ಹಿರಿಯ ನಟ ನಾನಾ ಪಾಟೇಕರ್‌ ನಿಧನ

Date:

- Advertisement -

ಪಣಜಿ:  ಹಿರಿಯ ನಟ ನಾನಾ ಪಾಟೇಕರ್ ಅವರು ತೀವ್ರ ಹೃದಯಾಘಾತಕ್ಕೆ ಒಳಗಾಗಿ 75ನೇ ವಯಸ್ಸಿನಲ್ಲಿ ನಿಧನರಾಗಿದ್ದಾರೆ. ರಾಷ್ಟ್ರೀಯ ಪ್ರಶಸ್ತಿ ಪುರಸ್ಕೃತರಾದ ಅವರು ಹಿಂದಿ ಮತ್ತು ಮರಾಠಿ ಚಿತ್ರರಂಗದ ಅತ್ಯಂತ ಗೌರವಾನ್ವಿತ ಹಾಗೂ ವಿಭಿನ್ನ ಶೈಲಿಯ ನಟರಲ್ಲಿ ಒಬ್ಬರಾಗಿದ್ದರು.

ಇನ್ನಷ್ಟು ವಿಶೇಷ ಲೇಖನಗಳಿಗಾಗಿ, ಇಲ್ಲಿ ಕ್ಲಿಕ್ ಮಾಡಿ →

ಮಹಿಳಾ ಮೀಸಲಾತಿ ಮರೆಯಲ್ಲಿ ಕ್ಷೇತ್ರ ಮರುವಿಂಗಡಣೆ: ವಿರೋಧ ಪಕ್ಷಗಳ...

2023ರ ಮಹಿಳಾ ಮೀಸಲಾತಿ ಕಾಯ್ದೆಯನ್ನು ಅನಗತ್ಯವಾಗಿ ಕ್ಷೇತ್ರ ಪುನರ್ವಿಂಗಡಣೆಯೊಂದಿಗೆ ತಳುಕು ಹಾಕಿರುವ ಮೋದಿ ಸರ್ಕಾರದ ನಡೆ, ಭಾರತೀಯ ಪ್ರಜಾಪ್ರಭುತ್ವ ಮತ್ತು ಸಂಸದೀಯ ಇತಿಹಾಸದಲ್ಲಿಯೇ ಒಂದು ಅಪರೂಪದ ರಾಜಕೀಯ ಹಾಗೂ ಸಾಂವಿಧಾನಿಕ ಬಿಕ್ಕಟ್ಟನ್ನು ಸೃಷ್ಟಿಸಿದೆ....

ಖಾಸಗಿ ವೈದ್ಯರ ಎಡವಟ್ಟು; ಬಡ ಕುಟುಂಬದ ಆಧಾರ ಸ್ತಂಭ...

ಆತ ಕೂಲಿ‌ ಕೆಲಸ ಮಾಡಿಕೊಂಡು ಹಂಗೊ ಹೆಂಗೋ ಜೀವನ‌ ನಡೆಸಿಕೊಂಡು ಬಂದಿದ್ದ ಚಿರ ಯೌವ್ವನದ ಯುವಕ. ತನ್ನ ಮನೆ ಜವಾಬ್ದಾರಿಯನ್ನು ತನ್ನದೇ ಹೆಗಲ ಮೇಲೆರಿಸಿ ಕಷ್ಟಪಟ್ಟು ದುಡಿದು ತನ್ನ ಇಬ್ಬರು ಸಹೋದರಿಯರಿಗೆ ಮದುವೆಯನ್ನೂ...

ಭಾಷಣಗಳಲ್ಲಿ ಆಗಾಗ ಎಡವಟ್ಟು, ಸುಳ್ಳು-ಅತಿಶಯೋಕ್ತಿಯೇ ಮೇಲುಗೈ: ನವಭಾರತದ ‘ಪಪ್ಪು’...

