‘ಒಂದು ದೇಶ, ಒಂದು ಚುನಾವಣೆ’ ಪ್ರಜಾಪ್ರಭುತ್ವ ವಿರೋಧಿ: ಯೋಜನೆ ಕೈಬಿಡಲು ಖರ್ಗೆ ಪತ್ರ

Date:

ದೇಶದಲ್ಲಿ ಏಕ ಕಾಲದಲ್ಲಿ ಚುನಾವಣೆಯನ್ನು ಹಮ್ಮಿಕೊಳ್ಳುವುದು ಪ್ರಜಾಪ್ರಭುತ್ವ ವಿರೋಧಿಯಾಗಿದ್ದು, ಈ ಯೋಜನೆಯು ಒಕ್ಕೂಟ ವ್ಯವಸ್ಥೆ ಹಾಗೂ ಸಂವಿಧಾನದ ಮೂಲ ರಚನೆಗೆ ಧಕ್ಕೆ ಉಂಟು ಮಾಡುತ್ತದೆ ಎಂದು ಕಾಂಗ್ರೆಸ್ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಆತಂಕ ವ್ಯಕ್ತಪಡಿಸಿದ್ದಾರೆ.

ಸಮಿತಿಯ ಕಾರ್ಯದರ್ಶಿಗೆ ಪತ್ರ ಬರೆದಿರುವ ಖರ್ಗೆ, ಈ ಯೋಜನೆಯನ್ನು ಕೈಬಿಡುವುದರ ಜೊತೆಗೆ ಅಧ್ಯಯನ ನಡೆಸುತ್ತಿರುವ ಉನ್ನತ ಮಟ್ಟದ ಸಮಿತಿಯನ್ನು ವಿಸರ್ಜಿಸಬೇಕೆಂದು ಸಮಿತಿ ಅಧ್ಯಕ್ಷರಾಗಿರುವ ಮಾಜಿ ರಾಷ್ಟ್ರಪತಿ ರಾಮನಾಥ್ ಕೋವಿಂದ್ ಅವರಿಗೆ ಮನವಿ ಮಾಡಿದ್ದಾರೆ.

“ಈ ಯೋಜನೆಯು ದೇಶದಲ್ಲಿನ ಸಂವಿಧಾನ ಹಾಗೂ ಸಂಸದೀಯ ಪ್ರಜಾಪ್ರಭುತ್ವವನ್ನು ಕೇಂದ್ರ ಸರ್ಕಾರ ಬುಡಮೇಲು ಮಾಡುವುದರೊಂದಿಗೆ ಮಾಜಿ ರಾಷ್ಟ್ರಪತಿಗಳ ಕಚೇರಿಯನ್ನು ದುರುಪಯೋಗಪಡಿಸಿಕೊಳ್ಳುವುದಕ್ಕೆ ಅವಕಾಶ ನೀಡಬಾರದು” ಎಂದು ತಿಳಿಸಿದ್ದಾರೆ.

ಈ ಮಾಧ್ಯಮ ನಿಮ್ಮದು. ನಿಮ್ಮ ಬೆಂಬಲವೇ ನಮ್ಮ ಬಲ. ವಂತಿಗೆ ನೀಡುವುದರ ಮೂಲಕ ಕೈಜೋಡಿಸಿ, ಸತ್ಯ ನ್ಯಾಯ ಪ್ರೀತಿಯ ಮೌಲ್ಯಗಳನ್ನು ಹಂಚಲು ಜೊತೆಯಾಗಿ

