ಹೈಕಮಾಂಡ್‌ ನಿರ್ಧರಿಸಿದರೆ ಕೋಲಾರದಲ್ಲೂ ಸ್ಪರ್ಧೆ: ಸಿದ್ದರಾಮಯ್ಯ

Date:

ವರುಣಾದಲ್ಲಿ ಸ್ಪರ್ಧಿಸುವಂತೆ ಕಾಂಗ್ರೆಸ್‌ ಹೈಕಮಾಂಡ್‌ ಹೇಳಿದೆ. ಕೋಲಾರದಲ್ಲಿಯೂ ಸ್ಪರ್ಧಿಸಲು ಮಾನಸಿಕವಾಗಿ ಸಿದ್ದನಿದ್ದೇನೆ. ಪಕ್ಷದ ಹೈಕಮಾಂಡ್‌ ಇಲ್ಲಿಯೂ ಸ್ಪರ್ಧಿಸಲು ಅವಕಾಶ ಕೊಟ್ಟರೆ ಸ್ಪರ್ಧಿಸುತ್ತೇನೆ ಎಂದು ವಿಪಕ್ಷ ನಾಯಕ ಸಿದ್ದರಾಮಯ್ಯ ಹೇಳಿದ್ದಾರೆ.

ಕೋಲಾರದಲ್ಲಿ ಏಪ್ರಿಲ್‌ 9ರಂದು ರಾಹುಲ್‌ ಗಾಂಧಿ ನೇತೃತ್ವದಲ್ಲಿ ‘ಜೈಭಾರತ್ ಸಮಾವೇಶ’ ನಡೆಯಲಿದೆ. ಅದರ ಪೂರ್ವಭಾವಿಯಾಗಿ ಇಂದು (ಏಪ್ರಿಲ್ 1) ಕೋಲಾರದಲ್ಲಿ ಸಭೆ ನಡೆದಿದೆ. ಸಭೆಯಲ್ಲಿ ಸುರ್ಜೇವಾಲ್‌ ಭಾಷಣಕ್ಕೆ ಅಡ್ಡಿಪಡಿಸಿದ ಕಾಂಗ್ರೆಸ್‌ ಕಾರ್ಯಕರ್ತರು, ಸಿದ್ದರಾಮಯ್ಯಗೆ ಕೋಲಾರದಲ್ಲಿಯೂ ಟಿಕೆಟ್‌ ನೀಡಬೇಕು ಎಂದು ಆಗ್ರಹಿಸಿದರು. ಬಳಿಕ ಕಾರ್ಯಕರ್ತರನ್ನು ಉದ್ದೇಶಿಸಿ ಸಿದ್ದರಾಮಯ್ಯ ಮಾತನಾಡಿದರು.

“ಏಪ್ರಿಲ್ 4ರಂದು ಕಾಂಗ್ರೆಸ್‌ ಅಭ್ಯರ್ಥಿಗಳ ಎರಡನೇ ಪಟ್ಟಿ ಬಿಡುಗಡೆಯಾಗಲಿದೆ. ಕೋಲಾರದಲ್ಲಿ ಸ್ಪರ್ಧಿಸಲು ಹೈಕಮಾಂಡ್‌ ಅವಕಾಶ ಕೊಟ್ಟರೇ, ಖಂಡಿತಾ ಎರಡೂ ಕಡೆ ಸ್ಪರ್ಧಿಸುತ್ತೇನೆ” ಎಂದರು.

“ನನ್ನ ಹುಟ್ಟೂರು ಇರುವುದು ವರುಣಾ ಕ್ಷೇತ್ರದಲ್ಲಿ. ನನ್ನ ರಾಜಕೀಯ ಆರಂಭವಾಗಿದ್ದು ಅಲ್ಲಿಂದಲೇ. ನನ್ನ ಕೊನೆಯ ಚುನಾವಣೆಯಲ್ಲಿಯೂ ಅಲ್ಲಿಂದಲೇ ಸ್ಪರ್ಧಿಸುತ್ತೇನೆ. ಅವಕಾಶ ಸಿಕ್ಕರೆ ಕೋಲಾರದಲ್ಲೂ ಸ್ಪರ್ಧಿಸುತ್ತೇನೆ. ಕೋಲಾರ ಕ್ಷೇತ್ರದ ಜನರ ಪ್ರೀತಿಗೆ ಧನ್ಯವಾದಗಳು” ಎಂದರು.

