ಪಶ್ಚಿಮ ಬಂಗಾಳ | ಮತಪಟ್ಟಿಯಲ್ಲಿ ತಂದೆ ಹೆಸರಿಲ್ಲವೆಂದು ಹಸುಗೂಸಿಗೆ ಜನನ ಪ್ರಮಾಣಪತ್ರ ನಿರಾಕರಣೆ

Date:

ಮತದಾರರ ಪಟ್ಟಿಯ ವಿಶೇಷ ತೀವ್ರ ಪರಿಷ್ಕರಣೆ (ಎಸ್‌ಐಆರ್‌) ವೇಳೆ ತಂದೆಯ ಹೆಸರು ಪಟ್ಟಿಯಿಂದ ಕೈಬಿಟ್ಟುಹೋಗಿದೆ ಎಂಬ ಕಾರಣಕ್ಕೆ, ಎರಡೂವರೆ ತಿಂಗಳ ಹಸುಗೂಸಿಗೆ ಜನನ ಪ್ರಮಾಣಪತ್ರವನ್ನು ನಿರಾಕರಿಸಿದ ಆಘಾತಕಾರಿ ಘಟನೆ ಪಶ್ಚಿಮ ಬಂಗಾಳದ ಕೂಚ್ ಬಿಹಾರ್ ಜಿಲ್ಲೆಯಲ್ಲಿ ನಡೆದಿದೆ.

- Advertisement -

ಕೂಚ್ ಬಿಹಾರ್‌ನ ಖತಮಾರಿ ಗ್ರಾಮದ ನಿವಾಸಿ ಅಮೀನಾ ಖಾತುನ್ ಅವರು ಕಳೆದ ಸೆಪ್ಟೆಂಬರ್ 9ರಂದು ದಿನ್ಹಾಟಾ ಉಪ-ವಿಭಾಗೀಯ ಆಸ್ಪತ್ರೆಯಲ್ಲಿ ಹೆಣ್ಣು ಮಗುವಿಗೆ ಜನ್ಮ ನೀಡಿದ್ದರು. ಮಗುವಿನ ಜನನದ ಬಳಿಕ, ಅಮೀನಾ ಖಾತುನ್ ಮತ್ತು ಅವರ ಪತಿ ಅಬ್ದುಲ್ ಹಬೀಬ್ ಜನನ ಪ್ರಮಾಣಪತ್ರಕ್ಕಾಗಿ ಆಸ್ಪತ್ರೆ ಹಾಗೂ ಸಂಬಂಧಪಟ್ಟ ಪಂಚಾಯತ್ ಕಚೇರಿಯನ್ನು ಸಂಪರ್ಕಿಸಿದ್ದಾರೆ. ಆದರೆ, ಪ್ರಮಾಣಪತ್ರ ನೀಡಲು ಪಂಚಾಯತ್ ಪ್ರಧಾನ್ ಅಥವಾ ಸ್ಥಳೀಯ ಶಾಸಕರಿಂದ ವಾಸಸ್ಥಳ ದೃಢೀಕರಣ ಪತ್ರ ತರುವಂತೆ ಅಧಿಕಾರಿಗಳು ಸೂಚಿಸಿದ್ದಾರೆ.

ಇನ್ನಷ್ಟು ವಿಶೇಷ ಲೇಖನಗಳಿಗಾಗಿ, ಇಲ್ಲಿ ಕ್ಲಿಕ್ ಮಾಡಿ →

ಕೋಲಾರ ಕ್ಲಾಕ್ ಟವರ್ ವಿವಾದ: ಜಿಲ್ಲಾಡಳಿತದ ನಿರ್ಧಾರದತ್ತ ಜನರ...

ಕೋಲಾರ ನಗರದ ಇತಿಹಾಸ ಪ್ರಸಿದ್ಧ ಕ್ಲಾಕ್‌ ಟವರ್‌ನಲ್ಲಿ ಸಂಸದರ ಅನುದಾನದಲ್ಲಿ ಅಳವಡಿಸಲಾಗುತ್ತಿರುವ ಎಚ್‌ಎಂಟಿ ಗಡಿಯಾರದಲ್ಲಿ ಸಂಸದ ಮಲ್ಲೇಶ್‌ ಬಾಬು ಹೆಸರಿರಬೇಕೋ, ಬೇಡವೋ ಎಂದು ಕಳೆದ ಮೂರ್ನಾಲ್ಕು ದಿನಗಳಿಂದ ನಡೆಯುತ್ತಿರುವ ಚರ್ಚೆ ಈಗ ವಿವಾದದ...

ಅಧಿಕೃತ ಕೆಲಸಕ್ಕೆ WHATSAPP ವೆಬ್ ಅಪಾಯಕಾರಿ ಏಕೆ? ಗೃಹ...

