ಸ್ಟಿಂಗ್ ಆಪರೇಷನ್‌ | ತಾನೇ ತೋಡಿದ ಹಳ್ಳಕ್ಕೆ ಬಿದ್ದರಾ ಕುಮಾರಸ್ವಾಮಿ?

Date:

ಕರ್ನಾಟಕದ ರಾಜಕೀಯ ಅಂಗಳದಲ್ಲಿ ‘ಸ್ಟಿಂಗ್ ಆಪರೇಷನ್’ ಎಂಬ ಶಸ್ತ್ರವನ್ನು ಹಿಡಿದು ಎದುರಾಳಿಗಳನ್ನು ಮಣಿಸಲು ಹೊರಟ ಮಾಜಿ ಮುಖ್ಯಮಂತ್ರಿ ಹೆಚ್.ಡಿ. ಕುಮಾರಸ್ವಾಮಿ, ಇದೀಗ ತಾವೇ ಹೆಣೆದ ಬಲೆಯಲ್ಲಿ ಸಿಲುಕಿ ಸಂಕಷ್ಟಕ್ಕೆ ಸಿಲುಕಿದ್ದಾರೆ. ಬೇರೆಯವರ ವಿರುದ್ಧ ಸಾಕ್ಷಿ ಕಲೆಹಾಕಲು ನಡೆಸಿದ ಈ ಚಾಣಾಕ್ಷ ನಡೆ, ಇದೀಗ ಅವರ ರಾಜಕೀಯ ಭವಿಷ್ಯಕ್ಕೇ ಅತಿ ದೊಡ್ಡ ಮುಳುವಾಗಿ ಪರಿಣಮಿಸಿದೆ.

- Advertisement -

ಎದುರಾಳಿ ನಾಯಕರ ರಹಸ್ಯ ಸಂಭಾಷಣೆ ಹಾಗೂ ಭ್ರಷ್ಟಾಚಾರದ ಸಾಕ್ಷಿಗಳನ್ನು ಬಹಿರಂಗಪಡಿಸಿ ರಾಜಕೀಯವಾಗಿ ಮೇಲುಗೈ ಸಾಧಿಸಲು ಯೋಜನೆ ರೂಪಿಸಲಾಗಿತ್ತು.

ಇನ್ನಷ್ಟು ವಿಶೇಷ ಲೇಖನಗಳಿಗಾಗಿ, ಇಲ್ಲಿ ಕ್ಲಿಕ್ ಮಾಡಿ →

ಹಾಲು, ಮೊಸರು, ದಿನಸಿ ದರ ಏರಿಕೆ ಬೆನ್ನಲ್ಲೇ ಬಸ್...

ಹಾಲು, ಮೊಸರು, ದಿನಸಿ ವಸ್ತುಗಳ ದರ ಹೆಚ್ಚಳದ ಹೊರೆಯ ನಡುವೆ, ಬಸ್ ಪ್ರಯಾಣವೂ ದುಬಾರಿಯಾದರೆ ಬದುಕು ಮತ್ತಷ್ಟು ದುಸ್ತರವಾಗಲಿದೆ. ಕರ್ನಾಟಕದಲ್ಲಿ ದಿನನಿತ್ಯದ ಅಗತ್ಯ ವಸ್ತುಗಳ ಬೆಲೆ ಏರಿಕೆ ಕುರಿತು ಸಾರ್ವಜನಿಕರಲ್ಲಿ ಅಸಮಾಧಾನದ ಹೊಗೆಯಾಡಿದ್ದು,...

ರಾಮನಿಗೆ ₹150 ಕೋಟಿ, ಸೀತೆಗೆ ₹12 ಕೋಟಿ! ಬಿಗ್...

₹4,000 ಕೋಟಿಯ ಬೃಹತ್ ಬಜೆಟ್‌ನ 'ರಾಮಾಯಣ' ಸಿನಿಮಾ ಬಿಡುಗಡೆಗೆ ಸಜ್ಜಾಗಿದೆ. ಈ ಹೊತ್ತಿನಲ್ಲಿ ಚಿತ್ರರಂಗದ ಅದೇ ಹಳೆ ಹಣೆಬರಹವೊಂದು ಚರ್ಚೆಗೆ ಸಿಕ್ಕಿದೆ. ರಾಮನ ಪಾತ್ರಕ್ಕೆ ₹150 ಕೋಟಿ, ರಾವಣನಿಗೆ ₹100 ಕೋಟಿ ಸಂಭಾವನೆ!...

ರಾಮಲೀಲಾ ಮೈದಾನದಲ್ಲಿ ವಿಪಕ್ಷಗಳ ಬಲಪ್ರದರ್ಶನ; ಬೀದಿ ಹೋರಾಟ ಬೇರುಮಟ್ಟದ...

