BREAKING NEWS | ಯುವ ಹೋರಾಟಗಾರ ಉಮರ್ ಖಾಲಿದ್‌ಗೆ ಮಧ್ಯಂತರ ಜಾಮೀನು

Date:

2020ರ ಈಶಾನ್ಯ ದೆಹಲಿ ಗಲಭೆ ಆರೋಪದಲ್ಲಿ ಯುಎಪಿಎ ಪ್ರಕರಣದಲ್ಲಿ ಬಂಧನಕ್ಕೊಳಗಾಗಿರುವ ಯುವ ಹೋರಾಟಗಾರ ಉಮರ್ ಖಾಲಿದ್‌ಗೆ ದೆಹಲಿ ನ್ಯಾಯಾಲಯ ಮಧ್ಯಂತರ ಜಾಮೀನು ಮಂಜೂರು ಮಾಡಿದೆ. ಕಳೆದ ಐದು ವರ್ಷದಿಂದ ಅತ್ತ ವಿಚಾರಣೆಯೂ ಇಲ್ಲದೆ ಜಾಮೀನೂ ಇಲ್ಲದೆ ಜೈಲಿನಲ್ಲಿರುವ ಉಮರ್ ತಾಯಿಗೆ ಶಸ್ತ್ರಚಿಕಿತ್ಸೆ ಇರುವ ಕಾರಣ ಮೂರು ದಿನಗಳ ಮಧ್ಯಂತರ ಜಾಮೀನು ನೀಡಲಾಗಿದೆ.

- Advertisement -

ತಮ್ಮ ದಿವಂಗತ ಚಿಕ್ಕಪ್ಪನ ನಂತರ ಚೆಹ್ಲಮ್ ಆಚರಣೆಯಲ್ಲಿ ಭಾಗವಹಿಸಲು ಮತ್ತು ಜೂನ್ 02ರಂದು ನಿಗದಿಯಾಗಿದ್ದ ತನ್ನ ತಾಯಿಯ ಪೂರ್ವ ಮತ್ತು ನಂತರದ ವೈದ್ಯಕೀಯ ಶಸ್ತ್ರಚಿಕಿತ್ಸೆಗೆ ಹಾಜರಾಗಲು 15 ದಿನಗಳ ಮಧ್ಯಂತರ ಜಾಮೀನು ಕೋರಿ ಖಾಲಿದ್ ಅರ್ಜಿ ಸಲ್ಲಿಸಿದ್ದರು. ಆದರೆ ಈ ಹಿಂದೆ ಉಮರ್ ಖಾಲಿದ್‌ಗೆ ದೆಹಲಿ ನ್ಯಾಯಾಲಯ ಮಧ್ಯಂತರ ಜಾಮೀನು ನೀಡಲು ನಿರಾಕರಿಸಿತ್ತು. ಅರ್ಜಿಯನ್ನು ಕರ್ಕಾರ್ಡೂಮಾ ನ್ಯಾಯಾಲಯದ ಹೆಚ್ಚುವರಿ ಸೆಷನ್ಸ್ ನ್ಯಾಯಾಧೀಶ ಸಮೀರ್ ಬಾಜ್‌ಪೈ ವಜಾಗೊಳಿಸಿದ್ದರು.

ಇನ್ನಷ್ಟು ವಿಶೇಷ ಲೇಖನಗಳಿಗಾಗಿ, ಇಲ್ಲಿ ಕ್ಲಿಕ್ ಮಾಡಿ →

ಡಾ. ಟಿ.ಎಸ್.‌ ಚನ್ನೇಶ್‌ ಸರಣಿ | ವೈದ್ಯಕೀಯ ನೊಬೆಲ್‌...

ನಮ್ಮ ಮೆದುಳು, ಭಾವನೆಗಳನ್ನು, ವರ್ತನೆಗಳನ್ನು ಮತ್ತು ದೈಹಿಕ ಕಾರ್ಯಗಳನ್ನು ಹೇಗೆ ನಿಯಂತ್ರಿಸುತ್ತದೆ ಎಂಬುದನ್ನು ಸಂಶೋಧನೆಯಿಂದ ಬಿಡಿಸಿಟ್ಟು 2026ರ ವೈದ್ಯಕೀಯ ನೊಬೆಲ್‌ ಪ್ರಶಸ್ತಿಗೆ ಪಾತ್ರರಾದ ಮೂವರು ಸಂಶೋಧಕರು ಮತ್ತು ಸಂಶೋಧನೆಯ ಸುತ್ತಲಿನ ವಿಶ್ಲೇಷಣಾತ್ಮಕ ಬರಹ ಈ...

ಪೊಲೀಸ್ ಸುಧಾರಣೆ | ಹೈಟೆಕ್ ಪೊಲೀಸಿಂಗ್ Vs ವಾಸ್ತವ:...

