ಶಾಸಕ ಹಾಗೂ ಕರ್ನಾಟಕ ಗೃಹ ಮಂಡಳಿ ಅಧ್ಯಕ್ಷರು ಶ್ರೀನಿವಾಸ ಮಾನೆ ಅವರ 50:50 ಕಾರ್ಯಕ್ರಮದ ಅಡಿಯಲ್ಲಿ ಹಾವೇರಿ ಜಿಲ್ಲೆಯ ಹಾನಗಲ್ಲ ತಾಲೂಕಿನ ವರ್ದಿ ಗ್ರಾಮದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಗೆ ₹2.8 ಲಕ್ಷ ವೆಚ್ಚದಲ್ಲಿ ನಾನಾ ಶೈಕ್ಷಣಿಕ ಹಾಗೂ ಅಗತ್ಯ ಸಾಮಗ್ರಿ ವಿತರಿಸಲಾಯಿತು..
ಒಟ್ಟು ವೆಚ್ಚದಲ್ಲಿ ಅರ್ಧ ಗ್ರಾಮಸ್ಥರು, ಹಳೆ ವಿದ್ಯಾರ್ಥಿಗಳು ಭರಿಸಿದ್ದು, ಉಳಿದರ್ಧ ಮೊತ್ತವನ್ನು ಶಾಸಕರು ವೈಯಕ್ತಿಕವಾಗಿ ನೀಡಿದ್ದಾರೆ. ಎಲ್ಕೆಜಿ, ಯುಕೆಜಿಯ 30 ಡೆಸ್ಕ್, ತಲಾ 2 ಆಫೀಸ್ ಟೇಬಲ್, ಮೆಟಲ್ ಚೇರ್, ಅಲ್ಮೆರಾಗಳು, ವಾಲಿಬಾಲ್, ಒಂದು ಸ್ಮಾರ್ಟ್ ಟಿವಿ, ಬ್ಲೂಟೂತ್ ಸ್ಪೀಕರ್ ಮೈಕ್ ಹಾಗೂ 3 ಗ್ರೀನ್ ಬೋರ್ಡ್ ಒದಗಿಸಲಾಯಿತು.
ಸರ್ಕಾರಿ ಶಾಲೆಗಳ ಸಬಲೀಕರಣದ 50:50ಕಾರ್ಯಕ್ರಮದಡಿ 50 ಸರ್ಕಾರಿ ಶಾಲೆಗಳಿಗೆ ಒಟ್ಟು ₹ 4 ಕೋಟಿ ವೆಚ್ಚದಲ್ಲಿ ಸೌಲಭ್ಯ ಕಲ್ಪಿಸಲಾಗಿದೆ.