ನವಂಬರ್ 1ರಂದು ದೆಹಲಿಯ ಐತಿಹಾಸಿಕ ರಾಮಲೀಲಾ ಮೈದಾನದಲ್ಲಿ ನಡೆದ ಪ್ರತಿಭಟನಾ ಸಮಾವೇಶವು ಭಾರತೀಯ ರಾಜಕಾರಣದಲ್ಲಿ ಮತ್ತೊಂದು ಮಹತ್ವದ ರಾಜಕೀಯ ಮೈಲಿಗಲ್ಲಾಗಿ ದಾಖಲಾಗಿದೆ. ಚುನಾವಣಾ ಆಕ್ರಮ, ಎಸ್‌ಐಆರ್ ಷಡ್ಯಂತ್ರದ ವಿರುದ್ಧ ಮತ್ತು ಮುಖ್ಯ ಚುನಾವಣಾ...

ಕುಮಾರಸ್ವಾಮಿ ಅವರ ನಿಕಟವರ್ತಿಗಳು ಮತ್ತು ತಂಡದ ಮೂಲಕ ಮುಖಂಡರ ಖಾಸಗಿ ಭೇಟಿ ಹಾಗೂ ಹಣಕಾಸಿನ ವ್ಯವಹಾರಗಳ ಕುರಿತು ರಹಸ್ಯ ಕ್ಯಾಮೆರಾ ಕಾರ್ಯಾಚರಣೆ ನಡೆಸಲಾಯಿತು.

ಪೂರ್ಣ ಪ್ರಮಾಣದ ವಿಡಿಯೋ ಬಹಿರಂಗಗೊಳ್ಳುತ್ತಿದ್ದಂತೆ, ಅದರಲ್ಲಿ ಎದುರಾಳಿಗಳಿಗಿಂತ ಹೆಚ್ಚಾಗಿ ಕುಮಾರಸ್ವಾಮಿ ಅವರ ರಹಸ್ಯ ಮಾತುಕತೆಗಳು, ವ್ಯವಹಾರದ ಆಫರ್‌ಗಳು ಮತ್ತು ಹಿನ್ನೆಲೆ ಸಂಚುಗಳೇ ಮುಂಚೂಣಿಗೆ ಬಂದವು. ಪ್ರಕರಣದ ಗಾಂಭೀರ್ಯವನ್ನು ಪರಿಗಣಿಸಿದ ಸರ್ಕಾರ ಮತ್ತು ತನಿಖಾ ಸಂಸ್ಥೆಗಳು ವಿಡಿಯೋದ ಸತ್ಯಾಸತ್ಯತೆ ತನಿಖೆಗೆ ಆದೇಶಿಸಿದವು. ಇದರಿಂದಾಗಿ ದೂರುದಾರರಾಗಬೇಕಿದ್ದ ಕುಮಾರಸ್ವಾಮಿಯವರೇ ಪ್ರಮುಖ ಆರೋಪಿಯ ಸಾಲಿನಲ್ಲಿ ನಿಲ್ಲುವಂತಾಯಿತು.

ಈ ಹಗರಣ ಬಹಿರಂಗವಾಗುತ್ತಿದ್ದಂತೆ ಸಾಮಾಜಿಕ ಜಾಲತಾಣಗಳಲ್ಲಿ ಸಾರ್ವಜನಿಕರು ಮತ್ತು ರಾಜಕೀಯ ವಿಶ್ಲೇಷಕರಿಂದ ತೀವ್ರ ಆಕ್ರೋಶ ಹಾಗೂ ವಿಮರ್ಶೆಗಳು ವ್ಯಕ್ತವಾಗುತ್ತಿವೆ. 

ಫೇಸ್‌ಬುಕ್‌ನಲ್ಲಿ ಬರೆದುಕೊಂಡಿರುವ ದೊಡ್ಡಪಾಳ್ಯ ನರಸಿಂಹಮೂರ್ತಿ, “ಒಂದೆಡೆ, ‘ರಾಹುಲ್ ಗಾಂಧಿಯನ್ನು ಪ್ರಧಾನಿ ಮಾಡಲು ಪ್ರಜ್ವಲ್ ರೇವಣ್ಣನನ್ನು ಜೈಲಿಗೆ ಹಾಕಿಸಿದ್ದಾರೆ’ ಅಂತ ಕುಮಾರಸ್ವಾಮಿ ಹೇಳುತ್ತಿದ್ದಾರೆ. ಇನ್ನೊಂದು ಕಡೆ ಪ್ರಜ್ವಲ್‌ನನ್ನು ಹಿಡಿದು ಜೈಲಿಗೆ ಹಾಕಿದ ಪೊಲೀಸ್ ಅಧಿಕಾರಿಗಳಿಗೆ ಅಮಿತ್ ಶಾ ನೇತೃತ್ವದ ಕೇಂದ್ರ ಗೃಹ ಇಲಾಖೆ ಪ್ರಶಸ್ತಿ ಕೊಟ್ಟಿದೆ. ಅಂದರೆ, ರಾಹುಲ್ ಗಾಂಧಿಯನ್ನು ಪ್ರಧಾನಿ ಮಾಡುವ ಸಂಚಿನಲ್ಲಿ ಅಮಿತ್ ಶಾ ಕೂಡ ಭಾಗಿಯಾಗಿದ್ದಾರಾ? ಮಾನ್ಯ ಕುಮಾರಸ್ವಾಮಿಯವರು ಸ್ಪಷ್ಟಪಡಿಸಿದರೆ ಒಳ್ಳೆಯದು” ಎಂದು ಪೋಸ್ಟ್ ಮಾಡಿದ್ದಾರೆ. 

