ಕಂಪ್ಲೀಟ್‌ ಡೀಟೇಲ್ | ಇವರೇ ನೋಡಿ ‘ಕಾಕ್ರೋಚ್ ಜನತಾ ಪಾರ್ಟಿ’ ಮುನ್ನಡೆಸುವ 12 ಮಂದಿ

Date:

ಜಂತರ್ ಮಂತರ್‌ನ 36 ದಿನಗಳ ಪ್ರತಿಭಟನೆಯ ಬಳಿಕ ‘ಕಾಕ್ರೋಚ್ ಜನಪಾ ಪಾರ್ಟಿ’ (ಸಿಜೆಪಿ) ಸಂಘಟನೆ ವಿಸ್ತರಣೆಗೆ ಮುಂದಾಗಿದೆ. ಪತ್ರಿಕೋದ್ಯಮ, ತಂತ್ರಜ್ಞಾನ, ಕಾನೂನು, ಸಾರ್ವಜನಿಕ ನೀತಿ, ಹಣಕಾಸು ಹಾಗೂ ಉದ್ಯಮ ಕ್ಷೇತ್ರದಲ್ಲಿ ತೊಡಗಿರುವ ಯುವಜನರಿಗೆ ಪ್ರಮುಖ ಹೊಣೆಗಾರಿಕೆ ನೀಡಿದೆ. ಮುಂದಿನ ಆರು ತಿಂಗಳ ಕಾಲ ಸಂಘಟನೆಯನ್ನು ಮುನ್ನಡೆಸಲಿರುವ 12 ಸದಸ್ಯರ ತಂಡವನ್ನು ಘೋಷಿಸಿದೆ.

- Advertisement -

ಮಹಾರಾಷ್ಟ್ರದ ಸಂಭಾಜಿ ನಗರದಲ್ಲಿ ಎರಡು ದಿನಗಳ ಸಭೆ ನಡೆಸಿರುವ ಸಿಜೆಪಿ, ತನ್ನ 12 ಮಂದಿ ನಾಯಕತ್ವದ ತಂಡವನ್ನು ಪ್ರಕಟಿಸಿದೆ. ತಂಡದಲ್ಲಿ ಪತ್ರಕರ್ತರು, ಎಂಜಿನಿಯರ್‌ಗಳು, ವಕೀಲರು, ಚಾರ್ಟರ್ಡ್ ಅಕೌಂಟೆಂಟ್‌ಗಳು, ಉದ್ಯಮಿಗಳು ಹಾಗೂ ಹೋಟೆಲ್ ಮ್ಯಾನೇಜ್ಮೆಂಟ್ ಪದವೀಧರರು ಇರುವುದು ವಿಶೇಷವಾಗಿದೆ.

ಇನ್ನಷ್ಟು ವಿಶೇಷ ಲೇಖನಗಳಿಗಾಗಿ, ಇಲ್ಲಿ ಕ್ಲಿಕ್ ಮಾಡಿ

ಸೆ.23 ‘ಭೀಮ ಸಂಕಲ್ಪ ದಿನ’: ಡಾ ಬಿ ಆರ್...

1917ರ ಸೆಪ್ಟೆಂಬರ್ 23ರಂದು ವಡೋದರದ ಆಲದ ಮರದ ಕೆಳಗೆ ಕುಳಿತಿದ್ದ ಯುವ ಅಂಬೇಡ್ಕರ್ ಅವರ ಬಳಿ ಅಧಿಕಾರವಿರಲಿಲ್ಲ, ದೊಡ್ಡ ಸಂಘಟನೆಯಿರಲಿಲ್ಲ. ಆದರೆ ಅನ್ಯಾಯವನ್ನು ಒಪ್ಪಿಕೊಳ್ಳದ ಮನಸ್ಸು ಮತ್ತು ಸಮಾಜವನ್ನು ಬದಲಿಸಬೇಕೆಂಬ ದೃಢ ಸಂಕಲ್ಪವಿತ್ತು....

