾರ, ಇದರಿಂದಾಗಿ ಕೋಳಿ ಸಾಕಣೆ ಮತ್ತು ಪಶು ಆಹಾರ ಉದ್ಯಮಕ್ಕೆ ಕೊರತೆ ಎದುರಾಗಿದೆ. ಕೋಳಿ ಸಾಕಣೆ ಮತ್ತು ಹೈನುಗಾರಿಕೆ ಮಾಡುವ ಸಣ್ಣ ರೈತರಿಗೆ ಹಿಂಡಿ ಹಾಗೂ ಪಶು ಆಹಾರದ ಬೆಲೆ ಶೇ. 20-30 ರಷ್ಟು ದುಬಾರಿಯಾಗಿದೆ. ಅಂದರೆ, ಒಂದು ಕೈಯಲ್ಲಿ ಸಿಗುವ ಲಾಭ ಮತ್ತೊಂದು ಕೈಯಲ್ಲಿ ವೆಚ್ಚವಾಗಿ ಹೋಗುತ್ತಿದೆ.

ಈ ಹಿಂದೆ 2023ರ ಡಿಸೆಂಬರ್ ವೇಳೆ ಸಕ್ಕರೆ ಕೊರತೆ ಉಂಟಾದಾಗ ಸರ್ಕಾರ ಎಥೆನಾಲ್ ಉತ್ಪಾದನೆಗೆ ಕಬ್ಬಿನ ರಸ ಬಳಸುವುದನ್ನು ತಾತ್ಕಾಲಿಕವಾಗಿ ನಿಷೇಧಿಸಿತ್ತು. ಇಂತಹ ದಿಢೀರ್ ನೀತಿ ಬದಲಾವಣೆಗಳಿಂದಾಗಿ ಕಾರ್ಖಾನೆಗಳು ರೈತರಿಂದ ಕಬ್ಬು ಖರೀದಿಸುವುದನ್ನು ನಿಲ್ಲಿಸುತ್ತವೆ ಅಥವಾ ತಡವಾಗಿ ಖರೀದಿಸುತ್ತವೆ. ಇದರ ಪರಿಣಾಮವೂ ರೈತರ ಮೇಲೆಯೇ ಬೀರುವುದು. ಮಾರುಕಟ್ಟೆಯಲ್ಲಿ ರೈತರು ತೀವ್ರ ನಷ್ಟ ಅನುಭವಿಸಬೇಕಾಗುತ್ತದೆ.

ಎಥೆನಾಲ್ ಮಿಶ್ರಣ ಯೋಜನೆಯು ದೇಶದ ತೈಲ ಆಮದು ವೆಚ್ಚವನ್ನು ಉಳಿಸಬಹುದು. ಆದರೆ ದರ ನಿಜವಾದ ಲಾಭ ಕಾರ್ಪೊರೇಟ್ ಡಿಸ್ಟಿಲರಿ ಉದ್ಯಮಿಗಳಿಗೆ ಸಿಗುತ್ತಿದೆಯೇ ಹೊರತು ತಳಮಟ್ಟದ ರೈತನಿಗಲ್ಲ. ನೀರಿನ ತೀವ್ರ ಅಭಾವ ಮತ್ತು ಕಚ್ಚಾ ವಸ್ತುಗಳ ಬೆಲೆ ನಿಯಂತ್ರಣದ ನೀತಿಗಳು ರೈತರನ್ನು ದೀರ್ಘಾವಧಿಯಲ್ಲಿ ನಷ್ಟಕ್ಕೆ ದೂಡುತ್ತಿವೆ.

WhatsApp Image 2025 11 17 at 3.21.17 PM
ಈ ದಿನ ಡೆಸ್ಕ್
+ posts

ಪೋಸ್ಟ್ ಹಂಚಿಕೊಳ್ಳಿ:

ಪೋಸ್ಟ್ ಹಂಚಿಕೊಳ್ಳಿ:

ಈ ಹೊತ್ತಿನ ಪ್ರಮುಖ ಸುದ್ದಿ

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ಆಲಗೂರ ಪುನರ್ವಸತಿ ಕೇಂದ್ರವನ್ನು ಮರಳಿ ಗ್ರಾಮ ಪಂಚಾಯತಿಗೆ ಸೇರಿಸಲು ಆಗ್ರಹ

ಬಾಗಲಕೋಟೆ ಜಿಲ್ಲೆಯ ಜಮಖಂಡಿ ನಗರಸಭೆ ವ್ಯಾಪ್ತಿಗೆ ಸೇರಿಸಲಾಗಿರುವ ಆಲಗೂರ ಪುನರ್ವಸತಿ ಕೇಂದ್ರವನ್ನು...

ಬೀದರ್‌ | ಜಿಲ್ಲಾ ಪಂಚಾಯತಿ 34, ತಾಲೂಕು ಪಂಚಾಯತಿ 123 ಸ್ಥಾನಗಳಿಗೆ ಮೀಸಲಾತಿ ಪ್ರಕಟ

ರಾಜ್ಯ ಸರ್ಕಾರವು ಬೀದರ್ ಜಿಲ್ಲಾ ಪಂಚಾಯತಿ ಹಾಗೂ ಜಿಲ್ಲೆಯ ಎಂಟು ತಾಲ್ಲೂಕು...

ಬಡತನದ ಸರಪಳಿ ಮುರಿಯಲು ಸೀರೆಯಲ್ಲೇ ಓಟ: ಹೋಮ್ ಗಾರ್ಡ್ ಉದ್ಯೋಗಾಕಾಂಕ್ಷಿಯ ಸಾಹಸಕ್ಕೆ ಪ್ರಶಂಸೆ

ಹೋಮ್ ಗಾರ್ಡ್ (ಗೃಹ ರಕ್ಷಕ ಸಿಬ್ಬಂದಿ) ನೇಮಕಾತಿಯ ದೈಹಿಕ ದಾರ್ಢ್ಯ ಪರೀಕ್ಷೆಯ...