ದೊಡ್ಡಪಾಳ್ಯ ನರಸಿಂಹಮೂರ್ತಿ ಅವರ ಪೋಸ್ಟ್‌ನ ಕಾಮೆಂಟ್‌ನಲ್ಲಿ ಹಿರಿಯ ಚಿಂತಕ ಮತ್ತು ಪತ್ರಕರ್ತ ದಿನೇಶ್ ಅಮೀನ್ ಮಟ್ಟು ಅವರು ಕುಮಾರಸ್ವಾಮಿ ಅವರನ್ನು ಉದ್ದೇಶಿಸಿ, “ಸುಮ್ಮನೆ ಆ ಬಡಪಾಯಿಯನ್ನು ಕಾಡಬೇಡಿ, ಅವರು ಪ್ರತಿಬಾರಿ ಬಾಯಿ ತೆರೆದಾಗಲೂ ತಮ್ಮದೇ ಬೂಟನ್ನು ಒಳಗೆ ತುರುಕಿಕೊಳ್ಳುತ್ತಾರೆ” ಎಂದು ಕಟುವಾಗಿ ವ್ಯಂಗ್ಯವಾಡಿದ್ದಾರೆ. 

“ಕೇಂದ್ರದಲ್ಲಿ ಖಾತೆ, ರಾಜ್ಯದಲ್ಲಿ ಕ್ಯಾತೆ. ರಾಜ್ಯದ ನಾಯಕರ ವಿರುದ್ಧ ರಾಜಕೀಯ ಸಮರ ನಡೆಸುವುದೇ ಸಚಿವರ ಪ್ರಮುಖ ಆದ್ಯತೆಯಾಗಿ ಕಾಣಿಸಿಕೊಂಡರೆ ಅದನ್ನ ಹೇಗೆ ಅರ್ಥ ಮಾಡಿಕೊಳ್ಳಬೇಕು” ಎಂದು ರವಿ ಗೌರ ಅವರು ಈ ಬಗ್ಗೆ ಲೇಖನವನ್ನೇ ಬರೆದಿದ್ದಾರೆ. 

ಫೇಸ್‌ಬುಕ್‌ ಬಳಕೆದಾರರಾದ ಸತೀಶ್‌ ಕುಮಾರ್‌ ಎಂಬುವವರು “ಸಾಮಾಜಿಕ ನ್ಯಾಯದ ಹೋರಾಟಗಾರ ಸಿದ್ದರಾಮಯ್ಯ ಅವರ ವಿರುದ್ಧದ ಸ್ಟಿಂಗ್ ಆಪರೇಷನ್ ಹಿಂದಿನ ಉದ್ದೇಶವೇನು?

ಸಾಮಾಜಿಕ ನ್ಯಾಯದ ಧ್ವನಿಯನ್ನು ಮೌನಗೊಳಿಸಲು ಸಾಧ್ಯವೇ? ಜನರ ಮನಸ್ಸಿನಲ್ಲಿ ನೆಲೆಸಿರುವ ನಾಯಕನನ್ನು ಆರೋಪಗಳ ಮೂಲಕ ಕುಗ್ಗಿಸಲು ಸಾಧ್ಯವೇ?

ಕರ್ನಾಟಕದ ರಾಜಕೀಯ ಇತಿಹಾಸದಲ್ಲಿ ಸಿದ್ದರಾಮಯ್ಯ ಅವರು ತಮ್ಮದೇ ಆದ ವಿಶಿಷ್ಟ ಸ್ಥಾನವನ್ನು ಗಳಿಸಿರುವ ನಾಯಕರು. ಅವರ ರಾಜಕೀಯ ಪಯಣ ಕೇವಲ ಅಧಿಕಾರದ ಪಯಣವಲ್ಲ; ಅದು ಸಾಮಾಜಿಕ ನ್ಯಾಯ, ಸಮಾನ ಅವಕಾಶ, ಬಡವರ ಬದುಕು ಮತ್ತು ಶೋಷಿತ ಸಮುದಾಯಗಳ ಹಕ್ಕುಗಳ ಪರವಾಗಿ ನಡೆದ ದೀರ್ಘ ಹೋರಾಟದ ಪಯಣವಾಗಿದೆ.

