ಬಿಲ್ಕಿಸ್ ಬಾನೊ ಪ್ರಕರಣ | ಅಪರಾಧಿಗಳಿಗೆ ಕ್ಷಮಾಪಣೆ ಪ್ರಶ್ನಿಸಿ ಅರ್ಜಿ; ಕೇಂದ್ರ, ಗುಜರಾತ್‌ಗೆ ‘ಸುಪ್ರೀಂ’ ನೋಟಿಸ್

Date:

  • ನ್ಯಾ. ಕೆ ಎಂ ಜೋಸೆಫ್, ನ್ಯಾ.ಬಿ ವಿ ನಾಗರತ್ನ ಪೀಠ ವಿಚಾರಣೆ
  • ಪ್ರಕರಣದ 11 ಆರೋಪಿಗಳಿಗೆ ಕ್ಷಮೆ ನೀಡಿದ್ದ ಗುಜರಾತ್ ಸರ್ಕಾರ

ಸಾಮೂಹಿಕ ಅತ್ಯಾಚಾರ ಪ್ರಕರಣದ ಆರೋಪಿಗಳಿಗೆ ಬಂಧನದಿಂದ ಕ್ಷಮಾದಾನ ನೀಡಿರುವ ಬಗ್ಗೆ ಸೂಕ್ತ ವಿವರಣೆ ಕೇಳಿ ಸುಪ್ರೀಂ ಕೋರ್ಟ್ ಸೋಮವಾರ (ಮಾರ್ಚ್ 27) ಕೇಂದ್ರ ಹಾಗೂ ಗುಜರಾತ್ ಸರ್ಕಾರಕ್ಕೆ ನೋಟಿಸ್ ನೀಡಿದೆ. ಪ್ರಕರಣದಲ್ಲಿ ಶಿಕ್ಷೆ ಅನುಭವಿಸುತ್ತಿದ್ದ 11 ಆರೋಪಿಗಳಿಗೆ ಕ್ಷಮಾದಾನ ನೀಡಿರುವುದನ್ನು ಪ್ರಶ್ನಿಸಿ ಸಂತ್ರಸ್ತೆ ಬಿಲ್ಕಿಸ್ ಬಾನೊ ಎರಡು ಅರ್ಜಿ ಸಲ್ಲಿಸಿದ್ದರು.

ನ್ಯಾಯಮೂರ್ತಿಗಳಾದ ಕೆ ಎಂ ಜೋಸೆಫ್‌ ಹಾಗೂ ಬಿ ವಿ ನಾಗರತ್ನ ಅವರ ದ್ವಿಸದಸ್ಯ ಪೀಠ ವಿಚಾರಣೆ ನಡೆಸಿತು.

ಏಪ್ರಿಲ್ 18ರಂದು ವಿಚಾರಣೆ ಮಾಡುವಾಗ ಆರೋಪಿಗಳಿಗೆ ಕ್ಷಮಾದಾನ ನೀಡಿರುವ ಕುರಿತು ಸೂಕ್ತ ದಾಖಲೆಗಳನ್ನು ಸಿದ್ಧಪಡಿಸಿಕೊಳ್ಳುವಂತೆ ಸುಪ್ರೀಂ ಕೋರ್ಟ್ ಗುಜರಾತ್ ಸರ್ಕಾರಕ್ಕೆ ಸೂಚಿಸಿದೆ.

ಆರೋಪಿಗಳ ಬಿಡುಗಡೆ ಪ್ರಶ್ನಿಸಿ ಸಂತ್ರಸ್ತೆ ಬಿಲ್ಕಿಸ್ ಬಾನೊ ಅವರು ಸುಪ್ರೀಂ ಕೋರ್ಟ್‌ಗೆ ಎರಡು ಅರ್ಜಿಗಳನ್ನು ಸಲ್ಲಿಸಿದ್ದರು.ಮೊದಲನೇ ಅರ್ಜಿಯು, ಅಪರಾಧಿಗಳ ಬಿಡುಗಡೆಯ ವಿನಂತಿ ಪರಿಗಣನೆಯನ್ನು ಕಡ್ಡಾಯಗೊಳಿಸುವ ಗುಜರಾತ್‌ ಸರ್ಕಾರಕ್ಕೆ 2022ರ ಮೇನಲ್ಲಿ ನೀಡಿರುವ ತನ್ನ ತೀರ್ಪನ್ನು ಮರುಪರಿಶೀಲಿಸಲು ಕೋರಿದೆ.

ಮಾರ್ಚ್‌ 22 ರಂದು ವಕೀಲ ಗುಪ್ತಾ ಅವರು ಬಿಲ್ಕಿಸ್‌ ಬಾನೊ ಅವರ ವಿಷಯವನ್ನು ತುರ್ತು ವಿಚಾರಣೆಗಾಗಿ ಪ್ರಸ್ತಾಪಿಸಿದರು. ಆದರೆ ನ್ಯಾಯಮೂರ್ತಿ ಬೇಲಾ ಎಂ. ತ್ರಿವೇದಿ ಅವರು ಅರ್ಜಿಯ ವಿಚಾರಣೆಯಿಂದ ಹಿಂದೆ ಸರಿದರು. ಅರ್ಜಿ ವಿಚಾರಣೆಗೆ ನೂತನ ಪೀಠ ರಚನೆ ಅಗತ್ಯವಿದೆ ಎಂದು ಮುಖ್ಯ ನ್ಯಾಯಮೂರ್ತಿ ಡಿ ವೈ ಚಂದ್ರಚೂಡ್‌ ಹೇಳಿದರು.

