ಪ್ರತಿಪಕ್ಷಗಳ ಒಗ್ಗಟ್ಟಿನ ಮಂತ್ರಕ್ಕೆ ಬಿಜೆಪಿ ಟಕ್ಕರ್‌ | ದೇವದಾಸ್‌ಗೆ ರಾಹುಲ್‌ ಗಾಂಧಿ ಹೋಲಿಸಿ ಪೋಸ್ಟರ್

Date:

  • ಪಾಟ್ನಾದ ಬಿಜೆಪಿ ಕಚೇರಿ ಹೊರಗೆ ರಾಹುಲ್‌ ಗಾಂಧಿ ಪೋಸ್ಟರ್
  • ವಿಷ್ಣುವಿನ ಪಕ್ಕ ರಾಹುಲ್‌ ಫೋಟೋವಿನ ಪೋಸ್ಟ್‌ ಹಾಕಿದ ಆರ್‌ಜೆಡಿ

ಬಿಹಾರದ ಪಾಟ್ನಾದ ಬೀದಿಗಳಲ್ಲಿ ಪ್ರತಿಪಕ್ಷಗಳ ಒಗ್ಗಟ್ಟಿನ ಪೋಸ್ಟರ್‌ಗಳು ರಾರಾಜಿಸುತ್ತಿದ್ದು ಇದಕ್ಕೆ ವಿರುದ್ಧವಾಗಿ ಬಿಜೆಪಿಯು ರಾಜ್ಯದ ತನ್ನ ಕಚೇರಿ ಹೊರಗೆ ಕಾಂಗ್ರೆಸ್‌ ನಾಯಕ ರಾಹುಲ್‌ ಗಾಂಧಿ ಅವರನ್ನು ‘ದೇವದಾಸ್’ ಪಾತ್ರಕ್ಕೆ ಹೋಲಿಕೆ ಮಾಡಿ ಪೋಸ್ಟರ್‌ವೊಂದನ್ನು ಹಾಕಿದೆ ಎಂದು ಶುಕ್ರವಾರ (ಜೂನ್‌ 23) ವರದಿಯಾಗಿದೆ.

ನಾನಾ ಪಕ್ಷಗಳ ಮುಖಂಡರು ಹಾಗೂ ಕಾರ್ಯಕರ್ತರು ಪಾಟ್ನಾದಲ್ಲಿ ಈ ಪೋಸ್ಟರ್ ಗಳನ್ನು ಹಾಕಿದ್ದಾರೆ. ಇದಕ್ಕೆ ಪ್ರತಿಕ್ರಿಯೆಯಾಗಿ ಬಿಜೆಪಿ ಪೋಸ್ಟರ್‌ ಮೂಲಕ ರಾಹುಲ್‌ ಅವರನ್ನು ಟೀಕಿಸಿದೆ.

ಪೋಸ್ಟರ್‌ನಲ್ಲಿ ರಾಹುಲ್‌ ಗಾಂಧಿ ಅವರನ್ನು ದೇವದಾಸ್‌ ಪಾತ್ರಕ್ಕೆ ಹೋಲಿಕೆ ಮಾಡಿ ಬಿಜೆಪಿ ಟೀಕಿಸಿದೆ. ಪೋಸ್ಟರ್ ಮೇಲ್ಭಾಗದಲ್ಲಿ ಶಾರೂಖ್ ಖಾನ್ ಚಿತ್ರ ಇರಿಸಲಾಗಿದ್ದು, ಕೆಳಭಾಗದಲ್ಲಿ ರಾಹುಲ್ ಅವರ ಚಿತ್ರ ಇದೆ. ರೀಲ್ ಲೈಫ್ ದೇವದಾಸ್ ಶಾರೂಖ್ ಖಾನ್, ರಿಯಲ್ ಲೈಫ್ ದೇವದಾಸ್ ರಾಹುಲ್ ಗಾಂಧಿ ಎಂದು ಬರೆಯಲಾಗಿದೆ.

