‘ರಾವಣನ ದಹನ ಏಕೆ, ದುರ್ಯೋಧನನದ್ದೇಕಿಲ್ಲ?’ – ಮಾನವ ಹಕ್ಕುಗಳ ಆಯೋಗಕ್ಕೆ ಈ ಹಿಂದೆಯೂ ಸಲ್ಲಿಕೆಯಾಗಿತ್ತು ಅರ್ಜಿ

Date:

ವಿಜಯದಶಮಿ/ದಸರಾ ಹಬ್ಬದ ಸಮಯದಲ್ಲಿ ಪ್ರತಿವರ್ಷ ರಾವಣನ ಪೋಸ್ಟ‌ರ್ ಅಥವಾ ಗೊಂಬೆಯನ್ನು ದಹಿಸುವುದು ಮಾನವ ಹಕ್ಕುಗಳ ಉಲ್ಲಂಘನೆಯಾಗುತ್ತದೆ ಎಂದು ಪ್ರತಿಪಾದಿಸಿ ಛತ್ತೀಸ್‌ಗಢ ರಾಜ್ಯ ಮಾನವ ಹಕ್ಕುಗಳ ಆಯೋಗಕ್ಕೆ ಅರ್ಜಿಯೊಂದು ಸಲ್ಲಿಕೆಯಾಗಿದೆ. ಅಷ್ಟಕ್ಕೂ ಇಂತಹ ಅರ್ಜಿ ಹೊಸದೇನಲ್ಲ, ಈ ಹಿಂದೆಯೂ ಇಂತಹ ಅರ್ಜಿ ಸಲ್ಲಿಕೆಯಾಗಿದೆ.

- Advertisement -

ಪ್ರತಿ ವರ್ಷ ರಾವಣನ ದಹನ ಮಾಡುವುದು ತಾರತಮ್ಯದಿಂದ ಕೂಡಿದ್ದು, ಇದು ಹಕ್ಕುಗಳ ಉಲ್ಲಂಘನೆಯಾಗಿದೆ. ರಾವಣನ ಬೊಂಬೆಯನ್ನು ಸುಡುವ ಬದಲು ದುರ್ಯೋಧನನ ಬೊಂಬೆಯನ್ನು ಏಕೆ ಸುಡಬಾರದು ಎಂದು ಅರ್ಜಿದಾರರು ಆಯೋಗದ ಮುಂದೆ ಪ್ರಶ್ನಿಸಿದ್ದಾರೆ.

ಇನ್ನಷ್ಟು ವಿಶೇಷ ಲೇಖನಗಳಿಗಾಗಿ, ಇಲ್ಲಿ ಕ್ಲಿಕ್ ಮಾಡಿ →

ಗ್ರಾಮೀಣ ರಾಜಕಾರಣದಲ್ಲಿ ಮಹಿಳಾ ಮೀಸಲಾತಿ ಹೆಸರಿಗಷ್ಟೇ; ಇಂದಿಗೂ ಅಧಿಕಾರ...

ಗ್ರಾಮೀಣ ರಾಜಕಾರಣದಲ್ಲಿ ಮಹಿಳಾ ಮೀಸಲಾತಿಯ ಮೂಲಕ ಅನೇಕ ಮಹಿಳೆಯರು ಜನಪ್ರತಿನಿಧಿಗಳಾಗಿದ್ದಾರೆ. ಆದರೂ ಕೆಲವು ಕಡೆ ಮಹಿಳಾ ಪ್ರತಿನಿಧಿಗಳ ಬದಲಿಗೆ ಅವರ ಪತಿ, ತಂದೆ, ಸಹೋದರ ಅಥವಾ ಕುಟುಂಬದ ಇತರ ಪುರುಷರು ಆಡಳಿತದಲ್ಲಿ ಹಸ್ತಕ್ಷೇಪ...

ಪ್ರಜಾಪ್ರಭುತ್ವದ ಪ್ರತಿಭಟನೆ ಮತ್ತು ಪೊಲೀಸ್ ವ್ಯವಸ್ಥೆ

ಭಾರತದಲ್ಲಿ ಪ್ರತಿಭಟನೆಗಳಿಗೆ ಶತಮಾನಗಳ ಸಂಪ್ರದಾಯವಿದೆ. ಬ್ಯಾರಿಕೇಡ್‌ಗಳನ್ನು ಹಾರುವುದು, ಮಾನವ ಸರಪಳಿ ರಚಿಸುವುದು ಅಥವಾ ಬಂಧನವನ್ನು ವಿರೋಧಿಸಿ ನೆಲದ ಮೇಲೆ ಮಲಗುವುದು ಪ್ರಜಾಪ್ರಭುತ್ವದ ಸಹಜ ಆಂದೋಲನದ ಭಾಗವೇ ಹೊರತು ಖಂಡಿಸಬೇಕಾದ ಅಪರಾಧಗಳಲ್ಲ. ಅಕ್ಟೋಬರ್ 10ರಂದು ದೆಹಲಿಯಲ್ಲಿ...

