ಎವರೆಸ್ಟ್ ಶಿಖರದಿಂದ ಹಿಂತಿರುಗುವಾಗ ಇಬ್ಬರು ಭಾರತೀಯ ಪರ್ವತಾರೋಹಿಗಳ ಸಾವು

Date:

ವಿಶ್ವದ ಅತಿ ಎತ್ತರದ ಮೌಂಟ್ ಎವರೆಸ್ಟ್ ಶಿಖರವನ್ನು (8,848.86 ಮೀಟರ್) ಯಶಸ್ವಿಯಾಗಿ ಏರಿ, ಕೆಳಗೆ ಇಳಿಯುವಾಗ ಉಂಟಾದ ತೀವ್ರ ಬಳಲಿಕೆಯಿಂದ ಇಬ್ಬರು ಭಾರತೀಯ ಪರ್ವತಾರೋಹಿಗಳು ಮೃತಪಟ್ಟಿದ್ದಾರೆ ಎಂದು ನೇಪಾಳದ ಅಧಿಕಾರಿಗಳು ತಿಳಿಸಿದ್ದಾರೆ. ಮೃತಪಟ್ಟವರನ್ನು ಅರುಣ್ ಕುಮಾರ್ ತಿವಾರಿ ಹಾಗೂ ಸಂದೀಪ್ ಅರೆ ಎಂದು ಗುರುತಿಸಲಾಗಿದೆ.

- Advertisement -

​ನೇಪಾಳದ ಎಕ್ಸ್‌ಪೆಡಿಶನ್ ಆಪರೇಟರ್ಸ್ ಅಸೋಸಿಯೇಷನ್‌ನ ಪ್ರಧಾನ ಕಾರ್ಯದರ್ಶಿ ರಿಷಿ ಭಂಡಾರಿ ಈ ಬಗ್ಗೆ ಮಾಹಿತಿ ನೀಡಿದ್ದು, ಬುಧವಾರ ಸಂದೀಪ್ ಅರೆ ಅವರು ಶಿಖರವನ್ನು ತಲುಪಿದ್ದರು. ಗುರುವಾರ ಸಂಜೆ 5:30ರ ಸುಮಾರಿಗೆ ಅರುಣ್ ಕುಮಾರ್ ತಿವಾರಿ ಶಿಖರವನ್ನು ಏರಿದ್ದರು. ಆದರೆ, ಹಿಂತಿರುಗಿ ಬರುವಾಗ ಇಬ್ಬರೂ ತೀವ್ರ ಸುಸ್ತು ಮತ್ತು ಬಳಲಿಕೆಗೆ ಒಳಗಾಗಿದ್ದರು. ಜೊತೆಯಲ್ಲಿದ್ದ ಮಾರ್ಗದರ್ಶಿಗಳು (ಶೆರ್ಪಾಗಳು) ಅವರನ್ನು ರಕ್ಷಿಸಲು ಸತತ ಪ್ರಯತ್ನ ಪಟ್ಟರೂ ಪ್ರಾಣ ಉಳಿಸಲು ಸಾಧ್ಯವಾಗಲಿಲ್ಲ ಎಂದು ಅವರು ವಿವರಿಸಿದ್ದಾರೆ.

ಇನ್ನಷ್ಟು ವಿಶೇಷ ಲೇಖನಗಳಿಗಾಗಿ, ಇಲ್ಲಿ ಕ್ಲಿಕ್ ಮಾಡಿ →

ಬರಗಾಲ | ಕಾಡಿನ ಮೌನದ ಹಿಂದೆ ಅಡಗಿದೆ ಜೀವಸಂಕುಲದ...

ಒಂದು ಆನೆಗೆ ದಿನಕ್ಕೆ ನೂರಾರು ಲೀಟರ್ ನೀರು ಮತ್ತು ನೂರಾರು ಕೆ.ಜಿ. ಆಹಾರ ಬೇಕಾಗುತ್ತದೆ. ಇನ್ನು ಕಾಡಿನಲ್ಲಿರುವ ಸಾವಿರಾರು ಆನೆಗಳು, ಹುಲಿಗಳು, ಚಿರತೆಗಳು, ಜಿಂಕೆಗಳು, ಕಾಡೆಮ್ಮೆಗಳು ಸೇರಿದಂತೆ ವಿವಿಧ ವನ್ಯಜೀವಿಗಳ ಅಗತ್ಯವನ್ನು ಲೆಕ್ಕಹಾಕಿದರೆ...

ಬಾಗಲಕೋಟೆ | ಸರ್ಕಾರಿ ಮೆಡಿಕಲ್ ಕಾಲೇಜಿನಲ್ಲಿ ತರಗತಿ ಆರಂಭ;...

