ಭಾರತೀಯ ಸೇನೆಯನ್ನು ಬಿಜೆಪಿ-ಕಾಂಗ್ರೆಸ್‌ ಎಂದು ವಿಭಜಿಸಿದ ತೇಜಸ್ವಿ ಸೂರ್ಯ

Date:

ದೇಶದ ಮೊದಲ ಪ್ರಧಾನಿ ನೆಹರು ನಮ್ಮದು ಅಹಿಂಸಾ ನೀತಿ, ಹಾಗಾಗಿ ದೇಶಕ್ಕೆ ಸೈನ್ಯವೇ ಬೇಡ ಎಂದು ಹೇಳಿ ಸೈನ್ಯವನ್ನು ವೀಕ್ ಮಾಡಿದ್ದರು. ಕಾಂಗ್ರೆಸ್ ಯಾವಾಗಲೂ ಪಾಕಿಸ್ತಾನಕ್ಕೆ ಶರಣಾಗಿತ್ತು. ಹಾಗಾಗಿ ಇದುವರೆಗೂ ನಾವು ಪಾಕಿಸ್ತಾನದ ವಿರುದ್ಧ ಗೆಲ್ಲಲು ಸಾಧ್ಯವಾಗಿರಲಿಲ್ಲ. ಈಗ ಮೋದಿ ಬಂದು ಪಾಕಿಸ್ತಾನದ ಒಳಗೆ ನುಗ್ಗಿ ಹೊಡೆದಿದ್ದೇವೆ ಎಂದು ಬಿಜೆಪಿ ಸಂಸದ ತೇಜಸ್ವಿ ಸೂರ್ಯ ಸಂಸತ್ತಿನಲ್ಲಿ ನಿಂತು ನೂರಾರು ಸಂಸದರ ಎದುರೇ ಹಸೀ-ಹಸೀ ಸುಳ್ಳು ಹೇಳಿದ್ದಾರೆ. ಸ್ವಾತಂತ್ರ್ಯ ನಂತರದ ಭಾರತೀಯ ಇತಿಹಾಸವನ್ನು ತಿರುಚುವ ಕೃತ್ಯಕ್ಕೆ ಕೈಹಾಕಿದ್ದಾರೆ.

- Advertisement -

ಸೋಮವಾರ, ಸಂಸತ್‌ ಅಧಿವೇಶನದಲ್ಲಿ ಲೋಕಸಭೆಯಲ್ಲಿ ಮಾತನಾಡಿದ ತೇಜಸ್ವಿ ಸೂರ್ಯ, ಪ್ರಧಾನಿ ಮೋದಿ ಅವರನ್ನು ಹೊಗಳುವ ಭರದಲ್ಲಿ ಹಸಿ ಸುಳ್ಳು ಹೇಳಿದ್ದಾರೆ. “ದೇಶಕ್ಕೆ ಸ್ವಾತಂತ್ರ್ಯ ಬಂದ ಸಂದರ್ಭದಲ್ಲಿ ಸೇನೆಯ ಅಗತ್ಯವಿಲ್ಲ ಎಂಬ ನೀತಿಯನ್ನು ನೆಹರು ಹೊಂದಿದ್ದರು. ಸೇನೆ ಮಾಡುವ ಕೆಲಸವನ್ನು ಪೊಲೀಸರೇ ಮಾಡುತ್ತಾರೆ ಎಂಬದಾಗಿ ಬ್ರಿಟಿಷ್ ಜನರಲ್‌ ಲಾಕ್‌ಹಾರ್ಟ್ ಮಾರ್ಟಿನ್‌ ಬಳಿ ನೆಹರು ಹೇಳಿದ್ದರು” ಎಂದು ಆರೋಪಿಸಿದ್ದಾರೆ.

