ಪತ್ನಿ ‘ಸಾವಿರ ಗಂಡಂದಿರನ್ನು ಇಟ್ಟುಕೊಳ್ಳಬಲ್ಲೆ’ ಎಂದಿದ್ದು ಕೊಲೆಗೆ ಪ್ರಚೋದನೆ; ಜೀವಾವಧಿ ಶಿಕ್ಷೆ ಕಡಿತ: ಮಧ್ಯಪ್ರದೇಶ ಹೈಕೋರ್ಟ್

Date:

“ನಿನ್ನಂಥ ಸಾವಿರ ಗಂಡಂದಿರನ್ನು ನಾನು ಇಟ್ಟುಕೊಳ್ಳಬಲ್ಲೆ” ಎಂಬ ಪತ್ನಿಯ ಮಾತು ಕೊಲೆಗೆ ಪ್ರಚೋದನೆಯಾಗುತ್ತದೆ. ಈ ಮಾತು ಪತಿಯ ಘನತೆ ಮತ್ತು ಯೋಗ್ಯತೆಯ ಮೇಲಿನ ಪರೋಕ್ಷ ದಾಳಿ. ಈ ಹೇಳಿಕೆಯು ವ್ಯಕ್ತಿಯೊಬ್ಬ ತನ್ನ ನಿಯಂತ್ರಣವನ್ನು ಕಳೆದುಕೊಂಡು ಗಂಭೀರ ಪ್ರಚೋದನೆಗೆ ಒಳಗಾಗಲು ಕಾರಣವಾಗುತ್ತದೆ ಎಂದು ಮಧ್ಯಪ್ರದೇಶ ಹೈಕೋರ್ಟ್ ಹೇಳಿದೆ. ಹಾಗೆಯೇ ಪತ್ನಿಯನ್ನು ಕೊಲೆ ಮಾಡಿದ ಆರೋಪಿಗೆ ಈ ಹಿಂದೆ ವಿಚಾರಣಾ ನ್ಯಾಯಾಲಯ ವಿಧಿಸಿದ್ದ ಜೀವಾವಧಿ ಶಿಕ್ಷೆಯನ್ನು ಹೈಕೋರ್ಟ್ 7 ವರ್ಷಗಳ ಕಠಿಣ ಜೈಲು ಶಿಕ್ಷೆಗೆ ಕಡಿತಗೊಳಿಸಿದೆ.

- Advertisement -

ನ್ಯಾಯಮೂರ್ತಿಗಳಾದ ವಿವೇಕ್ ಅಗರ್ವಾಲ್ ಮತ್ತು ಅವನೀಂದ್ರ ಕುಮಾರ್ ಸಿಂಗ್ ಅವರಿದ್ದ ವಿಭಾಗೀಯ ಪೀಠವು ಈ ತೀರ್ಪು ನೀಡಿದೆ. ಪತ್ನಿಯ ಸಾವಿಗೆ ಪತಿಯೇ ಕಾರಣ ಎಂಬುದನ್ನು ನ್ಯಾಯಾಲಯ ಎತ್ತಿಹಿಡಿದಿದೆ. ಆದರೆ ಈ ಕೃತ್ಯವು ವ್ಯವಸ್ಥಿತವಾಗಿ ಯೋಜಿಸಿ ಮಾಡಿದ ಕೊಲೆಯಲ್ಲ, ಬದಲಿಗೆ ಹಠಾತ್ ಪ್ರಚೋದನೆಯಿಂದ ನಡೆದ ಘಟನೆ ಎಂದು ಅಭಿಪ್ರಾಯಿಸಿದೆ.

ಇನ್ನಷ್ಟು ವಿಶೇಷ ಲೇಖನಗಳಿಗಾಗಿ, ಇಲ್ಲಿ ಕ್ಲಿಕ್ ಮಾಡಿ →

ಪಾಕಿಸ್ತಾನದಲ್ಲಿ ಅಹಿಂಸಾ ಮೂರ್ತಿಯ ‘ರಹಸ್ಯರಕ್ಷಣೆ’: ಕರಾಚಿಯಿಂದ ಇಸ್ಲಾಮಾಬಾದ್‌ಗೆ ಗಾಂಧಿ...

ಪಾಕಿಸ್ತಾನದ ಇಸ್ಲಾಮಾಬಾದ್‌ನಲ್ಲಿರುವ ಭಾರತೀಯ ಹೈಕಮಿಷನ್ ಕಚೇರಿಯ ಪ್ರವೇಶ ದ್ವಾರದಲ್ಲಿ ಮಹಾತ್ಮ ಗಾಂಧೀಜಿಯವರ ಭವ್ಯ ಕಂಚಿನ ಪ್ರತಿಮೆ ಇಂದಿಗೂ ಗಾಂಭೀರ್ಯದಿಂದ ನಿಂತಿದೆ. ಕೈಯಲ್ಲಿ ಊರುಗೋಲು ಹಿಡಿದು ದೂರದ ದಿಗಂತವನ್ನು ದಿಟ್ಟಿಸುವಂತಿರುವ ಈ ಬಾಪೂ ಪ್ರತಿಮೆಯು...

