ಶಿವಮೊಗ್ಗ ಜಿಲ್ಲೆಯ ಶಿಕಾರಿಪುರ ತಾಲೂಕಿನಲ್ಲಿರುವ ಕಟ್ಟೆ ಕಡೆಯ ಕುಗ್ರಾಮ ಎಂದು ಹೇಳಬಹುದಾದ ಹರಗಿ ಗ್ರಾಮ ಇಡೀ ರಾಜ್ಯದ ಗಮನ ಸೆಳೆಯುತ್ತಿದೆ ಬೀಗರೂಟ ಹಾಕಿಸಿದರೆ ದಂಡ ವಿಧಿಸುತ್ತೇವೆ ಎಂದು ಗ್ರಾಮಸ್ಥರು ನಿರ್ಧಾರಕ್ಕೆ ಬಂದು ಬಡ ಹಾಗೂ ಮಧ್ಯಮ ವರ್ಗದ ಕಷ್ಟಕ್ಕೆ ಸಿಲುಕಬಾರದು ಎಂದು ಒಂದು ದೃಢ ಸಂಕಲ್ಪ ಮಾಡಿಕೊಂಡಿದ್ದಾರೆ.
ಆದರೆ ವಿಪರ್ಯಾಸವೆಂದರೆ ಸಮಸ್ಯೆಗಳ ಆಗರ ವಾಗಿರುವ ಈ ಊರು ಈ ಊರಿಗೆ ಬರಬೇಕೆಂದರೆ ಇರುವುದು ಒಂದೇ KSRTC ಬಸ್ ಇದು ಸಾರಿಗೆ ಸಮಸ್ಯೆ ಅವ್ಯವಸ್ಥೆ ಹಾಗೂ ಶಿರಾಳಕೊಪ್ಪದಿಂದ ಮುಂದೆ ಬರುವಾಗ ಸಿಗುವ ತೊಗರ್ಸಿ ಊರಿನ ಮುಂದೆ ಉರಿನೊಳಗೆ ಬರಲು ಸುಮಾರ್ 6 ರಿಂದ 7 ಕಿಮೀ ಕಿರಿದಾದ ರಸ್ತೆ, ಹಾಗೆ ಕೆರೆ ಏರಿ ದಾಟಿಬರಬೇಕು.

ಹಾಗೂ ಕೆರೆಗೆ ಯಾವದೇ ತಡೆಗೋಡೆ ಸುರಕ್ಷಿತವಿಲ್ಲ ಹಾಗೂ ಊರಿನಲ್ಲಿ ಚರಂಡಿ ವ್ಯವಸ್ಥೆಯಿಲ್ಲ ಹಾಗೂ ಸಿಸಿ ರಸ್ತೆ ಆಗಲಿ ರಸ್ತೆಗೆ ಡಂಬರಿಕಾರಣವಾಗಿ ಹಲವಾರು ವರ್ಷಗಳೇ ಕಳೆದಿದೆ ಈ ಎಲ್ಲ ವಿಚಾರ ಹೇಳುತ್ತಿರುವ ಹಿಂದೆ ಬಹುದೊಡ್ಡ ಕಾರಣವೂವಿದೆ ಅದೇನಂದರೆ ಇಲ್ಲಿಗೆ ಸುತ್ತಮುತ್ತಲಿನ ಹಳ್ಳಿಗಳಿಂದ ವಿದ್ಯಾರ್ಥಿಗಳು ಇಲ್ಲಿರುವ ಸರ್ಕಾರಿ ಶಾಲೆಗೆ ಆಗಮಿಸುತ್ತಾರೆ.
ಈ ವಿದ್ಯಾರ್ಥಿಗಳಿಗೆ ಜ್ಞಾನದಲ್ಲಿ ಏನು ಕಡಿಮೆ ಇಲ್ಲ ಕಳೆದು 10 ವರ್ಷಗಳಿಂದನು ಈ ಸರ್ಕಾರಿ ಶಾಲೆ 100% ರಿಸಲ್ಟ್ ಬರುತ್ತಿದೆ. ಅಂತಹ ಅತ್ಯುತ್ತಮ ಶಿಕ್ಷಕರು, ವಿದ್ಯಾರ್ಥಿಗಳು ಹಾಗೂ ಉತ್ತಮ SDMC ವ್ಯವಸ್ಥೆ ಈ ಊರಿನಲ್ಲಿದೆ.ಈ ಊರಿನಲ್ಲಿರುವ ಈ ಮೇಲ್ಕಂಡ ಸಮಸ್ಯೆ ಬಗ್ಗೆ ಹಲವಾರು ಬಾರಿ ಶಾಸಕರು ಹಾಗೂ ತಾಲೂಕು ಆಡಳಿತ ಹಾಗೂ ಉಸ್ತುವಾರಿ ಸಚಿವರು ಹಾಗೂ ಶಿಕ್ಷಣ ಸಚಿವರ ಗಮನಕ್ಕೆ ಊರಿನ ಗ್ರಾಮಸ್ಥರು ಮನವಿ ಮಾಡಿದ್ದೂ ಆಗಿದೆ. ಇದು ಯಾವದಕ್ಕೂ ತಲೆಕೆಡಿಸಿಕೊಳ್ಳದೆ ಆಡಳಿತ ನಿರ್ಲಕ್ಷವಹಿಸಿರುವುದು ಕಟು ಸತ್ಯವಾಗಿದೆ.

