ಚಿಕ್ಕಮಗಳೂರು | ಪಂಚ ಗ್ಯಾರಂಟಿ ಯೋಜನೆ; ಫಲಾನುಭವಿಗಳ ಕಾರ್ಯಾಗಾರ ಯಶಸ್ವಿ 

Date:

ಚಿಕ್ಕಮಗಳೂರು ನಗರದ ಕುವೆಂಪು ಕಲಾ ಮಂದಿರದಲ್ಲಿ  ಜಿಲ್ಲಾಡಳಿತ, ಜಿಲ್ಲಾ ಪಂಚಾಯಿತಿ, ಜಿಲ್ಲಾ ಗ್ಯಾರಂಟಿ ಯೋಜನೆಗಳ ಅನುಷ್ಠಾನ ಸಮಿತಿ ಸಂಯುಕ್ತಾಶ್ರಯದಲ್ಲಿ ಜಿಲ್ಲಾ ಮಟ್ಟದ ಪಂಚ ಗ್ಯಾರಂಟಿ ಯೋಜನೆ ಕುರಿತು ಬೃಹತ್ ಸಮಾವೇಶ ಸೋಮವಾರ ನಡೆಯಿತು.

- Advertisement -

ಕಾರ್ಯಕ್ರಮಕ್ಕಿಂತ ಮೊದಲು ಆಜಾದ್ ಪಾರ್ಕ್‌ ವೃತ್ತದಿಂದ ಕುವೆಂಪು ಕಲಾಮಂದಿರದವರೆಗೆ ವಿವಿಧ ಕಲಾತಂಡಗಳೊಂದಿಗೆ ಮೆರವಣಿಗೆ ಮೂಲಕ ಆರಂಭಿಸಿ, ಕುವೆಂಪು ಕಲಾಮಂದಿರದ ಒಳಗೆ ಪ್ರವೇಶವಾಗುವ ಮೊದಲು ಧಾನ್ಯಾಗಳಿಂದ ಅದ್ಭುತವಾಗಿ ಶಾರದೆ ಪ್ರತಿಮೆಯನ್ನು ಕೂರಿಸಿದ್ದರು. ಕಾರ್ಯಕ್ರಮ ಪ್ರವೇಶಿಸುವ  ಬಾಗಿಲ ಬಳಿ ರಂಗೋಲಿ ಮೂಲಕ ಗ್ಯಾರಂಟಿ ಯೋಜನೆಗಳ ಚಿತ್ರೀಕರಣ, ವೇದಿಕೆಯ ಮುಂಭಾಗ ಕರ್ನಾಟಕ ಸರ್ಕಾರಕ್ಕೆ ಧನ್ಯವಾದ ಎಂಬ ಮಹಿಳೆಯ ಪ್ರತಿಮೆ, ರಾಷ್ಟ್ರಗೀತೆ ಮೂಲಕ ಕಾರ್ಯಕ್ರಮ ಶುರು ಮಾಡಿದ್ದು ಜನರ ಗಮನ ಸೆಳೆಯಿತು.

ಇನ್ನಷ್ಟು ವಿಶೇಷ ಲೇಖನಗಳಿಗಾಗಿ, ಇಲ್ಲಿ ಕ್ಲಿಕ್ ಮಾಡಿ →

ನೊಬೆಲ್‌ ಪ್ರಶಸ್ತಿ ಸರಣಿ | ಭಾರತೀಯ ಮೂಲದ ದಕ್ಷಿಣ...

ಈ ಬಾರಿಯ ಶಾಂತಿ ನೊಬೆಲ್‌ ಪ್ರಶಸ್ತಿಯನ್ನು ಶಾಂತಿ ಮತ್ತು ಅಂತಾರಾಷ್ಟ್ರೀಯ ಕಾನೂನನ್ನು ಉತ್ತೇಜಿಸುವ ನಿಟ್ಟಿನಲ್ಲಿ ನಡೆಸಿದ ಪ್ರಯತ್ನಗಳಿಗಾಗಿ, ಮಾನವ ಹಕ್ಕುಗಳ ರಕ್ಷಣೆಗಾಗಿ ಜೀವನವನ್ನೇ ಮುಡಿಪಾಗಿಟ್ಟ ಭಾರತೀಯ ಮೂಲದ ದಕ್ಷಿಣ ಆಫ್ರಿಕಾದ ಡಾ. ನವನೀತಮ್‌...