ಸಮಾಜದ ಕಟ್ಟಕಡೆಯ ವ್ಯಕ್ತಿಗೂ ಸರ್ಕಾರದ ಸೌಲಭ್ಯ ತಲುಪಬೇಕು, ಹಿಂದುಳಿದ ವರ್ಗಗಳಿಗೂ ಗೌರವಯುತ ಬದುಕು ಸಿಗಬೇಕು, ಬಡವರಿಗೂ ಶಿಕ್ಷಣ ಮತ್ತು ಆರ್ಥಿಕ ಪ್ರಗತಿಯ ಅವಕಾಶ ದೊರೆಯಬೇಕು ಎಂಬ ಆಶಯಗಳು ಅವರ ರಾಜಕೀಯ ಚರ್ಚೆಯ ಪ್ರಮುಖ ಭಾಗವಾಗಿವೆ. ಅನ್ನಭಾಗ್ಯ, ಕ್ಷೀರಭಾಗ್ಯ, ಶೈಕ್ಷಣಿಕ ನೆರವು ಮತ್ತು ಸಾಮಾಜಿಕ ಕಲ್ಯಾಣದಂತಹ ಯೋಜನೆಗಳ ಮೂಲಕ ಜನರ ಬದುಕಿನಲ್ಲಿ ಬದಲಾವಣೆ ತರಬೇಕೆಂಬ ಪ್ರಯತ್ನಗಳು ಅವರ ಆಡಳಿತದ ಕುರಿತು ನಡೆಯುವ ಚರ್ಚೆಯಲ್ಲಿ ಪ್ರಮುಖ ಸ್ಥಾನ ಪಡೆದಿವೆ.

ಇಂತಹ ಸಾಮಾಜಿಕ ನ್ಯಾಯದ ರಾಜಕಾರಣವನ್ನು ಪ್ರತಿನಿಧಿಸುವ ಹಿರಿಯ ನಾಯಕನ ವಿರುದ್ಧ ಸ್ಟಿಂಗ್ ಆಪರೇಷನ್ ಹೆಸರಿನಲ್ಲಿ ಆರೋಪಗಳು ಕೇಳಿಬಂದಾಗ, ಜನರು ಕೇಳಬೇಕಾದ ಪ್ರಶ್ನೆ ಒಂದೇ — ಇದು ನಿಜವಾಗಿಯೂ ಸತ್ಯವನ್ನು ಹೊರತರುವ ಪ್ರಯತ್ನವೇ, ಅಥವಾ ರಾಜಕೀಯವಾಗಿ ಒಬ್ಬ ನಾಯಕನ ವರ್ಚಸ್ಸಿಗೆ ಧಕ್ಕೆ ತರುವ ಪ್ರಯತ್ನವೇ?

ಸ್ಟಿಂಗ್ ಆಪರೇಷನ್ ಎಂಬ ಪದವೇ ಒಂದು ಆರೋಪವನ್ನು ಸತ್ಯವೆಂದು ಸಾಬೀತುಪಡಿಸುವುದಿಲ್ಲ. ಯಾವುದೇ ವಿಡಿಯೊ, ಸಂಭಾಷಣೆ ಅಥವಾ ಆರೋಪವನ್ನು ಅದರ ಸಂಪೂರ್ಣ ಹಿನ್ನೆಲೆ, ವಿಶ್ವಾಸಾರ್ಹತೆ ಮತ್ತು ಸಾಕ್ಷ್ಯಗಳ ಆಧಾರದ ಮೇಲೆ ಪರಿಶೀಲಿಸಬೇಕು. ಆರೋಪ ಮಾಡಿದವರು ತಮ್ಮ ಬಳಿ ಇರುವ ಸಾಕ್ಷ್ಯಗಳನ್ನು ಮುಂದಿಡಬೇಕು; ಸಂಬಂಧಪಟ್ಟವರಿಗೂ ತಮ್ಮ ಸ್ಪಷ್ಟನೆ ನೀಡಲು ಅವಕಾಶ ಇರಬೇಕು. ಸತ್ಯಾಸತ್ಯತೆ ನಿರ್ಧಾರವಾಗುವ ಮೊದಲು ಯಾರನ್ನೂ ಅಪರಾಧಿ ಎಂದು ಘೋಷಿಸುವುದು ನ್ಯಾಯವಲ್ಲ.

