ರಷ್ಯಾದ ಪ್ರಮುಖ ಇ-ಕಾಮರ್ಸ್ ಸಂಸ್ಥೆ ‘ಓಜೋನ್’ ಗೋದಾಮುಗಳ ಮೇಲೆ ಉಕ್ರೇನ್ ಡ್ರೋನ್ ದಾಳಿ

Date:

ರಷ್ಯಾದ ಎರಡನೇ ಅತಿದೊಡ್ಡ ಆನ್‌ಲೈನ್ ವಾಣಿಜ್ಯ ಸಂಸ್ಥೆಯಾದ ‘ಓಜೋನ್’ (Ozon) ನ ಗೋದಾಮುಗಳ ಮೇಲೆ ಉಕ್ರೇನ್ ಭೀಕರ ಡ್ರೋನ್ ದಾಳಿ ನಡೆಸಿದೆ. ದಕ್ಷಿಣ ರಷ್ಯಾದ ಕ್ರಾಸ್ನೋಡರ್, ದಾಗೆಸ್ತಾನ್, ಸ್ಟಾವ್ರೊಪೋಲ್ ಮತ್ತು ಅಡಿಜಿಯಾ ಪ್ರಾಂತ್ಯಗಳಲ್ಲಿರುವ ಸಂಸ್ಥೆಯ ಸರಕು ಸಾಗಣೆ ಹಾಗೂ ದಾಸ್ತಾನು ಕೇಂದ್ರಗಳು ಬೆಂಕಿಗೆ ಆಹುತಿಯಾಗಿದ್ದು, ಹಲವರು ಗಾಯಗೊಂಡಿದ್ದಾರೆ.

- Advertisement -

ರಷ್ಯಾದ ಅತಿದೊಡ್ಡ ಇ-ಕಾಮರ್ಸ್ ಸಂಸ್ಥೆಯಾದ ‘ವೈಲ್ಡ್‌ಬೆರ್ರೀಸ್’ (Wildberries) ಮೇಲೆ ಸತತ ದಾಳಿ ನಡೆಸಿದ್ದ ಉಕ್ರೇನ್ ಸೇನೆ, ಇದೀಗ ಓಜೋನ್ ಸಂಸ್ಥೆಯನ್ನು ಗುರಿಯಾಗಿಸಿಕೊಂಡಿದೆ. ಈ ವಾಣಿಜ್ಯ ಸಂಸ್ಥೆಗಳು ರಷ್ಯಾ ಸೇನೆಗೆ ಅಗತ್ಯ ಸರಕು ಮತ್ತು ಬಿಡಿಭಾಗಗಳನ್ನು ಪೂರೈಸುತ್ತಿವೆ ಎಂದು ಉಕ್ರೇನ್ ರಕ್ಷಣಾ ಇಲಾಖೆ ಹೇಳಿಕೊಂಡಿದೆ. ಆದರೆ ರಷ್ಯಾ ಸರ್ಕಾರ ಈ ಆರೋಪವನ್ನು ಸ್ಪಷ್ಟವಾಗಿ ತಳ್ಳಿಹಾಕಿದೆ.

ಇನ್ನಷ್ಟು ವಿಶೇಷ ಲೇಖನಗಳಿಗಾಗಿ, ಇಲ್ಲಿ ಕ್ಲಿಕ್ ಮಾಡಿ →

ಬಾಕ್ಸ್ ಆಫೀಸ್‌ನಲ್ಲಿ ರಾವಣನೇ ವಿಜೃಂಭಿಸಿರುವ ‘ರಾಮಾಯಣ’ದ ಅಬ್ಬರ: ₹1,600...

ರಾವಣನೇ ವಿಜೃಂಭಿಸಿರುವ ಬಾಲಿವುಡ್‌ ಸಿನಿಮಾ 'ರಾಮಾಯಣ: ಭಾಗ-1' ಬಿಡುಗಡೆಯಾದ ಕೇವಲ 17 ದಿನಗಳಲ್ಲಿ ಜಾಗತಿಕವಾಗಿ ₹1,600 ಕೋಟಿಗೂ ಅಧಿಕ ಕಮಾಯಿ ಮಾಡಿ ದಾಖಲೆ ಬರೆದಿದೆ. ಈ ಮೂಲಕ 'ದಂಗಲ್', 'ಧುರಂಧರ್-2', 'ಬಾಹುಬಲಿ-2' ಹಾಗೂ...

ರಾಯಚೂರು | ಉದ್ಘಾಟನೆಗಾಗಿ ಕಾಯುತ್ತಿರುವ ಶಾಲೆ; ವರಾಂಡದಲ್ಲೇ ಮಕ್ಕಳಿಗೆ...