ಇನ್ನಷ್ಟು ವಿಶೇಷ ಲೇಖನಗಳಿಗಾಗಿ, ಇಲ್ಲಿ ಕ್ಲಿಕ್ ಮಾಡಿ →

ಬೆಟ್ಟದಷ್ಟಾದ ಅತ್ಯಾಚಾರ ಪ್ರಕರಣಗಳು – ತೆವಳುತ್ತಿರುವ ನ್ಯಾಯದಾನ

ಪೊಲೀಸರೆಂದು ನಟಿಸಿ ಬೆದರಿಸುವುದು, ನಿರ್ಜನ ಪ್ರದೇಶಗಳಲ್ಲಿ ತೋಳಗಳಂತೆ ಕಾದು ಹಲ್ಲೆಗೈದು ಸಾಮೂಹಿಕ ಅತ್ಯಾಚಾರ ನಡೆಸಿ ಕೊಂದೆಸೆಯುವುದು, ಕಿಂಚಿತ್ತೂ ಭಯವಿಲ್ಲದೆ ಕೃತ್ಯದ ವಿಡಿಯೋ ತುಣುಕುಗಳನ್ನು ಸಾಮಾಜಿಕ ಜಾಲತಾಣಗಳಲ್ಲಿ ಹರಿಬಿಡುವುದಲ್ಲದೆ, ಸಂತ್ರಸ್ತರ ಗುರುತು ಬಹಿರಂಗಪಡಿಸುವ ಪ್ರವೃತ್ತಿ...

ಶಾಮನೂರು ಫ್ಯಾಮಿಲಿಗೆ ಸಚಿವ ಬಸವಂತಪ್ಪ ಕೈ ಮುಗಿಯುವ ಅಗತ್ಯವಿದೆಯೇ?

ಬಸವಂತಪ್ಪನವರನ್ನು ಗೆಲ್ಲಿಸಿದ್ದು, ಕಾಂಗ್ರೆಸ್ಸಿನ ಸಾಂಪ್ರದಾಯಿಕ ಮತದಾರರು. ಶಾಮನೂರು ಕುಟುಂಬದ ಸುತ್ತ ಕಟ್ಟಿರುವ ಕಲ್ಪಿತ ಬಲವನ್ನು ಮೀರಿ, ಬಸವಂತಪ್ಪ ಬೆಳೆಯಬೇಕು ಎಂಬುದು ಕ್ಷೇತ್ರದ ಮತದಾರರ ಅಭಿಪ್ರಾಯ. ಪೌರಕಾರ್ಮಿಕರ ಮಗನಾಗಿ ಹುಟ್ಟಿ, ಸಚಿವ ಸ್ಥಾನದವರೆಗೆ ಬೆಳೆದವರು ಕೆ.ಎಸ್....

ಪಾಕ್‌ಗೆ ತಕ್ಕ ಉತ್ತರ ನೀಡಿದ್ದಾಗಿ ಎದೆ ತಟ್ಟಿಕೊಳ್ಳುವ ಮೋದೀಜಿ,...

ಬಾಲಾಕೋಟ್‌ನಿಂದ ಇತ್ತೀಚಿನ 'ಆಪರೇಷನ್ ಸಿಂಧೂರ್'ವರೆಗೆ ಪಾಕಿಸ್ತಾನಕ್ಕೆ ತಕ್ಕ ಉತ್ತರ ನೀಡಿದ್ದಾಗಿ ಪ್ರಧಾನಿ ಮೋದಿ ನೇತೃತ್ವದ ಬಿಜೆಪಿ ಸರ್ಕಾರ ಎದೆ ತಟ್ಟಿಕೊಳ್ಳುತ್ತಿದೆ. ಶತೃ ದೇಶವನ್ನು ಮಣಿಸುವುದು ಯಾರಿಗಾದರೂ ಹೆಮ್ಮೆಯೇ. ಆದರೆ, ದೇಶದ ಅಖಂಡತೆಗೆ ಅತಿ...