ಸೌಜನ್ಯ ಪ್ರಕರಣ: ಪ್ರಭಾವಿಗಳ ಜೊತೆ ಲಜ್ಜೆ ಬಿಟ್ಟು ಹೆಜ್ಜೆ...

ತನಿಖಾಧಿಕಾರಿಗಳು ಹಣದ ಆಮಿಷಕ್ಕೆ ಒಳಗಾಗಿದ್ದರೇ ಅಥವಾ ಬಲಾಢ್ಯರ ಒತ್ತಡಕ್ಕೆ ಮಣಿದು ಸಾಕ್ಷ್ಯ ನಾಶ ಮಾಡಿ ಅಪರಾಧಿಗಳ ರಕ್ಷಣೆಗೆ ನಿಂತರೇ ಎಂಬ ಅನುಮಾನ ಸಾಮಾನ್ಯ ಜನರಿಗೂ ಬರುತ್ತಿರುವಾಗ ಕರ್ನಾಟಕದ ಬಹುತೇಕ ಸುದ್ದಿ ಮಾಧ್ಯಮಗಳು ಈ...

ಉತ್ತರ ಪ್ರದೇಶ | ಅಖಿಲೇಶ್ ‘ಧರ್ಮ ರಕ್ಷಣೆ’ಯ ಯುದ್ಧ...

ಉತ್ತರ ಪ್ರದೇಶದ ಯುವಜನತೆಯ (Gen Z) ಅಸಮಾಧಾನ, ನಿರುದ್ಯೋಗ ಸಮಸ್ಯೆ ಮತ್ತು ಬದಲಾಗುತ್ತಿರುವ ಜಾತಿ ಸಮೀಕರಣಗಳು ತಮಗೆ ಪೂರಕವಾಗಿವೆ ಎಂಬುದನ್ನು ಅಖಿಲೇಶ್ ಯಾದವ್ ಅರಿತಿದ್ದಾರೆ. ತಮ್ಮ ಪಕ್ಷ ಕೇವಲ "ಮುಸ್ಲಿಂ ಮತ್ತು ಯಾದವರ...

ಬೀದಿಯ ಹೋರಾಟಕ್ಕೆ ಮಾತ್ರ ಸೀಮಿತವಾಗದೆ ದೇಶದ ವಿವಿಧ ಭಾಗಗಳಲ್ಲಿ ಯುವಜನರನ್ನು ಸಂಘಟಿಸಿ ತನ್ನ ಚಟುವಟಿಕೆಗಳನ್ನು ವಿಸ್ತರಿಸುವುದು ಸಿಜೆಪಿಯ ಮುಂದಿನ ಗುರಿಯಾಗಿದೆ. ಆದರೆ, ಸಂಘಟನೆಯು ರಾಜಕೀಯ ಪಕ್ಷವಾಗಿ ಪರಿವರ್ತನೆಯಾಗುವ ಯಾವುದೇ ಯೋಜನೆ ಹೊಂದಿಲ್ಲ ಎಂದು ಸಂಘಟನೆ ಮತ್ತೊಮ್ಮೆ ಸ್ಪಷ್ಟಪಡಿಸಿದೆ. ಸಿಜೆಪಿ ನಾಯಕತ್ವದ ವಿವರ ಇಲ್ಲಿದೆ;

ಅಭಿಜೀತ್ ದಿಪ್ಕೆ – ಸಂಸ್ಥಾಪಕ, ರಾಷ್ಟ್ರೀಯ ಸಂಚಾಲಕ

ಮಹಾರಾಷ್ಟ್ರದ ಸಂಭಾಜಿ ನಗರದ 30 ವರ್ಷದ ಅಭಿಜೀತ್ ದೀಪ್ಕೆ CJPಯ ಸಂಸ್ಥಾಪಕ ಮತ್ತು ರಾಷ್ಟ್ರೀಯ ಸಂಚಾಲಕರಾಗಿದ್ದಾರೆ. ಪುಣೆಯಲ್ಲಿ ಪತ್ರಿಕೋದ್ಯಮ ಮತ್ತು ಸಮೂಹ ಸಂವಹನ ವಿಷಯದಲ್ಲಿ ಪದವಿ ಪಡೆದಿರುವ ಅವರು, ಅಮೆರಿಕದ ಬೋಸ್ಟನ್ ವಿಶ್ವವಿದ್ಯಾಲಯದಿಂದ ಪಬ್ಲಿಕ್ ರಿಲೇಷನ್ಸ್‌ನಲ್ಲಿ ಸ್ನಾತಕೋತ್ತರ ಪದವಿ ಪಡೆದಿದ್ದಾರೆ.