ಸಿದ್ದರಾಮಯ್ಯ ಅವರನ್ನು ವಿರೋಧಿಸುವ ರಾಜಕೀಯ ಪಕ್ಷಗಳಿಗೆ ಮತ್ತು ವ್ಯಕ್ತಿಗಳಿಗೆ ತಮ್ಮ ಅಭಿಪ್ರಾಯ ವ್ಯಕ್ತಪಡಿಸುವ ಹಕ್ಕಿದೆ. ಆದರೆ ರಾಜಕೀಯ ಭಿನ್ನಾಭಿಪ್ರಾಯಗಳು ವೈಯಕ್ತಿಕ ದ್ವೇಷಕ್ಕೆ ತಿರುಗಬಾರದು. ಸಾಮಾಜಿಕ ನ್ಯಾಯದ ಪರವಾಗಿ ಮಾತನಾಡುವ ನಾಯಕನನ್ನು ಟೀಕಿಸುವುದಾದರೆ, ಅವರ ನೀತಿಗಳನ್ನು ಪ್ರಶ್ನಿಸಿ, ಆಡಳಿತದ ಲೋಪಗಳನ್ನು ಸಾಕ್ಷ್ಯಗಳೊಂದಿಗೆ ಚರ್ಚಿಸಲಿ. ಆದರೆ ಯಾವುದೇ ಆರೋಪವನ್ನು ಸತ್ಯವೆಂದು ಬಿಂಬಿಸುವ ಮೊದಲು ಅದರ ಹಿಂದೆ ಇರುವ ವಾಸ್ತವಾಂಶಗಳನ್ನು ಜನರ ಮುಂದೆ ಇಡಲಿ.

ಸಿದ್ದರಾಮಯ್ಯ ಅವರ ಪರವಾಗಿ ನಿಲ್ಲುವುದು ಎಂದರೆ ಪ್ರತಿಯೊಂದು ಆರೋಪವನ್ನೂ ಪರಿಶೀಲನೆಯಿಲ್ಲದೆ ತಳ್ಳಿಹಾಕುವುದಲ್ಲ; ಸತ್ಯವನ್ನು ತಿಳಿಯುವ ಹಕ್ಕು, ನ್ಯಾಯಯುತ ತನಿಖೆ ಮತ್ತು ಸಾಕ್ಷ್ಯಾಧಾರಿತ ತೀರ್ಮಾನವನ್ನು ಒತ್ತಾಯಿಸುವುದಾಗಿದೆ.

ನಾಯಕರನ್ನು ಅವರ ರಾಜಕೀಯ ನಿಲುವುಗಳ ಆಧಾರದಲ್ಲಿ ಪ್ರಶ್ನಿಸಬಹುದು. ಆದರೆ ಅವರ ದೀರ್ಘಕಾಲದ ಸಾರ್ವಜನಿಕ ಬದುಕು, ಸಾಮಾಜಿಕ ನ್ಯಾಯದ ಬದ್ಧತೆ ಮತ್ತು ಜನರಿಗಾಗಿ ಕೈಗೊಂಡ ಪ್ರಯತ್ನಗಳನ್ನು ಕಡೆಗಣಿಸಿ, ಕೇವಲ ಒಂದು ಆರೋಪದ ಆಧಾರದ ಮೇಲೆ ಅವರ ಸಂಪೂರ್ಣ ವ್ಯಕ್ತಿತ್ವವನ್ನು ನಿರ್ಧರಿಸುವುದು ಸರಿಯಲ್ಲ.

ಜನರು ಇಂದು ಭಾವೋದ್ವೇಗಕ್ಕಿಂತ ವಿವೇಚನೆಗೆ, ವದಂತಿಗಳಿಗಿಂತ ವಾಸ್ತವಾಂಶಗಳಿಗೆ ಮತ್ತು ರಾಜಕೀಯ ದ್ವೇಷಕ್ಕಿಂತ ನ್ಯಾಯಕ್ಕೆ ಆದ್ಯತೆ ನೀಡಬೇಕಿದೆ. ಸತ್ಯವೇ ಅಂತಿಮವಾಗಿ ಗೆಲ್ಲಬೇಕು; ಯಾರೇ ಆಗಿರಲಿ, ತಪ್ಪು ಮಾಡಿದರೆ ಕಾನೂನಿನ ಪ್ರಕಾರ ಹೊಣೆಗಾರರಾಗಬೇಕು, ಆರೋಪ ಸಾಬೀತಾಗದಿದ್ದರೆ ಅನ್ಯಾಯದ ತೀರ್ಪಿಗೆ ಒಳಗಾಗಬಾರದು.

