ಪ್ರಚಾರದಲ್ಲಿ ಸಮೋಸಾ, ಬಿರಿಯಾನಿ ಸೇರಿ ಪ್ರತಿಯೊಂದು ಆಹಾರಕ್ಕೂ ಚುನಾವಣಾ ಆಯೋಗದಿಂದ ದರ ನಿಗದಿ

Date:

ಲೋಕಸಭಾ ಚುನಾವಣಾ ಪ್ರಚಾರದ ಸಂದರ್ಭದಲ್ಲಿ ಅಭ್ಯರ್ಥಿಗಳು ಖರ್ಚು ಮಾಡುವ ಆಹಾರ ಒಳಗೊಂಡ ಇತರೆ ವೆಚ್ಚದ ಬಗ್ಗೆ ಚುನಾವಣಾ ಆಯೋಗ ಕಟ್ಟುನಿಟ್ಟಿನ ಕ್ರಮಕ್ಕೆ ಮುಂದಾಗಿದೆ. ವಿವಿಧ ರಾಜ್ಯಗಳಲ್ಲಿ ವಿವಿಧ ರೀತಿಯ ಆಹಾರದ ಬಗ್ಗೆಯೂ ಅಲ್ಲಿನ ಜಿಲ್ಲಾ ಚುನಾವಣಾ ಸಮಿತಿಗಳು ದರ ನಿಗದಿ ಪಡಿಸಿವೆ.

ಪಂಜಾಬ್‌ನ ಜಲಂಧರ್‌ ಕ್ಷೇತ್ರದಲ್ಲಿ ಸಾರ್ವಜನಿಕ ಸಭೆಗಳು ಹಾಗೂ ಪ್ರಚಾರದ ಸಂದರ್ಭದಲ್ಲಿ ಅಭ್ಯರ್ಥಿಗಳು ಜನರಿಗೆ ನೀಡಲಾಗುವ ಆಹಾರಗಳ ಬಗ್ಗೆ ದರ ನಿಗದಿ ಪಡಿಸಲಾಗಿದೆ. ಒಂದು ಕಪ್‌ ಚಹಾಗೆ 15 ರೂ. ಖರ್ಚು ಮಾಡಬಹುದಾಗಿದೆ. ಅದೇ ರೀತಿ ಸಮೋಸಾಗೂ ಕೂಡ ಅಷ್ಟೆ ಹಣ ವ್ಯಯ ಮಾಡಬೇಕು ಎಂದು ತಿಳಿಸಲಾಗಿದೆ.

ಮಧ್ಯಪ್ರದೇಶದ ಮಂಡ್ಲಾ ಲೋಕಸಭಾ ಚುನಾವಣೆಯ ಪ್ರಚಾರದ ಸಂದರ್ಭದಲ್ಲಿ ಒಂದು ಕಪ್‌ ಚಹಾಕ್ಕೆ 7 ರೂ. ಸಮೋಸಾಗೆ 7.50 ರೂ. ಖರ್ಚು ಮಾಡಬೇಕು. ಇವೆರಡನ್ನು ದೇಶದ ಬಹುತೇಕ ಕಡೆಗಳಲ್ಲಿ ಪ್ರಮುಖ ತಿಂಡಿ ಎಂದು ಪರಿಗಣಿಸಲಾಗಿದೆ.

ಸುದ್ದಿ ನಿರಂತರವಾಗಿ ಉಚಿತವೇ ಆಗಿರುವುದು ಹೇಗೆ ಸಾಧ್ಯ? ಅದಕ್ಕೆ ನಿಮ್ಮ ಬೆಂಬಲವೂ ನಿರಂತರವಾಗಿ ಇದ್ದಾಗ ಮಾತ್ರ ಸಾಧ್ಯ. ಚಂದಾದಾರರಾಗಿ – ಆ ಮೂಲಕ ಸತ್ಯ, ನ್ಯಾಯ, ಪ್ರೀತಿ ಮೌಲ್ಯಗಳನ್ನು ಎಲ್ಲರಿಗೂ ಹರಡಲು ಜೊತೆಯಾಗಿ.