ಅಶುತೋಷ್ ರಾಂಕಾ – ಸಹ ಸಂಚಾಲಕ

ರಾಜಸ್ಥಾನದ ಜೈಪುರದ 30 ವರ್ಷದ ಅಶುತೋಷ್ ರಾಂಕಾ ಅವರು ಐಐಟಿ ಕಾನ್ಪುರದಿಂದ ಬಿ.ಟೆಕ್ ಪದವಿ ಪಡೆದಿದ್ದಾರೆ. ಲಂಡನ್ ಸ್ಕೂಲ್ ಆಫ್ ಎಕನಾಮಿಕ್ಸ್‌ನಿಂದ ಸಾರ್ವಜನಿಕ ಆಡಳಿತದಲ್ಲಿ ಸ್ನಾತಕೋತ್ತರ ಪದವಿ ಪಡೆದಿದ್ದಾರೆ. ಅವರಿಗೆ CJPಯ ಸಹ ಸಂಚಾಲಕರ ಜವಾಬ್ದಾರಿ ನೀಡಲಾಗಿದೆ.

ಸೌರವ್ ದಾಸ್ – ಸಹ ಸಂಚಾಲಕ

ದಿಲ್ಲಿಯ 27 ವರ್ಷದ ಸೌರವ್ ದಾಸ್ ಪತ್ರಿಕೋದ್ಯಮ ಮತ್ತು ಸಮೂಹ ಸಂವಹನ ವಿಷಯದಲ್ಲಿ ಪದವಿ ಪಡೆದಿದ್ದಾರೆ. ಜಂತರ್ ಮಂತರ್ ಪ್ರತಿಭಟನೆಯ ಸಂದರ್ಭದಲ್ಲಿಯೂ ಪ್ರಮುಖವಾಗಿ ಗುರುತಿಸಿಕೊಂಡಿದ್ದ ಅವರಿಗೆ ಸಹ ಸಂಚಾಲಕರ ಜವಾಬ್ದಾರಿ ನೀಡಲಾಗಿದೆ.

ಅಜಿಂಕ್ಯ ಶಿಂಧೆ – ರಾಷ್ಟ್ರೀಯ ಸಂಘಟನಾ ಉಸ್ತುವಾರಿ

ಮಹಾರಾಷ್ಟ್ರದ ಲಾತೂರ್‌ನ 35 ವರ್ಷದ ಅಜಿಂಕ್ಯ ಶಿಂಧೆ, ರಾಯಗಡದ ಲೋನೆರೆಯಲ್ಲಿರುವ ಡಾ. ಬಾಬಾಸಾಹೇಬ್ ಅಂಬೇಡ್ಕರ್ ತಾಂತ್ರಿಕ ವಿಶ್ವವಿದ್ಯಾಲಯದಿಂದ ಬಿ.ಟೆಕ್ ಪದವಿ ಪಡೆದಿದ್ದಾರೆ. ಅವರನ್ನು ರಾಷ್ಟ್ರೀಯ ಸಂಘಟನಾ ಉಸ್ತುವಾರಿಯಾಗಿ ನೇಮಕ ಮಾಡಲಾಗಿದೆ.

