ಲೋಕಸಭೆಯಲ್ಲಿ ಮೈಕ್ ದನಿ ಕಡಿತ; ಪ್ರಧಾನಿ ಮೋದಿ ವಿರುದ್ಧ ಹಕ್ಕುಚ್ಯುತಿ ನೋಟಿಸ್

Date:

  • ರಾಜ್ಯಸಭೆಯಲ್ಲಿ ರಾಹುಲ್ ಟೀಕಿಸಿದ್ದ ಪ್ರಧಾನಿ ಮೋದಿ
  • ಮಾರ್ಚ್‌ 17ಕ್ಕೆ ರಾಜ್ಯಸಭೆ, ಲೋಕಸಭೆ ಕಲಾ ಮುಂದೂಡಿಕೆ

ಬಜೆಟ್ ಅಧಿವೇಶನದ ಐದನೇ ದಿನವಾದ ಶುಕ್ರವಾರದ (ಮಾರ್ಚ್ 17) ಲೋಕಸಭೆ ಮತ್ತು ರಾಜ್ಯಸಭೆಗಳ ಕಲಾಪ ಆಡಳಿತಾರೂಢ ಬಿಜೆಪಿ ಹಾಗೂ ಪ್ರತಿಪಕ್ಷಗಳ ತಿಕ್ಕಾಟದಲ್ಲಿ ವ್ಯರ್ಥವಾಗಿದೆ.

ಪ್ರತಿಪಕ್ಷಗಳು ಕೇಂದ್ರ ಸರ್ಕಾರದ ವಿರುದ್ಧ ಘೋಷಣೆ ಕೂಗುತ್ತಿದ್ದ ಸಮಯದಲ್ಲಿ ಲೋಕಸಭೆಯಲ್ಲಿ ಮೈಕ್ನ ದನಿಯನ್ನು ಸ್ತಬ್ದಗೊಳಿಸಲಾಗಿದೆ. ಈ ಕುರಿತ ವಿಡಿಯೋಗಳು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿವೆ.

ಸರ್ಕಾರ ಚರ್ಚೆಗೆ ಅವಕಾಶ ನೀಡುತ್ತಿಲ್ಲ ಎಂದು ಆರೋಪಿಸಿ ಕಾಂಗ್ರೆಸ್ ಪ್ರಧಾನಿ ನರೇಂದ್ರ ಮೋದಿ ಅವರ ವಿರುದ್ಧ ಹಕ್ಕುಚ್ಯುತಿ ನಿರ್ಣಯ ಮಂಡಿಸಿದೆ.

ಪ್ರತಿಪಕ್ಷಗಳ ಪ್ರತಿಭಟನೆಯ ದನಿ ಅಡಗಿಸಲು ಸರ್ಕಾರ ಸಂಸತ್ತಿನಲ್ಲಿ ಮೈಕ್‌ನ ಧ್ವನಿಯನ್ನು ನಿಲ್ಲಿಸಿದೆ. ಈ ಕುರಿತ ದೃಶ್ಯಾವಳಿಯನ್ನು ಕಾಂಗ್ರೆಸ್ ಪಕ್ಷ ತನ್ನ ಅಧಿಕೃತ ಟ್ವಿಟರ್ ಖಾತೆಯಲ್ಲಿ ಹಂಚಿಕೊಂಡಿದೆ. ಇತರ ಪ್ರತಿಪಕ್ಷಗಳೂ ಲೋಕಸಭೆಯ ಮೈಕ್ ಧ್ವನಿ ಸ್ತಬ್ದಗೊಳಿಸಿರುವುದನ್ನು ವಿರೋಧಿಸಿದ್ದಾರೆ.