ಕಚೇರಿ, ಸಾರ್ವಜನಿಕ ಅಥವಾ ಹಲವರು ಹಂಚಿಕೊಂಡು ಬಳಸುವ ಕಂಪ್ಯೂಟರ್‌ಗಳಲ್ಲಿ WHATSAPP ವೆಬ್ ಬಳಸುವವರಿಗೆ ಕೇಂದ್ರ ಗೃಹ ಸಚಿವಾಲಯ ಮಹತ್ವದ ಭದ್ರತಾ ಎಚ್ಚರಿಕೆ ನೀಡಿದೆ. ಸಚಿವಾಲಯದ ಅಧೀನದ ಭಾರತೀಯ ಸೈಬರ್ ಅಪರಾಧ ಸಮನ್ವಯ ಕೇಂದ್ರದ...

ಆನೆ ಓಡಿಸಲು ಜೇನುನೊಣ ಸಾಕು! ಏನಿದು ತಂತ್ರ?

ದಕ್ಷಿಣ ಕನ್ನಡ ಜಿಲ್ಲೆಯ ಸುಳ್ಯದ ಕೃಷಿಕರು ಆನೆ ಹಾವಳಿ ತಡೆಗೆ ಸರಳ ಮತ್ತು ವಿನೂತನ ಪ್ರಯೋಗಕ್ಕೆ ಮುಂದಾಗಿದ್ದಾರೆ. ಆನೆ ಬರುವ ದಾರಿಯಲ್ಲಿ ಜೇನು ಪೆಟ್ಟಿಗೆಗಳನ್ನಿಟ್ಟು ಗಜಪಡೆಯನ್ನು ಹಿಮ್ಮೆಟ್ಟಿಸುವ ಮಾರ್ಗವಿದು. ಆನೆಗಳ ಸೊಂಡಿಲಿನ ಒಳಭಾಗ...

ವಾಸಸ್ಥಳ ದೃಢೀಕರಣ ಪತ್ರಕ್ಕಾಗಿ ಅಬ್ದುಲ್ ಹಬೀಬ್ ಅವರು ದಿನ್ಹಾಟಾ ಕ್ಷೇತ್ರದ ಶಾಸಕ ಅಜಯ್ ರಾಯ್ ಅವರ ಕಚೇರಿಯನ್ನು ಸಂಪರ್ಕಿಸಿದಾಗ ಅಲ್ಲಿನ ಸಿಬ್ಬಂದಿ ಅರ್ಜಿಯನ್ನು ತಿರಸ್ಕರಿಸಿದ್ದಾರೆ. ಮತದಾರರ ಪಟ್ಟಿಯ ಪರಿಷ್ಕರಣೆ ವೇಳೆ ಹಬೀಬ್ ಅವರ ಹೆಸರು ಡಿಲೀಟ್ ಆಗಿರುವುದೇ ಇದಕ್ಕೆ ಕಾರಣ ಎಂದು ತಿಳಿಸಲಾಗಿದೆ.

ಈ ಕುರಿತು ಅಳಲು ತೋಡಿಕೊಂಡಿರುವ ಅಬ್ದುಲ್ ಹಬೀಬ್, “ನೀವು ಬಾಂಗ್ಲಾದೇಶದ ಪ್ರಜೆ, ಮೊದಲು ರಾಷ್ಟ್ರೀಯ ಪೌರತ್ವ ನೋಂದಣಿಯಲ್ಲಿ  ಹೆಸರು ನೋಂದಾಯಿಸಿಕೊಳ್ಳಿ ಎಂದು ಶಾಸಕರ ಕಚೇರಿಯ ಅಧಿಕಾರಿಯೊಬ್ಬರು ಹೇಳಿದರು. ನಾನು ಹುಟ್ಟಿದಾಗಿನಿಂದಲೂ ಭಾರತದಲ್ಲೇ ವಾಸಿಸುತ್ತಿದ್ದೇನೆ. ಖತಮಾರಿಯಲ್ಲಿರುವ ನಮ್ಮ ಮನೆಯನ್ನು ನನ್ನ ತಾತ ಕಟ್ಟಿಸಿದ್ದು. ನಾನು ಎಲ್ಲಾ ದಾಖಲೆಗಳನ್ನು ತೋರಿಸಿದರೂ ಅವರು ನಿರಾಕರಿಸಿದರು” ಎಂದಿದ್ದಾರೆ. ಸಾಹೇಬ್‌ಗಂಜ್‌ನ ಬ್ಲಾಕ್ ಅಭಿವೃದ್ಧಿ ಅಧಿಕಾರಿ ಕೂಡ ಇದೇ ಕಾರಣ ನೀಡಿ ಪ್ರಮಾಣಪತ್ರ ನಿರಾಕರಿಸಿದ್ದಾರೆ ಎಂದು ಅವರು ಆರೋಪಿಸಿದ್ದಾರೆ.