ಸಾಮಾಜಿಕ ನ್ಯಾಯದ ಹೋರಾಟವನ್ನು ಒಂದು ಆರೋಪದಿಂದ ಅಳೆಯಲಾಗದು. ಸತ್ಯವನ್ನು ಸಾಕ್ಷ್ಯಗಳು ನಿರ್ಧರಿಸಲಿ, ನಾಯಕನ ಮೌಲ್ಯವನ್ನು ಅವರ ಕಾರ್ಯಗಳು ನಿರ್ಧರಿಸಲಿ, ಅಂತಿಮ ತೀರ್ಪನ್ನು ನ್ಯಾಯ ನಿರ್ಧರಿಸಲಿ.

ಇದೇ ಪ್ರಜಾಪ್ರಭುತ್ವದ ಸೌಂದರ್ಯ. ಇದೇ ನ್ಯಾಯದ ಆಶಯ. ಇದೇ ಜನರ ನಿರೀಕ್ಷೆ.” ಈ ರೀತಿಯಲ್ಲಿ ಕಾಮೆಂಟ್‌ ಮಾಡಿದ್ದಾರೆ. 

ಬೇರೆಯವರನ್ನು ಬೀಳಿಸಲು ಹೆಣೆದ ಸಂಚಿನಲ್ಲಿ ತಾವೇ ಸಿಲುಕಿಕೊಂಡ ಕುಮಾರಸ್ವಾಮಿ ಅವರ ನಡೆಯನ್ನು ಸಾಮಾನ್ಯ ಜನರು “ಕುಲಗೆಟ್ಟ ತಂತ್ರಕ್ಕೆ ಸಿಕ್ಕ ತಕ್ಕ ಶಾಸ್ತಿ” ಎಂದು ಪ್ರಿಯಾಂಕ್‌ ಖರ್ಗೆ ಹೆಸರಿನ ಅಭಿಮಾನಿ ಪೇಜ್‌ನಲ್ಲಿ ವೈರಲ್‌ ಆಗುತ್ತಿದೆ. 

ಶಿವರಾಜು ಸಿ ಎಂಬುವವರು “ಇವರಿಗೆ ಮಾಡೋದಕ್ಕೆ ಏನು ಕೆಲಸ ಇಲ್ವಾ. ಕೇಂದ್ರದ ಮಂತ್ರಿಯಾಗಿದ್ದಾರೆ. ಅಮೌಂಟ್ ಗೆ ಕೆಲಸವನ್ನು ಬಿಟ್ಟು ನಮ್ಮ ರಾಜ್ಯದ ಬಗ್ಗೆ ಅಷ್ಟೊಂದು ತಲೆಕೆಡಿಸಿಕೊಂಡು. ಬೆಳಗ್ಗೆ ಎದ್ರೆ ಸಾಕು. ಸೋಶಿಯಲ್ ಮೀಡಿಯಾದಲ್ಲಿ ಇವರದೇ ಆಗೋಯ್ತು. ಏನ್ ಕರ್ಮ ರಿ ನಮ್ದು” ಎಂದು ಕುಮಾರಸ್ವಾಮಿ ಕೇಂದ್ರ ಮಂತ್ರಿ ಆಗಿ ಅವರು ನಡೆದುಕೊಳ್ಳುತ್ತಿರುವ ನಡೆ ಬಗ್ಗೆ ಬೇಸರ ವ್ಯಕ್ತಪಡಿಸಿದ್ದಾರೆ. 