ದೀಪಕ್ ಬಲಿಯಾನ್ – ಉತ್ತರ ವಲಯದ ಮುಖ್ಯಸ್ಥ

ರಾಜಸ್ಥಾನದ ಅಲ್ವಾರ್‌ನ 26 ವರ್ಷದ ದೀಪಕ್ ಬಲಿಯಾನ್ ಅವರು ಭರತ್‌ಪುರದಿಂದ ರಾಜಕೀಯ ವಿಜ್ಞಾನದಲ್ಲಿ ಸ್ನಾತಕೋತ್ತರ ಪದವಿ ಪಡೆದಿದ್ದಾರೆ. ರೈತ ಕುಟುಂಬದಿಂದ ಬಂದಿರುವ ಅವರು ಕೃಷಿ ಸಂಬಂಧಿತ ಹೋರಾಟಗಳಲ್ಲಿ ಸಕ್ರಿಯವಾಗಿ ತೊಡಗಿಸಿಕೊಂಡಿದ್ದಾರೆ. ಅವರಿಗೆ ಸಂಘಟನಾ ಸಹ ಉಸ್ತುವಾರಿ ಮತ್ತು ಉತ್ತರ ವಲಯದ ಮುಖ್ಯಸ್ಥರ ಜವಾಬ್ದಾರಿ ನೀಡಲಾಗಿದೆ.

ಅಫ್ರೀನ್ ನವಾಜ್ – ರಾಷ್ಟ್ರೀಯ ಕಾರ್ಯದರ್ಶಿ

ಕರ್ನಾಟಕದ ಬೆಂಗಳೂರಿನ 34 ವರ್ಷದ ಅಫ್ರೀನ್ ನವಾಜ್ ಅವರು ಎಂಬಿಎ ಪದವೀಧರರಾಗಿದ್ದು, ಪ್ರಸ್ತುತ ಉದ್ಯಮಿಯಾಗಿ ಕಾರ್ಯನಿರ್ವಹಿಸುತ್ತಿದ್ದಾರೆ. ಅವರನ್ನು CJPಯ ರಾಷ್ಟ್ರೀಯ ಕಾರ್ಯದರ್ಶಿಯಾಗಿ ನೇಮಕ ಮಾಡಲಾಗಿದೆ.

ವಿಜಯ್ ರೆಡ್ಡಿ ಮಲ್ಲಂಗಿ – ಮಾಧ್ಯಮ ಮತ್ತು ದಕ್ಷಿಣ ವಲಯ

ತೆಲಂಗಾಣದ ಹೈದರಾಬಾದ್‌ನ 30 ವರ್ಷದ ವಿಜಯ್ ರೆಡ್ಡಿ ಮಲ್ಲಂಗಿ ಅವರು ಉಸ್ಮಾನಿಯಾ ವಿಶ್ವವಿದ್ಯಾಲಯದಿಂದ ಸಿವಿಲ್ ಎಂಜಿನಿಯರಿಂಗ್‌ನಲ್ಲಿ ಪದವಿ ಪಡೆದಿದ್ದಾರೆ. ಅಮೆರಿಕದ ಕೊಲಂಬಿಯಾ ವಿಶ್ವವಿದ್ಯಾಲಯದಿಂದ ಅಪ್ಲೈಡ್ ಸೈನ್ಸ್‌ನಲ್ಲಿ ಸ್ನಾತಕೋತ್ತರ ಪದವಿ ಪಡೆದಿದ್ದಾರೆ. ಅವರಿಗೆ ಮಾಧ್ಯಮ ವಿಭಾಗದ ಮುಖ್ಯಸ್ಥ ಮತ್ತು ದಕ್ಷಿಣ ವಲಯದ ಮುಖ್ಯಸ್ಥರ ಜವಾಬ್ದಾರಿ ನೀಡಲಾಗಿದೆ.

ರತ್ನಾ ಸಿಂಗ್ – ಕಾನೂನು ವ್ಯವಹಾರಗಳ ಮುಖ್ಯಸ್ಥೆ

ಉತ್ತರ ಪ್ರದೇಶದ ಲಕ್ನೋದ 31 ವರ್ಷದ ರತ್ನಾ ಸಿಂಗ್ ದೆಹಲಿಯ ಗುರು ಗೋವಿಂದ್ ಸಿಂಗ್ ಇಂದ್ರಪ್ರಸ್ಥ ವಿಶ್ವವಿದ್ಯಾಲಯದಿಂದ ಎಲ್ಎಲ್‌ಬಿ ಪದವಿ ಪಡೆದಿದ್ದಾರೆ. ಅವರು ಸಂಘಟನೆಯ ಕಾನೂನು ವ್ಯವಹಾರಗಳ ವಿಭಾಗವನ್ನು ಮುನ್ನಡೆಸಲಿದ್ದಾರೆ.