ಗಾಂಧಿಯ ಆರ್ಥಿಕ ಸಾಮಾಜಿಕ ಸಂಕೇತಗಳು: ಉಪ್ಪು, ಖಾದಿ, ಚರಕ...

ಗ್ರಾಮೀಣ ಭಾರತದ ಆರ್ಥಿಕತೆ ಮನಗಂಡಿದ್ದ ಗಾಂಧಿ ಹಾಲಿನ ಬಗೆಗಿನ ಕಠೋರ ನಿಲುವನ್ನು ನಿರಾಕರಿಸಿ ತನ್ನನ್ನು ತಾನು ಮೇಕೆಯ ಮಮಕಾರದ ಹಾಲಿಗೆ ಕೊಟ್ಟುಕೊಂಡಿದ್ದರು. ಈಗಿನ ಪಶುಪಾಲಕ ಸಮುದಾಯಗಳ ಸಾವಯವ ಬದುಕಿನ ರೀತಿ ನೀತಿ ಗಮನಿಸಿ......

ದಕ್ಷಿಣ ಆಫ್ರಿಕಾದಲ್ಲಿ ಗಾಂಧಿ ಮೊಳಗಿಸಿದ್ದ ಮತ ಹಕ್ಕಿನ ಕೂಗಿಗೆ...

ಮತದಾನ ಕೇವಲ ಹಕ್ಕಲ್ಲ, ಅದು ಪ್ರಜೆಯೊಬ್ಬನ ಘನತೆ ಹಾಗೂ ಅಸ್ತಿತ್ವದ ಸಂಕೇತ. 131 ವರ್ಷಗಳ ಹಿಂದೆ ದಕ್ಷಿಣ ಆಫ್ರಿಕಾದಲ್ಲಿ ಇದೇ ಮತಾಧಿಕಾರಕ್ಕಾಗಿ ಗಾಂಧೀಜಿ ಬ್ರಿಟಿಷರ ವಿರುದ್ಧ ಸಿಡಿದೆದ್ದಿದ್ದರು. ಆದರೆ, ಇಂದು ಸ್ವತಂತ್ರ ಭಾರತದಲ್ಲಿ...

ಇದನ್ನೂ ಓದಿ: 2018ರ ಕಚನಾಥಂ ಜಾತಿ ಹತ್ಯೆ ಪ್ರಕರಣ: 26 ಅಪರಾಧಿಗಳಿಗೆ ಜೀವಾವಧಿ ಶಿಕ್ಷೆ

2021ರ ಜುಲೈನಲ್ಲಿ ಮಧ್ಯಪ್ರದೇಶದ ಛಿಂದ್ವಾರಾ ಜಿಲ್ಲೆಯಲ್ಲಿ ಏಳು ತಿಂಗಳ ಗರ್ಭಿಣಿಯನ್ನು ಆಕೆಯ ಪತಿ ವಾಗ್ವಾದದ ವೇಳೆ ಕೋಪಗೊಂಡು ಕೊಲೆ ಮಾಡಿದ್ದ. ಕೊಲೆ ಮಾಡಿದ ಬಳಿಕ ಆತನೇ ಪತ್ನಿಯ ಮನೆಯವರಿಗೂ, ಪೊಲೀಸರಿಗೂ ತಿಳಿಸಿದ್ದ. ವೈದ್ಯಕೀಯ ವರದಿಯ ಪ್ರಕಾರ, ಮಹಿಳೆಯ ಪಕ್ಕೆಲುಬು ಮತ್ತು ಎದೆಮೂಳೆ ಮುರಿತಕ್ಕೊಳಗಾಗಿ ತೀವ್ರ ಗಾಯಗಳಿಂದ ಸಾವು ಸಂಭವಿಸಿತ್ತು. ಅಂದರೆ ಅಷ್ಟೊಂದು ತೀವ್ರವಾಗಿ ಕಲ್ಲಿನಿಂದ ಹಲ್ಲೆ ಮಾಡಿ ಈತ ಕೊಂದಿದ್ದ.