ಒಂದು ಕಾಲದಲ್ಲಿ ರಾಹುಲ್ ಗಾಂಧಿ ಅವರನ್ನು ಅಪಹಾಸ್ಯ ಮಾಡಲು ಬಳಸುತ್ತಿದ್ದ 'ಪಪ್ಪು' ಎಂಬ ಪದವೇ ಇದೀಗ ಮೋದಿ ಅವರತ್ತ ತಿರುಗಿದೆ. 1987-88ರ ಡಿಜಿಟಲ್ ಕ್ಯಾಮೆರಾ-ಇಮೇಲ್ ಕಥೆಯಿಂದ ಹಿಡಿದು ಐತಿಹಾಸಿಕ ಪ್ರಮಾದಗಳವರೆಗೆ, ಮೋದಿ ಅವರ...

ಗೋವಾದ ಡೋನಾ ಪೌಲಾದಲ್ಲಿರುವ ಅವರ ನಿವಾಸದಲ್ಲಿ ಪ್ರಜ್ಞಾಹೀನ ಸ್ಥಿತಿಯಲ್ಲಿ ಬಿದ್ದಿದ್ದ ಅವರನ್ನು ಬಳಿಕ  ಆಸ್ಪತ್ರೆಗೆ ಕರೆದೊಯ್ಯಲಾಯಿತು. ಆದರೆ ವೈದ್ಯರು ಅವರು ಆಸ್ಪತ್ರೆಗೆ ತಲುಪುವ ಮುನ್ನವೇ ಮೃತಪಟ್ಟಿದ್ದರು ಎಂದು ಘೋಷಿಸಿದರು.

ಈ ಬಗ್ಗೆ ಪ್ರತಿಕ್ರಿಯಿಸಿದ ಮಣಿಪಾಲ್ ಆಸ್ಪತ್ರೆಯ ಆಂಕಾಲಜಿ ವಿಭಾಗದ ಮುಖ್ಯಸ್ಥರಾದ ಡಾ. ಶೇಖರ್ ಸಲ್ಕರ್ , ಸುಮಾರು 45 ನಿಮಿಷಗಳ ಕಾಲ ನಿರಂತರವಾಗಿ CPR ನೀಡಿದರೂ ಅವರನ್ನು ಬದುಕಿಸಲು ಸಾಧ್ಯವಾಗಲಿಲ್ಲ ಎಂದು ತಿಳಿಸಿದ್ದಾರೆ ಎಂದು ANI ವರದಿ ಮಾಡಿದೆ .

ಈ ಸಂಬಂಧ ಮೆಡಿಕೋ-ಲೀಗಲ್ ಕೇಸ್ (MLC) ದಾಖಲಿಸಲಾಗಿದ್ದು, ಮರಣೋತ್ತರ ಪರೀಕ್ಷೆ ನಡೆಸಲಾಗುತ್ತದೆ.

ನಾನಾ ಪಾಟೇಕರ್ ಅವರು ಹಲವು ದಶಕಗಳ ಕಾಲ ಚಿತ್ರರಂಗ, ರಂಗಭೂಮಿ ಮತ್ತು ದೂರದರ್ಶನದಲ್ಲಿ ತಮ್ಮದೇ ಆದ ಛಾಪು ಮೂಡಿಸಿದ್ದರು. ಪ್ರಭಾವಶಾಲಿ ಪರದೆ ಮೇಲಿನ ಉಪಸ್ಥಿತಿ, ತೀಕ್ಷ್ಣ ಸಂಭಾಷಣೆ ಹೇಳುವ ಶೈಲಿ ಹಾಗೂ ಸಂಕೀರ್ಣ ಪಾತ್ರಗಳನ್ನು ಅತ್ಯಂತ ಸಂಯಮದಿಂದ ನಿರ್ವಹಿಸುವ ಸಾಮರ್ಥ್ಯದಿಂದ ಅವರು ಭಾರತೀಯ ಚಿತ್ರರಂಗದಲ್ಲಿ ವಿಶಿಷ್ಟ ಸ್ಥಾನವನ್ನು ಗಳಿಸಿದ್ದರು.

