ಬಿಹಾರ ಚುನಾವಣೆ | ಎನ್‌ಡಿಎಗೆ ಬಹುಮತ ಎನ್ನುತ್ತಿವೆ ‘ಎಕ್ಸಿಟ್ ಪೋಲ್’!

Date:

ಬಿಹಾರ ವಿಧಾನಸಭೆಯ 243 ಕ್ಷೇತ್ರಗಳಿಗೆ ಎರಡು ಹಂತಗಳಲ್ಲಿ ಮತದಾನ ಮುಗಿದಿದೆ. ನವಂಬರ್ 6ರಂದು ಮೊದಲ ಹಂತದಲ್ಲಿ 121 ಕ್ಷೇತ್ರಗಳಿಗೆ ಮತದಾನ ನಡೆದಿತ್ತು. ಇಂದು (ನ.11) 122 ಕ್ಷೇತ್ರಗಳಿಗೆ ಮತದಾನ ಮುಗಿದಿದೆ. ಹಲವು ಸಂಸ್ಥೆಗಳು ಮತದಾನೋತ್ತರ ಸಮೀಕ್ಷೆ (ಎಕ್ಸಿಟ್ ಪೋಲ್) ನಡೆಸಿವೆ. ಬಿಹಾರದಲ್ಲಿ ಮತ್ತೊಮ್ಮೆ ಎನ್‌ಡಿಎ ಅಧಿಕಾರಕ್ಕೆ ಬರಲಿದೆ ಎಂದು ಬಹುತೇಕ ಸಂಸ್ಥೆಗಳ ಎಕ್ಸಿಟ್ ಪೋಲ್‌ ಹೇಳುತ್ತಿವೆ.

- Advertisement -

ಪೀಪಲ್ಸ್‌ ಪಲ್ಸ್‌ ಸಂಸ್ಥೆಯ ಚುನಾವಣೋತ್ತರ ಸಮೀಕ್ಷೆಯು ಬಿಹಾರದಲ್ಲಿ ಎನ್‌ಡಿಎ 133ರಿಂದ 159 ಸ್ಥಾನಗಳನ್ನು ಪಡೆದು, ನಿರಾಯಾಸವಾಗಿ ಅಧಿಕಾರ ಉಳಿಸಿಕೊಳ್ಳಲಿದೆ. ಮಹಾಘಟಬಂಧನ್‌ 75-101 ಸ್ಥಾನಗಳನ್ನು ಗೆಲ್ಲಲಿದೆ, ಜನ ಸುರಾಜ್ ಪಕ್ಷವು (ಜೆಎಸ್‌ಪಿ) ಗರಿಷ್ಠ 5 ಸ್ಥಾನಗಳನ್ನು ಗೆಲ್ಲುವ ಸಾಧ್ಯತೆ ಇದೆ. ಇತರರು 2ರಿಂದ 8 ಸ್ಥಾನಗಳನ್ನು ಗೆಲ್ಲಬಹುದು ಎಂದು ಹೇಳುತ್ತಿದೆ.

ಇನ್ನಷ್ಟು ವಿಶೇಷ ಲೇಖನಗಳಿಗಾಗಿ, ಇಲ್ಲಿ ಕ್ಲಿಕ್ ಮಾಡಿ →

ಎಸ್‌ಐಆರ್‌ | 13 ಕೋಟಿ ಮತಗಳ ಮಾರಣಹೋಮ

ಭಾರತೀಯ ಪ್ರಜಾಸತ್ತಾತ್ಮಕ ವ್ಯವಸ್ಥೆಯ ಅತ್ಯಂತ ಪ್ರಮುಖ ಅಡಿಪಾಯವೇ ಮತದಾನದ ಹಕ್ಕು. ದೇಶದ ಪ್ರಜಾಪ್ರಭುತ್ವದ ಮೌಲ್ಯಗಳು ಉಳಿದುಕೊಂಡಿರುವುದೇ ಚುನಾವಣಾ ವ್ಯವಸ್ಥೆಯ ಮೇಲಿರುವ ಸಾರ್ವಜನಿಕರ ಅಪಾರ ನಂಬಿಕೆಯಿಂದ. ಆದರೆ, ಚುನಾವಣಾ ಆಯೋಗವು (ECI) ದೇಶಾದ್ಯಂತ ಜಾರಿಗೆ...

ಭಾರತದಲ್ಲಿ 23 ವರ್ಷ, ಭಾರತೀಯರ ಹೃದಯದಲ್ಲಿ ಸಾವಿರ ವರ್ಷ...