ಬೋಟ್ ಕ್ಲಬ್‌ನಿಂದ ಜಂತರ್ ಮಂತರ್‌ವರೆಗೆ; ದೆಹಲಿಯ ಪ್ರತಿಭಟನಾ ತಾಣ...

ಸ್ವಾತಂತ್ರ್ಯಾನಂತರ ಹಲವು ದಶಕಗಳವರೆಗೆ ದೆಹಲಿಯ ಇಂಡಿಯಾ ಗೇಟ್ ಸಮೀಪದ ರಾಜಪಥದಲ್ಲಿರುವ ಬೋಟ್ ಕ್ಲಬ್ ಮೈದಾನವು ದೇಶದ ಪ್ರಮುಖ ರಾಜಕೀಯ ಪ್ರತಿಭಟನೆಗಳು, ರೈತ ಸಮಾವೇಶಗಳು ಮತ್ತು ಸಾರ್ವಜನಿಕ ಚಳವಳಿಗಳಿಗೆ ವೇದಿಕೆಯಾಗಿತ್ತು. ದೆಹಲಿಯ ಜಂತರ್ ಮಂತರ್ ಪ್ರತಿಭಟನಾ...

ಈ ಅರ್ಜಿಯನ್ನು ಪರಿಶೀಲಿಸಿದ ಛತ್ತೀಸ್‌ಗಢ ಮಾನವ ಹಕ್ಕುಗಳ ಆಯೋಗವು ಇದನ್ನು ಸಭ್ಯವಾಗಿ ಮತ್ತು ತಾಂತ್ರಿಕ ಕಾರಣಗಳನ್ನು ನೀಡಿ ವಜಾಗೊಳಿಸಿದೆ. ಕಾನೂನು ಮತ್ತು ಮಾನವ ಹಕ್ಕುಗಳ ನಿಯಮಗಳ ಅಡಿಯಲ್ಲಿ ‘ಮಾನವ ಹಕ್ಕುಗಳು’ ಕೇವಲ ಜೀವಂತ ಅಥವಾ ಐತಿಹಾಸಿಕವಾಗಿ ಮನುಷ್ಯರೆಂದು ಪರಿಗಣಿಸಲ್ಪಟ್ಟ ವ್ಯಕ್ತಿಗಳಿಗೆ ಮಾತ್ರ ಅನ್ವಯಿಸುತ್ತವೆ. ಪೌರಾಣಿಕ ಗ್ರಂಥಗಳ ಪ್ರಕಾರ ರಾಕ್ಷಸ ರಾಜನಾಗಿರುವ ರಾವಣನು ‘ಮಾನವ’ ವರ್ಗದಡಿಯಲ್ಲಿ ಬರುವುದಿಲ್ಲ ಎಂದು ಆಯೋಗ ಹೇಳಿದೆ.

ಇದನ್ನೂ ಓದಿ: ಯಾದಗಿರಿ | ಅ.24ರ ರಾವಣ ದಹನ ಆಚರಣೆ ರದ್ದಿಗೆ ದಸಂಸ ಆಗ್ರಹ

ಹಾಗೆಯೇ ಇಂತಹ ಅರ್ಜಿಗಳು ಕೇವಲ ಪ್ರಚಾರಕ್ಕಾಗಿ ಅಥವಾ ಹಬ್ಬಗಳ ಸಂದರ್ಭದಲ್ಲಿ ಅನಗತ್ಯ ಚರ್ಚೆ ಹುಟ್ಟುಹಾಕಲು ಸಲ್ಲಿಕೆಯಾಗುತ್ತವೆಯೇ ಹೊರತು, ಇದರಿಂದ ಯಾವುದೇ ನೈಜ ಮಾನವ ಹಕ್ಕುಗಳ ಉಲ್ಲಂಘನೆ ಆಗುವುದಿಲ್ಲ ಎಂದು ಆಯೋಗವು ಅಭಿಪ್ರಾಯಪಟ್ಟಿದೆ.