ಬಾಗಲಕೋಟೆ ಜಿಲ್ಲೆಯ ಜನರ ಬಹುದಿನಗಳ ನಿರೀಕ್ಷೆಗೆ ಕೊನೆಗೂ ಕಾಲ ಕೂಡಿಬಂದಿದೆ. ಬಾಗಲಕೋಟೆಯಲ್ಲಿ ಸರ್ಕಾರಿ ವೈದ್ಯಕೀಯ ಕಾಲೇಜು ಸ್ಥಾಪನೆಯಾಗಬೇಕು ಎಂಬ ದಶಕಗಳ ಬೇಡಿಕೆಗೆ ಸಾಕಾರ ರೂಪ ಸಿಕ್ಕಿದ್ದು, ಪ್ರಸಕ್ತ ಶೈಕ್ಷಣಿಕ ವರ್ಷದಿಂದಲೇ ನಗರದ ಬಹುನಿರೀಕ್ಷಿತ...

18 ವರ್ಷಗಳಲ್ಲೇ ಗರಿಷ್ಠ ಏರಿಕೆ ಕಂಡ ಸಾಂಬಾರ್ ಈರುಳ್ಳಿ;‌...

ಕರ್ನಾಟಕದ ಮಾರುಕಟ್ಟೆಗಳಲ್ಲಿ ದಿನದಿಂದ ದಿನಕ್ಕೆ ಅಗತ್ಯ ವಸ್ತುಗಳ ಬೆಲೆ ಏರಿಕೆಯಾಗುತ್ತಿರುವ ಬೆನ್ನಲ್ಲೇ ಇದೀಗ ಅಡುಗೆ ಮನೆಯ ಪ್ರಮುಖ ಪದಾರ್ಥವಾದ ಸಾಂಬಾರ್ ಈರುಳ್ಳಿ (ಸಣ್ಣ ಈರುಳ್ಳಿ) ಬೆಲೆ ಗ್ರಾಹಕರಿಗೆ ದೊಡ್ಡ ಆಘಾತ ನೀಡಿದೆ. ಚಿಲ್ಲರೆ...

ಇದನ್ನು ಓದಿದ್ದೀರಾ? BREAKING NEWS | ಯುವ ಹೋರಾಟಗಾರ ಉಮರ್ ಖಾಲಿದ್‌ಗೆ ಮಧ್ಯಂತರ ಜಾಮೀನು

​ತೀವ್ರವಾಗಿ ಬಳಲಿದ್ದ ಸಂದೀಪ್ ಅವರನ್ನು ‘ಬಾಲ್ಕನಿ’ ಪ್ರದೇಶದಿಂದ ‘ಸೌತ್ ಕೋಲ್’ ವರೆಗೆ ಕರೆತಂದು ರಕ್ಷಿಸುವ ಯತ್ನ ಮಾಡಲಾಯಿತಾದರೂ, ಅವರು ಗುರುವಾರ ಮೃತಪಟ್ಟಿದ್ದಾರೆ. ಇನ್ನು, ‘ಹಿಲರಿ ಸ್ಟೆಪ್’ (Hillary Step) ಬಳಿ ತೀವ್ರವಾಗಿ ಬಳಲಿದ್ದ ಅರುಣ್ ಕುಮಾರ್ ತಿವಾರಿ ಅವರ ನಿಧನದ ನಿಖರ ಸಮಯ ಇನ್ನೂ ಖಚಿತಪಟ್ಟಿಲ್ಲ. ಈ ಇಬ್ಬರು ಭಾರತೀಯರ ಸಾವಿನೊಂದಿಗೆ, ಪ್ರಸಕ್ತ ಋತುವಿನಲ್ಲಿ ಎವರೆಸ್ಟ್‌ನಲ್ಲಿ ಮೃತಪಟ್ಟವರ ಒಟ್ಟು ಸಂಖ್ಯೆ 5ಕ್ಕೆ ಏರಿಕೆಯಾಗಿದೆ. ಇದಕ್ಕೂ ಮುನ್ನ ಮೂವರು ನೇಪಾಳಿ ಪರ್ವತಾರೋಹಿಗಳು ಮೃತಪಟ್ಟಿದ್ದರು.

