ರಾಮ ನವಮಿ ಹಿಂಸಾಚಾರ | ಬಿಹಾರದಲ್ಲಿ ಬಾಲಕ ಸಾವು, ಪಶ್ಚಿಮ ಬಂಗಾಳದಲ್ಲಿ ಕಟ್ಟೆಚ್ಚರ

Date:

  • ಪಶ್ಚಿಮ ಬಂಗಾಳದ ಹೂಗ್ಲಿಯಲ್ಲಿ ರಾಮ ನವಮಿ ಸಂಬಂಧ ಘರ್ಷಣೆ, ಕಟ್ಟೆಚ್ಚರ
  • ಬಿಹಾರದ ಪಹಾರೌರಾ ಪ್ರದೇಶದಲ್ಲಿ ಎರಡು ಗುಂಪುಗಳ ನಡುವೆ ಪರಸ್ಪರ ಗುಂಡು

ದೇಶದಲ್ಲಿ ರಾಮ ನವಮಿ ಆಚರಣೆ ಬಿಹಾರ ಹಾಗೂ ಪಶ್ಚಿಮ ಬಂಗಾಳದಲ್ಲಿ ಕೋಮು ಹಿಂಸಾಚಾರಕ್ಕೆ ಕಾರಣವಾಗಿದೆ. ಕೋಮು ಹಿಂಸಾಚಾರದಲ್ಲಿ ಬಿಹಾರದಲ್ಲಿ ಒಬ್ಬ ಬಾಲಕ ಮೃತಪಟ್ಟಿದ್ದಾನೆ. ಪಶ್ಚಿಮ ಬಂಗಾಳದಲ್ಲಿ ಪೊಲೀಸರು ಕಟ್ಟೆಚ್ಚರ ವಹಿಸಿದ್ದಾರೆ.

ನಳಂದ ಜಿಲ್ಲೆಯ ಬಿಹಾರ್ ಶರೀಫ್ ನಗರದಲ್ಲಿ ಮಾರ್ಚ್ 31 ರಂದು ರಾಮನ ಉತ್ಸವದಲ್ಲಿ ನಡೆದ ಘರ್ಷಣೆಗಳಿಂದ ಶನಿವಾರ (ಏಪ್ರಿಲ್ 1) ತಡರಾತ್ರಿ ಎರಡು ಗುಂಪುಗಳ ನಡುವೆ ಕೋಮು ಹಿಂಸಾಚಾರ ನಡೆದಿದೆ.

ಹಿಂಸಾಚಾರದಲ್ಲಿ ಹಚ್ಚಿದ ಬೆಂಕಿಯಿಂದ 16 ವರ್ಷದ ಒಬ್ಬ ಬಾಲಕ ಮೃತಪಟ್ಟಿದ್ದು, ಘಟನೆಯಲ್ಲಿ ಇಬ್ಬರು ಗಂಭೀರ ಗಾಯಗೊಂಡರು. ತರಕಾರಿ ಖರೀದಿಸಲು ತೆರಳುತ್ತಿದ್ದ ಬಾಲಕ ಹಿಂಸಾಚಾರಕ್ಕೆ ಬಲಿಯಾಗಿದ್ದಾನೆ. ಮೃತ ಬಾಲಕನನ್ನು ಗುಲ್ಶನ್ ಕುಮಾರ್‌ ಎಂದು ಗುರುತಿಸಲಾಗಿದೆ. ಈತ ಸ್ಥಳೀಯ ದಿನಗೂಲಿ ಕಾರ್ಮಿಕರೊಬ್ಬರ ಮಗ ಎಂದು ತಿಳಿದು ಬಂದಿದೆ.

ಬಿಹಾರ್‌ ಶರೀಫ್‌ನ ಪಹಾರೌರಾ ಪ್ರದೇಶದಲ್ಲಿ ಎರಡು ಗುಂಪುಗಳು ಪರಸ್ಪರ ಗುಂಡು ಹಾರಿಸಿಕೊಂಡಿವೆ. ಈ ವೇಳೆ ಬಾಲಕನ ತಲೆ ಭಾಗಕ್ಕೆ ಗುಂಡು ತಾಗಿದೆ. ತಕ್ಷಣ ಆತನನ್ನು ಪಾಟ್ನಾ ವೈದ್ಯಕೀಯ ಆಸ್ಪತ್ರೆ ಕರೆದೊಯ್ಯಲಾಗಿದೆ. ಆದರೆ ಬಾಲಕ ಮೃತಪಟ್ಟ ಎಂದು ಪೊಲೀಸರು ಹೇಳಿದರು. ಮೃತ ಬಾಲಕನ ಕುಟುಂಬಕ್ಕೆ ಮುಖ್ಯಮಂತ್ರಿ ನಿತೀಶ್‌ ಕುಮಾರ್‌ ₹5 ಲಕ್ಷ ಪರಿಹಾರ ಘೋಷಿಸಿದರು.