ಸುದ್ದಿ ನಿರಂತರವಾಗಿ ಉಚಿತವೇ ಆಗಿರುವುದು ಹೇಗೆ ಸಾಧ್ಯ? ಅದಕ್ಕೆ ನಿಮ್ಮ ಬೆಂಬಲವೂ ನಿರಂತರವಾಗಿ ಇದ್ದಾಗ ಮಾತ್ರ ಸಾಧ್ಯ. ಚಂದಾದಾರರಾಗಿ – ಆ ಮೂಲಕ ಸತ್ಯ, ನ್ಯಾಯ, ಪ್ರೀತಿ ಮೌಲ್ಯಗಳನ್ನು ಎಲ್ಲರಿಗೂ ಹರಡಲು ಜೊತೆಯಾಗಿ.

“ಮಮತಾ ಬ್ಯಾನರ್ಜಿ ಅವರು ಪಶ್ಚಿಮ ಬಂಗಾಳವನ್ನು ತೊರೆಯಿರಿ ಎಂದು ಹೇಳಿದರು, ಕೇಜ್ರಿವಾಲ್ ದೆಹಲಿ ಹಾಗೂ ಪಂಜಾಬ್ ಬಿಡಿ ಎಂದು ಹೇಳಿದರು, ಲಾಲು, ನಿತೀಶ್ ಬಿಹಾರ, ಅಖಿಲೇಶ್ ಉತ್ತರ ಪ್ರದೇಶ, ಸ್ಟಾಲಿನ್ ತಮಿಳುನಾಡು ಬಿಡಿ ಎಂದರು. ಎಲ್ಲರೂ ಒಟ್ಟಾಗಿ ಕಾಂಗ್ರೆಸ್ ಹಾಗೂ ರಾಜಕೀಯ ಎರಡನ್ನೂ ಬಿಡಿ ಎಂದು ಹೇಳುವ ಸಮಯ ಸನ್ನಿಹಿತವಾಗಿದೆ” ಎಂದು ಬರೆಯುವ ಮೂಲಕ ಬಿಜೆಪಿ ರಾಹುಲ್‌ ಅವರನ್ನು ಕುಟುಕಿದೆ.

ರಾಹುಲ್‌ ಗಾಂಧಿ ಕುರಿತ ಬಿಜೆಪಿ ಪೋಸ್ಟರ್‌ ಅನ್ನು ಆರ್‌ಜೆಡಿ ಟೀಕಿಸಿದೆ. ಆರ್‌ಜೆಡಿ ಕಚೇರಿಯ ಹೊರಗೆ ವಿಷ್ಣುವಿನ ಪೋಸ್ಟರ್ ಹಾಕಲಾಗಿದೆ. ವಿಷ್ಣು ದೇವರ ಚಿತ್ರದ ಸುತ್ತ 18 ನಾಯಕರ ಚಿತ್ರವನ್ನು ಇರಿಸಲಾಗಿದೆ.

ಈ ಸುದ್ದಿ ಓದಿದ್ದೀರಾ? ಆಂಧ್ರಪ್ರದೇಶ | ಬದಲಾದ ಬಿಜೆಪಿ ತಂತ್ರಗಾರಿಕೆ; ಜಗನ್‌ ಜೊತೆ ಕುಸ್ತಿ, ಚಂದ್ರಬಾಬು ಜೊತೆ ದೋಸ್ತಿ

ಆರ್‌ಜೆಡಿ ಪೋಸ್ಟರ್‌ನಲ್ಲಿ ಲಾಲು ಪ್ರಸಾದ್ ಯಾದವ್, ನಿತೀಶ್ ಕುಮಾರ್, ಫಾರೂಕ್ ಅಬ್ದುಲ್ಲಾ, ಮಲ್ಲಿಕಾರ್ಜುನ ಖರ್ಗೆ, ದೀಪಾಂಕರ್ ಭಟ್ಟಾಚಾರ್ಯ, ಸೀತಾರಾಮ್ ಯೆಚೂರಿ, ಶರದ್ ಪವಾರ್ ಅವರ ಜೊತೆ ವಿಷ್ಣು ದೇವರ ಚಿತ್ರ ಹಾಕಲಾಗಿದೆ.

ಇನ್ನೊಂದು ಕಡೆ ವಿಷ್ಣು ದೇವರ ಪಕ್ಕದಲ್ಲಿ ರಾಹುಲ್ ಗಾಂಧಿ, ತೇಜಸ್ವಿ ಯಾದವ್, ಮಮತಾ ಬ್ಯಾನರ್ಜಿ, ಸ್ಟಾಲಿನ್, ಹೇಮಂತ್ ಸೊರೆನ್, ಉದ್ಧವ್ ಠಾಕ್ರೆ ಅವರ ಚಿತ್ರಗಳನ್ನು ಹಾಕಲಾಗಿದೆ.