18ನೇ ಲೋಕಸಭಾ ಚುನಾವಣೆ ಹತ್ತಿರ ಬರುತ್ತಿರುವಂತೆ ಚುನಾವಣಾ ವೆಚ್ಚ ಮೇಲ್ವಿಚಾರಣ ಪ್ರಕ್ರಿಯೆಯ ಭಾಗವಾಗಿ ಜಿಲ್ಲಾ ಚುನಾವಣಾ ಸಮಿತಿಗಳು ಖರ್ಚು ಮಾಡುವ ಆಹಾರದ ದರವನ್ನು ನಿಗದಿಪಡಿಸಿವೆ. ಅಭ್ಯರ್ಥಿಗಳು ಸೂಚಿಸಿದ ಮಿತಿಯನ್ವಯ ತಮ್ಮ ವೆಚ್ಚಗಳನ್ನು ನಿರ್ವಹಿಸಬೇಕು.

ಪ್ರಸ್ತುತ ಹಣದುಬ್ಬರ ಮಟ್ಟದೊಂದಿಗೆ ಹೋಲಿಸಿದರೆ ನಿಗದಿಪಡಿಸಲಾಗಿರುವ ದರಗಳು ತಾಳೆಯಾಗುತ್ತಿಲ್ಲ ಎಂದು ಕೂಡ ಸಾಮಾಜಿಕ ಮಾಧ್ಯಮಗಳಲ್ಲಿ ಚರ್ಚೆಯಾಗುತ್ತಿವೆ.

ಆಂಧ್ರ ಪ್ರದೇಶವು ಒಳಗೊಂಡು ಬಹುತೇಕ ರಾಜ್ಯಗಳಲ್ಲಿ ಅಭ್ಯರ್ಥಿಗಳು ಲೋಕಸಭಾ ಚುನಾವಣೆಗೆ  95 ಲಕ್ಷ ರೂ. ವೆಚ್ಚ ಮಾಡಬೇಕೆಂದು ನಿಗದಿಪಡಿಸಲಾಗಿದೆ. ಆದಾಗ್ಯೂ ಅರುಣಾಚಲ ಪ್ರದೇಶ, ಗೋವಾ ಮತ್ತು ಸಿಕ್ಕಿಂ ಪ್ರದೇಶಗಳಲ್ಲಿ ಚೂರು ತಗ್ಗಿಸಲಾಗಿದ್ದು, ಒಬ್ಬ ಅಭ್ಯರ್ಥಿಯು 75 ಲಕ್ಷ ರೂ. ಖರ್ಚು ಮಾಡಬಹುದಾಗಿದೆ. ಅದೇ ರೀತಿ ಕೇಂದ್ರಾಡಳಿತ ಪ್ರದೇಶಗಳಲ್ಲಿ ವೆಚ್ಚದ ಮಿತಿಯ ಶ್ರೇಣಿಗಳು ಒಬ್ಬ ಅಭ್ಯರ್ಥಿಗೆ ಪ್ರಾದೇಶಿಕ ಅನ್ವಯದಂತೆ 75 ಲಕ್ಷ ರೂ.ನಿಂದ 95 ಲಕ್ಷ ರೂ. ತನಕ ಇದೆ.

ಈ ಸುದ್ದಿ ಓದಿದ್ದೀರಾ? ಈ ದಿನ ಸಂಪಾದಕೀಯ | ಪೌರತ್ವ ಪ್ರಮಾಣಪತ್ರ ಪೂಜಾರಿ ಕೊಡುವುದಾದರೆ ಪ್ರಜಾಪ್ರಭುತ್ವಕ್ಕೆ ಅರ್ಥವಿದೆಯೇ?