“ತೇಜಸ್ವಿ ಸೂರ್ಯಗೆ ಇತಿಹಾಸದ ಅರಿವಿಲ್ಲ. ಅವರು ಮೊದಲು ಇತಿಹಾಸ ಓದಿಕೊಳ್ಳಬೇಕು. ತೇಜಸ್ವಿ ಸೂರ್ಯ ನಾಲಿಗೆ ಹರಿಬಿಟ್ಟು ಕೋಟ್ಯಂತರ ಸೈನಿಕರಿಗೆ ಅವಮಾನಿಸಿದ್ದಾರೆ. ಈ ಮೊದಲು ಸೇನೆ ಯಾವುದೇ ಶೌರ್ಯ ತೋರಿಯೇ ಇಲ್ಲ ಎಂದಿದ್ದಾರೆ. ಇತಿಹಾಸ ತಿಳಿಯದಿದ್ದರೆ, ಮೊದಲ ಹೋಗಿ ಓದಿಕೊಳ್ಳಲಿ ಅಥವಾ ಪಂಡಿತ್‌ ನೆಹರು ಬಗೆಗಿನ ಹೇಳಿಕೆಗೆ ಸಾಕ್ಷಿ ನೀಡಲಿ” ಎಂದು ಎನ್‌ಸಿಪಿ ಸಂಸದೆ ಸುಪ್ರಿಯಾ ಸುಳೆ ಕಿಡಿಕಾರಿದ್ದಾರೆ.

ಭಾರತೀಯ ಸೇನೆಯ ಇತಿಹಾಸ ಮತ್ತು ಘಟನಾವಳಿಗಳು

1947-48ರಲ್ಲಿ ಜವಾಹರಲಾಲ್ ನೆಹರು ಪ್ರಧಾನಿಯಾಗಿದ್ದಾಗ ಜಮ್ಮು ಮತ್ತು ಕಾಶ್ಮೀರದ ರಾಜ್ಯಕ್ಕೆ ಪಾಕಿಸ್ತಾನದ ಬುಡಕಟ್ಟು ಆಕ್ರಮಣಕಾರರ ಬೆಂಬಲದೊಂದಿಗೆ ದಾಳಿ ನಡೆದಾಗ ಯುದ್ಧ ಆರಂಭವಾಯಿತು. ಭಾರತೀಯ ಸೇನೆಯು ಶ್ರೀನಗರವನ್ನು ರಕ್ಷಿಸಿ, ಆಕ್ರಮಿತ ಪ್ರದೇಶದ ಗಣನೀಯ ಭಾಗವನ್ನು ಮರಳಿ ಪಡೆಯಿತು. 1949ರಲ್ಲಿ ಯುಎನ್‌ನ ಮಧ್ಯಸ್ಥಿಕೆಯಿಂದ ಯುದ್ಧವಿರಾಮ ಒಪ್ಪಂದವಾಯಿತು, ಆದರೆ ಕಾಶ್ಮೀರದ ಒಂದು ಭಾಗ (PoK) ಪಾಕಿಸ್ತಾನದ ನಿಯಂತ್ರಣದಲ್ಲಿಯೇ ಉಳಿಯಿತು. ಭಾರತವು ತನ್ನ ಪ್ರದೇಶವನ್ನು ರಕ್ಷಿಸಿದ್ದರಿಂದ ಇದನ್ನು ಭಾರತದ ತಾಂತ್ರಿಕ ಗೆಲುವು ಎಂದು ಪರಿಗಣಿಸಲಾಗುತ್ತದೆ.

ಆಗಸ್ಟ್-ಸೆಪ್ಟೆಂಬರ್ 1965ರಲ್ಲಿ ಲಾಲ್ ಬಹದ್ದೂರ್ ಶಾಸ್ತ್ರಿ ಪ್ರಧಾನಿಯಾಗಿದ್ದಾಗ ಪಾಕಿಸ್ತಾನವು ಕಾಶ್ಮೀರದಲ್ಲಿ “ಆಪರೇಷನ್ ಜಿಬ್ರಾಲ್ಟರ್” ಆರಂಭಿಸಿ, ಒಳನುಸುಳುವಿಕೆಯ ಮೂಲಕ ದಾಳಿ ನಡೆಸಿತು. ಭಾರತವು ರಕ್ಷಣಾತ್ಮಕವಾಗಿ ಪ್ರತಿದಾಳಿ ನಡೆಸಿತು ಮತ್ತು ಪಾಕಿಸ್ತಾನದ ಗಡಿಯಾಚೆಗೆ ತನ್ನ ಸೇನೆಯನ್ನು ಕಳುಹಿಸಿತು, ಲಾಹೋರ್‌ನವರೆಗೂ ಮುನ್ನಡೆಯಿತು. ತಾಶ್ಕೆಂಟ್ ಒಪ್ಪಂದದ ಮೂಲಕ ಯುದ್ಧವಿರಾಮ ಘೋಷಿಸಲಾಯಿತು. ಭಾರತವು ತನ್ನ ಪ್ರದೇಶವನ್ನು ರಕ್ಷಿಸಿ, ಪಾಕಿಸ್ತಾನದ ದಾಳಿಯನ್ನು ವಿಫಲಗೊಳಿಸಿದ್ದರಿಂದ ಇದನ್ನು ಭಾರತದ ಗೆಲುವು ಎಂದು ಪರಿಗಣಿಸಲಾಗುತ್ತದೆ.