ಲೋಕಸಭೆಯಲ್ಲಿ ಕಲಾಪ ಪ್ರಾರಂಭವಾದ ಸ್ವಲ್ಪ ಸಮಯದ ನಂತರ ಪ್ರತಿಪಕ್ಷಗಳ ಪ್ರತಿಭಟನೆಯ ಸಮಯದಲ್ಲಿ ಮೈಕ್‌ನಲ್ಲಿ ದನಿ ನಿಂತುಹೋಗಿದೆ. ಲೋಕಸಭೆಯ ಸಭಾಧ್ಯಕ್ಷ ಓಂ ಬಿರ್ಲಾ ಅವರ ಕುರ್ಚಿಯ ಬಳಿ ಪ್ರತಿಪಕ್ಷದ ಸಂಸದರು ಪ್ರತಿಭಟನೆ ನಡೆಸುತ್ತಿದ್ದಾಗ ಸುಮಾರು 20 ನಿಮಿಷಗಳ ಕಾಲ ಮೈಕ್‌ನಲ್ಲಿ ಯಾವುದೇ ಸದ್ದು ಕೇಳಲಿಲ್ಲ. ಪ್ರತಿಪಕ್ಷದ ಸದಸ್ಯರಿಗೆ ಘೋಷಣೆ ಕೂಗುವುದನ್ನು ನಿಲ್ಲಿಸಿ ಎಂದು ಓಂ ಬಿರ್ಲಾ ಅವರು ಹೇಳಿದ್ದು, ನಂತರ ಸದನವನ್ನು ದಿನದ ಮಟ್ಟಿಗೆ ಮುಂದೂಡುವಂತೆ  ಆಡಳಿತ ಪಕ್ಷದ ಸದಸ್ಯರು ಒತ್ತಾಯಿಸಿದ ಧ್ವನಿ ಮಾತ್ರ ಕೇಳಿಸಿದೆ. ಆದರೆ ಧ್ವನಿ ಕೇಳಿಸದೇ ಇರುವ ಬಗ್ಗೆ ಸರ್ಕಾರ ಯಾವುದೇ ಸ್ಪಷ್ಟನೆ ನೀಡಿಲ್ಲ.

“ಮೊದಲು ಮೈಕ್‌ಗಳ ಸದ್ದು ಮಾತ್ರ ಅಡಗಿತ್ತು. ಈಗ ಸದನದ ಕಲಾಪಗಳ ಧ್ವನಿಯನ್ನು ಕಡಿತಗೊಳಿಸಲಾಗಿದೆ. ಪ್ರಧಾನಿ ನರೇಂದ್ರ ಮೋದಿಯವರ ಸ್ನೇಹಿತನಿಗಾಗಿ ಲೋಕಸಭೆ ಧ್ವನಿಯನ್ನು ಅಡಗಿಸಲಾಗಿದೆ” ಎಂದು ಕಾಂಗ್ರೆಸ್  ಟ್ವೀಟ್ ಮಾಡಿದೆ.

“ಅದಾನಿ-ಹಿಂಡೆನ್‌ಬರ್ಗ್ ವಿವಾದಕ್ಕೆ ಸಂಬಂಧಿಸಿ ಜಂಟಿ ಸಂಸದೀಯ ಸಮಿತಿ (ಜೆಪಿಸಿ) ತನಿಖೆಗೆ ಒತ್ತಾಯಿಸುತ್ತಿರುವ ಪ್ರತಿಪಕ್ಷಗಳ ಧ್ವನಿಯನ್ನು ಮೌನಗೊಳಿಸಲು ಮೈಕ್‌ಗಳ ಸದ್ದು ನಿಲ್ಲಿಸಲಾಗಿದೆ” ಎಂದು ಕಾಂಗ್ರೆಸ್ ಆರೋಪಿಸಿದೆ.

ಕಾಂಗ್ರೆಸ್‌ ನಾಯಕ ರಾಹುಲ್ ಗಾಂಧಿ ಅವರಿಗೆ ಸಂಸತ್ತಿನಲ್ಲಿ ಮಾತನಾಡಲು ಅವಕಾಶ ನೀಡದಿರಲು ಆಡಳಿತಾರೂಢ ಬಿಜೆಪಿ ನಿರ್ಧರಿಸಿದೆ. “ಲಂಡನ್‌ನಲ್ಲಿ ರಾಹುಲ್ ಗಾಂಧಿ ‘ಭಾರತದ ಪ್ರಜಾಪ್ರಭುತ್ವ ದಾಳಿಗೆ ಒಳಗಾಗಿದೆ’ ಎಂಬ ಹೇಳಿಕೆ ನೀಡಿದ್ದಾರೆ. ಇದಕ್ಕೆ ಕ್ಷಮೆಯಾಚಿಸದ ಹೊರತು ಮಾತನಾಡಲು ಬಿಡುವುದಿಲ್ಲ” ಎಂದು ಬಿಜೆಪಿ ಪಟ್ಟುಹಿಡಿದಿದೆ.