ʼನನ್ನನ್ನು ಕೊಲ್ಲಬಹುದು, ಆದರೆ ನನ್ನ ವಿಚಾರಗಳನ್ನು ಕೊಲ್ಲಲು ಸಾಧ್ಯವಿಲ್ಲʼ ಎಂದು ಕೊನೆಯ ಪತ್ರದಲ್ಲಿ ಬರೆದಿದ್ದ ಭಗತ್‌ ಸಿಂಗ್ ವಿಚಾರಗಳು 2026ರಲ್ಲೂ ಬದುಕಿವೆ. ಅದಕ್ಕಾಗಿ ಇನ್ನೂ ಸಾವಿರಾರು ವರ್ಷ ಭಾರತೀಯರ ಹೃದಯಗಳಲ್ಲಿ ಬದುಕಿರುತ್ತಾರೆ. ಇಂದು...

ಅಶೋಕ್ ಸಿಂಘಾಲ್ ಜನ್ಮಶತಮಾನೋತ್ಸವ: ಕೋಮುವಾದದ ರೂವಾರಿಯ ವೈಭವೀಕರಣ –...

ಬೆಂಗಳೂರಿನಿಂದ ದೆಹಲಿಯವರೆಗೆ ನಡೆಯುತ್ತಿರುವ ಅಶೋಕ್ ಸಿಂಘಾಲ್ ಅವರ ಜನ್ಮಶತಮಾನೋತ್ಸವದ ಆಚರಣೆಗಳು ಭಾರತದ ಪ್ರಜಾಸತ್ತಾತ್ಮಕ ಭವಿಷ್ಯಕ್ಕೆ ಒಡ್ಡಿರುವ ಅಪಾಯದ ಮುನ್ಸೂಚನೆಯಾಗಿವೆ. ಕೋಮು ಸೌಹಾರ್ದತೆಗೆ ಕೊಳ್ಳಿ ಇಟ್ಟ, ಹಿಂಸಾಚಾರಗಳನ್ನು ಪ್ರೇರೇಪಿಸಿದ ಮತ್ತು ದೇಶದ ಬಹುತ್ವವನ್ನು ಸದಾ...

ಅಂತೆಯೇ, ಮ್ಯಾಟ್ರಿಜ್ ಸಂಸ್ಥೆ ಕೂಡ ಎನ್‌ಡಿಎ ಗೆಲ್ಲಲಿದೆ ಎಂದು ಹೇಳುತ್ತಿದೆ. ಎನ್‌ಡಿಎ 147ರಿಂದ 167 ಸ್ಥಾನಗಳನ್ನು ಗೆಲ್ಲಲಿದೆ. ಮಹಾಘಟಬಂಧನ್‌ 70ರಿಂದ 90 ಸ್ಥಾನಗಳನ್ನೂ, ಎಐಎಂಐಎಂ 2-3 ಕ್ಷೇತ್ರಗಳನ್ನೂ ಹಾಗೂ ಇತರರು ಗರಿಷ್ಠ 5 ಸ್ಥಾನಗಳನ್ನು ಗೆಲ್ಲಬಹುದು ಎಂಧು ಮ್ಯಾಟ್ರಿಜ್ ಹೇಳುತ್ತಿದೆ.

image 75

ಡಿವಿ ರಿಸರ್ಚ್‌ ಸಮೀಕ್ಷೆಯೂ ಎನ್‌ಡಿಎಗೆ ಬಿಹಾರ ಗದ್ದುಗೆ ಎಂದು ಹೇಳಿದೆ. ಎನ್‌ಡಿಎ 137 – 152 ಸ್ಥಾನಗಳನ್ನು ಗೆದ್ದು ಅಧಿಕಾರ ರಚಿಸಲಿದೆ. ಮಹಾಘಟಬಂಧನ್‌ 83-98 ವಿಪಕ್ಷ ಸ್ಥಾನದಲ್ಲಿಯೇ ಮುಂದುವರೆಯಲಿದೆ. ಜೆಎಸ್‌ಪಿ 2ರಿಂದ 4 ಸ್ಥಾನಗಳನ್ನೂ ಹಾಗೂ ಇತರರು 4ರಿಂದ 8 ಸ್ಥಾನಗಳನ್ನೂ ಗೆಲ್ಲಲಿದ್ದಾರೆ ಎಂದು ಸಮೀಕ್ಷೆ ಹೇಳುತ್ತಿದೆ.

ಪೀಪಲ್‌ ಇನ್‌ಸೈಟ್ ಸಂಸ್ಥೆ ಕೂಡ ಬಿಹಾರದ ಗದ್ದುಗೆ ಮತ್ತೊಮ್ಮೆ ಎನ್‌ಡಿಎ ಪಾಲಾಗಲಿದೆ ಎಂದು ಹೇಳಿದೆ. ಎನ್‌ಡಿಎ 133-148 ಸ್ಥಾನಗಳು (44.71% ಮತಹಂಚಿಕೆ), ಮಹಾಘಟಬಂಧನ್ 87-102 ಸ್ಥಾನಗಳು (40.34%), ಜೆಎಸ್‌ಪಿ 0-2 ಸ್ಥಾನಗಳು (7.93%), ಎಐಎಂಐಎಂ 2-3 ಸ್ಥಾನಗಳು (1.74%), ಜೆಜೆಡಿ 0-1 ಸ್ಥಾನ (0.25%) ಹಾಗೂ ಇತರರು 1-2 ಸ್ಥಾನಗಳನ್ನು (2.16%) ಗೆಲ್ಲಲಿದ್ದಾರೆ.