1971ರ ಭಾರತ-ಪಾಕಿಸ್ತಾನ ಯುದ್ಧ (ಬಾಂಗ್ಲಾದೇಶ ವಿಮೋಚನಾ ಯುದ್ಧ): ಇಂದಿರಾ ಗಾಂಧಿ ಪ್ರಧಾನಿಯಾಗಿದ್ದಾಗ ಈ ಯುದ್ಧವು ಪೂರ್ವ ಪಾಕಿಸ್ತಾನದಲ್ಲಿ (ಈಗಿನ ಬಾಂಗ್ಲಾದೇಶ) ಪಾಕಿಸ್ತಾನದ ಸೇನೆಯಿಂದ ನಡೆದ ಜನಾಂಗೀಯ ಹತ್ಯಾಕಾಂಡದಿಂದ ಉಂಟಾಯಿತು. ಭಾರತವು ಬಾಂಗ್ಲಾದೇಶದ ಮುಕ್ತಿ ಬಾಹಿನಿಯನ್ನು ಬೆಂಬಲಿಸಿ, ಪಾಕಿಸ್ತಾನದ ವಿರುದ್ಧ ಯುದ್ಧ ಆರಂಭಿಸಿತು. ಭಾರತೀಯ ಸೇನೆಯು 13 ದಿನಗಳಲ್ಲಿ ಢಾಕಾವನ್ನು ವಶಪಡಿಸಿಕೊಂಡಿತು, ಮತ್ತು ಪಾಕಿಸ್ತಾನದ 93,000 ಸೈನಿಕರು ಶರಣಾದರು. ಈ ಯುದ್ಧವು ಬಾಂಗ್ಲಾದೇಶದ ಸ್ವಾತಂತ್ರ್ಯಕ್ಕೆ ಕಾರಣವಾಯಿತು ಮತ್ತು ಭಾರತದ ಐತಿಹಾಸಿಕ ಗೆಲುವಾಗಿ ದಾಖಲಾಯಿತು.

1999ರ ಕಾರ್ಗಿಲ್ ಯುದ್ಧ: ಅಟಲ್ ಬಿಹಾರಿ ವಾಜಪೇಯಿ ಪ್ರಧಾನಿಯಾಗಿದ್ದಾಗ ಪಾಕಿಸ್ತಾನದ ಸೇನೆ ಮತ್ತು ಉಗ್ರಗಾಮಿಗಳು ಕಾರ್ಗಿಲ್‌ನ ಲೈನ್ ಆಫ್ ಕಂಟ್ರೋಲ್ (LoC) ಒಳಗೆ ಒಳನುಸುಳಿದರು. ಭಾರತವು “ಆಪರೇಷನ್ ವಿಜಯ್” ಆರಂಭಿಸಿ, ಕಠಿಣ ಪರ್ವತ ಪ್ರದೇಶದಲ್ಲಿ ಯುದ್ಧ ನಡೆಸಿತು. ಭಾರತವು ತನ್ನ ಎಲ್ಲಾ ಪ್ರದೇಶಗಳನ್ನು ಮರಳಿ ವಶಪಡಿಸಿಕೊಂಡಿತು, ಮತ್ತು ಪಾಕಿಸ್ತಾನವು ಹಿಂದೆ ಸರಿಯಿತು. ಇದು ಭಾರತದ ನಿರ್ಣಾಯಕ ಗೆಲುವಾಗಿತ್ತು.