+ posts

ಪೋಸ್ಟ್ ಹಂಚಿಕೊಳ್ಳಿ:

LEAVE A REPLY

Please enter your comment!
Please enter your name here

ಪೋಸ್ಟ್ ಹಂಚಿಕೊಳ್ಳಿ:

ಹೆಚ್ಚು ಓದಿಸಿಕೊಂಡ ಲೇಖನಗಳು

ವಿಡಿಯೋ

ಸುದ್ದಿ ನಿರಂತರವಾಗಿ ಉಚಿತವೇ ಆಗಿರುವುದು ಹೇಗೆ ಸಾಧ್ಯ? ಅದಕ್ಕೆ ನಿಮ್ಮ ಬೆಂಬಲವೂ ನಿರಂತರವಾಗಿ ಇದ್ದಾಗ ಮಾತ್ರ ಸಾಧ್ಯ. ಚಂದಾದಾರರಾಗಿ – ಆ ಮೂಲಕ ಸತ್ಯ, ನ್ಯಾಯ, ಪ್ರೀತಿ ಮೌಲ್ಯಗಳನ್ನು ಎಲ್ಲರಿಗೂ ಹರಡಲು ಜೊತೆಯಾಗಿ.
Related

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ಎಎಪಿ ಜೊತೆ ಮೈತ್ರಿಗೆ ವಿರೋಧ : ದೆಹಲಿ ಕಾಂಗ್ರೆಸ್​ ಅಧ್ಯಕ್ಷ ಅರವಿಂದರ್ ಸಿಂಗ್ ಲವ್ಲಿ ರಾಜೀನಾಮೆ

ಆಮ್‌ ಆದ್ಮಿ ಪಕ್ಷದೊಂದಿಗಿನ ಮೈತ್ರಿ ವಿರೋಧಿಸಿ ದೆಹಲಿ ಕಾಂಗ್ರೆಸ್ ಅಧ್ಯಕ್ಷ ಸ್ಥಾನಕ್ಕೆ...

ಹಾಸನ ಪೆನ್‌ಡ್ರೈವ್ | ಪ್ರಜ್ವಲ್ ರೇವಣ್ಣ ತಪ್ಪಿಸಿಕೊಂಡಿದ್ದರೆ ನನಗೆ ಸಂಬಂಧವಿಲ್ಲ: ಎಚ್‌.ಡಿ ಕುಮಾರಸ್ವಾಮಿ

ಹಾಸನದ ಅಶ್ಲೀಲ ವಿಡಿಯೋಗಳ (ಪೆನ್‌ಡ್ರೈವ್‌) ಪ್ರಕರಣದ ಬಗ್ಗೆ ದೇಶಾದ್ಯಂತ ಆಕ್ರೋಶ ವ್ಯಕ್ತವಾಗುತ್ತಿದೆ....

ಪ್ರಜ್ವಲ್ ಪ್ರಕರಣ | ಉಪ್ಪು ತಿಂದವನು ನೀರು ಕುಡಿಯಲೇಬೇಕು: ಎಚ್ ಡಿ ಕುಮಾರಸ್ವಾಮಿ

ಸಂಸದ ಪ್ರಜ್ವಲ್ ರೇವಣ್ಣ ಅವರದ್ದು ಎನ್ನಲಾದ ಅಶ್ಲೀಲ ವಿಡಿಯೋಗಳು ವೈರಲ್ ಪ್ರಕರಣ...

ಖಾಸಗಿ ಸಂಪತ್ತಿನ ಬಗ್ಗೆ ರಾಹುಲ್ ಮಾತನಾಡಿಲ್ಲ; ಬಿಜೆಪಿ ಗೊಂದಲ ಸೃಷ್ಟಿಸುತ್ತಿದೆ: ಸಿಎಂ ರೇವಂತ್ ರೆಡ್ಡಿ

ತೆಲಂಗಾಣದಲ್ಲಿ ಕಾಂಗ್ರೆಸ್‌ ಭರ್ಜರಿ ಗೆಲುವು ಸಾಧಿಸಿ, ಅಧಿಕಾರ ಹಿಡಿದ ಕೆಲ ತಿಂಗಳುಗಳಲ್ಲೇ...