ವೈಷ್ಣವಿ ಗೌರ್ – ಸಂಶೋಧನೆ ಮತ್ತು ನೀತಿ ವಿಭಾಗ

ಉತ್ತರಾಖಂಡದ ಡೆಹ್ರಾಡೂನ್‌ನ 29 ವರ್ಷದ ವೈಷ್ಣವಿ ಗೌರ್ ಅವರು ಚಂಡೀಗಢದ ಪಂಜಾಬ್ ವಿಶ್ವವಿದ್ಯಾಲಯದಿಂದ ಬಿಎ ಎಲ್ಎಲ್‌ಬಿ (ಆನರ್ಸ್) ಪದವಿ ಪಡೆದಿದ್ದಾರೆ. ಅವರಿಗೆ CJPಯ ಸಂಶೋಧನೆ ಮತ್ತು ಸಾರ್ವಜನಿಕ ನೀತಿ ವಿಭಾಗದ ಜವಾಬ್ದಾರಿ ನೀಡಲಾಗಿದೆ.

ರೋಹನ್ ದೇಶಪಾಂಡೆ – ತಂತ್ರಜ್ಞಾನ ವಿಭಾಗ

ಮುಂಬೈನ 31 ವರ್ಷದ ರೋಹನ್ ದೇಶಪಾಂಡೆ ಐಎಚ್ಎಂ ಮುಂಬೈನಿಂದ ಹೋಟೆಲ್ ಮ್ಯಾನೇಜ್ಮೆಂಟ್ ಪದವಿ ಪಡೆದಿದ್ದಾರೆ. ಅವರನ್ನು ಸಂಘಟನೆಯ ತಂತ್ರಜ್ಞಾನ ವಿಭಾಗದ ಮುಖ್ಯಸ್ಥರನ್ನಾಗಿ ನೇಮಿಸಲಾಗಿದೆ.

ಯೋಗೇಶ್ ಇಂಗಳೆ – ಹಣಕಾಸು ಮತ್ತು ಪಶ್ಚಿಮ ವಲಯ

ಮಹಾರಾಷ್ಟ್ರದ ಪುಣೆಯ 33 ವರ್ಷದ ಯೋಗೇಶ್ ಇಂಗಳೆ ಚಾರ್ಟರ್ಡ್ ಅಕೌಂಟೆಂಟ್ (CA) ಆಗಿದ್ದಾರೆ. ಅವರಿಗೆ ಹಣಕಾಸು ವಿಭಾಗದ ಮುಖ್ಯಸ್ಥ ಮತ್ತು ಪಶ್ಚಿಮ ವಲಯದ ಮುಖ್ಯಸ್ಥರ ಹೊಣೆಗಾರಿಕೆ ನೀಡಲಾಗಿದೆ.

ಅಂಕಿತ್ ಭಾರದ್ವಾಜ್ – ಪೂರ್ವ ಮತ್ತು ಈಶಾನ್ಯ ವಲಯ

ಉತ್ತರ ಪ್ರದೇಶದ ಗಾಜಿಯಾಬಾದ್‌ನ 35 ವರ್ಷದ ಅಂಕಿತ್ ಭಾರದ್ವಾಜ್ ಕೂಡ ಚಾರ್ಟರ್ಡ್ ಅಕೌಂಟೆಂಟ್ ಆಗಿದ್ದಾರೆ. ಅವರಿಗೆ ಸಂಘಟನೆಯ ಉಸ್ತುವಾರಿಯ ಜೊತೆಗೆ ಪೂರ್ವ ಮತ್ತು ಈಶಾನ್ಯ ವಲಯಗಳ ಮುಖ್ಯಸ್ಥರ ಜವಾಬ್ದಾರಿ ವಹಿಸಲಾಗಿದೆ.

