ಕಳೆಪೆ-ಕಲಬೆರಕೆ: 20 ಲಕ್ಷ ರೂ. ಮೌಲ್ಯದ ‘ಪತಂಜಲಿ’ ತುಪ್ಪ ಜಪ್ತಿ!

Date:

ಮಹಾರಾಷ್ಟ್ರದಲ್ಲಿ ಹಬ್ಬದ ಋತುವಿನ ಸಂದರ್ಭದಲ್ಲಿ ಕಳಪೆ ಮತ್ತು ಕಲಬೆರಕೆ ಆಹಾರ ಪದಾರ್ಥಗಳ ಮಾರಾಟ ತಡೆಯಲು ‘ಆಹಾರ ಮತ್ತು ಔಷಧ ನಿಯಂತ್ರಣ ಮಂಡಳಿ’ (ಎಫ್‌ಡಿಎ) ಬೃಹತ್ ಕಾರ್ಯಾಚರಣೆ ನಡೆಸಿದೆ. ಈ ವಿಶೇಷ ಕಾರ್ಯಾಚರಣೆಯಲ್ಲಿ ರಾಜ್ಯದಾದ್ಯಂತ ಒಟ್ಟು 114 ಸಂಸ್ಥೆಗಳಿಂದ ಅಂದಾಜು 9.01 ಕೋಟಿ ರೂಪಾಯಿ ಮೌಲ್ಯದ 3.53 ಲಕ್ಷ ಕೆ.ಜಿ ಆಹಾರ ಪದಾರ್ಥಗಳನ್ನು ವಶಪಡಿಸಿಕೊಳ್ಳಲಾಗಿದೆ. ಆಹಾರ ಭದ್ರತೆ ಮತ್ತು ನೈರ್ಮಲ್ಯ ನಿಯಮಗಳನ್ನು ತೀವ್ರವಾಗಿ ಉಲ್ಲಂಘಿಸಿದ್ದಕ್ಕಾಗಿ 19 ಆಹಾರ ಉದ್ದಿಮೆಗಳ ಪರವಾನಗಿ ಮತ್ತು ನೋಂದಣಿಯನ್ನು ಅಮಾನತುಗೊಳಿಸಲಾಗಿದೆ.

- Advertisement -

ಈ ಕಾರ್ಯಾಚರಣೆಯಲ್ಲಿ, ಛತ್ರಪತಿ ಸಂಭಾಜಿನಗರದ ಸುಂದರವಾಡಿಯ ಮೂಲದ ‘ದಿವ್ಯಾ ಮಹಾವಿತಾರಕ್’ ಎಂಬ ಕಂಪನಿಯ ಸೂಪರ್ ಡಿಸ್ಟ್ರಿಬ್ಯೂಟರ್‌ನಿಂದ ಪತಂಜಲಿ ಕಂಪನಿ (ಬ್ರಾಂಡ್‌)ನ 20.20 ಲಕ್ಷ ರೂಪಾಯಿ ಮೌಲ್ಯದ 2,279.7 ಲೀಟರ್ ಹಸುವಿನ ತುಪ್ಪವನ್ನು ಎಫ್‌ಡಿಎ ಅಧಿಕಾರಿಗಳು ಜಪ್ತಿ ಮಾಡಿದ್ದಾರೆ. ಈ ತುಪ್ಪದಲ್ಲಿ ಕಲಬೆರಕೆ ಮಾಡಿರುವ ಮತ್ತು ತಪ್ಪು ಲೇಬಲಿಂಗ್ ಮಾಡಲಾಗಿದೆ ಎಂದು ಆರೋಪಿಸಲಾಗಿದೆ.

ಇನ್ನಷ್ಟು ವಿಶೇಷ ಲೇಖನಗಳಿಗಾಗಿ, ಇಲ್ಲಿ ಕ್ಲಿಕ್ ಮಾಡಿ →

ರಾಜಧಾನಿಯಲ್ಲಿ ಖಾಕಿ-ಕರಿ ಕೋಟ್ ಸಮರ; ಒಳಗಿನ ಹುಳುಕನ್ನು ಬೀದಿಗೆ...

ಒಂದು ಸಣ್ಣ ಪಾರ್ಕಿಂಗ್ ವಿವಾದದಿಂದ ಆರಂಭವಾದ ಈ ಜಗಳ, ಪೊಲೀಸ್ ಠಾಣೆಯೊಳಗೇ ಕೈಕೈ ಮಿಲಾಯಿಸುವ ಹಂತಕ್ಕೆ ತಲುಪಿ, ಅಂತಿಮವಾಗಿ ಹಿರಿಯ ಪೊಲೀಸ್ ಅಧಿಕಾರಿಗಳ ಅಮಾನತು ಮತ್ತು ವರ್ಗಾವಣೆಯಲ್ಲಿ ಅಂತ್ಯಗೊಂಡಿದೆ. ಈ ಹೊತ್ತಿನಲ್ಲಿ ಈ...