1951ರಲ್ಲಿ ಮಹಾರಾಷ್ಟ್ರದಲ್ಲಿ ವಿಶ್ವನಾಥ ಪಾಟೇಕರ್ ಎಂಬ ಹೆಸರಿನಲ್ಲಿ ಜನಿಸಿದ ನಾನಾ ಪಾಟೇಕರ್ ಅವರು 1970ರ ದಶಕದ ಕೊನೆಯಲ್ಲಿ ನಟನಾ ಕ್ಷೇತ್ರಕ್ಕೆ ಪ್ರವೇಶಿಸಿದರು.

‘ಗಮನ್’ ಅವರ ಚೊಚ್ಚಲ ಚಿತ್ರವಾಗಿತ್ತು. ನಂತರ ಒಂದರ ಹಿಂದೆ ಒಂದರಂತೆ ಗಮನಾರ್ಹ ಅಭಿನಯ ನೀಡುವ ಮೂಲಕ ಅವರು ಚಿತ್ರರಂಗದಲ್ಲಿ ತಮ್ಮದೇ ಆದ ಸ್ಥಾನವನ್ನು ಗಳಿಸಿದರು.

‘ಪರಿಂಡಾ’, ‘ಪ್ರಹಾರ್’, ‘ಅಂಗಾರ್’, ‘ಕ್ರಾಂತಿವೀರ್’, ‘ಅಗ್ನಿಸಾಕ್ಷಿ’, ‘ಯಶವಂತ್’, ‘ಅಬ್ ತಕ್ ಛಪ್ಪನ್’, ‘ಅಪಹರಣ’, ‘ವೆಲ್‌ಕಮ್’ ಮತ್ತು ‘ನಟಸಮ್ರಾಟ್’ ಸೇರಿದಂತೆ ಅನೇಕ ಚಿತ್ರಗಳಲ್ಲಿ ಅವರ ನಟನೆಯು ಮೆಚ್ಚುಗೆಗೆ ಪಾತ್ರವಾಯಿತು.

ಅವರ ಅಭಿನಯವು ಸಾಂಪ್ರದಾಯಿಕ ನಾಯಕ ಅಥವಾ ಖಳನಾಯಕನ ಪಾತ್ರಗಳ ಮಿತಿಯನ್ನು ಮೀರಿ ಸಾಗುತ್ತಿತ್ತು ಮತ್ತು ಪ್ರೇಕ್ಷಕರನ್ನು ಕಥಾ ಪ್ರಪಂಚಕ್ಕೆ ಕೊಂಡೊಯ್ಯುವ ಅನುಭವವನ್ನು ನೀಡುತ್ತಿತ್ತು.

ಅವರಿಗೆ  ಮೂರು ಬಾರಿ ರಾಷ್ಟ್ರೀಯ ಪ್ರಶಸ್ತಿ ಲಭಿಸಿತ್ತು. 1989ರಲ್ಲಿ ‘ಪರಿಂಡಾ’ ಚಿತ್ರದ ಅಭಿನಯಕ್ಕಾಗಿ ಅತ್ಯುತ್ತಮ ಪೋಷಕ ನಟ ರಾಷ್ಟ್ರೀಯ ಪ್ರಶಸ್ತಿ ಪಡೆದ ಅವರು ,  1994ರಲ್ಲಿ ‘ಕ್ರಾಂತಿವೀರ್’ ಚಿತ್ರಕ್ಕಾಗಿ ಅತ್ಯುತ್ತಮ ನಟ ಪ್ರಶಸ್ತಿಗೆ ಭಾಜನರಾದರು. ನಂತರ 1996ರಲ್ಲಿ ‘ಅಗ್ನಿಸಾಕ್ಷಿ’ ಚಿತ್ರದ ಅಭಿನಯಕ್ಕಾಗಿ ಮತ್ತೊಮ್ಮೆ ಅತ್ಯುತ್ತಮ ಪೋಷಕ ನಟ ರಾಷ್ಟ್ರೀಯ ಪ್ರಶಸ್ತಿ ಪಡೆದರು.