ಪೊಲೀಸ್‌ ಇಲಾಖೆಯನ್ನು ಆಧುನೀಕರಿಸಲು AI, ಸೈಬರ್‌ ತಂತ್ರಜ್ಞಾನ, ಡಿಜಿಟಲ್‌ ತನಿಖೆ, ಸಿಸಿಟಿವಿ, ಬಾಡಿ ಕ್ಯಾಮೆರಾ ಸೇರಿದಂತೆ ಹಲವು ತಂತ್ರಜ್ಞಾನಗಳು ಪ್ರವೇಶಿಸುತ್ತಿವೆ. ಆದರೆ ಹೈಟೆಕ್‌ ಆಗುತ್ತಿರುವ ಪೊಲೀಸ್‌ ವ್ಯವಸ್ಥೆ ಜನರ ಬದುಕಿಗೆ ಎಷ್ಟು ಹತ್ತಿರವಾಗುತ್ತಿದೆ?...

ಐದು ಭಾಷೆ, ಆರು ದಶಕ, ಅನಂತ ಪ್ರಯೋಗ: ಭಾರತೀಯ...

ಬದುಕಿನ ಕೊನೆಯ ಉಸಿರಿನವರೆಗೂ ಕೇವಲ ಸಿನಿಮಾವನ್ನೇ ಶ್ವಾಸವಾಗಿಸಿಕೊಂಡಿದ್ದ, 95ನೇ ವಯಸ್ಸಿನಲ್ಲೂ ಹೊಸ ಕಥೆಯ ಕನಸು ಕಾಣುತ್ತಿದ್ದ ಭಾರತೀಯ ಚಿತ್ರರಂಗದ ಅಪ್ರತಿಮ ದಾರ್ಶನಿಕ ಸಿಂಗೀತಂ ಶ್ರೀನಿವಾಸರಾವ್ ನಮ್ಮೊಂದಿಗಿಲ್ಲ. ಆರು ದಶಕಗಳ ಕಾಲ ತಮ್ಮ ಅನಂತ...

ಇನ್ನು ಖಾಲಿದ್‌ಗೆ ತಾಯಿಯನ್ನು ನೋಡಿಕೊಳ್ಳಬಹುದಾದ ಇತರ ಸಹೋದರಿಯರಿದ್ದಾರೆ ಮತ್ತು ತಂದೆ ಕೂಡ ಇದ್ದಾರೆ. ಹಾಗಾಗಿ ಖಾಲಿದ್ ಹೋಗುವ ಅಗತ್ಯವಿಲ್ಲ. ಇದಲ್ಲದೆ, ಪ್ರಾಸಿಕ್ಯೂಷನ್ ಹೇಳಿದಂತೆ, ಶಸ್ತ್ರಚಿಕಿತ್ಸೆ ತುಂಬಾ ಸರಳವಾಗಿದೆ, ಅಂದರೆ ಗಡ್ಡೆಗಳನ್ನು ತೆಗೆದುಹಾಕುವ ಶಸ್ತ್ರಚಿಕಿತ್ಸೆಯಷ್ಟೆ. ಅರ್ಜಿದಾರರು ಅಲ್ಲಿ ಇರಲೇಬೇಕಾದ ಅಗತ್ಯವಿಲ್ಲ. ಈ ಅಸಮಂಜಸ ಕಾರಣಗಳಿಗೆ ಜಾಮೀನು ನೀಡಲ್ಲ ಎಂದು ಕೋರ್ಟ್ ತಿಳಿಸಿತ್ತು.

ಅನಾರೋಗ್ಯದಿಂದ ಬಳಲುತ್ತಿರುವ ತಾಯಿಯ ಆರೈಕೆಗಾಗಿ ಮಗ/ಮಗಳು ಇರಬೇಕಾದ ಅಗತ್ಯವನ್ನು ಕಡೆಗಣಿಸಿ, ಕುಟುಂಬದ ಇತರ ಸದಸ್ಯರು ನೋಡಿಕೊಳ್ಳಬಹುದು ಎಂಬ ನ್ಯಾಯಾಲಯದ ತರ್ಕವು ಅಮಾನವೀಯವಾಗಿದೆ ಎಂಬ ಟೀಕೆ ವ್ಯಕ್ತವಾಗಿತ್ತು. ದುಃಖದ ಸಂದರ್ಭದಲ್ಲಿ ಮತ್ತು ತಾಯಿಯ ಶಸ್ತ್ರಚಿಕಿತ್ಸೆಯಂತಹ ಕ್ಲಿಷ್ಟಕರ ಸಮಯದಲ್ಲಿ ಮಗನೊಬ್ಬ ತನ್ನ ಕುಟುಂಬದ ಜೊತೆ ಇರಬೇಕಾದ ಹಕ್ಕನ್ನು ನಿರಾಕರಿಸಲಾಗಿದೆ ಎಂದು ಹಲವು ಮಾನವ ಹಕ್ಕು ಹೋರಾಟಗಾರರು ಖಂಡಿಸಿದ್ದರು.