ಭಾರತೀಯ ರಾಷ್ಟ್ರೀಯ ಕಾಂಗ್ರೆಸ್ ‘ಒಂದು ದೇಶ, ಒಂದು ಚುನಾವಣೆ’ಯನ್ನು ಬಲವಾಗಿ ಖಂಡಿಸುತ್ತದೆ. ಪ್ರಜಾಪ್ರಭುತ್ವವನ್ನು ಕಾಪಾಡಿಕೊಳ್ಳುವ ಸಲುವಾಗಿ ಈ ಸಂಪೂರ್ಣ ಯೋಜನೆಯನ್ನು ಕೈಬಿಟ್ಟು, ಉನ್ನತ ಹಂತದಲ್ಲಿ ರಚಿಸಲಾಗಿರುವ ಸಮಿತಿಯನ್ನು ವಿಸರ್ಜಿಸಬೇಕೆಂದು ಸಮಿತಿಯ ಕಾರ್ಯದರ್ಶಿಯಾದ ನಿತಿನ್ ಚಂದ್ರ ಅವರಿಗೆ ಖರ್ಗೆ ತಮ್ಮ ಪತ್ರದಲ್ಲಿ ತಿಳಿಸಿದ್ದಾರೆ.

ಅಕ್ಟೋಬರ್‌ 18ರಂದು ಸಮಿತಿಯ ಕಾರ್ಯದರ್ಶಿಯಾದ ನಿತಿನ್ ಚಂದ್ರ ಅವರು ಸಮಿತಿಯ ಪರಿಗಣನೆಗಾಗಿ ಸಲಹೆಗಳನ್ನು ಆಹ್ವಾನಿಸಿ ಎಂದು ಪತ್ರ ಬರೆದ ನಂತರ ಖರ್ಗೆಯವರು ಪ್ರತಿಕ್ರಿಯೆ ನೀಡಿದ್ದಾರೆ.

ಸಮಿತಿಯು ಈಗಾಗಲೇ ಯೋಜನೆ ಬಗ್ಗೆ ಮನಸ್ಸು ಮಾಡಿದೆ ಕಣ್ಣೊರೆಸುವ ಸಲುವಾಗಿ ಸಲಹೆಗಳನ್ನು ಆಹ್ವಾನಿಸಲಾಗಿದೆ ಎಂದು ಪತ್ರದಲ್ಲಿ ತಿಳಿಸಲಾಗಿದೆ.

“ಸರ್ಕಾರ, ಸಂಸತ್ತು ಹಾಗೂ ಚುನಾವಣಾ ಆಯೋಗ ಒಟ್ಟಾಗಿ ಜನತೆ ನೀಡಿರುವ ತೀರ್ಪನ್ನು ಗೌರವಿಸಬೇಕು. ಇದನ್ನು ಬಿಟ್ಟು ಜನರ ಮನಸ್ಸನ್ನು ಬದಲಾಯಿಸುವ ಏಕ ಕಾಲದಲ್ಲಿ ಚುನಾವಣೆಗಳನ್ನು ನಡೆಸುವ ಪ್ರಜಾಪ್ರಭುತ್ವ ವಿರೋಧಿ ಯೋಜನೆಗಳನ್ನು ಕೈಬಿಡಬೇಕು” ಎಂದು ಹೇಳಿದರು.

ಈ ಸುದ್ದಿ ಓದಿದ್ದೀರಾ? ಈ ದಿನ ಸಂಪಾದಕೀಯ | ಕಾಂಗ್ರೆಸ್ಸಿನ ಈ ಕಚ್ಚಾಟ, ‘ಆತ್ಮಹತ್ಯೆ’ಯ ಹುಚ್ಚಾಟ

ಹಲವು ರಾಜ್ಯ ಸರ್ಕಾರಗಳಿರುವ ವಿರೋಧ ಪಕ್ಷಗಳಿಗೆ ಗಣನೀಯ ಪ್ರಾಮುಖ್ಯತೆ ನೀಡದೆ ಸಮಿತಿಯನ್ನು ರಚಿಸಿರುವುದು ಪಕ್ಷಪಾತದಿಂದ ಕೂಡಿದೆ. ಕೇಂದ್ರದಲ್ಲಿದ್ದ ಒಂದು ಪಕ್ಷವು ಪಕ್ಷಾಂತರ ವಿರೋಧ ಕಾನೂನನ್ನು ದುರ್ಬಲಗೊಳಿಸಿ ಅನೈತಿಕ ರಾಜಕಾರಣ ನಡೆಸಿದ ಪರಿಣಾಮ ಕಳೆದ 10 ವರ್ಷಗಳಲ್ಲಿ ಅನೇಕ ಮುಖ್ಯಮಂತ್ರಿಗಳು ಅಧಿಕಾರ ಕಳೆದುಕೊಂಡಿರುವ ನಿದರ್ಶನಗಳಿವೆ ಎಂದು ತಿಳಿಸಿದ್ದಾರೆ.