ಪಂಜಾಬ್‌ನ ಜಲಂಧರ್‌ನಲ್ಲಿ ಚೋಲೆ ಭತುರೆ ಖಾದ್ಯಕ್ಕೆ 40 ರೂ. ದರ ನಿಗದಿಪಡಿಸಿದ್ದರೆ, ಮಟನ್‌, ಚಿಕನ್‌ಗೆ ತಲಾ ಒಂದು ಕೆಜಿಗೆ ಕ್ರಮವಾಗಿ 250 ರೂ. ಹಾಗೂ 500 ರೂ. ನಿಗದಿಪಡಿಸಲಾಗಿದೆ. ಮೆನುವಿನಲ್ಲಿದ್ದಂತೆ ದೋಡಾ ಖಾದ್ಯಕ್ಕೆ 450 ರೂ. ತುಪ್ಪದ ಪಿನ್ನಿಗೆ 300 ರೂ. ನಿಗದಿಪಡಿಸಲಾಗಿದೆ. ಒಂದು ಲೋಟ ಲಸ್ಸಿ ಹಾಗೂ ನಿಂಬೆ ಹಣ್ಣಿನ ಪಾನಕಕ್ಕೆ 20 ರೂ. ಹಾಗೂ 15ರೂ. ನಿಗದಿಪಡಿಸಲಾಗಿದೆ.

ಮಧ್ಯ ಪ್ರದೇಶದ ಬಾಲಾಗಾಟ್‌ನಲ್ಲಿ ಜಿಲ್ಲಾ ಚುನಾವಣಾ ಸಮಿತಿ ನಿಗದಿಪಡಿಸಿದಂತೆ 5 ರೂ. ಇದೆ. ಹಾಗೆಯೇ ಸಮೋಸಾ 10 ರೂ., ಇಡ್ಲಿ ಸಾಂಬಾರ್‌ ವಡಾ ಹಾಗೂ ಪೋಹಾ ಜಿಲೇಬಿ ಬೆಲೆ 20 ರೂ. ಇದೆ. ಉಪ್ಪಿಟ್ಟು ಮತ್ತು ದೋಸೆಗೆ 30 ರೂ. ನಿಗದಿಪಡಿಸಲಾಗಿದೆ.

ಗಲಭೆ ಪೀಡಿತ ಮಣಿಪುರದಲ್ಲಿ ಟೀ, ಸಮೋಸಾ, ಕಚೋರಿ ಸೇರಿದಂತೆ ಹಲವು ಆಹಾರ ಪದಾರ್ಥಗಳಿಗೆ 10 ರೂ. ದರ ನಿಗದಿಪಡಿಸಲಾಗಿದೆ.

ಮಣಿಪುರದ ತೆಂಗೋಪಾಲ್ ಜಿಲ್ಲೆಯ ಅಭ್ಯರ್ಥಿಗಳು ಬ್ಲ್ಯಾಕ್‌ ಟೀಗೆ 5 ರೂ. ಹಾಲಿನ ಟೀಗೆ 10 ರೂ.,ಅಲ್ಲಿನ ಸ್ಥಳೀಯ ಮಾಂಸಾಹಾರ ಊಟಕ್ಕೆ 300 ರಿಂದ 400 ರೂ. ನಿಗದಿಪಡಿಸಲಾಗಿದೆ.

ತಮಿಳುನಾಡಿನ ಚೆನ್ನೈನಲ್ಲಿನ ಅಭ್ಯರ್ಥಿಗಳು ಟೀ ಬೆಲೆಗೆ 10 ರಿಂದ 15 ರೂ., ಕಾಫಿಗೆ 15ರಿಂದ 20 ರೂ., ಚಿಕನ್‌ ಬಿರಿಯಾನಿ ಊಟಕ್ಕೆ 150 ರೂ. ಖರ್ಚು ಮಾಡಬಹುದಾಗಿದೆ.

ದೆಹಲಿ ಸಮೀಪದ ನೋಯ್ಡಾದ ಅಭ್ಯರ್ಥಿಗಳು ಗೌತಮ್‌ಬುದ್ಧ ನಗರದಲ್ಲಿ ಸಸ್ಯಾಹಾರಿ ಊಟಕ್ಕೆ 100 ರೂ., ಸಮೋಸಾ ಅಥವಾ ಟೀಗೆ 10 ರೂ., ಕಚೋರಿಗೆ 15 ರೂ., ಸ್ಯಾಂಡ್‌ವಿಚ್‌ಗೆ 25 ರೂ., ಹಾಗೆಯೆ ಒಂದು ಕಿಲೋ ಜಿಲೇಬಿಗೆ 90 ರೂ. ವೆಚ್ಚ ಮಾಡಬಹುದು.