ರಾಮಲೀಲಾ ಮೈದಾನ ಮತ್ತೆ ಎಚ್ಚರಿಸಿದೆ- ಅಧಿಕಾರ ಶಾಶ್ವತವಲ್ಲ, ಜನರೇ...

ಪ್ರತಿಭಟನೆ ಎಂದರೆ ಸರ್ಕಾರವನ್ನು ಉರುಳಿಸುವ ಸಂಚು ಎಂದೇ ಅರ್ಥವಲ್ಲ. ಸರ್ಕಾರವನ್ನು ಪ್ರಶ್ನಿಸುವುದು ನಾಗರಿಕರ ಹಕ್ಕು. ಪ್ರತಿಭಟನೆ ಶಾಂತಿಯುತವಾಗಿರಬೇಕು; ಕಾನೂನು ಪಾಲನೆಯಾಗಬೇಕು. ಅದೇ ರೀತಿ, ಪ್ರತಿಭಟನಾಕಾರರ ಹಕ್ಕುಗಳನ್ನು ರಕ್ಷಿಸುವುದು ಸರ್ಕಾರ ಮತ್ತು ಪೊಲೀಸರ ಜವಾಬ್ದಾರಿ. ಪ್ರಜಾಪ್ರಭುತ್ವದಲ್ಲಿ...

ಶಿವಮೊಗ್ಗ | ಸಹ್ಯಾದ್ರಿ ಕಾಲೇಜಿನ ಹಳೆಯ ಕೀರ್ತಿಗೆ ಮಸಿ!...

ಒಂದು ಕಾಲದಲ್ಲಿ ಶಿವಮೊಗ್ಗದ ಶೈಕ್ಷಣಿಕ ವಲಯದಲ್ಲಿ ಸಹ್ಯಾದ್ರಿ ಕಾಲೇಜಿನ ಹೆಸರು ಮುಂಚೂಣಿಯಲ್ಲಿ ಕೇಳಿಬರುತ್ತಿತ್ತು. ಸಾವಿರಾರು ವಿದ್ಯಾರ್ಥಿಗಳ ಭವಿಷ್ಯ ರೂಪಿಸುವಲ್ಲಿ ಮಹತ್ವದ ಪಾತ್ರ ವಹಿಸಿದ್ದ ಈ ಪ್ರದೇಶ ಅನೇಕ ಪ್ರತಿಭಾವಂತ ವಿದ್ಯಾರ್ಥಿಗಳಿಗೆ ಉತ್ತಮ ಶಿಕ್ಷಣದ...

ಅಕ್ಟೋಬರ್ ತಿಂಗಳಾದ್ಯಂತ ನಡೆಸಲಾದ ಈ ಸುದೀರ್ಘ ಕಾರ್ಯಾಚರಣೆಯಲ್ಲಿ, ಅಕ್ಟೋಬರ್ 28 ರಿಂದ 31ರ ನಡುವೆ ತೀವ್ರ ತಪಾಸಣೆಗಳನ್ನು ನಡೆಸಲಾಗಿದೆ. ಈ ನಾಲ್ಕು ದಿನಗಳ ಅವಧಿಯಲ್ಲಿ 13 ಎಫ್‌ಐಆರ್‌ಗಳನ್ನು ದಾಖಲಿಸಲಾಗಿದ್ದು, 16 ಜನರನ್ನು ಬಂಧಿಸಲಾಗಿದೆ. ಅಲ್ಲದೆ, ಏಳು ಸಂಸ್ಥೆಗಳನ್ನು ಸೀಲ್ ಮಾಡಿ, ಆರು ವಾಹನಗಳನ್ನು ವಶಪಡಿಸಿಕೊಳ್ಳಲಾಗಿದೆ.

ಇಡೀ ಕಾರ್ಯಾಚರಣೆಯಲ್ಲಿ ಖಾದ್ಯ ತೈಲ, ಮಸಾಲೆ ಪದಾರ್ಥಗಳು, ಅಕ್ಕಿ, ಬೇಳೆಕಾಳು, ಬೆಲ್ಲ, ಗೋಧಿ ಹಿಟ್ಟು, ಕಡಲೆ ಹಿಟ್ಟು, ಹಾಲಿನ ಉತ್ಪನ್ನಗಳು, ಸಿಹಿ ತಿಂಡಿಗಳು, ಖಾರ, ಒಣ ಹಣ್ಣುಗಳು, ಬೇಕರಿ ಉತ್ಪನ್ನಗಳು ಹಾಗೂ ನೂಡಲ್ಸ್‌ಗಳನ್ನು ಜಪ್ತಿ ಮಾಡಲಾಗಿದೆ.