ಗಾಯಗೊಂಡವರನ್ನು ಮೊಹಮ್ಮದ್‌ ಶಕಿಲ್‌ (66) ಮತ್ತು ಮೊಹಮ್ಮದ್‌ ತಾಜ್‌ (32) ಎಂದು ಗುರುತಿಸಲಾಗಿದೆ. ಗುಂಡಿನ ದಾಳಿ ವೇಳೆ ಇಬ್ಬರಿಗೂ ಗುಂಡು ತಗುಲಿದೆ. ಇಬ್ಬರೂ ಚಿಕಿತ್ಸೆ ಪಡೆಯುತ್ತಿದ್ದಾರೆ.

ರಾಮ ನವಮಿ ಉತ್ಸವದ ಮೆರವಣಿಗೆಗೆ ಸಂಬಂಧಿಸಿದ ಹಿಂಸಾಚಾರಕ್ಕೆ ಸಾಕ್ಷಿಯಾದ ನಳಂದ ಜಿಲ್ಲೆಯ ಬಿಹಾರ್ ಶರೀಫ್ ಮತ್ತು ರೋಹ್ತಾಸ್ ಜಿಲ್ಲೆಯ ಸಸಾರಾಮ್ ನಗರಗಳಲ್ಲಿ ಭಾನುವಾರವೂ (ಏಪ್ರಿಲ್ 2) ಉದ್ವಿಗ್ನ ವಾತಾವರಣ ಮುಂದುವರಿದಿತ್ತು.

“ಕೋಮು ಹಿಂಸಾಚಾರ ಘಟನೆಗಳ ಬಗ್ಗೆ ನಿಗಾ ವಹಿಸಿ, ಅಪರಾಧಿಗಳನ್ನು ಪತ್ತೆ ಹಚ್ಚಿ ಕ್ರಮ ಕೈಗೊಳ್ಳಿ” ಎಂದು ಪೊಲೀಸರಿಗೆ ಸೂಚಿಸಲಾಗಿದೆ ಎಂದು ಮುಖ್ಯಮಂತ್ರಿ ಕಚೇರಿ ಪ್ರಕಟಣೆ ತಿಳಿಸಿದೆ.

ಪಶ್ಚಿಮ ಬಂಗಾಳದಲ್ಲೂ ಹಿಂಸಾಚಾರ

ಬಿಹಾರದ ನಂತರ ಪಶ್ಚಿಮ ಬಂಗಾಳದಲ್ಲೂ ರಾಮ ನವಮಿ ಉತ್ಸವದ ಹಿಂಸಾಚಾರ ಭುಗಿಲೆದ್ದಿದೆ. ಇಲ್ಲಿಯ ಹೂಗ್ಲಿ ನಗರದಲ್ಲಿ ಎರಡು ಗುಂಪುಗಳ ನಡುವೆ ಕೋಮು ಹಿಂಸಾಚಾರ ನಡೆದಿದೆ.

ರಾಮನ ಉತ್ಸವದ ವೇಳೆ ಬಿಜೆಪಿ ಕೈಗೊಂಡ ಶೋಭಾ ಯಾತ್ರೆಯಲ್ಲಿ ಕೋಮು ಹಿಂಸಾಚಾರ ನಡೆದಿದೆ. ಯಾತ್ರೆಯಲ್ಲಿ ಬಿಜೆಪಿ ರಾಷ್ಟ್ರೀಯ ಉಪಾಧ್ಯಕ್ಷ ದಿಲೀಪ್‌ ಘೋಷ್‌ ಭಾಗವಹಿಸಿದ್ದರು. ಬಿಜೆಪಿ ವಿರುದ್ಧ ಘೋಷಣೆ ಕೂಗಿ ಕೆಲವು ದುಷ್ಕರ್ಮಿಗಳು ಯಾತ್ರೆ ಮೇಲೆ ಕಲ್ಲು ತೂರಾಟ ನಡೆಸಿದರು. ಇದು ಕೋಮು ಹಿಂಸಾಚಾರದ ಕಿಡಿ ಹೊತ್ತಿಸಿತು.