ಈ ಬೆನ್ನಲ್ಲೇ ದೆಹಲಿ ಕೋರ್ಟ್ ಆದೇಶ ಪ್ರಶ್ನಿಸಿ ಉಮರ್ ಖಾಲಿದ್ ದೆಹಲಿ ಹೈಕೋರ್ಟ್ ಮೆಟ್ಟಿಲೇರಿದ್ದರು. ಈ ಮೇಲ್ಮನವಿ ಆಲಿಸಿದ ದೆಹಲಿ ಹೈಕೋರ್ಟ್‌ನ ನ್ಯಾಯಮೂರ್ತಿ ಪ್ರತಿಭಾ ಎಂ ಸಿಂಗ್ ಮತ್ತು ನ್ಯಾಯಮೂರ್ತಿ ಮಧು ಜೈನ್ ಅವರನ್ನೊಳಗೊಂಡ ವಿಭಾಗೀಯ ಪೀಠವು ಜೂನ್ 1ರಿಂದ ಜೂನ್ 3ರವರೆಗೆ ಕಠಿಣ ಷರತ್ತುಬದ್ಧ ಮಧ್ಯಂತರ ಜಾಮೀನು ನೀಡಿದೆ.

WhatsApp Image 2025 11 17 at 3.21.17 PM
ಈ ದಿನ ಡೆಸ್ಕ್
+ posts

ಪೋಸ್ಟ್ ಹಂಚಿಕೊಳ್ಳಿ:

ಪೋಸ್ಟ್ ಹಂಚಿಕೊಳ್ಳಿ:

ಈ ಹೊತ್ತಿನ ಪ್ರಮುಖ ಸುದ್ದಿ

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ಬಂಗಾಳ SIR | ನೋಟಿಸ್ ನೀಡಲು, ಹೆಸರು ಮರು ಸೇರಿಸಲು ಸಾಧ್ಯವಿಲ್ಲ: EC ಪೋರ್ಟಲ್ ವಿರುದ್ಧ ನ್ಯಾಯಾಧೀಶರ ದೂರು

ಪಶ್ಚಿಮ ಬಂಗಾಳದಲ್ಲಿ SIR ವೇಳೆ ಮತದಾರರ ಪಟ್ಟಿಯಿಂದ ಹೊರಗಿಡಲಾದವರ ಮೇಲ್ಮನವಿಗಳ ವಿಚಾರಣೆ...

ಡಾ. ಟಿ.ಎಸ್.‌ ಚನ್ನೇಶ್‌ ಸರಣಿ | ವೈದ್ಯಕೀಯ ನೊಬೆಲ್‌ ಪ್ರಶಸ್ತಿ ಪಡೆದ ಸಂಶೋಧನೆಯ ಸುತ್ತ ಒಂದು ನೋಟ

ನಮ್ಮ ಮೆದುಳು, ಭಾವನೆಗಳನ್ನು, ವರ್ತನೆಗಳನ್ನು ಮತ್ತು ದೈಹಿಕ ಕಾರ್ಯಗಳನ್ನು ಹೇಗೆ ನಿಯಂತ್ರಿಸುತ್ತದೆ...

ಪತ್ರಕರ್ತೆಯ ಎದೆ ಹಿಂಡಿ ವಿಕೃತಿ ಮೆರೆದ ಪೊಲೀಸ್ ಅಧಿಕಾರಿಗೆ DCP ಹುದ್ದೆಗೆ ಬಡ್ತಿ ನೀಡಿದ ಮೋಶಾ ಸರ್ಕಾರ!

ಜಂತರ್ ಮಂತರ್‌ನಲ್ಲಿ ನಡೆದ ಮುಖ್ಯ ಚುನಾವಣಾ ಆಯುಕ್ತರ (CEC) ವಿರುದ್ಧದ ಪ್ರತಿಭಟನೆ...

ರಾಜ್ಯಸಭಾ ಚುನಾವಣೆ: ಬಿಜೆಪಿ ಅಭ್ಯರ್ಥಿಗಳ ಪಟ್ಟಿ ಪ್ರಕಟ, ಇಬ್ಬರು ಕೇಂದ್ರ ಸಚಿವರಿಗೆ ಕೊಕ್

ಉತ್ತರ ಪ್ರದೇಶದಿಂದ ತೆರವಾಗಲಿರುವ ಎಂಟು ರಾಜ್ಯಸಭಾ ಸ್ಥಾನಗಳಿಗೆ ಬಿಜೆಪಿ ಸೋಮವಾರ (ಅ....