ವಿಸರ್ಜನೆಯಾಗುವ ಹಲವು ವಿಧಾನಸಭೆಗಳು

“ಏಕಕಾಲದಲ್ಲಿ ಚುನಾವಣೆಗಳನ್ನು ಹಮ್ಮಿಕೊಳ್ಳಲು ಹೊರಟರೆ ಹಲವು ವಿಧಾನಸಭೆಗಳನ್ನು ವಿಸರ್ಜಿಸುವ ಅಗತ್ಯವಿರುತ್ತದೆ. ಕೆಲವು ವಿಧಾನಸಭೆಗಳು ಅರ್ಧ ಅವಧಿ ಪೂರೈಸಿದ್ದರೆ, ಇನ್ನೂ ಕೆಲವು ಆರಂಭದಲ್ಲಿವೆ. ಇದು ಆ ರಾಜ್ಯದ ಮತದಾರರಿಗೆ ನಂಬಿಕೆ ದ್ರೋಹ ಮಾಡಿದಂದಾಗುತ್ತದೆ. ಅಲ್ಲದೆ ನೀತಿ ಆಯೋಗವು ಹೊಸ ಚುನಾವಣೆಗಳನ್ನು ನಡೆಸುವವರೆಗೂ ರಾಷ್ಟ್ರಪತಿ ಆಳ್ವಿಕೆ ಜಾರಿಗೊಳಿಸಬೇಕೆಂದು ಹೇಳಿರುವುದು ಪ್ರಜಾಪ್ರಭುತ್ವದ ಅಪಹಾಸ್ಯವಾಗಿದೆ” ಎಂದು ತಮ್ಮ ಪತ್ರದಲ್ಲಿ ಖರ್ಗೆ ತಿಳಿಸಿದ್ದಾರೆ.

“ಏಕ ಕಾಲದಲ್ಲಿ ಚುನಾವಣೆಗಳನ್ನು ನಡೆಸುವುದರಿಂದ ಆರ್ಥಿಕ ಉಳಿತಾಯವಾಗುತ್ತದೆ ಎನ್ನುವ ವಾದವು ಸಂಪೂರ್ಣ ಆಧಾರರಹಿತವಾಗಿದೆ. ಕಳೆದ ಐದು ವರ್ಷಗಳಲ್ಲಿ ಕೇಂದ್ರ ಬಜೆಟ್‌ನಲ್ಲಿ ಚುನಾವಣೆಗಾಗಿ ಹಣವನ್ನು ಮೀಸಲಿಟ್ಟಿರುವುದು ಶೇ.0.02 ಮಾತ್ರ. ರಾಜ್ಯಗಳು ಕೂಡ ಆಯಾ ವಿಧಾನಸಭಾ ಚುನಾವಣೆಗೆ ಇಷ್ಟೆ ಮೊತ್ತದ ಹಣವನ್ನು ಮಾತ್ರ ಮೀಸಲಿರಿಸಿವೆ. 2014ರ ಲೋಕಸಭಾ ಚುನಾವಣೆಗೆ ವೆಚ್ಚವಾಗಿರುವುದು ಕೇವಲ 3,870 ಕೋಟಿ ಮಾತ್ರ” ಎಂದು ಮಲ್ಲಿಕಾರ್ಜುನ ಖರ್ಗೆ ಹೇಳಿದ್ದಾರೆ.