ಈ ಸುದ್ದಿ ಓದಿದ್ದೀರಾ? ರಾಹುಲ್‌ ಗಾಂಧಿ ಸರ್ವಾಧಿಕಾರ ವಿರುದ್ಧದ ಒಂದು ಕ್ರಾಂತಿ: ನವಜೋತ್‌ ಸಿಂಗ್‌ ಸಿಧು

ರಾಮ ನವಮಿ ಉತ್ಸವದ ಶೋಭಾ ಯಾತ್ರೆಯಲ್ಲಿ ಎರಡು ಗುಂಪುಗಳು ಪರಸ್ಪರ ಕೈ ಕೈ ಮಿಲಾಯಿಸಿ ಹಿಂಸಾಚಾರ ಇಳಿದ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ಹರಿದಾಡಿದೆ. ಇದರಿಂದ ಯಾತ್ರೆಗೆ ತೊಡಕಾಗಿದೆ. ಹಿಂಸಾಚಾರಕ್ಕೆ ಸಂಬಂಧಿಸಿ 12ಕ್ಕೂ ಹೆಚ್ಚು ಜನರನ್ನು ಪೊಲೀಸರು ಬಂಧಿಸಿದ್ದಾರೆ.

ರಾಮ ನವಮಿ ಉತ್ಸವಕ್ಕೆ ಸಂಬಂಧಿಸಿದಂತೆ ಎರಡು ದಿನಗಳ ಹಿಂದೆ ಹೌರಾ ನಗರದಲ್ಲಿಯೂ ಹಿಂಸಾಚಾರ ನಡೆದಿತ್ತು.

+ posts

ಪೋಸ್ಟ್ ಹಂಚಿಕೊಳ್ಳಿ:

LEAVE A REPLY

Please enter your comment!
Please enter your name here

ಪೋಸ್ಟ್ ಹಂಚಿಕೊಳ್ಳಿ:

ಹೆಚ್ಚು ಓದಿಸಿಕೊಂಡ ಲೇಖನಗಳು

ವಿಡಿಯೋ

ಸತ್ಯದ ಪಥಕ್ಕೆ ಬಲ ತುಂಬಲು ದೇಣಿಗೆ ನೀಡಿ. ನಿಮ್ಮಗಳ ಬೆಂಬಲವೇ ನಮಗೆ ಬಲ. ಈ ಕೆಳಗಿನ ಲಿಂಕ್ ಮೂಲಕ ದೇಣಿಗೆ ನೀಡಿ
Related

ಇದೇ ರೀತಿಯ ಇನ್ನಷ್ಟು ಲೇಖನಗಳು
Related

10 ನಿಮಿಷದ ಆಝಾನ್‌ನಿಂದ ಶಬ್ದ ಮಾಲಿನ್ಯ ಎನ್ನುವುದಾದರೆ ಡಿಜೆ ಕತೆ ಏನು?: ಗುಜರಾತ್ ಹೈಕೋರ್ಟ್

'ಹತ್ತು ನಿಮಿಷದ ಆಝಾನ್‌ನಿಂದ ಶಬ್ದ ಮಾಲಿನ್ಯ ಎನ್ನುವುದಾದರೆ ನಿಮ್ಮ ಡಿಜೆ, ಭಜನೆಗಳ...

ಅವಶೇಷಗಳು ಸುರಂಗದೊಳಗೆ ಬಿದ್ದಾಗ ಏನಾಯಿತು?: ಘಟನೆ ಬಿಚ್ಚಿಟ್ಟ ಸಿಲುಕಿಕೊಂಡಿದ್ದ ಕಾರ್ಮಿಕ

ಉತ್ತರಾಖಂಡದ ಉತ್ತರಕಾಶಿಯಲ್ಲಿ ಸಿಲ್ಕ್ಯಾರಾದಲ್ಲಿ ಸುರಂಗ ಕುಸಿದು ಆತಂಕ ಸೃಷ್ಟಿಯಾಗಿದ್ದು ಕೊನೆಗೂ ನಿವಾರಣೆಯಾಗಿದೆ....

17 ದಿನಗಳ ಕಾರ್ಯಾಚರಣೆ ಯಶಸ್ವಿ: ಸುರಂಗದಲ್ಲಿ ಸಿಲುಕಿಕೊಂಡಿದ್ದ 41 ಕಾರ್ಮಿಕರ ರಕ್ಷಣೆ

ಕಳೆದ 17 ದಿನಗಳಿಂದ ಉತ್ತರಾಖಂಡ ರಾಜ್ಯದ ಉತ್ತರಕಾಶಿ ಜಿಲ್ಲೆಯ ಸಿಲ್ಕ್ಯಾರಾದ ಸುರಂಗದಲ್ಲಿ...

ಮಣಿಪುರ ಫೈಲ್ಸ್ ಲೇಖಕ ಪ್ರಣಬಾನಂದ ದಾಸ್ ವಿರುದ್ಧ ಎಫ್ಐಆರ್ ದಾಖಲು

ಈಶಾನ್ಯ ರಾಜ್ಯದಲ್ಲಿನ ಜನಾಂಗೀಯ ಹಿಂಸಾಚಾರವನ್ನು ಆಧರಿಸಿದ 'ಮಣಿಪುರ ಫೈಲ್ಸ್' ಕೃತಿಯ ಮೂಲಕ...