ಗಡುಸಾದ ದನಿಯೊಳಗಿನ ಮೃದು ಮನಸ್ಸು: ʼನಾನಾ ಪಾಟೇಕರ್ʼ ಎಂಬ...

ಅವರ ಗಡುಸಾದ ದನಿಯಲ್ಲಿ ಸಾಮಾನ್ಯ ಮನುಷ್ಯನ ಆಕ್ರೋಶವಿತ್ತು; ಅವರ ತೀಕ್ಷ್ಣ ನೋಟದಲ್ಲಿ ಬದುಕಿನ ಕಹಿ ಸತ್ಯಗಳಿದ್ದವು. ‘ಕ್ರಾಂತಿವೀರ್’ನಲ್ಲಿ ಅನ್ಯಾಯದ ವಿರುದ್ಧ ಸಿಡಿದವರು, ‘ಖಾಮೋಶಿ’ಯಲ್ಲಿ ಮಾತಿಲ್ಲದೆ ಮನಸ್ಸು ತಟ್ಟಿದವರು, ‘ವೆಲ್‌ಕಮ್’ನಲ್ಲಿ ನಗುವಿನ ಹೊಳೆ ಹರಿಸಿದವರು...

ಕೂಲಿಕಾರ್ಮಿಕರ ಮೊಮ್ಮಗಳ ವಿಶ್ವ ವಿಜಯ: ಭಾರತೀಯ ಮೂಲದ ನವಿ...

ವಿಶ್ವಸಂಸ್ಥೆಯ ಮಾನವ ಹಕ್ಕುಗಳ ವಿಭಾಗದ ಮಾಜಿ ಮುಖ್ಯಸ್ಥೆ ಹಾಗೂ ಪ್ರಸ್ತುತ ಅಂತಾರಾಷ್ಟ್ರೀಯ ನ್ಯಾಯಾಲಯದ (ICJ) ನ್ಯಾಯಾಧೀಶರಾಗಿರುವ ದಕ್ಷಿಣ ಆಫ್ರಿಕಾ ಮತ್ತು ಭಾರತೀಯ ಮೂಲದ ನವನೀತಮ್ 'ನವಿ' ಪಿಳ್ಳೈ (85) ಅವರಿಗೆ 2026ನೇ ಸಾಲಿನ...
Screenshot 2026 02 24 07 47 59 57 99c04817c0de5652397fc8b56c3b3817

ಹಾಗೆಯೇ, ಪ್ರಸ್ತಾವಿಕವಾಗಿ ಜಿಲ್ಲಾ ಗ್ಯಾರಂಟಿ ಯೋಜನೆ ಅನುಷ್ಠಾನ ಸಮಿತಿ ಜಿಲ್ಲಾಧ್ಯಕ್ಷರು ಮಾತಾಡಿ ” ನಮ್ಮ ಜಿಲ್ಲೆಯಲ್ಲಿ ಇಲ್ಲಿಯವರೆಗೆ 3.84ಕೋಟಿ ಶಕ್ತಿ ಯೋಜನೆ, 3,54,165 ಮೀಟರುಗಳಲ್ಲಿ 2,22, 311ಮೀಟರ್ ಸಂಪೂರ್ಣ ಉಚಿತ ವಿದ್ಯುತ್ ನೀಡಿದೆ. ಜೊತೆಗೆ 217.91ಕೋಟಿ ಅನುದಾನ ಗ್ರಾಹಕರಿಗೆ ನಮ್ಮ ಸರ್ಕಾರ ನೀಡಿದೆ. ಗೃಹಲಕ್ಷ್ಮಿ ಯೋಜನೆಯಲ್ಲಿ 2,61,415 ಯಜಮಾನಿಯರಿಗೆ ತಿಂಗಳಿಗೆ 52,28 ಕೋಟಿ ನೀಡಲಾಗುತ್ತಿದ್ದು, ಅನ್ನಭಾಗ್ಯ ಯೋಜನೆಯಡಿ ಒಬ್ಬರಿಗೆ 10ಕೆಜಿ ಅಕ್ಕಿ, ಯುವನಿಧಿ ಯೋಜನೆಯಲ್ಲಿ ಇದುವರೆಗೂ 6ಕೋಟಿ ಸಹಾಯಧನ ಪಡೆಯುತ್ತಿದ್ದಾರೆ ಇದನ್ನೂ ಮಹಿಳೆಯ ಏಳಿಗೆಗೆ ತುಂಬ ಸಹಾಯ ಮಾಡುತ್ತಿದೆ ಎಂದರು.