ಈ ಹಿಂದೆ ಮಧ್ಯಪ್ರದೇಶದ ಇಂದೋರ್ ಹಾಗೂ ಮಹಾರಾಷ್ಟ್ರದ ನಾಗ್ಪುರದಲ್ಲಿ ಕೆಲವು ವ್ಯಕ್ತಿಗಳು ಮತ್ತು ಸಂಘಟನೆಗಳು ದಸರಾ ಹಬ್ಬದಂದು ರಾವಣನ ಪ್ರತಿಕೃತಿ ದಹಿಸುವುದನ್ನು ವಿರೋಧಿಸಿ ನ್ಯಾಯಾಲಯ, ಹೈಕೋರ್ಟ್‌ಗಳಲ್ಲಿ ಅರ್ಜಿ ದಾಖಲಿಸಿದ್ದವು. ರಾವಣನು ಮಹಾನ್ ವಿದ್ವಾಂಸ ಮತ್ತು ಶಿವಭಕ್ತನಾಗಿದ್ದರಿಂದ ಆತನ ದಹನ ತಡೆಯಬೇಕು ಎಂಬ ವಾದವನ್ನು ಆ ಅರ್ಜಿಗಳಲ್ಲಿ ಮಂಡಿಸಲಾಗಿತ್ತು.

ಇನ್ನೊಂದೆಡೆ ದಸರಾದಂದು ರಾವಣನ ಬೃಹತ್ ಪ್ರತಿಕೃತಿಗಳನ್ನು ಸುಡುವುದರಿಂದ ವಾಯು ಮಾಲಿನ್ಯ ಉಂಟಾಗುತ್ತದೆ, ದೆಹಲಿ ಹೈಕೋರ್ಟ್‌ನಲ್ಲಿ ಪ್ರತಿಕೃತಿ ದಹನವನ್ನು ನಿಯಂತ್ರಿಸಬೇಕು ಅಥವಾ ನಿಷೇಧಿಸಬೇಕು ಎಂದು ಕೋರಿ ಕೆಲವು ಪರಿಸರವಾದಿಗಳು ಸಹ ಈ ಹಿಂದೆ ಅರ್ಜಿಗಳನ್ನು ಸಲ್ಲಿಸಿದ್ದರು.

ರಾವಣನನ್ನು ಶಿವಭಕ್ತನಾಗಿ ಪೂಜಿಸುವ ಸಮುದಾಯ

ಅಷ್ಟಕ್ಕೂ ದೇಶದಲ್ಲಿ ರಾಮನನ್ನು ಪೂಜಿಸುವಂತೆ ರಾವಣನನ್ನೂ ಪೂಜಿಸುವ ಸಮುದಾಯವಿದೆ. ಮಧ್ಯಪ್ರದೇಶದ ಮಂದಸೌರ್‌ನ ರಾವಣ ಗ್ರಾಮದಲ್ಲಿ ರಾವಣನನ್ನು ಅಳಿಯನಂತೆ, ವಿದ್ವಾಂಸ ಎಂದು ಕಾಣಲಾಗುತ್ತದೆ. ಇಲ್ಲಿನ ಕೆಲ ಸಮುದಾಯದವರು ರಾವಣನಿಗೆ ಪೂಜೆ ಸಲ್ಲಿಸುತ್ತಾರೆ ಮತ್ತು ಮದುವೆ ಸಮಾರಂಭಗಳಲ್ಲಿ ರಾವಣನ ಪ್ರತಿಮೆಗೆ ಮೊದಲ ಆಹ್ವಾನ ನೀಡುವ ಪದ್ಧತಿಯೂ ಇದೆ.