ರಾಯಚೂರು ಜಿಲ್ಲೆ, ಜಾಲಹಳ್ಳಿಯ ಬೊಮ್ಮನಹಳ್ಳಿ ಸರ್ಕಾರಿ ಶಾಲೆಯಲ್ಲಿ ಶಿಕ್ಷಕರ ಕೊರತೆ, ಶುದ್ಧ ಕುಡಿಯುವ ನೀರಿನ ಅಭಾವ, ಕಾಂಪೌಂಡ್ ಇಲ್ಲದಿರುವುದು ಹಾಗೂ ಶಾಲಾ ಜಾಗದ ವಿವಾದ ಸೇರಿದಂತೆ ಹಲವು ಸಮಸ್ಯೆಗಳು ಮಕ್ಕಳ ಶಿಕ್ಷಣಕ್ಕೆ ಅಡ್ಡಿಯಾಗಿವೆ....

‘ಹುಟ್ಟಿಗೂ, ಸಾವಿಗೂ ನಾವೇ ಬೇಕು… ನಮ್ಮ ಜೊತೆ ನಿಲ್ಲೋಕೆ...

ಪೆಂಡಾಲಿನ ಒಂದು ಮೂಲೆಯಿಂದ ಆಶಾ ಕಾಯಕರ್ತೆಯರು " ರೂಪ ರೂಪಗಳನು ದಾಟಿ, ನಾಮ ಕೋಟಿಗಳನು ಮೀಟಿ, ಎದೆಯ ಬಿರಿಯೆ ಭಾವದೀಟಿ, ಓ ನನ್ನ ಚೇತನ... ಆಗು ಅನಿಕೇತನ" ಕವಿತೆಯ ಸಾಲುಗಳನ್ನು ಎದೆತುಂಬಿ ಹಾಡುತ್ತಿದ್ದರು....

ಕ್ರಾಸ್ನೋಡರ್‌ನಲ್ಲಿ ನಡೆದ ಡ್ರೋನ್ ದಾಳಿಯಲ್ಲಿ 13 ರಿಂದ 16 ವರ್ಷ ವಯಸ್ಸಿನ ಮೂವರು ಮಕ್ಕಳು ಸಾವನ್ನಪ್ಪಿದ್ದು, ಆರು ಮಕ್ಕಳು ಗಾಯಗೊಂಡಿದ್ದಾರೆ ಎಂದು ರಷ್ಯಾದ ಅಧಿಕಾರಿಗಳು ತಿಳಿಸಿದ್ದಾರೆ. ಆರ್ಥಿಕ ನೆಲೆಗಳ ಮೇಲೆ ದಾಳಿ ನಡೆಸುವ ಮೂಲಕ ಉಕ್ರೇನ್ ‘ಪಂಡೋರಾ ಬಾಕ್ಸ್’ (ಸಂಕಷ್ಟಗಳ ಆಗರ) ತೆರೆದಿದೆ ಎಂದು ಎಚ್ಚರಿಸಿರುವ ಅಧ್ಯಕ್ಷ ವ್ಲಾಡಿಮಿರ್ ಪುಟಿನ್, ಉಕ್ರೇನ್‌ನ ಆರ್ಥಿಕ ವಲಯಗಳಿಗೆ ತಕ್ಕ ಪ್ರತ್ಯುತ್ತರ ನೀಡುವುದಾಗಿ ಹೇಳಿದ್ದಾರೆ.

ಈ ದಾಳಿಗಳ ಹಿನ್ನೆಲೆಯಲ್ಲಿ ಮಾಸ್ಕೋ ಷೇರು ಮಾರುಕಟ್ಟೆಯಲ್ಲಿ ಓಜೋನ್ ಸಂಸ್ಥೆಯ ಷೇರು ಮೌಲ್ಯವು ಶೇ. ೧೨ ರಷ್ಟು ಹಾಗೂ ಅದರ ಪ್ರಮುಖ ಪಾಲುದಾರ ಸಂಸ್ಥೆ ‘ಎಎಫ್‌ಕೆ ಸಿಸ್ಟೆಮಾ’ ಶೇ. 13 ರಷ್ಟು ಭಾರೀ ಕುಸಿತ ಕಂಡಿವೆ. ಸಂಕಷ್ಟದಲ್ಲಿರುವ ಈ ವಾಣಿಜ್ಯ ವಲಯಕ್ಕೆ ಅಗತ್ಯ ನೆರವು ನೀಡುವ ಮಾರ್ಗಗಳನ್ನು ಪರಿಶೀಲಿಸುತ್ತಿರುವುದಾಗಿ ಕ್ರೆಮ್ಲಿನ್ ತಿಳಿಸಿದೆ.