ಕಾರ್ಯಕ್ರಮಕ್ಕೆ ಮುಖ್ಯ ಉಪನ್ಯಾಸಕರಾಗಿ ಡಾ. ವಾಸು ಎಚ್. ವಿ ಮಾತನಾಡಿ ” ಕರ್ನಾಟಕ ಸರ್ಕಾರ 5 ಯೋಜನೆಗಳು, ಹಾಗೂ ಮಹಿಳೆಯರಿಗೆ ಕೊಡುತ್ತಿರುವುದು  ಯೋಜನೆಗಳು ಯಾವುದೂ ಬಿಟ್ಟಿ ಭಾಗ್ಯವಲ್ಲ. ಮಹಿಳೆಯರ ಸಬಲೀಕರಣಕ್ಕೆ ಹಾಗೂ ಬಡತನದಲ್ಲಿರುವ ಅದೇಷ್ಟು ಕುಟುಂಬಗಳಿಗೆ ಈ ಯೋಜನೆಗಳಿಂದ ತುಂಬಾ ಸಹಾಯವಾಗುತ್ತಿದೆ. ಶಕ್ತಿ ಯೋಜನೆಯಿಂದ ಮಹಿಳೆಯರು ಕೆಲಸಕ್ಕೆ, ಪ್ರವಾಸಕ್ಕೆ, ದೇವಸ್ಥಾನಗಳಿಗೆ, ಕುಟುಂಬದ ಕೆಲಸಕ್ಕೆ ಉಪಯೋಗಿಸುತ್ತಿದ್ದಾರೆ. ಆರ್ಥಿಕ ಸ್ವಾವಲಂಬಿಯಾಗಿದ್ದಾರೆ. ಮನೆಯ ಯಜಮಾನರನ್ನೇ ಏನೇ ಬೇಕಿದ್ದರು ಕೇಳಬೇಕಿತ್ತು. ಅದು ಕಡಿಮೆಯಾಗಿದೆ. ಹಾಗೆಯೇ, ಸಣ್ಣದಾಗಿ ಸ್ವಂತ ಉದ್ದಿಮೆಗಳನ್ನು ಪ್ರಾರಂಭಿಸಿದ್ದಾರೆ. ಕೊಳ್ಳುವುದು, ಮಾರುವುದು, ವಸ್ತುಗಳನ್ನು ಪಡೆಯುವುದರಿಂದ ಸರ್ಕಾರಕ್ಕೆ ಲಾಭ ಆಗುತ್ತದೆ. ಎಲ್ಲಿಯೂ ದಿವಾಳಿ ಆಗುವುದಿಲ್ಲ, ಪ್ರತಿಯೊಂದು ಸರ್ಕಾರ ಸಾಲ ಮಾಡಿಯೇ ಸರ್ಕಾರ ನಡೆಸುವುದು. ಸಾಲ ಮಾಡದೇ ಯಾವ ಸರ್ಕಾರಗಳು ರಾಜ್ಯ ಅಥವಾ ಕೇಂದ್ರ ಸರ್ಕಾರಗಳು ಇಲ್ಲ.ಸರ್ಕಾರ ಕೊಡುವಂತಹ ಹಣ ಪ್ರತಿದಿನ ಬಳಕೆಯಾಗುತ್ತದೆ. ಈ ಗ್ಯಾರಂಟಿಗಳು ಜಾರಿಯಾಗುವುದಿಲ್ಲ ಅಥವಾ ಚುನಾವಣೆಯ ನಂತರ ನಿಂತು ಹೋಗುತ್ತದೆ ಎಂಬ ಮಾತನ್ನು ಎಲ್ಲೆಡೆ ಹಬ್ಬಿಸಲಾಗಿತ್ತು. ಮುಂಬರುವ ಬಜೆಟ್ ನಲ್ಲಿ ಈ ಯೋಜನೆ ಮುಂದುವರೆಯುತ್ತದೆ ಎಂದು ತಿಳಿಸಿದರು. 