ಹಾಗೇಯೇ ಕೇಶವಮೂರ್ತಿ ಎಂಬುವವರು “ಮೊದಲು ಎಚ್ ಡಿ ಕುಮಾರಸ್ವಾಮಿಯವರನ್ನು ಬಂಧಿಸಿ ಜೈಲಿಗೆ ಹಾಕಿ ಬ್ರೈನ್ ಮ್ಯಾಪಿಂಗ್ ಮಾಡಿಸಿದರೆ ನಿಜವಾದ ಸತ್ಯ ಹೊರಬರುತ್ತದೆ ಇದನ್ನು ನಾನು ಅನೇಕ ಬಾರಿ ಫೇಸ್ಬುಕ್ಕು ವಾಟ್ಸಾಪ್ನಲ್ಲಿ ಹಾಕಿರುತ್ತೇನೆ ಮೀಡಿಯಾದವರು ಇದನ್ನು ಯಾರು ಗಮನಿಸುತ್ತಿಲ್ ಸ್ವತಹಕುಮಾರ್ ಸ್ವಾಮಿ ಅವರೇ ನಾಚಿಕೆ ಪಟ್ಟು ಕೊಳ್ಳುತ್ತಿದ್ದಾರೆ ಸಿಂಗ್ ಹಿಂದೆ ನನ್ನ ಕೈವಾಡವಿದೆ ಎಂದು ದೇಶಕ್ಕೆ ರಾಜ್ಯಕ್ಕೆ ಗೊತ್ತಾದರೆ ಜನರು ನನ್ನನ್ನು ಸುಮ್ಮನೆ ಬಿಡುವುದಿಲ್ಲ ರಾಜಕೀಯವಾಗಿ ನನ್ನನ್ನು ರಾಜಕಾರಣಿಗಳು ಬಲಿ ತೆಗೆದುಕೊಳ್ಳುತ್ತಾರೆ ಎಂದು ಕುಮಾರಸ್ವಾಮಿಯವರಿಗೆ ಭಯವಾಗುತ್ತಿದೆ ಈಗಲೂ ಕುಮಾರಸ್ವಾಮಿಯವರು ಮನಸ್ಸು ಮಾಡಿದರೆ ಈ ಕೇಸಿನಿಂದ ಹೊರಗೆ ಬರಬಹುದು ಹೇಗೆಂದರೆ ಮಾನ್ಯ ಸಿದ್ದರಾಮಯ್ಯನವರಲ್ಲಿ ಮತ್ತು ಕಾಂಗ್ರೆಸ್ ಪಕ್ಷದವರಲ್ಲಿ ಕ್ಷಮೆಯನ್ನು ಯಾಚಿಸಿದರೆ ಸಾಕು ಜೈಲುವಾಸ ಬಂದಿಸುವುದು ಬ್ರೈನ್ ಮ್ಯಾಪಿಂಗ್ ಇತರೆ ಅಪರಾಧಿ ಕೃತ್ಯಗಳಿಂದ ಪರಾಗಬಹುದು ಎಚ್ ಡಿ ಕುಮಾರಸ್ವಾಮಿ ಅವರು ಇಷ್ಟು ನನ್ನ ಸಲಹೆ” ಎಂದು ಕುಮಾರಸ್ವಾಮಿ ಅವರಿಗೆ ಸಲಹೆಯನ್ನೂ ಕೊಟ್ಟಿದ್ದಾರೆ. 

ರಾಜಕೀಯ ಲಾಭಕ್ಕಾಗಿ ಹಿಂಬಾಗಿಲ ತಂತ್ರಗಳನ್ನು ಬಳಸುವುದು ಒಬ್ಬ ಮಾಜಿ ಮುಖ್ಯಮಂತ್ರಿಯ ಘನತೆಗೆ ಶೋಭೆಯಲ್ಲ. ಈ ಘಟನೆಯಿಂದಾಗಿ ಸಾರ್ವಜನಿಕರಲ್ಲಿ ಅವರ ಮೇಲಿದ್ದ ಕನಿಷ್ಠ ವಿಶ್ವಾಸವೂ ಇಲ್ಲದಂತಾಗಿದೆ ಎಂಬ ಕಾಮೆಂಟ್‌ಗಳೇ ಹೆಚ್ಚಾಗಿ ಕಾಣತೊಡಗಿದೆ. 

ಯಾವುದೇ ಸ್ಪಷ್ಟ ಮುನ್ನೆಚ್ಚರಿಕೆ ಇಲ್ಲದೆ, ಎದುರಾಳಿಗಳನ್ನು ಮಟ್ಟಹಾಕುವ ಆತುರದಲ್ಲಿ ಸ್ವತಃ ತಮ್ಮದೇ ರಾಜಕೀಯ ನೆಲೆಯನ್ನು ಕುಸಿಯುವಂತೆ ಮಾಡಿಕೊಂಡಿದ್ದಾರೆ ಎಂಬ ವಿಮರ್ಶೆಗಳು ಸಾಮಾಜಿಕ ಜಾಲತಾಣಗಳಲ್ಲಿ ವ್ಯಾಪಕವಾಗಿ ಹರಿದಾಡುತ್ತಿವೆ. “ಹಿಡಿಯಲು ಹೋದದ್ದು ಹಾವನ್ನು, ಕಚ್ಚಿಸಿಕೊಂಡಿದ್ದು ತಾವೇ” ಎಂಬಂತೆ ಕುಮಾರಸ್ವಾಮಿ ಅವರ ರಾಜಕೀಯ ತಂತ್ರಗಾರಿಕೆಯನ್ನು ಲೇವಡಿ ಮಾಡುವ ರೀತಿಯಲ್ಲಿ ಸಾವಿರಾರು ಮೀಮ್ಸ್‌ಗಳು ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗುತ್ತಿವೆ.