ಈ ಪ್ರಕರಣದಲ್ಲಿ ವಿಚಾರಣಾ ನ್ಯಾಯಾಲಯವು ಜೀವಾವಧಿ ಶಿಕ್ಷೆ ವಿಧಿಸಿದ್ದು. ಈ ಆದೇಶವನ್ನು ಪ್ರಶ್ನಿಸಿ ಆರೋಪಿ ಹೈಕೋರ್ಟ್ ಮೆಟ್ಟಿಲೇರಿದ್ದ. ಅರ್ಜಿ ವಿಚಾರಣೆ ನಡೆಸಿದ ಹೈಕೋರ್ಟ್‌ ಜೀವಾವಧಿ ಶಿಕ್ಷೆಯನ್ನು 7 ವರ್ಷಕ್ಕೆ ಇಳಿಸಿದೆ.

ಹಾಗೆಯೇ “ಯಾವಾಗ ಪತ್ನಿಯು ತನ್ನ ಪತಿಯನ್ನು ಉದ್ದೇಶಿಸಿ ‘ನಿನ್ನಂಥ ಸಾವಿರ ಗಂಡಂದಿರನ್ನು ನಾನು ಇಟ್ಟುಕೊಳ್ಳಬಲ್ಲೆ’ ಎಂದು ಹೇಳುತ್ತಾಳೋ, ಅದು ಪತಿಯು ಒಬ್ಬ ಮನುಷ್ಯನಾಗಿ ಅಥವಾ ಪತಿಯಾಗಿ ಯಾವುದೇ ಮೌಲ್ಯವನ್ನು ಹೊಂದಿಲ್ಲ, ಆತ ನಾಲಾಯಕ್ ಎಂಬುದನ್ನು ಪರೋಕ್ಷವಾಗಿ ಸೂಚಿಸುತ್ತದೆ. ಆದ್ದರಿಂದ, ಇದನ್ನು ಹಠಾತ್ ಮತ್ತು ಗಂಭೀರ ಪ್ರಚೋದನೆ ಎಂದು ಪರಿಗಣಿಸಬಹುದು,” ಎಂದು ಹೇಳಿದೆ.

WhatsApp Image 2025 11 17 at 3.21.17 PM
ಈ ದಿನ ಡೆಸ್ಕ್
+ posts

ಪೋಸ್ಟ್ ಹಂಚಿಕೊಳ್ಳಿ:

ಪೋಸ್ಟ್ ಹಂಚಿಕೊಳ್ಳಿ:

ಈ ಹೊತ್ತಿನ ಪ್ರಮುಖ ಸುದ್ದಿ

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ಈ ದಿನ ಸಂಪಾದಕೀಯ | ಡಿಕೆಶಿ ಪ್ರತಿರೋಧಕ್ಕೆ ಮಣಿದ ಚುನಾವಣಾ ಆಯೋಗ; ಈವರೆಗಿನ ಅಕ್ರಮಗಳಿಗೆ ಹೊಣೆ ಯಾರು?

ಕರ್ನಾಟಕದಲ್ಲಿ ಎಸ್‌ಐಆರ್‌ ಆರಂಭವಾಗುವ ಮೊದಲೇ ನಾಗರಿಕ ಸಂಘಟನೆಗಳು ಕಾಂಗ್ರೆಸ್‌ ಗೆ ಎಸ್‌ಐಆರ್‌...

ಪಾಕಿಸ್ತಾನದಲ್ಲಿ ಅಹಿಂಸಾ ಮೂರ್ತಿಯ ‘ರಹಸ್ಯರಕ್ಷಣೆ’: ಕರಾಚಿಯಿಂದ ಇಸ್ಲಾಮಾಬಾದ್‌ಗೆ ಗಾಂಧಿ ಪ್ರತಿಮೆ ತಲುಪಿದ ರೋಚಕ ಇತಿಹಾಸ!

ಪಾಕಿಸ್ತಾನದ ಇಸ್ಲಾಮಾಬಾದ್‌ನಲ್ಲಿರುವ ಭಾರತೀಯ ಹೈಕಮಿಷನ್ ಕಚೇರಿಯ ಪ್ರವೇಶ ದ್ವಾರದಲ್ಲಿ ಮಹಾತ್ಮ ಗಾಂಧೀಜಿಯವರ...

ಅ.4ರಿಂದ ವಿಜಯಪುರ – ತಿರುಪತಿ ದಸರಾ ಎಕ್ಸ್‌ಪ್ರೆಸ್ ರೈಲು ಸೇವೆ ಆರಂಭ

ದಸರಾ ಹಬ್ಬದ ಹಿನ್ನೆಲೆಯಲ್ಲಿ ತಿರುಪತಿ–ವಿಜಯಪುರ ನಡುವೆ ಪ್ರಯಾಣಿಕರ ಅನುಕೂಲಕ್ಕಾಗಿ ಸಾಪ್ತಾಹಿಕ ವಿಶೇಷ...