ಉತ್ತರ ಗೋವಾದ ಅಭ್ಯರ್ಥಿಗಳಿಗೆ ಸಮೋಸಾ ಹಾಗೂ ಬತಾಡ ವಡೆಗೆ 15 ರೂ., ಟೀಗೆ 15 ರೂ., ಹಾಗೂ ಕಾಫಿಗೆ 20 ರೂ., ನಿಗದಿಪಡಿಸಲಾಗಿದೆ.

ಹರಿಯಾಣದ ಜಿಂದ್‌ ಕ್ಷೇತ್ರದ ಅಭ್ಯರ್ಥಿಗಳು ತಂದೂರಿ ಚಿಕನ್‌ಗೆ 300 ರೂ., ತರಕಾರಿ ಖಾದ್ಯಕ್ಕೆ 130., ಹಾಗೂ ಮಟರ್‌ ಪನೀರ್‌ಗೆ 160 ರೂ. ನಿಗದಿಪಡಿಸಲಾಗಿದೆ.

ಕಾರ್ಯಕರ್ತರು ಹಾಗೂ ಮತದಾರರಿಗೆ ನೀಡುವ ಮದ್ಯಪಾನದ ಬಗ್ಗೆ ದರಪಟ್ಟಿಯಲ್ಲಿ ಉಲ್ಲೇಖವಿಲ್ಲ. ಆದರೆ ವಾಹನಗಳು, ಹೂವುಗಳು ಮುಂತಾದವುಗಳ ಬಗ್ಗೆ ದರವನ್ನು ನಿಗದಿಪಡಿಸಲಾಗಿದೆ. ಇವುಗಳೆಲ್ಲೂ ಆಯಾ ಶ್ರೇಣಿಯ ವಾಹನಗಳು ಹಾಗೂ ಪುಷ್ಪಗಳ ಮೇಲೆ ಅವಲಂಬಿತವಾಗಿರುತ್ತವೆ.

ಉಳಿದುಕೊಳ್ಳುವ ಸ್ಥಳಗಳು, ಬಾಡಿಗೆ ಕಟ್ಟಡಗಳು, ಜಾಹೀರಾತುಗಳು, ಹೋರ್ಡಿಂಗ್‌ಗಳು, ಮತಪತ್ರಗಳು ಮುಂತಾದ ಚುನಾವಣಾ ಸಂಬಂಧಿತ ಖರ್ಚುವೆಚ್ಚಗಳನ್ನು ಕೂಡ ದರದಲ್ಲಿ ನಿಗದಿಪಡಿಸಲಾಗಿದೆ.

ವೆಚ್ಚದ ಬಗ್ಗೆ ಚುನಾವಣಾ ಆಯೋಗವು ನಿಗದಿಗೊಳಿಸಿದ್ದರೂ ಅಭ್ಯರ್ಥಿಗಳು ಮಾತ್ರ ತಮ್ಮ ಇಷ್ಟದಂತೆ ಗೆಲುವನ್ನು ಪಣಕ್ಕಿಟ್ಟು ಖರ್ಚು ಮಾಡುವುದು ಹಿಂದಿನ ಹಲವು ಚುನಾವಣೆಗಳಿಂದ ನಡೆದುಕೊಂಡು ಬಂದಿದೆ.

1951 ಸಾರ್ವಜನಿಕ ಕಾಯ್ದೆಯ ಜನಪ್ರತಿನಿಧಿ ಸೆಕ್ಷನ್ 77(1)ರ ಅನ್ವಯ ಅಭ್ಯರ್ಥಿಗಳು ನಾಮಪತ್ರ ಸಲ್ಲಿಸುವ ದಿನದಿಂದ ಫಲಿತಾಂಶ ಬರುವ ದಿನಾಂಕದವರೆಗೂ ಚುನಾವಣೆಯಲ್ಲಿ ಖರ್ಚುಮಾಡಲಾದ ಲೆಕ್ಕವನ್ನು ಇಡಬೇಕೆಂದು ಹೇಳಲಾಗಿದೆ.

543 ಲೋಕಸಭಾ ಕ್ಷೇತ್ರಗಳಿಗೆ ಏಪ್ರಿಲ್ 19ರಂದು ಆರಂಭವಾಗಿ 7 ಹಂತಗಳಲ್ಲಿ ಚುನಾವಣೆ ನಡೆಯಲಿದ್ದು, ಫಲಿತಾಂಶವು ಜೂ.4 ಪ್ರಕಟಗೊಳ್ಳಲಿದೆ.