ಉತ್ತರ ಪ್ರದೇಶದ ಬಿಸ್ಖ್‌ ಎಂಬ ದೆಹಲಿ ಹತ್ತಿರವಿರುವ ಈ ಗ್ರಾಮವನ್ನು ರಾವಣನ ಜನ್ಮಸ್ಥಳವೆಂದು ನಂಬಲಾಗಿದೆ. ಇಲ್ಲಿ ದಸರೆಯ ದಿನ ರಾವಣನ ದಹನ ಮಾಡುವ ಬದಲು ಆತನ ಆತ್ಮಶಾಂತಿಗಾಗಿ ಪೂಜೆ ಮತ್ತು ಯಾಗಗಳನ್ನು ಮಾಡಲಾಗುತ್ತದೆ. ಇನ್ನು ನಮ್ಮ ರಾಜ್ಯದ ಕೋಲಾರದ ಕೆಲ ಭಾಗಗಳಲ್ಲಿ ಮತ್ತು ಮಂಡ್ಯದ ಕೆಲವು ಕಡೆಗಳಲ್ಲಿ ಶಿವಭಕ್ತನಾದ ರಾವಣನ ದೇವಾಲಯಗಳಿದ್ದು, ಅಲ್ಲಿ ಶಿವನೊಂದಿಗೆ ರಾವಣನನ್ನೂ ಪೂಜಿಸುವ ಭಕ್ತರಿದ್ದಾರೆ. ಕೇರಳದ ಕಣ್ಣೂರು ಮತ್ತು ಆಂಧ್ರಪ್ರದೇಶದಲ್ಲಿ ಕೆಲವು ಸಮುದಾಯಗಳು ರಾವಣನನ್ನು ರಾಕ್ಷಸನಾಗಿ ನೋಡದೆ, ಅತ್ಯಂತ ಶಕ್ತಿಶಾಲಿ ಶಿವಭಕ್ತ ಮತ್ತು ಮಹಾನ್ ವಿದ್ವಾಂಸನಾಗಿ ಗೌರವಿಸುತ್ತವೆ.

WhatsApp Image 2025 11 17 at 3.21.17 PM
ಈ ದಿನ ಡೆಸ್ಕ್
+ posts

ಪೋಸ್ಟ್ ಹಂಚಿಕೊಳ್ಳಿ:

ಪೋಸ್ಟ್ ಹಂಚಿಕೊಳ್ಳಿ:

ಈ ಹೊತ್ತಿನ ಪ್ರಮುಖ ಸುದ್ದಿ

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ಗ್ರಾಮೀಣ ರಾಜಕಾರಣದಲ್ಲಿ ಮಹಿಳಾ ಮೀಸಲಾತಿ ಹೆಸರಿಗಷ್ಟೇ; ಇಂದಿಗೂ ಅಧಿಕಾರ ಪುರುಷರ ವಶ!

ಗ್ರಾಮೀಣ ರಾಜಕಾರಣದಲ್ಲಿ ಮಹಿಳಾ ಮೀಸಲಾತಿಯ ಮೂಲಕ ಅನೇಕ ಮಹಿಳೆಯರು ಜನಪ್ರತಿನಿಧಿಗಳಾಗಿದ್ದಾರೆ. ಆದರೂ...

ಪ್ರಧಾನಿ ಮೋದಿ ‘ಕಳ್ಳ’ ಎಂಬ ಹೇಳಿಕೆ: ರಾಹುಲ್ ಗಾಂಧಿ ವಿರುದ್ಧದ ಮಾನನಷ್ಟ ಮೊಕದ್ದಮೆ ವಿಚಾರಣೆಗೆ ಮಧ್ಯಂತರ ತಡೆ

ಪ್ರಧಾನಮಂತ್ರಿ ನರೇಂದ್ರ ಮೋದಿ ಅವರ ವಿರುದ್ಧ 2018-19ರಲ್ಲಿ ನೀಡಿದ್ದ ಹೇಳಿಕೆಗೆ ಸಂಬಂಧಿಸಿದಂತೆ...

ಎಂಪಿ | ಆದಿವಾಸಿಗಳ ಮನೆಗಳ ನೆಲಸಮ ಹದ್ದು ಮೀರಿದ ಅನ್ಯಾಯ; ತಮ್ಮದೇ ಸರ್ಕಾರದ ವಿರುದ್ಧ ಕೇಂದ್ರ ಸಚಿವ ಶಿವರಾಜ್ ಸಿಂಗ್ ಆಕ್ರೋಶ

ಮಧ್ಯಪ್ರದೇಶದ ಸೀಹೋರ್ ಜಿಲ್ಲೆಯ ಬುಡ್ನಿ ಕ್ಷೇತ್ರದ ಕೋಸ್ಮಿ ಗ್ರಾಮದಲ್ಲಿ ಬುಡಕಟ್ಟು ಕುಟುಂಬಗಳ...

ವಕೀಲರ ಭೇಟಿಗೂ ನಿರ್ಬಂಧ, ಫೋನ್‌ ವಶ: ದೆಹಲಿ ಪೊಲೀಸರ ವಿರುದ್ಧ ಸಿಜೆಪಿ ಆಕ್ರೋಶ

ಕಾಕ್‌ರೋಚ್ ಜನತಾ ಪಾರ್ಟಿ (CJP) ನಾಯಕರಾದ ಸೌರವ್ ದಾಸ್, ಅಶುತೋಷ್ ರಂಕಾ...