ಜವಾಬ್ದಾರಿಯುತ ಸಂಸದನಾಗಿ ದೇಶದ ಸೇನೆಯ ಬಗ್ಗೆ ಸಾಮಾನ್ಯ ತಿಳಿವಳಿಕೆಯೂ ಇಲ್ಲದಿದ್ದರೆ, ಆತ ಮೋದಿಯ ಭಕ್ತನಾಗುವುದು, ಭಜನಾ ಮಂಡಳಿಯ ನಾಯಕನಾಗುವುದು ಒಳ್ಳೆಯದು.

ಪೋಸ್ಟ್ ಹಂಚಿಕೊಳ್ಳಿ:

ಪೋಸ್ಟ್ ಹಂಚಿಕೊಳ್ಳಿ:

ಈ ಹೊತ್ತಿನ ಪ್ರಮುಖ ಸುದ್ದಿ

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ಸಿಇಸಿ ಗ್ಯಾನೇಶ್‌ ಕುಮಾರ್‌ ವಿರುದ್ಧ ದೇಶವ್ಯಾಪಿ ಪ್ರತಿಭಟನೆ; ಹೈದರಾಬಾದ್‌ನಲ್ಲಿ ‘ಸಿಜೆಪಿ’ ಮಹತ್ವದ ಸಭೆ

ಮುಖ್ಯ ಚುನಾವಣಾ ಆಯುಕ್ತ (ಸಿಇಸಿ) ಗ್ಯಾನೇಶ್ ಕುಮಾರ್ ಅವರ ರಾಜೀನಾಮೆಗೆ ಆಗ್ರಹಿಸಿ...

ಜಮ್ಮು-ಕಾಶ್ಮೀರಕ್ಕೆ ಪೂರ್ಣ ರಾಜ್ಯ ಸ್ಥಾನಮಾನದ ನಿರ್ಣಯ ಅಂಗೀಕಾರ; ಸದನದಲ್ಲಿ ಬಿಜೆಪಿ ಗದ್ದಲ

ಜಮ್ಮು-ಕಾಶ್ಮೀರಕ್ಕೆ ತುರ್ತಾಗಿ ಪೂರ್ಣ ರಾಜ್ಯದ ಸ್ಥಾನಮಾನವನ್ನು ಮರುಸ್ಥಾಪಿಸಬೇಕು ಎಂದು ಆಗ್ರಹಿಸುವ ನಿರ್ಣಯವನ್ನು...

ಅಕ್ಟೋಬರ್ 8ರೊಳಗೆ ಪಶ್ಚಿಮ ಬಂಗಾಳ ಶಾಸಕರ ಅನರ್ಹತೆ ಅರ್ಜಿಗಳ ವಿಲೇವಾರಿಗೆ ಸ್ಪೀಕರ್​ಗೆ ಸುಪ್ರೀಂ ಸೂಚನೆ

ಪಕ್ಷಾಂತರ ನಿಷೇಧ ಕಾಯ್ದೆ ಹಾಗೂ ಸಂವಿಧಾನದ ಹತ್ತನೇ ಶೆಡ್ಯೂಲ್‌ನ ಅಡಿಯಲ್ಲಿ, ರಿತಬ್ರತಾ...

ಮೋದಿ ಸರ್ಕಾರ ECಗೆ ಇಮ್ಯೂನಿಟಿ ನೀಡಿದ್ದರೂ ಹೊಣೆಗಾರಿಕೆಯಿಂದ ತಪ್ಪಿಸಿಕೊಳ್ಳಲಾಗಲ್ಲ: ಕಪಿಲ್ ಸಿಬಲ್

ಮುಖ್ಯ ಚುನಾವಣಾ ಆಯುಕ್ತರಿಗೆ (CEC) ಕ್ರಿಮಿನಲ್ ಪ್ರಕರಣಗಳಿಂದ ಕಾನೂನು ರಕ್ಷಣೆ ನೀಡಲಾಗಿದೆ...