ಈಗ ಪ್ರಸ್ತುತ ಬಾಡೂಟ ದಂಡದಿಂದ ಪ್ರಸಿದ್ದಿ ಪಡೆಯುತ್ತಿರುವ ಊರಿನ ಜನರು ವಿದ್ಯಾರ್ಥಿಗಳು ವೃದ್ಧರು ಅನಾರೋಗ್ಯ ಪೀಡಿತರು ಗರ್ಭಿಣಿಯರು ಹೀಗೆ ಗ್ರಾಮಸ್ಥರು ನಮ್ಮ ಈ ದಿನ ಮಾಧ್ಯಮದ ಮುಂದೆ ತಮ್ಮ ಗೋಳು ತೋಡಿಕೊಂಡರು.
ಹಾಗೆ ನಮ್ಮೊಂದಿಗೆ ಮಾತನಾಡಿದ ಶಾಲೆಯ SDMC ಅಧ್ಯಕ್ಷ ಸೋಮಶೇಖರ್ ಇಲ್ಲಿಯ ವಿದ್ಯಾರ್ಥಿಗಳಿಗೆ ಉತ್ತಮ ಶಿಕ್ಷಣ ವ್ಯವಸ್ಥೆ ಸಿಗುತ್ತಿದೆ ಶಾಲೆಯಲ್ಲಿ 300ಕ್ಕೂ ಹೆಚ್ಚು ವಿದ್ಯಾರ್ಥಿಗಳು ವ್ಯಾಸಂಗ ಮಾಡುತ್ತಿದ್ದಾರೆ ಪ್ರತಿವರ್ಷ 100₹ ರಿಸಲ್ಟ್ ಬರುತ್ತಿದೆ ಆದರೆ ವಿದ್ಯಾರ್ಥಿಗಳಿಗೆ ಶಾಲೆಗೆ ಬರಲು 6 ಕಿಮೀ ನಡೆದು ಬರಬೇಕು ಹಾಗೆ ಕೆರೆಗೆ ತಡೆಗೋಡೆ ಸಹ ಇಲ್ಲ ಇದು ಕೂಡ ಆಪತ್ತುಆಗಿದೆ ಎಂದು ತಿಳಿಸಿದರು.
ಇನ್ನು ಮಾಜಿ ಟಿಪಿ ಸದಸ್ಯರಾದ ಗೋಪಾಲಪ್ಪ ಮಾತನಾಡಿ ಊರಿನಲ್ಲಿರುವ ರಸ್ತೆಗೆ ಡಂಬರಿಕರಣವಾಗಿ ಹಲವಾರು ವರ್ಷಾಗಳೇ ಕಳೆದಿವೆ ಇನ್ನು ಮಳೆಗಾಲದಲ್ಲಂತು ಕೆಸರುಮಯ ರಸ್ತೆಯಾಗತ್ತೆ ಈ ರಸ್ತೆಯಲ್ಲಿ ವಿದ್ಯಾರ್ಥಿಗಳು ಶಾಲೆಗೆ 6 ಕಿಮೀ ನಡೆದು ಬರಬೇಕು ಹಾಗೂ ವಯೋವೃದ್ಧರು, ಮಹಿಳೆಯರು ಹಾಗೂ ಅನಾರೋಗ್ಯ ಪೀಡಿತರು ತುಂಬಾ ಸಮಸ್ಯೆಗೆ ಒಳಗಾಗುತ್ತಾರೆ ಹಾಗೆಯೇ ಊರಿನಲ್ಲಿ ಚರಂಡಿ ವ್ಯವಸ್ಥೆ ಕೂಡ ಇಲ್ಲವೆಂದು ದೂರಿದರು.

ಎಷ್ಟೋ ಬಾರಿ ಅಧಿಕಾರಿಗಳು ತಾಲೂಕು ಆಡಳಿತ ಹಾಗೂ ಶಾಸಕರು, ಸಚಿವರು ಹೀಗೆ ಎಲ್ಲರ ಗಮನಕ್ಕೆ ಸಮಸ್ಯೆ ಮನವರಿಕೆ ಮಾಡಿಕೊಟ್ಟಿದ್ದೇವೆ ಆದರೂ ಯಾರು ಸ್ಪಂದಿಸುತ್ತಿಲ್ಲ ನಮ್ಮದು ಶಿಕಾರಿಪುರ ತಾಲೂಕಿನಲ್ಲಿರುವ ಕಟ್ಟೆ ಕಡೆಯ ಕುಗ್ರಾಮವಾಗಿದೆ ಹಾಗಾಗಿ ತಮ್ಮ ಮಾಧ್ಯಮದ ಮೂಲಕವಾದರೂ ನಮ್ಮ ಸಮಸ್ಯೆ ಬಗೆಹರಿಸಿಕೊಡಿ ಎಂದು ತಿಳಿಸಿದ್ದಾರೆ.
ಒಟ್ಟಾರೆ ಒಂದು ಗ್ರಾಮದಲ್ಲಿ ಉತ್ತಮ ಶಿಕ್ಷಕರು, ಉತ್ತಮ ಶಾಲೆ, ಉತ್ತಮ ಫಲಿತಾಂಶ ಅತ್ಯುತ್ತಮ ವಿದ್ಯಾರ್ಥಿಗಳಿದ್ದರು ಸಹ ಯಾಕೆ ಸರ್ಕಾರಿ ಶಾಲೆಗಳು ಮುಚ್ಚುತ್ತವೆ ಎಂದರೆ ಇಂತಹ ಅವ್ಯವಸ್ಥೆಯು ಒಂದು ಭಾಗವಾಗಿದೆ.

ಹಾಗೆಯೇ ಇಂದಿಗೂ ಮೂಲಭೂತ ಸೌಕರ್ಯಕ್ಕೋಸ್ಕರ ಗ್ರಾಮಸ್ಥರು ಪರದಾಟ ನಡೆಸುತ್ತಿರುವುದು ಆಡಳಿತ ವ್ಯವಸ್ಥೆಗೆ ಹಿಡಿದ ಕೈಗನ್ನಡಿಯಾಗಿದೆ.