ವಿಶೇಷವೆಂದರೆ, ಹಬೀಬ್ ಅವರ ತಂದೆ-ತಾಯಿ, ಪತ್ನಿ ಅಮೀನಾ ಖಾತುನ್ ಹಾಗೂ ಅಕ್ಕನ ಹೆಸರು ಮತದಾರರ ಪಟ್ಟಿಯಲ್ಲಿದೆ. ಆದರೆ, ಹಬೀಬ್ ಮತ್ತು ಅವರ ಮೂವರು ಸಹೋದರಿಯರ ಹೆಸರನ್ನು ಪಟ್ಟಿಯಿಂದ ತೆಗೆದುಹಾಕಲಾಗಿದೆ. ಇನ್ನೂ ಆರು ಮಂದಿ ಹಬೀಬ್ ಅವರ ತಂದೆಯನ್ನೇ ತಮ್ಮ ತಂದೆ ಎಂದು ದಾಖಲೆಗಳಲ್ಲಿ ನಮೂದಿಸಿರುವ ವ್ಯತ್ಯಾಸ ಕಂಡುಬಂದ ಹಿನ್ನೆಲೆಯಲ್ಲಿ, ಭಾರತೀಯ ಚುನಾವಣಾ ಆಯೋಗ ಇವರನ್ನು ವಿಚಾರಣೆಗೆ ಕರೆದಿತ್ತು. ಸದ್ಯ ಹಬೀಬ್ ಅವರು ಮತದಾರರ ಪಟ್ಟಿಗೆ ತಮ್ಮ ಹೆಸರು ಸೇರಿಸುವಂತೆ ನ್ಯಾಯಮಂಡಳಿಯ ಮೊರೆ ಹೋಗಿದ್ದು, ಅರ್ಜಿ ವಿಚಾರಣೆಗೆ ಬಾಕಿ ಇದೆ.

ಆಡಳಿತಾತ್ಮಕ ಅಡೆತಡೆಗಳಿಂದ ಮಗುವಿಗೆ ಜನನ ಪ್ರಮಾಣಪತ್ರ ನಿರಾಕರಿಸಿರುವುದಕ್ಕೆ ‘ನಾಗರಿಕ ಹಕ್ಕುಗಳ ರಕ್ಷಣಾ ಸಂಘ’  ವಿರೋಧ ವ್ಯಕ್ತಪಡಿಸಿದೆ. “ಜನನ ನೋಂದಣಿ ಒಂದು ಶಾಸನಬದ್ಧ ಹೊಣೆಗಾರಿಕೆಯಾಗಿದೆ. ವಿಶ್ವಸಂಸ್ಥೆಯ ಮಕ್ಕಳ ಹಕ್ಕುಗಳ ಒಡಂಬಡಿಕೆಯ 7ನೇ ವಿಧಿಯ ಪ್ರಕಾರ ಪ್ರತಿಯೊಂದು ಮಗುವಿಗೂ ತಕ್ಷಣದ ನೋಂದಣಿ ಮತ್ತು ಕಾನೂನುಬದ್ಧ ಗುರುತಿನ ಹಕ್ಕಿದೆ. ಪೋಷಕರ ಮತದಾರರ ಪಟ್ಟಿಯ ಸ್ಥಿತಿಗತಿಯನ್ನು ಮಗುವಿನ ಹಕ್ಕಿಗೆ ತಳುಕು ಹಾಕಬಾರದು. ತಕ್ಷಣವೇ ಮಗುವಿಗೆ ಜನನ ಪ್ರಮಾಣಪತ್ರ ನೀಡಬೇಕು” ಎಂದು APCR ಅಧಿಕೃತ ಪ್ರಕಟಣೆಯಲ್ಲಿ ಆಗ್ರಹಿಸಿದೆ.

ಪಶ್ಚಿಮ ಬಂಗಾಳ ವಿಧಾನಸಭಾ ಚುನಾವಣೆಗೂ ಮುನ್ನ ನಡೆದ ವಿಶೇಷ ತೀವ್ರ ಪರಿಷ್ಕರಣೆಯಲ್ಲಿ ರಾಜ್ಯದ ಮತದಾರರ ಪಟ್ಟಿಯಿಂದ ಬರೋಬ್ಬರಿ 91 ಲಕ್ಷ ಹೆಸರುಗಳನ್ನು ತೆಗೆದುಹಾಕಲಾಗಿತ್ತು. ಇದಾದ ಬಳಿಕ ರಾಜ್ಯದ ಹಲವೆಡೆ ನಾಗರಿಕರು ಮೂಲಭೂತ ಸೌಕರ್ಯ ಹಾಗೂ ಸರ್ಕಾರಿ ಯೋಜನೆಗಳಿಂದ ವಂಚಿತರಾಗುತ್ತಿರುವ ಪ್ರಕರಣಗಳು ವರದಿಯಾಗುತ್ತಿವೆ.