ಈ ಲೇಖನ ಓದಿದ್ದೀರಾ?: ಅಮೆರಿಕ ಮಧ್ಯಂತರ ಚುನಾವಣೆ: ಡೊನಾಲ್ಡ್ ಟ್ರಂಪ್ ಕುರ್ಚಿಗಿಲ್ಲ ಕುತ್ತು; ಬಹುಮತ ಕಳೆದುಕೊಂಡರೆ ಸರ್ಕಾರ ‘ಹಲ್ಲು…

ಪ್ರದೇಶವಾರು ಕಾರ್ಯಾಚರಣೆಯಲ್ಲಿ ಕೊಂಕಣ ವಿಭಾಗದಲ್ಲಿ ಅತೀ ಹೆಚ್ಚಿನ ಆಹಾರ ಪದಾರ್ಥಗಳು ಜಪ್ತಿಗೊಂಡಿವೆ. ಭಿವಂಡಿಯಲ್ಲಿರುವ ‘ಅವೆನ್ಯೂ ಸೂಪರ್‌ಮಾರ್ಟ್ಸ್ ಲಿಮಿಟೆಡ್’ ಸಂಸ್ಥೆಯಿಂದಲೇ ವಿವಿಧ ಬ್ರ್ಯಾಂಡ್‌ಗಳ 1.44 ಲಕ್ಷ ಕೆ.ಜಿ ಖಾದ್ಯ ತೈಲವನ್ನು ವಶಪಡಿಸಿಕೊಳ್ಳಲಾಗಿದ್ದು, ಕೊಂಕಣ ವಿಭಾಗದಲ್ಲಿ ಒಟ್ಟಾರೆ 22 ಸಂಸ್ಥೆಗಳಿಂದ ಒಟ್ಟು 5.27 ಕೋಟಿ ಮೌಲ್ಯದ ಆಹಾರ ಧಾನ್ಯ ಜಪ್ತಿಯಾಗಿದೆ. ಇನ್ನುಳಿದಂತೆ ಪುಣೆಯ 29 ಸಂಸ್ಥೆಗಳಿಂದ 1.47 ಕೋಟಿ ರೂ. ಮೌಲ್ಯದ, ಛತ್ರಪತಿ ಸಂಭಾಜಿನಗರದ 22 ಸಂಸ್ಥೆಗಳಿಂದ 89.41 ಲಕ್ಷ ರೂ. ಮೌಲ್ಯದ ಹಾಗೂ ನಾಗಪುರದ 20 ಸಂಸ್ಥೆಗಳಿಂದ 53.57 ಲಕ್ಷ ರೂ. ಮೌಲ್ಯದ ಅಕ್ರಮ/ಕಳಪೆ ಆಹಾರ ಧಾನ್ಯಗಳನ್ನು ವಶಪಡಿಸಿಕೊಳ್ಳಲಾಗಿದೆ.

ಕಾರ್ಯಾಚರಣೆ ಸಂದರ್ಭದಲ್ಲಿ ಗಂಭೀರ ನೈರ್ಮಲ್ಯ ಲೋಪಗಳು ಕಂಡುಬಂದಿದ್ದ ಗ್ರೇಟರ್ ಮುಂಬೈ, ಅಮರಾವತಿ ಹಾಗೂ ಛತ್ರಪತಿ ಸಂಭಾಜಿನಗರದ 19 ಸಿಹಿ ತಿಂಡಿ, ಖಾರ ತಯಾರಿಕಾ ಘಟಕ ಹಾಗೂ ಮಸಾಲೆ ಘಟಕಗಳ ಪರವಾನಗಿಯನ್ನು ಅಮಾನತು ಮಾಡಲಾಗಿದೆ.  ಇವುಗಳಲ್ಲಿ; ಕ್ರಿಮಿಕೀಟ ಮತ್ತು ಹೆಗ್ಗಣಗಳ ಕಾಟ, ನೈರ್ಮಲ್ಯವಿಲ್ಲದ ವಾತಾವರಣ, ತೆರೆದಿಟ್ಟ ಆಹಾರ ಪದಾರ್ಥಗಳು, ಅವ್ಯವಸ್ಥಿತ ದಾಸ್ತಾನು ವ್ಯವಸ್ಥೆ, ಕ್ರಿಮಿನಾಶಕ ಸಿಂಪಡಣೆಯ ದಾಖಲೆಗಳಿಲ್ಲದಿರುವುದು ಹಾಗೂ ಕಾರ್ಮಿಕರಿಗೆ ವೈದ್ಯಕೀಯ ಫಿಟ್‌ನೆಸ್ ಪ್ರಮಾಣಪತ್ರಗಳಿಲ್ಲದಿರುವುದು ಕಂಡುಬಂದಿದೆ.