ನುಡಿದಂತೆ ನಡೆದಿದ್ದೇವೆ ಸಿದ್ರಾಮಯ್ಯ ಸರ್ಕಾರ, ಈ ಯೋಜನೆಗಳಿಂದ ರಾಜ್ಯದಲ್ಲಿ ಬಡಕುಟುಂಬದವರಿಗೆ ಹಾಗೂ ನಾಡಿನ ಜನತೆಗೆ ಬಹಳ ಒಳ್ಳೆಯದಾಗಿದೆ ಎಂದು ನಾವು ಹೇಳುತ್ತಿಲ್ಲ, ಸ್ವತಃ ಜನರೇ ಹೇಳಿರುವುದು” ಎಂದು ತರೀಕೆರೆ ಕ್ಷೇತ್ರ ಶಾಸಕ ಜಿ. ಎಚ್ ಶ್ರೀನಿವಾಸ್ ಮಾತಾಡಿದರು.

“ಡಾ. ವಾಸು ಎಚ್. ವಿ ಅವರು ತುಂಬ ಸುಲಭವಾಗಿ ಗ್ಯಾರಂಟಿ ಯೋಜನೆಗಳ ಕುರಿತು ನಮ್ಮೆಲರಿಗೂ ತಿಳಿಸಿ ಕೊಟ್ಟಿದ್ದಾರೆ. ನನಗೂ ಕೆಲವೊಂದು ಗೊತ್ತಿಲ್ಲದ ಮಾಹಿತಿಯನ್ನು ಇವರಿಂದ ಪಡೆಯಲಾಯಿತು.  ಈ 5 ಯೋಜನೆಗಳಿಂದ ನಮ್ಮ ಜಿಲ್ಲೆಯಲ್ಲಿ ಅದೆಷ್ಟೋ ಕುಟುಂಬವು ಬದುಕು ನಡೆಸುತ್ತಿದ್ದಾರೆ. ಎಲ್ಲೂ ಹಣವನ್ನು ದುರ್ಬಳಕೆ ಮಾಡದಂತೆ ನೇರವಾಗಿ ಗ್ರಾಹಕರ ಖಾತೆಗೆ ಸೇರುತ್ತದೆ. ಈ ಯೋಜನೆಯಿಂದ ಮಹಿಳೆಯರು ಸಬಲೀಕರಣವಾಗಬೇಕು” ಎಂದು ಮೂಡಿಗೆರೆ ಕ್ಷೇತ್ರ ಶಾಸಕಿ ನಯನ ಮೋಟಮ್ಮ ಮಾತಾಡಿದರು.

ಗ್ಯಾರಂಟಿ ಯೋಜನೆ ಅನುಷ್ಠಾನ ಸಮಿತಿ ರಾಜ್ಯ ಉಪಾಧ್ಯಕ್ಷರಾದ ಪುಷ್ಪ ಮಾತನಾಡಿ ” ಗಂಡಸರಿಗಿಂತ ಹೆಚ್ಚು ಕೆಲಸ ಮಹಿಳೆಯರು ಮಾಡುತ್ತಾರೆ. ಧೈರ್ಯದಿಂದ ನಾವು ಮಾತಾಡಬೇಕಿದೆ. ಚಿಕ್ಕಮಗಳೂರು ಜಿಲ್ಲೆಯಲ್ಲಿ ಯಶಸ್ವಿನಿಂದ ಕಾರ್ಯಕ್ರಮ ನೆರವೇರಿದೆ ಎಂದರು. ಗ್ಯಾರಂಟಿ ಯೋಜನೆ ಅನುಷ್ಠಾನ ಸಮಿತಿ ರಾಜ್ಯ ಅಧ್ಯಕ್ಷರು ರೇವಣ್ಣನವರು “ಶೃಂಗೇರಿ ಮೂಲದ ಹೆಣ್ಣು ಮಗಳು ಶಕ್ತಿ ಯೋಜನೆ ಬಂದಿಲ್ಲವೆಂದು ತಿಳಿಸಿದರು. ಆದರೇ, 3ಯೋಜನೆ ಅವರಿಗೆ ದೊರಕುತ್ತಿದೆ. ಯೋಜನೆ ತಲುಪುತ್ತಿಲ್ಲವೆಂದರೆ ಯೋಜನೆ ಅನುಷ್ಠಾನಗೊಳಿಸಲು ನಾವು ಇರೋದು ಎಂದು ತಿಳಿಸಿದರು. 