image 76

ಜೆವಿಸಿ ಸಮೀಕ್ಷೆಯು ಎನ್‌ಡಿಎ 135-150, ಮಹಾಘಟಬಂಧನ್ 88-103, ಜೆಎಸ್‌ಪಿ 0-1 ಹಾಗೂ ಇತರೆ 3-6 ಸ್ಥಾನಗಳನ್ನು ಗೆಲ್ಲಲಿವೆ ಎಂದು ಹೇಳಿದೆ.

ದೈನಿಕ್ ಭಾಸ್ಕರ ಸಮೀಕ್ಷೆಯು ಎನ್‌ಡಿಎ 145-160, ಮಹಾಘಟಬಂಧನ್ 73-91, ಜೆಎಸ್‌ಪಿ 0 ಹಾಗೂ ಇತರೆ 5-10 ಸ್ಥಾನಗಳನ್ನು ಗೆಲ್ಲುವ ಸಾಧ್ಯತೆ ಇದೆ ಎಂದು ಹೇಳಿದೆ.

ಚಾಣಾಕ್ಯ ಸಮೀಕ್ಷೆ ಪ್ರಕಾರ, ಎನ್‌ಡಿಎ 128-134, ಮಹಾಘಟಬಂಧನ್ 102-108, ಜೆಎಸ್‌ಪಿ 0 ಹಾಗೂ ಇತರೆ 5-9 ಸ್ಥಾನಗಳನ್ನು ಗೆಲ್ಲುವ ಸಾಧ್ಯತೆ.

ಪಿ-ಮಾರ್ಕ್ ಸಮೀಕ್ಷೆಯಂತೆ, ಎನ್‌ಡಿಎ 142-162, ಮಹಾಘಟಬಂಧನ್ 80-98, ಜೆಎಸ್‌ಪಿ JSP 1-4 ಹಾಗೂ ಇತರರು 0-3 ಸ್ಥಾನಗಳನ್ನು ಗೆಲ್ಲುವ ನಿರೀಕ್ಷೆಯಿದೆ.

ಪೋಸ್ಟ್ ಹಂಚಿಕೊಳ್ಳಿ:

ಪೋಸ್ಟ್ ಹಂಚಿಕೊಳ್ಳಿ:

ಈ ಹೊತ್ತಿನ ಪ್ರಮುಖ ಸುದ್ದಿ

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ಮೋದಿ ಸರ್ಕಾರ ECಗೆ ಇಮ್ಯೂನಿಟಿ ನೀಡಿದ್ದರೂ ಹೊಣೆಗಾರಿಕೆಯಿಂದ ತಪ್ಪಿಸಿಕೊಳ್ಳಲಾಗಲ್ಲ: ಕಪಿಲ್ ಸಿಬಲ್

ಮುಖ್ಯ ಚುನಾವಣಾ ಆಯುಕ್ತರಿಗೆ (CEC) ಕ್ರಿಮಿನಲ್ ಪ್ರಕರಣಗಳಿಂದ ಕಾನೂನು ರಕ್ಷಣೆ ನೀಡಲಾಗಿದೆ...

UPI ವಹಿವಾಟಿನ ಮೇಲಿನ ಶುಲ್ಕಕ್ಕೆ ತಡೆ ನೀಡಲು ಸುಪ್ರೀಂ ಕೋರ್ಟ್‌ ನಕಾರ

ಅಕ್ಟೋಬರ್ 15ರಿಂದ ಜಾರಿಗೆ ಬರಲಿರುವ 2,000 ರೂ.ಗಿಂತ ಹೆಚ್ಚಿನ ಯುಪಿಐ ವಹಿವಾಟುಗಳ...

‘ದೇಶದ ನೌಕರಶಾಹಿ ಆತ್ಮಸಾಕ್ಷಿಯ ಕರೆಯನ್ನು ಆಲಿಸಬೇಕು.’ ಮಾಜಿ ಚುನಾವಣಾ ಆಯುಕ್ತ ಅಶೋಕ್‌ ಲವಾಸ ಹೇಳಿದ ಆತ್ಮಸಾಕ್ಷಿಯ ಕತೆ

ಸಾರ್ವಜನಿಕ ಸೇವೆಯಲ್ಲಿರುವ ಪ್ರತಿಯೊಬ್ಬರೂ ತಮ್ಮ ಕರ್ತವ್ಯದ ಹಾದಿಯಲ್ಲಿ ನೈತಿಕ ಸಂದಿಗ್ಧತೆಯನ್ನು ಎದುರಿಸಿದಾಗ,...