ಸ್ಟಿಂಗ್ ಆಪರೇಷನ್‌ಗಳನ್ನು ರಾಜಕೀಯ ಅಸ್ತ್ರವಾಗಿ ಬಳಸುವುದು ಹೊಸದೇನಲ್ಲವಾದರೂ, ಸೂಕ್ತ ಮುನ್ನೆಚ್ಚರಿಕೆ ಹಾಗೂ ನಿಖರತೆ ಇಲ್ಲದಿದ್ದರೆ ಅದು ಹೇಗೆ ತಲೆಬುಡ ಬುಡಮೇಲು ಮಾಡಬಲ್ಲದು ಎಂಬುದಕ್ಕೆ ಈ ಘಟನೆ ಅತ್ಯುತ್ತಮ ಉದಾಹರಣೆ.

ಮಾಜಿ ಮುಖ್ಯಮಂತ್ರಿಯಾಗಿ ಜವಾಬ್ದಾರಿಯುತ ನಾಯಕತ್ವ ತೋರಬೇಕಿದ್ದ ಕುಮಾರಸ್ವಾಮಿ, ಈ ರೀತಿಯ ಹಿಂಬಾಗಿಲ ಕಾರ್ಯಾಚರಣೆಗೆಳಲ್ಲಿ ಭಾಗಿಯಾಗಿರುವುದು ಅವರ ರಾಜಕೀಯ ಮುಖವಾಡವನ್ನು ಕಳಚಿಹಾಕಿದೆ. ಸಾರ್ವಜನಿಕ ವಲಯದಲ್ಲಿ ಹಾಗೂ ಸೋಷಿಯಲ್ ಮೀಡಿಯಾದಲ್ಲಿ ವ್ಯಕ್ತವಾಗುತ್ತಿರುವ ಆಕ್ರೋಶವನ್ನು ಗಮನಿಸಿದರೆ, ಈ ಹಗರಣವು ಅವರ ಮುಂದಿನ ರಾಜಕೀಯ ಭವಿಷ್ಯಕ್ಕೆ ದೊಡ್ಡ ಹಿನ್ನಡೆಯನ್ನುಂಟು ಮಾಡುವುದರಲ್ಲಿ ಯಾವುದೇ ಅನುಮಾನವಿಲ್ಲ.

eedina
ಈ ದಿನ ಡೆಸ್ಕ್‌
Website | + posts

<p><iframe src="https://www.youtube.com/embed/8qwx4L0lKFQ?autoplay=1&mute=1&loop=1&playlist=8qwx4L0lKFQ&controls=0&modestbranding=1&showinfo=0" width="560" height="315" frameborder="0" allowfullscreen="allowfullscreen"></iframe></p>

ಪೋಸ್ಟ್ ಹಂಚಿಕೊಳ್ಳಿ:

ಪೋಸ್ಟ್ ಹಂಚಿಕೊಳ್ಳಿ:

ಈ ಹೊತ್ತಿನ ಪ್ರಮುಖ ಸುದ್ದಿ

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ಸ್ಥಳೀಯ ಸಂಸ್ಥೆ ಚುನಾವಣೆಗೆ ಹಳೆಯ ಮತದಾರರ ಪಟ್ಟಿ ಪರಿಗಣನೆ ಸಾಧ್ಯತೆ: ಈಶ್ವರ್ ಖಂಡ್ರೆ

ಮುಂಬರುವ ಜಿಲ್ಲಾ ಹಾಗೂ ತಾಲೂಕು ಪಂಚಾಯತ್‌ ಚುನಾವಣೆಗಳನ್ನು ಹೊಸ ಎಸ್‌ಐಆರ್‌ (SIR)...

ಕುತ್ತಿಗೆಗೆ ಚಾಕು ಹಿಡಿದು ರಸ್ತೆಯಲ್ಲಿ ಎಳೆದಾಡಿದ; ಚಿನ್ನದ ಸರಕ್ಕಾಗಿ ಫೆವಿಕ್ವಿಕ್‌ನಿಂದ ಕೈ ಅಂಟಿಸಿದ ಕಿರಾತಕ!

ರಾಜಧಾನಿ ಬೆಂಗಳೂರಿನಲ್ಲಿ ಹಾಡಹಗಲೇ ಚಿನ್ನದ ಸರ ಕಳವು ಮಾಡಲು ಯತ್ನಿಸಿದ ವ್ಯಕ್ತಿಯೊಬ್ಬ...

ಒಮಾನ್ ಕರಾವಳಿಯಲ್ಲಿ ಭಾರತದ ಹಡಗಿನ ಮೇಲೆ ವೈಮಾನಿಕ ದಾಳಿ: ನಾವಿಕ ಬಲಿ, 13 ಮಂದಿ ರಕ್ಷಣೆ!

ಒಮಾನ್ ಕರಾವಳಿಯ ಸಮುದ್ರ ಮಾರ್ಗದಲ್ಲಿ ಸಂಚರಿಸುತ್ತಿದ್ದ ಭಾರತದ ಸರಕು ದೋಣಿಯ ಮೇಲೆ...