ಇದನ್ನೂ ಓದಿದ್ದೀರಾ?ಚಿಕ್ಕಮಗಳೂರು |  ಕಾರ್ಮಿಕ ಮಹಿಳೆ ಬಲಿ ಪಡೆದ ಕಾಡಾನೆ ಸೆರೆ 

ಕಾರ್ಯಕ್ರಮದ ಅಂತಿಮದಲ್ಲಿ ನಾಡಗೀತೆಯ ಮೂಲಕ ಕೊನೆಗೊಳಿಸಲಾಯಿತು. ಈ ವೇಳೆ ಜಿಲ್ಲೆಯ ಎಲ್ಲಾ ತಾಲೂಕಿನ ಗ್ಯಾರಂಟಿ ಯೋಜನೆಗಳ ಅನುಷ್ಠಾನ ಸಮಿತಿಯ ಅಧ್ಯಕ್ಷರು, ಸದಸ್ಯರು, ತಾಲೂಕುಗಳಿಂದ ನೆರದಿದ್ದ ಮಹಿಳೆಯರು, ಹೆಚ್. ಎಸ್ ಕೀರ್ತನಾ, ಮಂಜುನಾಥ್, ಯೋಗಾನಂದ್, ನಾಗೇಂದ್ರ, ಖಾಲಂದರ್ ಖಾನ್, ಶ್ರೀನಿವಾಸ್ ಆಲದಾರ್ತಿ, ಡಾ. ಅಂಶುಮಂತ್ ಭದ್ರಾ ಕಾಡಾ ಅಧ್ಯಕ್ಷ, ಹೆಚ್. ಪಿ ಮಂಜೇಗೌಡ, ಕ್ಯಾಂಗ್ರೆಸ್ ಮುಖಂಡರು, ಕಾರ್ಯಕರ್ತರು ಹಾಗೂ ಇನ್ನಿತರರು ಭಾಗವಹಿಸಿದ್ದರು.

WhatsApp Image 2024 10 24 at 12.02.30
+ posts

ಪೋಸ್ಟ್ ಹಂಚಿಕೊಳ್ಳಿ:

ಪೋಸ್ಟ್ ಹಂಚಿಕೊಳ್ಳಿ:

ಈ ಹೊತ್ತಿನ ಪ್ರಮುಖ ಸುದ್ದಿ

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ಚಿಕ್ಕಮಗಳೂರು | ಬೆಳೆ ನಷ್ಟ: ಇಬ್ಬರ ರೈತರ ಸಾವು 

ಸಕಾಲಕ್ಕೆ ಮಳೆಯಾಗದೆ ಬೆಳೆ ನಷ್ಟ ಉಂಟಾಗಿದ್ದು, ಸಾಲ ತೀರಿಸಲಾಗದೆ ಮನನೊಂದ ಇಬ್ಬರು...

ಆಡಳಿತದಲ್ಲಿ ಪಾರದರ್ಶಕತೆಗೆ ಮಾಹಿತಿ ಹಕ್ಕು ಕಾಯ್ದೆ ಪ್ರಮುಖ ಅಸ್ತ್ರ: ಹಣಮಂತ ಶಿಂದೆ

ಮಾಹಿತಿ ಹಕ್ಕು ಕಾಯ್ದೆಯ ಪರಿಣಾಮಕಾರಿ ಬಳಕೆ, ಆಡಳಿತದಲ್ಲಿ ಪಾರದರ್ಶಕತೆ ಹಾಗೂ ಸಾಮಾಜಿಕ...

ಯತ್ನಾಳ್ ವಿರುದ್ಧ ಹೊರ್ತಿ ವಾಗ್ದಾಳಿ; ಅರ್ಜಿ ವಾಪಸ್ ಪಡೆದ ಹಿಂದಿನ ಸತ್ಯ ಬಹಿರಂಗಪಡಿಸಲು ಸವಾಲು

ಮತದಾರರ ಪಟ್ಟಿಯಿಂದ ಹೆಸರುಗಳನ್ನು ತೆಗೆದುಹಾಕುವಂತೆ ಶಾಸಕ ಬಸನಗೌಡ ಪಾಟೀಲ ಯತ್ನಾಳ್ ಬರೆದಿರುವ...

ಆರೋಗ್ಯ ಸುರಕ್ಷತೆಗೆ ಆದ್ಯತೆ ನೀಡಿ: ಅಧಿಕಾರಿಗಳಿಗೆ ಜಿಲ್ಲಾಧಿಕಾರಿ ಸೂಚನೆ

ಕೊಡಗು ಜಿಲ್ಲೆಯಲ್ಲಿ ಡೆಂಗ್ಯೂ, ಮಲೇರಿಯಾ ಸೇರಿದಂತೆ ಸಾಂಕ್ರಾಮಿಕ ರೋಗಗಳ ನಿಯಂತ್ರಣಕ್ಕೆ ಅಗತ್ಯ...