“ಲಂಡನ್ ಭಾಷಣದ ಬಗ್ಗೆ ಆಡಳಿತ ಸರ್ಕಾರ ಸಂಸತ್ತಿನಲ್ಲಿ ಹೊರಿಸಿರುವ ಆರೋಪಗಳಿಗೆ ಸಂಸತ್ತಿನಲ್ಲಿಯೇ ಉತ್ತರಿಸುತ್ತೇನೆ. ಸಂಸತ್ತಿನಲ್ಲಿ ಮಾತನಾಡಲು ಅವಕಾಶ ನೀಡಿದರೆ, ಪ್ರತಿಕ್ರಿಯೆ ನೀಡುತ್ತೇನೆ” ಎಂದು ರಾಹುಲ್ ಗಾಂಧಿ ಹೇಳಿದ್ದಾರೆ.

ಪ್ರಧಾನಿ ಮೋದಿ ವಿರುದ್ಧ ಹಕ್ಕುಚ್ಯುತಿ ನೋಟಿಸ್

ಕಾಂಗ್ರೆಸ್‌ ಸಂಸದ ಕೆ ಸಿ ವೇಣುಗೋಪಾಲ್‌ ಅವರು ಪ್ರಧಾನಿ ಮೋದಿ ಅವರ ವಿರುದ್ಧ ಹಕ್ಕುಚ್ಯುತಿ ನಿರ್ಣಯ ಮಂಡಿಸಿದ್ದಾರೆ. ಕಳೆದ ತಿಂಗಳು ರಾಜ್ಯಸಭೆಯಲ್ಲಿ ಮಾಡಿದ ಭಾಷಣದ ವೇಳೆ ಪ್ರಧಾನಿ ಮೋದಿ ಅವರು ಜವಾಹರಲಾಲ್ ನೆಹರು ಅವರ ಸರ್‌ನೇಮ್ ಮುಂದಿಟ್ಟು ರಾಹುಲ್ ಗಾಂಧಿ ಮತ್ತು ಅವರ ಕುಟುಂಬದ ಮೇಲೆ ವೈಯಕ್ತಿಕ ದಾಳಿ ನಡೆಸಿದ್ದಾರೆ ಎಂದು ಆರೋಪಿಸಿ ಈ ನಿರ್ಣಯ ಮಂಡಿಸಲಾಗಿದೆ.

ಈ ಸುದ್ದಿ ಓದಿದ್ದೀರಾ? ಸಂಸತ್ತು ಕಲಾಪ ಮುಂದೂಡಿಕೆ; ವಿರೋಧ ಪಕ್ಷಗಳ ಪ್ರತಿಭಟನೆ, ಸೋನಿಯಾ, ಖರ್ಗೆ ಭಾಗಿ

“ಗಾಂಧಿ ಕುಟುಂಬದವರು ‘ನೆಹರು’ ಎಂಬ ಉಪನಾಮವನ್ನು ಏಕೆ ಆರಿಸಿಕೊಂಡಿಲ್ಲ. ನೆಹರು ಹೆಸರನ್ನು ಇಟ್ಟುಕೊಳ್ಳಲು ಅವರಿಗೆ ನಾಚಿಕೆ ಎನಿಸುತ್ತಿದೆಯೇ” ಎಂದು ಪ್ರಧಾನಿ ಮೋದಿ ಭಾಷಣದಲ್ಲಿ ಪ್ರಶ್ನಿಸಿದ್ದರು.