ಈ ದಿನ ಡೆಸ್ಕ್‌
Website | + posts

ಪೋಸ್ಟ್ ಹಂಚಿಕೊಳ್ಳಿ:

LEAVE A REPLY

Please enter your comment!
Please enter your name here

ಪೋಸ್ಟ್ ಹಂಚಿಕೊಳ್ಳಿ:

ನಮ್ಮನ್ನು ಬೆಂಬಲಿಸಿ

ಹೆಚ್ಚು ಓದಿಸಿಕೊಂಡ ಲೇಖನಗಳು

ವಿಡಿಯೋ

ಈ ಮಾಧ್ಯಮ ನಿಮ್ಮದು. ನಿಮ್ಮ ಬೆಂಬಲವೇ ನಮ್ಮ ಬಲ. ವಂತಿಗೆ ನೀಡುವುದರ ಮೂಲಕ ಕೈಜೋಡಿಸಿ, ಸತ್ಯ ನ್ಯಾಯ ಪ್ರೀತಿಯ ಮೌಲ್ಯಗಳನ್ನು ಹಂಚಲು ಜೊತೆಯಾಗಿ
Related

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ಇಸ್ರೇಲ್-ಇರಾನ್ ಸಂಘ‍ರ್ಷ | ಅಮೆರಿಕಾ ಕುತಂತ್ರಕ್ಕೆ ಇಸ್ರೇಲ್ ದಾಳ

ಇರಾನ್‌ ಸೇರಿದಂತೆ ತನ್ನ ನೆರೆಯ ರಾಷ್ಟ್ರಗಳ ಮೇಲೆ ಕಳೆದೊಂದು ವರ್ಷದಲ್ಲಿ ಇಸ್ರೇಲ್...

ಹೈದರಾಬಾದ್‌ ಕ್ರಿಕೆಟ್ ಸಂಸ್ಥೆ ಭ್ರಷ್ಟಾಚಾರ ಹಗರಣ: ಮಾಜಿ ಕ್ರಿಕೆಟಿಗ ಮೊಹಮ್ಮದ್‌ ಅಜರುದ್ದೀನ್‌ಗೆ ಇ.ಡಿ ಸಮನ್ಸ್

ಹೈದರಾಬಾದ್‌ ಕ್ರಿಕೆಟ್‌ ಸಂಸ್ಥೆಯಲ್ಲಿನ(ಹೆಚ್‌ಸಿಎ) ಭ್ರಷ್ಟಾಚಾರ ಪ್ರಕರಣಕ್ಕೆ ಸಂಬಂಧಿಸಿದಂತೆ ಜಾರಿ ನಿರ್ದೇಶನಾಲಯ(ಇ.ಡಿ) ಮಾಜಿ...

ರಾಜ್ಯದಲ್ಲಿ ಮಳೆ ಅಬ್ಬರ; ಬೆಂಗಳೂರು ತತ್ತರ

ಬೆಂಗಳೂರು ಸೇರಿದಂತೆ ರಾಜ್ಯದ ಹಲವು ಜಿಲ್ಲೆಗಳಲ್ಲಿ ಭಾರೀ ಮಳೆಯಾಗುತ್ತಿದೆ. ಇಂದು (ಅಕ್ಟೋಬರ್...

ದೆಹಲಿ: ಆಸ್ಪತ್ರೆಯಲ್ಲೇ ವೈದ್ಯನ ಗುಂಡಿಕ್ಕಿ ಹತ್ಯೆ

ದೆಹಲಿಯ ಜೈತ್‌ಪುರ ನಗರದ ನೀಮಾ ಆಸ್ಪತ್ರೆಯಲ್ಲಿ ವೈದ್ಯರೊಬ್ಬರನ್ನು ದುಷ್ಕರ್ಮಿಗಳು ಗುಂಡು ಹಾರಿಸಿ...