ಈ ದಿನ ಡೆಸ್ಕ್
+ posts

ಪೋಸ್ಟ್ ಹಂಚಿಕೊಳ್ಳಿ:

LEAVE A REPLY

Please enter your comment!
Please enter your name here

ಪೋಸ್ಟ್ ಹಂಚಿಕೊಳ್ಳಿ:

ಹೆಚ್ಚು ಓದಿಸಿಕೊಂಡ ಲೇಖನಗಳು

ವಿಡಿಯೋ

ಸುದ್ದಿ ನಿರಂತರವಾಗಿ ಉಚಿತವೇ ಆಗಿರುವುದು ಹೇಗೆ ಸಾಧ್ಯ? ಅದಕ್ಕೆ ನಿಮ್ಮ ಬೆಂಬಲವೂ ನಿರಂತರವಾಗಿ ಇದ್ದಾಗ ಮಾತ್ರ ಸಾಧ್ಯ. ಚಂದಾದಾರರಾಗಿ – ಆ ಮೂಲಕ ಸತ್ಯ, ನ್ಯಾಯ, ಪ್ರೀತಿ ಮೌಲ್ಯಗಳನ್ನು ಎಲ್ಲರಿಗೂ ಹರಡಲು ಜೊತೆಯಾಗಿ.
Related

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ನಕಲಿ ಸುದ್ದಿ ಹರಡಲು ಬಿಜೆಪಿ ಐಟಿ ಸೆಲ್ ಉದ್ಯೋಗಿಗಳಿಗೆ ಮಾಸಿಕ 50 ಸಾವಿರ ರೂ. ವೇತನ!

ಸಿಂಗಾಪುರ ಮೂಲದ ಮಾಧ್ಯಮ ನ್ಯೂಸ್ ಏಷ್ಯಾ ಸಾಕ್ಷ್ಯಚಿತ್ರ (documentary) ಒಂದನ್ನು ಬಿಡುಗಡೆ...

ಯುಪಿಎ ಅವಧಿಗಿಂತ ಬಿಜೆಪಿ ಅವಧಿಯಲ್ಲಿ 86 ಪಟ್ಟು ಹೆಚ್ಚು ಇ.ಡಿ ದಾಳಿ

ಅಕ್ರಮ ಹಣ ವರ್ಗಾವಣೆ ಪ್ರಕರಣಗಳಿಗೆ ಸಂಬಂಧಿಸಿದಂತೆ ಜಾರಿ ನಿರ್ದೇಶನಾಲಯವು (ಇ.ಡಿ) ಯುಪಿಎ...

‘ಮೋದಿ, ಯೋಗಿಗಿಂತ ದೊಡ್ಡವರಿದ್ದಾರೆ ಎನ್ನುವವರು ದೇಶದ್ರೋಹಿ; ಬಿಜೆಪಿ ಅಭ್ಯರ್ಥಿ ಮಹೇಶ್‌ ಶರ್ಮಾ ವಿವಾದಾತ್ಮಕ ಹೇಳಿಕೆ

"ಪ್ರಧಾನಿ ಮೋದಿ-ಸಿಎಂ ಯೋಗಿಯನ್ನು ತಮ್ಮವರು ಎಂದು ಯಾರು ಪರಿಗಣಿಸುವುದಿಲ್ಲವೋ ಅವರು ತಮ್ಮ...

ಲೋಕಸಭಾ ಚುನಾವಣೆ | ಪ್ರಕಾಶ್ ಅಂಬೇಡ್ಕರ್‌ಗೆ ಎಐಎಂಐಎಂ ಬೆಂಬಲ: ಓವೈಸಿ

ಲೋಕಸಭೆ ಚುನಾವಣೆಗೆ ಮಹಾರಾಷ್ಟ್ರದ ಅಕೋಲಾ ಕ್ಷೇತ್ರದಲ್ಲಿ ಕಣಕ್ಕಿಳಿದಿರುವ ವಂಚಿತ್ ಬಹುಜನ ಅಘಾಡಿ...