“ಪ್ರಧಾನಿ ಪ್ರಶ್ನೆಯೇ ಅಸಂಬದ್ಧ. ತಂದೆಯ ಸರ್ ನೇಮ್ ಅನ್ನು ಮಗಳು ತೆಗೆದುಕೊಳ್ಳುವುದಿಲ್ಲ ಎಂದು ಪ್ರಧಾನಿ ಮೋದಿ ಅವರಿಗೆ ಚೆನ್ನಾಗಿ ತಿಳಿದಿತ್ತು. ಅದು ತಿಳಿದಿದ್ದರೂ, ಅವರು ಉದ್ದೇಶಪೂರ್ವಕವಾಗಿ ಅವಹೇಳನ ಮಾಡಿದ್ದರು. ಪ್ರಧಾನಿ ಮೋದಿ ಅವರ ಹೇಳಿಕೆಯ ಧ್ವನಿಯು ಅವಮಾನಕರ ಮತ್ತು ಅವಹೇಳನಕಾರಿ” ಎಂದು ಕೆಸಿ ವೇಣುಗೋಪಾಲ್‌ ಹಕ್ಕುಚ್ಯುತಿ ನಿರ್ಣಯದಲ್ಲಿ ಆರೋಪಿಸಿದ್ದಾರೆ.

+ posts

ಪೋಸ್ಟ್ ಹಂಚಿಕೊಳ್ಳಿ:

LEAVE A REPLY

Please enter your comment!
Please enter your name here

ಪೋಸ್ಟ್ ಹಂಚಿಕೊಳ್ಳಿ:

Subscribe

ಹೆಚ್ಚು ಓದಿಸಿಕೊಂಡ ಲೇಖನಗಳು

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ಟ್ರಸ್ಟ್‌ಗಳ ಕಾರ್ಯನಿರ್ವಹಣೆಗೆ ಹೆಚ್ಚಿನ ಬಲ ತುಂಬುವೆ : ಸಚಿವ ಶಿವರಾಜ್ ತಂಗಡಗಿ

ವಿವಿಧ ಟ್ರಸ್ಟ್‌ಗಳ ಅಧ್ಯಕ್ಷರು, ಕಾರ್ಯದರ್ಶಿಗಳೊಂದಿಗೆ ಸಭೆ ನಡೆಸಿದ ಸಚಿವರು ಕನ್ನಡ ಮತ್ತು ಸಂಸ್ಕೃತಿ...

ಇದು ನನ್ನ ಕೊನೆ ಚುನಾವಣೆ; ಸಕ್ರಿಯ ರಾಜಕಾರಣದಲ್ಲಿದ್ದು ಸೇವೆ ಮಾಡುವೆ: ಸಿಎಂ ಸಿದ್ದರಾಮಯ್ಯ

ವರುಣಾ ಕ್ಷೇತ್ರದ ಕಾರ್ಯಕರ್ತರು, ಮತದಾರರಿಗೆ ಕೃತಜ್ಞತೆ ಸಲ್ಲಿಸಿದ ಸಿದ್ದರಾಮಯ್ಯ ರಾಜ್ಯದ ಜನ ಬಿಜೆಪಿಯ...

ದಲಿತರ ಹತ್ಯಾಕಾಂಡ | 42 ವರ್ಷಗಳ ಬಳಿಕ ತೀರ್ಪಿತ್ತ ಕೋರ್ಟ್‌; ನ್ಯಾಯ ದಕ್ಕಿದ್ದು ಯಾರಿಗೆ?

ಇಲ್ಲಿ ನ್ಯಾಯ ತೋರುತ್ತಿದೆಯೇ? ನಾನು ನನ್ನ ಇಡೀ ಜೀವನವನ್ನು ನ್ಯಾಯಕ್ಕಾಗಿ ಕಾಯುವುದರಲ್ಲೇ...

ನಮ್ಮ ಸಚಿವರು | ಮಾಸ್ ಲೀಡರ್ ಆಗುವ ಲಕ್ಷಣವುಳ್ಳ ಪ್ರಿಯಾಂಕ್ ಖರ್ಗೆ; ಕ್ಷೇತ್ರದ ಅಭಿವೃದ್ಧಿಗೆ ನೀಡಬೇಕಿದೆ ಆದ್ಯತೆ

ಪ್ರಿಯಾಂಕ್ ಖರ್ಗೆ ಅವರು  ಕಾಂಗ್ರೆಸ್‌ನಲ್ಲಿ ತಮ್ಮದೇ ವರ್ಚಸ್ಸು ಹೊಂದಿದ್ದಾರೆ. ತಂದೆಯ ಹಾದಿಯಲ್ಲಿಯೇ...