ಪೋಸ್ಟ್ ಹಂಚಿಕೊಳ್ಳಿ:

LEAVE A REPLY

Please enter your comment!
Please enter your name here

ಪೋಸ್ಟ್ ಹಂಚಿಕೊಳ್ಳಿ:

ಹೆಚ್ಚು ಓದಿಸಿಕೊಂಡ ಲೇಖನಗಳು

ವಿಡಿಯೋ

ಸತ್ಯದ ಪಥಕ್ಕೆ ಬಲ ತುಂಬಲು ದೇಣಿಗೆ ನೀಡಿ. ನಿಮ್ಮಗಳ ಬೆಂಬಲವೇ ನಮಗೆ ಬಲ. ಈ ಕೆಳಗಿನ ಲಿಂಕ್ ಮೂಲಕ ದೇಣಿಗೆ ನೀಡಿ
Related

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ಯುವ ವಕೀಲನ ಮೇಲೆ ಪೊಲೀಸ್ ದೌರ್ಜನ್ಯ | ಸ್ವಯಂಪ್ರೇರಿತ ದೂರು ದಾಖಲಿಸಿಕೊಂಡ ಹೈಕೋರ್ಟ್‌

ಚಿಕ್ಕಮಗಳೂರಿನಲ್ಲಿ ದ್ವಿಚಕ್ರ ವಾಹನದಲ್ಲಿ ಹೆಲ್ಮೆಟ್ ಧರಿಸದೆ ಬಂದ ಯುವ ವಕೀಲನೋರ್ವನನ್ನು ಠಾಣೆಯಲ್ಲಿ...

ಆಲಮೇಲ | ಸಾಮಾನ್ಯರಿಗೆ ಅರ್ಥವಾಗುವ ಭಾಷೆಯ ಸಾಹಿತ್ಯ ಕನಕದಾಸರದ್ದು: ಹಾವಣ್ಣ

'ತಮ್ಮದೇ ಆದಂತ ಸಾಹಿತ್ಯದ ವಚನಗಳ ಮೂಲಕ ಜಾತಿ, ಮತ, ಕುಲಗಳ ಭೇದಭಾವವನ್ನು...

ದಾವಣಗೆರೆ | ಸಾಮಾಜಿಕ ಕಾರ್ಯಕರ್ತರ ಹೆಸರಲ್ಲಿ ಬೆದರಿಕೆ ಹಾಕಿದವರ ಬಂಧಿಸುವಂತೆ ಒತ್ತಾಯ

ಕನ್ನಡ ಪರ ಸಂಘಟನೆಗಳು, ಸಾಮಾಜಿಕ ಕಾರ್ಯಕರ್ತರೆಂದು ಹೇಳಿಕೊಂಡು ನಮ್ಮ ಶಾಲೆಯ ವಿರುದ್ಧ...

ಚಿತ್ರದುರ್ಗ | ಜಿಲ್ಲಾಸ್ಪತ್ರೆಯಲ್ಲಿ ಮಂಗಗಳ ಕಾಟ, ರೋಗಿಗಳು ಹೈರಾಣು

ಸರ್ಕಾರಿ ಆಸ್ಪತ್ರೆಗಳಲ್ಲಿ ಸಾಮಾನ್ಯವಾಗಿ ವೈದ್ಯರು ಮತ್ತು ಸಿಬ್ಬಂದಿ ಕೊರತೆ, ಔಷಧಗಳ ಕೊರತೆ...