ಜಂತರ್ ಮಂತರ್‌ನ ಸುದೀರ್ಘ ಪ್ರತಿಭಟನೆಯ ನಂತರ CJP ಈಗ ತನ್ನ ಹೋರಾಟವನ್ನು ಸಂಘಟನಾತ್ಮಕ ರೂಪದಲ್ಲಿ ದೇಶದ ವಿವಿಧ ಭಾಗಗಳಿಗೆ ಕೊಂಡೊಯ್ಯಲು ಮುಂದಾಗಿದೆ. ಇದಕ್ಕಾಗಿ ಸಾಂಪ್ರದಾಯಿಕ ರಾಜಕೀಯ ಹಿನ್ನೆಲೆಯ ನಾಯಕರ ಬದಲಿಗೆ ವಿಭಿನ್ನ ವೃತ್ತಿಪರ ಮತ್ತು ಶೈಕ್ಷಣಿಕ ಹಿನ್ನೆಲೆಯ ಯುವಜನರನ್ನು ಮುಂಚೂಣಿಗೆ ತಂದಿರುವುದು ಗಮನ ಸೆಳೆದಿದೆ.

ಮಾಹಿತಿ ಮೂಲ: ದಿ ಇಂಡಿಯನ್ ಎಕ್ಸ್‌ಪ್ರೆಸ್‌

ಪೋಸ್ಟ್ ಹಂಚಿಕೊಳ್ಳಿ:

ಪೋಸ್ಟ್ ಹಂಚಿಕೊಳ್ಳಿ:

ಈ ಹೊತ್ತಿನ ಪ್ರಮುಖ ಸುದ್ದಿ

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ಬೀದರ್‌ | ಗ್ರಾಮೀಣದಲ್ಲಿ ಕುಡಿಯುವ ನೀರಿನ ಸಮಸ್ಯೆಯೇ? ಹಾಗಾದ್ರೆ ಈ ನಂಬರ್‌ಗೆ ಕರೆ ಮಾಡಿ

ಬೀದರ್ ಜಿಲ್ಲೆಯ ಗ್ರಾಮೀಣ ಪ್ರದೇಶಗಳಲ್ಲಿ ಸಾರ್ವಜನಿಕರಿಗೆ ಕುಡಿಯುವ ನೀರಿಗೆ ಸಂಬಂಧಿಸಿದ ಸಮಸ್ಯೆಗಳು...

ಸೌಜನ್ಯ ಪ್ರಕರಣ: ಪ್ರಭಾವಿಗಳ ಜೊತೆ ಲಜ್ಜೆ ಬಿಟ್ಟು ಹೆಜ್ಜೆ ಹಾಕಿದ ಮಾಧ್ಯಮಗಳು

ತನಿಖಾಧಿಕಾರಿಗಳು ಹಣದ ಆಮಿಷಕ್ಕೆ ಒಳಗಾಗಿದ್ದರೇ ಅಥವಾ ಬಲಾಢ್ಯರ ಒತ್ತಡಕ್ಕೆ ಮಣಿದು ಸಾಕ್ಷ್ಯ...

ಕಲಬುರಗಿಯಲ್ಲಿ ಸೆ.27ರಂದು ಬಸವಾದಿ ಶರಣರ ಹಿಂದೂ ಸಮಾವೇಶ : ಕನೇರಿ ಸ್ವಾಮೀಜಿಗೆ ಅನುಮತಿ ಬೇಡ

ಕಲಬುರಗಿಯಲ್ಲಿ ಸೆ. 27ರಂದು ಹಮ್ಮಿಕೊಳ್ಳಲಾಗಿರುವ ಕನೇರಿ ಮಠದ ಅದೃಶ್ಯ ಕಾಡಸಿದ್ಧೇಶ್ವರ ಸ್ವಾಮೀಜಿ...