ಕಳೆದ ಜೂನ್‌ನಲ್ಲಿ ಕೂಚ್ ಬಿಹಾರ್ ಜಿಲ್ಲೆಯ ಉಮ್ಮೆ ಸಲ್ಮಾ ಎಂಬುವವರ ಹೆಸರು ಮತದಾರರ ಪಟ್ಟಿಯಿಂದ ಡಿಲೀಟ್ ಆಗಿದ್ದ ಕಾರಣ, ನ್ಯಾಯಬೆಲೆ ಅಂಗಡಿಯವರು ಅವರಿಗೆ ಪಡಿತರ ನಿಲ್ಲಿಸುವ ಎಚ್ಚರಿಕೆ ನೀಡಿದ್ದರು. ಬಳಿಕ ಅವರು ಕಲ್ಕತ್ತಾ ಹೈಕೋರ್ಟ್ ಮೆಟ್ಟಿಲೇರಿದ್ದರು. ವಿಚಾರಣೆ ನಡೆಸಿದ್ದ ಹೈಕೋರ್ಟ್, ನ್ಯಾಯಾಲಯದ ಅನುಮತಿಯಿಲ್ಲದೆ ಅರ್ಜಿದಾರರ ಮಾಸಿಕ ಪಡಿತರ ಹಕ್ಕನ್ನು ಕಸಿದುಕೊಳ್ಳುವಂತಹ ಯಾವುದೇ ಕಠಿಣ ಕ್ರಮ ಕೈಗೊಳ್ಳದಂತೆ ಪಶ್ಚಿಮ ಬಂಗಾಳ ಸರ್ಕಾರಕ್ಕೆ ನಿರ್ದೇಶನ ನೀಡಿತ್ತು.

eedina
ಈ ದಿನ ಡೆಸ್ಕ್‌
Website | + posts

<p><iframe src="https://www.youtube.com/embed/8qwx4L0lKFQ?autoplay=1&mute=1&loop=1&playlist=8qwx4L0lKFQ&controls=0&modestbranding=1&showinfo=0" width="560" height="315" frameborder="0" allowfullscreen="allowfullscreen"></iframe></p>

ಪೋಸ್ಟ್ ಹಂಚಿಕೊಳ್ಳಿ:

ಪೋಸ್ಟ್ ಹಂಚಿಕೊಳ್ಳಿ:

ಈ ಹೊತ್ತಿನ ಪ್ರಮುಖ ಸುದ್ದಿ

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ರಾಜ್ಯದ 15 ಜಿಲ್ಲೆಗಳಲ್ಲಿ ಇನ್ನೂ 5 ದಿನ ಮಳೆ ಅಬ್ಬರ: ಹವಾಮಾನ ಇಲಾಖೆ

ಬಂಗಾಳ ಕೊಲ್ಲಿಯಲ್ಲಿ ಉಂಟಾಗಿರುವ ಹವಾಮಾನ ವೈಪರೀತ್ಯ ಹಾಗೂ ಮೇಲ್ಮೈ ಸುಳಿಗಾಳಿಯ ಪ್ರಭಾವದಿಂದಾಗಿ...

ರಸ್ತೆ ಅಪಘಾತಗಳ ನಿಯಂತ್ರಣಕ್ಕೆ AI ತಂತ್ರಜ್ಞಾನದ ನೆರವು: ಡಾ. ಶಾಲಿನಿ ರಜನೀಶ್

ರಾಜ್ಯದಲ್ಲಿ ರಸ್ತೆ ಅಪಘಾತಗಳಿಂದ ಸಂಭವಿಸುವ ಸಾವು-ನೋವುಗಳನ್ನು ಗಣನೀಯವಾಗಿ ತಗ್ಗಿಸಲು ಕೃತಕ ಬುದ್ಧಿಮತ್ತೆ...

ದೆಹಲಿ | ಯುವತಿ ಮೇಲೆ ಸಾಮೂಹಿಕ ಅತ್ಯಾಚಾರ; ಮೂವರ ಬಂಧನ

ಪೂರ್ವ ದೆಹಲಿಯ ಪ್ರೀತ್ ವಿಹಾರ್ ಪ್ರದೇಶದ ಕೆಫೆಯೊಂದರಲ್ಲಿ ಮಂಗಳವಾರ ನಸುಕಿನ ವೇಳೆ...