‘ರಷ್ಯಾದ ಅಮೆಜಾನ್’ ಎಂದೇ ಖ್ಯಾತಿ ಪಡೆದಿರುವ ಓಜೋನ್ ಮತ್ತು ವೈಲ್ಡ್‌ಬೆರ್ರೀಸ್ ಸಂಸ್ಥೆಗಳನ್ನು ರಷ್ಯಾದ ಶೇ. ೮೫ ರಿಂದ 90 ರಷ್ಟು ಸಕ್ರಿಯ ಜನಸಂಖ್ಯೆ ಅವಲಂಬಿಸಿದೆ. ದೇಶದ ದೂರದ ಗ್ರಾಮೀಣ ಭಾಗಗಳಲ್ಲಿ ದಿನಬಳಕೆಯ ವಸ್ತುಗಳು ಹಾಗೂ ಬಟ್ಟೆಗಳಿಗಾಗಿ ಜನರು ಈ ವೇದಿಕೆಗಳನ್ನೇ ನೆಚ್ಚಿಕೊಂಡಿದ್ದು, ಇವು ಕೇವಲ ಮಾರುಕಟ್ಟೆ ಮಧ್ಯವರ್ತಿಗಳಾಗಿ ಕಾರ್ಯನಿರ್ವಹಿಸುವುದರಿಂದ ನಷ್ಟದ ಬಹುಪಾಲು ಹೊರೆ ಸ್ವತಂತ್ರ ವ್ಯಾಪಾರಿಗಳ ಮೇಲೆಯೇ ಬಿದ್ದಿದೆ.

ಮತ್ತೊಂದೆಡೆ, ಉಕ್ರೇನ್‌ನ ಒಡೆಸಾ ಪ್ರಾಂತ್ಯದಲ್ಲಿ ರಷ್ಯಾ ನಡೆಸಿದ ಕ್ಷಿಪಣಿ ಹಾಗೂ ಡ್ರೋನ್ ದಾಳಿಯಲ್ಲಿ ಆಹಾರ ಸಂಗ್ರಹಣಾ ಘಟಕಗಳು ಮತ್ತು ಇಂಧನ ಮೂಲಸೌಕರ್ಯಗಳು ಹಾನಿಗೊಳಗಾಗಿದ್ದು, ಐವರು ಗಾಯಗೊಂಡಿದ್ದಾರೆ ಎಂದು ಪ್ರಾದೇಶಿಕ ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.

eedina
ಈ ದಿನ ಡೆಸ್ಕ್‌
Website | + posts

<p><iframe src="https://www.youtube.com/embed/8qwx4L0lKFQ?autoplay=1&mute=1&loop=1&playlist=8qwx4L0lKFQ&controls=0&modestbranding=1&showinfo=0" width="560" height="315" frameborder="0" allowfullscreen="allowfullscreen"></iframe></p>

ಪೋಸ್ಟ್ ಹಂಚಿಕೊಳ್ಳಿ:

ಪೋಸ್ಟ್ ಹಂಚಿಕೊಳ್ಳಿ:

ಈ ಹೊತ್ತಿನ ಪ್ರಮುಖ ಸುದ್ದಿ

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ಸ್ವಾತಂತ್ರ್ಯ ಹೋರಾಟದ ಇತಿಹಾಸ ಸಾರುವ ಪ್ರವಾಸಿ ತಾಣವಾಗಿ ಶಿವಪುರ ಸೌಧ ಅಭಿವೃದ್ಧಿ

ಸ್ವಾತಂತ್ರ್ಯ ಹೋರಾಟಗಾರರ ತ್ಯಾಗ, ಬಲಿದಾನ ಹಾಗೂ ದೇಶಪ್ರೇಮದ ಇತಿಹಾಸವನ್ನು ಮುಂದಿನ ಪೀಳಿಗೆಗೆ...

ವಾಟ್ಸ್‌ಆ್ಯಪ್ ಬಳಕೆದಾರರಿಗೆ ಕೇಂದ್ರ ಸರ್ಕಾರ ಎಚ್ಚರಿಕೆ!

ಕಂಪ್ಯೂಟರ್‌ಗಳಲ್ಲಿ ವಾಟ್ಸ್‌ಆ್ಯಪ್ ವೆಬ್ ಬಳಸುವವರಿಗೆ ಕೇಂದ್ರ ಗೃಹ ಸಚಿವಾಲಯದ ರಾಷ್ಟ್ರೀಯ ಸೈಬರ್...

ದೆಹಲಿ ರಸ್ತೆಗಳಲ್ಲಿ ಕೇವಲ BS-VI ವಾಹನಗಳಷ್ಟೇ ಓಡಾಡಲಿ: ವಾಯುಮಾಲಿನ್ಯ ತಡೆಗೆ ಸುಪ್ರೀಂ ಮಹತ್ವದ ಇಂಗಿತ!

ರಾಷ್ಟ್ರ ರಾಜಧಾನಿ ದೆಹಲಿಯ ವಾಯುಮಾಲಿನ್ಯ ನಿಯಂತ್ರಣಕ್ಕೆ ಸಂಬಂಧಿಸಿದಂತೆ ಸುಪ್ರೀಂ ಕೋರ್ಟ್ ಸೋಮವಾರ...

ಶಿವಮೊಗ್ಗ | 67 ಕ್ವಿಂಟಾಲ್ ಪಡಿತರ ಅಕ್ಕಿ ಕೊರತೆ: ಪರಿಶೀಲನೆಗೆ ಆಗ್ರಹ

ಸಾರ್ವಜನಿಕರು ನೀಡಿದ ದೂರಿನ ಮೇರೆಗೆ ಸಂಬಂಧಪಟ್ಟ ಆಹಾರ ಇಲಾಖೆಯ ಆಹಾರ ನಿರೀಕ್ಷಕರಾದ...