ಚಿತ್ರರಂಕ್ಕೆ  ನೀಡಿದ ಕೊಡುಗೆಗಾಗಿ ಅವರಿಗೆ 2013ರಲ್ಲಿ ಪದ್ಮಶ್ರೀ ಪ್ರಶಸ್ತಿಯನ್ನು ನೀಡಿ ಗೌರವಿಸಲಾಗಿತ್ತು.

WhatsApp Image 2026 10 08 at 9.38.38 AM
eedina
ಈ ದಿನ ಡೆಸ್ಕ್‌
Website | + posts

<p><iframe src="https://www.youtube.com/embed/8qwx4L0lKFQ?autoplay=1&mute=1&loop=1&playlist=8qwx4L0lKFQ&controls=0&modestbranding=1&showinfo=0" width="560" height="315" frameborder="0" allowfullscreen="allowfullscreen"></iframe></p>

ಪೋಸ್ಟ್ ಹಂಚಿಕೊಳ್ಳಿ:

ಪೋಸ್ಟ್ ಹಂಚಿಕೊಳ್ಳಿ:

ಈ ಹೊತ್ತಿನ ಪ್ರಮುಖ ಸುದ್ದಿ

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

RSS ಸಂಸ್ಥೆಗಳು ಆಯೋಜಿಸಿದ್ದ ಪರೀಕ್ಷೆಗೆ ಕೇರಳ ಹೈಕೋರ್ಟ್ ಸಮ್ಮತಿ; ಆದರೆ, ಫಲಿತಾಂಶ ಪ್ರಕಟಣೆಗೆ ತಡೆ

ಆರ್‌ಎಸ್‌ಎಸ್‌ ಸಂಯೋಜಿತ ಸಂಸ್ಥೆಗಳು ಆಯೋಜಿಸಿರುವ ಶಾಲಾ ಮಟ್ಟದ ವಿದ್ಯಾರ್ಥಿವೇತನ ಮಾದರಿಯ ಪರೀಕ್ಷೆಯು...

FICCI ಸಮಾವೇಶದ ಕಿಚ್ಚು: ತೆರಿಗೆ ರಿಯಾಯಿತಿ, ಉದ್ಯೋಗ ಸೃಷ್ಟಿ ಕುರಿತು ಮೋದಿ–ರಾಹುಲ್ ವಾಕ್ಸಮರ!

ಕಾರ್ಪೊರೇಟ್ ತೆರಿಗೆ ಕಡಿತದ ಲಾಭವನ್ನು ಉದ್ಯೋಗಿಗಳಿಗೆ ವರ್ಗಾಯಿಸದ ಉದ್ಯಮಗಳ ವಿರುದ್ಧ ಪ್ರಧಾನಿ...

ಬಸವಣ್ಣ ಅವಹೇಳನ: ಪರಾರಿಯಾಗಲು ಯತ್ನ; ವಿಮಾನ ನಿಲ್ದಾಣದಲ್ಲಿ ರವಿ ಹಂಜ್ ಬಂಧನ

12ನೇ ಶತಮಾನದ ಮಹಾನ್ ಸಮಾಜ ಸುಧಾರಕ ವಿಶ್ವಗುರು ಬಸವಣ್ಣನವರ ಕುರಿತು ತಮ್ಮ...

ರದ್ದಾದ ವಿಮಾನಗಳಿಗೂ ಟಿಕೆಟ್ ಮಾರಾಟ, ರೀಫಂಡ್‌ಗಾಗಿ ಪರದಾಟ: ಸಂಕಷ್ಟದಲ್ಲಿ ಸ್ಪೈಸ್‌ಜೆಟ್

ತೀವ್ರ ಆರ್ಥಿಕ ಮುಗ್ಗಟ್ಟಿಗೆ ಸಿಲುಕಿರುವ ಅಗ್ಗದ ದರದ ವಿಮಾನಯಾನ ಸಂಸ್ಥೆ...