ಇದರ ಜೊತೆಗೆ ನಾಸಿಕ್, ಸಂಭಾಜಿನಗರ ಮತ್ತು ನಾಗಪುರ ಭಾಗದ 34 ಹೋಟೆಲ್ ಮತ್ತು ಧಾಬಾಗಳನ್ನು ತಪಾಸಣೆ ನಡೆಸಿ, ಲೋಪದೋಷ ತಿದ್ದಿಕೊಳ್ಳಲು 29 ನೋಟಿಸ್‌ಗಳನ್ನು ಜಾರಿಗೊಳಿಸಲಾಗಿದೆ.

<p><iframe src="https://www.youtube.com/embed/8qwx4L0lKFQ?autoplay=1&mute=1&loop=1&playlist=8qwx4L0lKFQ&controls=0&modestbranding=1&showinfo=0" width="560" height="315" frameborder="0" allowfullscreen="allowfullscreen"></iframe></p>

ಪೋಸ್ಟ್ ಹಂಚಿಕೊಳ್ಳಿ:

ಪೋಸ್ಟ್ ಹಂಚಿಕೊಳ್ಳಿ:

ಈ ಹೊತ್ತಿನ ಪ್ರಮುಖ ಸುದ್ದಿ

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

‘ಮಗೂ, ನಿನ್ನ ನೋವು ಅಳಿಸಲಾಗದು’: ಅತ್ಯಾಚಾರಿಗೆ ಆಜೀವ ಶಿಕ್ಷೆ ನೀಡಿ ಸಂತ್ರಸ್ತೆಗೆ ಪತ್ರ ಬರೆದ ನ್ಯಾಯಾಧೀಶರು

ನ್ಯಾಯಾಂಗ ವ್ಯವಸ್ಥೆಯ ಇತಿಹಾಸದಲ್ಲೇ ಅತ್ಯಂತ ಭಾವನಾತ್ಮಕ ಮತ್ತು ಚಾರಿತ್ರಿಕ ತೀರ್ಪೊಂದಕ್ಕೆ ರಾಜಸ್ಥಾನದ...

ಮಧ್ಯಪ್ರದೇಶ ಡಬಲ್ ಎಂಜಿನ್ ಸರ್ಕಾರದ ಮಾದರಿ: ರಸ್ತೆಯೇ ಇಲ್ಲದೆ ಸೇತುವೆ ಮಾತ್ರ ಕಟ್ಟಿದ ಸೋಜಿಗ!

ಡಬಲ್ ಎಂಜಿನ್ ಸರ್ಕಾರವಿದ್ದರೆ ಅಭಿವೃದ್ಧಿ ವೇಗವಾಗಿ ಸಾಗುತ್ತದೆ ಎಂಬುದು ಬಿಜೆಪಿ ನಾಯಕರು...

ಬಾಗಲಕೋಟೆ | ಕಬ್ಬಿಗೆ ರೂ. 5,500 ಬೆಲೆ ನಿಗದಿಗೆ ಆಗ್ರಹಿಸಿ ಹೆದ್ದಾರಿ ತಡೆದು ರೈತರ ಪ್ರತಿಭಟನೆ

ಕಬ್ಬು ಬೆಳೆಗಾರರಿಗೆ ಪ್ರತಿ ಟನ್‌ಗೆ ₹5,500 ಲಾಭದಾಯಕ ಬೆಲೆ ನೀಡಬೇಕು ಹಾಗೂ...

ಬೀದರ್‌ | ನೆಹರು ಜನ್ಮದಿನ : ನ.13 ರಿಂದ 30ರವರೆಗೆ ʼಮಕ್ಕಳ ಗ್ರಾಮಸಭೆʼ ಆಯೋಜಿಸಿ

ದೇಶದ ಪ್ರಥಮ ಪ್ರಧಾನಿ ಪಂಡಿತ್ ಜವಾಹರಲಾಲ್ ನೆಹರು ಅವರ ಜನ್ಮದಿನವಾದ ನವೆಂಬರ್...