​ಬುಧವಾರ ಒಂದೇ ದಿನ 274 ಪರ್ವತಾರೋಹಿಗಳು ಎವರೆಸ್ಟ್ ಶಿಖರವನ್ನು ಏರಿದ್ದು, ಇದು ಒಂದೇ ದಿನದಲ್ಲಿ ಅತಿ ಹೆಚ್ಚು ಜನರು ಶಿಖರ ಏರಿದ ಹೊಸ ದಾಖಲೆಯಾಗಿದೆ. ಈ 274 ಜನರ ಪೈಕಿ ಸಂದೀಪ್ ಅರೆ ಕೂಡ ಸೇರಿದ್ದರು. ಇವರಲ್ಲದೆ ತುಳಸಿ ರೆಡ್ಡಿ ಪಾಲ್ಪುನೂರಿ ಹಾಗೂ ಅಜಯ್ ಪಾಲ್ ಸಿಂಗ್ ಧಾಲಿವಾಲ್ ಎಂಬ ಇತರ ಇಬ್ಬರು ಭಾರತೀಯರು ಬುಧವಾರ ಶಿಖರ ಏರಿದ್ದರು. ಹಾಗೆಯೇ, ಗುರುವಾರ ಭಾರತದ ಲಕ್ಷ್ಮೀಕಾಂತ ಮಂಡಲ್ ಕೂಡ ಎವರೆಸ್ಟ್ ಶಿಖರ ತಲುಪಿದ್ದಾರೆ. ಪ್ರಸಕ್ತ 2026ರ ವಸಂತ ಋತುವಿನಲ್ಲಿ ಎವರೆಸ್ಟ್ ಏರಲು ಒಟ್ಟು 502 ಪರ್ವತಾರೋಹಿಗಳಿಗೆ ನೇಪಾಳ ಸರ್ಕಾರ ಪರವಾನಗಿ ನೀಡಿದೆ.

eedina
ಈ ದಿನ ಡೆಸ್ಕ್‌
Website | + posts

<p><iframe src="https://www.youtube.com/embed/8qwx4L0lKFQ?autoplay=1&mute=1&loop=1&playlist=8qwx4L0lKFQ&controls=0&modestbranding=1&showinfo=0" width="560" height="315" frameborder="0" allowfullscreen="allowfullscreen"></iframe></p>

ಪೋಸ್ಟ್ ಹಂಚಿಕೊಳ್ಳಿ:

ಪೋಸ್ಟ್ ಹಂಚಿಕೊಳ್ಳಿ:

ಈ ಹೊತ್ತಿನ ಪ್ರಮುಖ ಸುದ್ದಿ

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ಮಧ್ಯಪ್ರಾಚ್ಯ ಸಂಘರ್ಷ: ಅಕ್ಟೋಬರ್‌ನಲ್ಲಿ ಭಾರತದ ತೈಲ, ಅನಿಲ ಆಮದು ವೆಚ್ಚ 60% ಹೆಚ್ಚಳ; LPG ಬಳಕೆಯಲ್ಲಿ ಭಾರೀ ಇಳಿಕೆ

ಮಧ್ಯಪ್ರಾಚ್ಯದಲ್ಲಿನ ಸಂಘರ್ಷ ಮತ್ತು ಹಾರ್ಮುಜ್ ಜಲಸಂಧಿಯ ಮೂಲಕ ಸಾಗುವ ಇಂಧನ ಪೂರೈಕೆಯಲ್ಲಿ...

ಯಲ್ಲಾಪುರ | ಪ್ರಜಾಸೇವಾ ಆಂದೋಲನಕ್ಕೆ ಜನರಿಂದ ಉತ್ತಮ ಸ್ಪಂದನೆ: ಲಕ್ಷ್ಮಣ ಸವದಿ

ಪ್ರಜಾಸೇವಾ ಆಂದೋಲನ ಸಭೆಗಳ ಮೂಲಕ ಸಾರ್ವಜನಿಕರ ಸಮಸ್ಯೆಗಳಿಗೆ ತ್ವರಿತವಾಗಿ ಪರಿಹಾರ ದೊರೆಯುತ್ತಿದ್ದು,...

ಲಡಾಖ್ ಚುನಾವಣೆ: ಗ್ರಾಮೀಣ ಭಾಗದಲ್ಲಿ ಶೇ. 70ರಷ್ಟು, ಪಟ್ಟಣಗಳಲ್ಲಿ ಬರೀ ಶೇ.52.4 ಮತದಾನ; ಯಾಕಿಷ್ಟು ಕುಸಿತ?

2019ರಲ್ಲಿ ಜಮ್ಮು ಮತ್ತು ಕಾಶ್ಮೀರದಿಂದ ಬೇರ್ಪಟ್ಟು ಪ್ರತ್ಯೇಕ ಕೇಂದ್ರಾಡಳಿತ ಪ್ರದೇಶವಾಗಿ (UT)...

18 ವರ್ಷಗಳಲ್ಲೇ ಗರಿಷ್ಠ ಏರಿಕೆ ಕಂಡ ಸಾಂಬಾರ್ ಈರುಳ್ಳಿ;‌ ರೈತನಿಗಿಲ್ಲ ಲಾಭ!

ಕರ್ನಾಟಕದ ಮಾರುಕಟ್ಟೆಗಳಲ್ಲಿ ದಿನದಿಂದ ದಿನಕ್ಕೆ ಅಗತ್ಯ ವಸ್ತುಗಳ ಬೆಲೆ ಏರಿಕೆಯಾಗುತ್ತಿರುವ ಬೆನ್ನಲ್ಲೇ...