ನ್ಯಾಯಮೂರ್ತಿಗಳಾದ ಅಜಯ್ ರಸ್ತೋಗಿ ಮತ್ತು ಬೇಲಾ ಎಂ. ತ್ರಿವೇದಿ ಅವರ ಪೀಠ ಈ ಹಿಂದೆ ಬಿಲ್ಕಿಸ್‌ ಬಾನೊ ಅವರ ಅರ್ಜಿಯನ್ನು ವಿಚಾರಣೆಗೆ ಪಟ್ಟಿ ಮಾಡುವಂತೆ ಆದೇಶಿಸಿತ್ತು.

2002ರ ಗೋಧ್ರೋತ್ತರ ಹಿಂಸಾಚಾರದ ವೇಳೆ ಆರೋಪಿಗಳು ಬಿಲ್ಕಿಸ್‌ ಬಾನೊ ಅವರ ಮೇಲೆ ಅತ್ಯಾಚಾರ ನಡೆಸಿ ಬಿಲ್ಕಿಸ್‌ ಅವರ ಕುಟುಂಬದ ಸದಸ್ಯರನ್ನು ಹತ್ಯೆ ಮಾಡಿದ್ದರು.

ಈ ಪ್ರಕರಣದಲ್ಲಿ ಜೈಲು ಸೇರಿದ್ದ 11 ಆರೋಪಿಗಳಿಗೆ ಗುಜರಾತ್‌ ಸರ್ಕಾರ ಕಳೆದ ವರ್ಷ ಆಗಸ್ಟ್‌ 10 ರಂದು ಕ್ಷಮಾದಾನ ನೀಡಿತ್ತು. ಆಗಸ್ಟ್‌ 15 ರಂದು ಆರೋಪಿಗಳು ಬಿಡುಗಡೆಯಾಗಿದ್ದರು.

+ posts

ಪೋಸ್ಟ್ ಹಂಚಿಕೊಳ್ಳಿ:

LEAVE A REPLY

Please enter your comment!
Please enter your name here

ಪೋಸ್ಟ್ ಹಂಚಿಕೊಳ್ಳಿ:

ಹೆಚ್ಚು ಓದಿಸಿಕೊಂಡ ಲೇಖನಗಳು

ವಿಡಿಯೋ

ಸತ್ಯದ ಪಥಕ್ಕೆ ಬಲ ತುಂಬಲು ದೇಣಿಗೆ ನೀಡಿ. ನಿಮ್ಮಗಳ ಬೆಂಬಲವೇ ನಮಗೆ ಬಲ. ಈ ಕೆಳಗಿನ ಲಿಂಕ್ ಮೂಲಕ ದೇಣಿಗೆ ನೀಡಿ
Related

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ಗುತ್ತಿಗೆದಾರರ ಬಾಕಿ ಹಣ ಪಾವತಿ ವಿಚಾರ: ರಾಜ್ಯ ಸರ್ಕಾರದ ವಿರುದ್ಧ ಹೈಕೋರ್ಟ್‌ ಕಿಡಿ

'ಇನ್ನೆಷ್ಟು ಗುತ್ತಿಗೆದಾರರು ಆತ್ಮಹತ್ಯೆ ಮಾಡಿಕೊಳ್ಳಬೇಕು?' ಹೈಕೋರ್ಟ್‌ ಕಿಡಿ ಬಾಕಿ ಪಾವತಿಯಲ್ಲೂ...

ಬಟ್ಟೆ ನೋಡಬೇಡಿ, ಮಾನವೀಯವಾಗಿ ಆರೋಗ್ಯ ಸೇವೆ ನೀಡಿ: ಸಿಎಂ ಸಿದ್ದರಾಮಯ್ಯ 

'ನಾಡಿನ ಜನರಿಗೆ ಗುಣಮಟ್ಟದ ಆರೋಗ್ಯ ಸೇವೆ ನೀಡಲು ಸರ್ಕಾರ ಬದ್ದವಾಗಿದೆ' ...

ತೆಲಂಗಾಣ ಚುನಾವಣೆ | ಬೆಳಗ್ಗೆ 11ರವರೆಗೆ ಶೇ.27ರಷ್ಟು ಹಕ್ಕು ಚಲಾಯಿಸಿದ ಮತದಾರರು

ತೆಲಂಗಾಣ, ಮಧ್ಯಪ್ರದೇಶ, ಛತ್ತೀಸ್‌ಘಡ, ಮಿಝೋರಾಂ, ರಾಜಸ್ಥಾನ ಸೇರಿದಂತೆ ಪಂಚ ರಾಜ್ಯಗಳ ವಿಧಾನಸಭಾ...

ಮಲ್ಲಿಕಾರ್ಜುನ ಖರ್ಗೆ ರಾಜಕೀಯ ಪಯಣ ಕುರಿತ ಪುಸ್ತಕ ಬಿಡುಗಡೆ ಮಾಡಿದ ಸೋನಿಯಾ ಗಾಂಧಿ

ಕಾಂಗ್ರೆಸ್ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಅವರು ಚುನಾವಣಾ ರಾಜಕೀಯದಲ್ಲಿ 50 ವರ್ಷಗಳನ್ನು...