ಒಳಮೀಸಲು ಹಂಚಿಕೆ | ಇದು ಪರಿಶಿಷ್ಟ ಜಾತಿಗೆ ಮಾಡಿದ ಅಪಹಾಸ್ಯ: ಕಾಂಗ್ರೆಸ್ ದಲಿತ ನಾಯಕರ ಆಕ್ರೋಶ

Date:

  • ಸರ್ಕಾರ ಘೋಷಿಸಿರುವ ಮೀಸಲಾತಿ ಜಾರಿಯಾಗುವುದು ಕಷ್ಟ
  • ಸದಾಶಿವ ಆಯೋಗದ ನೈಜ ವರದಿಯಂತೆ ಮೀಸಲು ಕೊಡಿ

ರಾಜ್ಯ ಸರ್ಕಾರ ಶುಕ್ರವಾರ ಘೋಷಣೆ ಮಾಡಿರುವ ದಲಿತರ ಒಳ ಮೀಸಲಾತಿ ಬಗ್ಗೆ ಕಾಂಗ್ರೆಸ್ ದಲಿತ ಮುಖಂಡರು ಅಸಮಾಧಾನ ವ್ಯಕ್ತಪಡಿಸಿದ್ದಾರೆ. ಸರ್ಕಾರದ ಈ ನಿರ್ಧಾರ ಪರಿಶಿಷ್ಟ ಜಾತಿಯನ್ನು ಅಪಹಾಸ್ಯ ಮಾಡುವ ಪ್ರಯತ್ನವಾಗಿದೆ ಎಂದು ಅವರುಗಳು ಕಿಡಿಕಾರಿದ್ದಾರೆ.

ಬೆಂಗಳೂರಿನ ಕ್ವೀನ್ಸ್ ರಸ್ತೆಯ ಕಾಂಗ್ರೆಸ್ ಕಚೇರಿಯಲ್ಲಿ ನಡೆದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಕಾಂಗ್ರೆಸ್ ದಲಿತ ನಾಯಕರುಗಳು ಸರ್ಕಾರದ ನಿರ್ಧಾರವನ್ನು ಖಂಡಿಸಿದರು.

ಮೊದಲಿಗೆ ಮಾತನಾಡಿದ ಸುಧಾಮ್ ದಾಸ್, ನಿನ್ನೆ ಘೋಷಿಸಿದ ಮೀಸಲಾತಿ ಸದಾಶಿವ ಆಯೋಗದ ಶಿಫಾರಸ್ಸಿಗೆ ಅನುಗುಣವಾಗಿಲ್ಲ. ರಾಜ್ಯ ಸರ್ಕಾರ ಕೇಂದ್ರಕ್ಕೆ ಕಳುಹಿಸಿರುವ ಪ್ರಸ್ತಾವನೆಯ ಮೀಸಲಾತಿ ಸದ್ಯದ ಪರಿಸ್ಥಿತಿಯಲ್ಲಿ ಯಾವುದೇ ಕಾರಣಕ್ಕೂ ಸರ್ಕಾರಿ ಆದೇಶವಾಗಿ ಜಾರಿಯಾಗಲು ಸಾಧ್ಯವಿಲ್ಲ ಎಂದರು.

ಮುಂಬರುವ ಚುನಾವಣೆಯಲ್ಲಿ ಪರಿಶಿಷ್ಟ ಜಾತಿಯವರಿಗೆ ಮಂಕುಬೂದಿ ಎರಚುವ ಪ್ರಯತ್ನವಾಗಿದೆ. ಇದನ್ನು ಪರಿಶಿಷ್ಟ ಜಾತಿ ಸಮುದಾಯದ ಎಲ್ಲರ ಪರವಾಗಿ ಖಂಡಿಸುತ್ತೇವೆ ಎಂದು ಹೇಳಿದರು. ಒಳ ಮೀಸಲಾತಿ ವಿಚಾರ ಕರ್ನಾಟಕ ರಾಜ್ಯಕ್ಕೆ ಮಾತ್ರ ಸೀಮಿತವಲ್ಲ. ತಮಿಳುನಾಡು, ರಾಜಸ್ಥಾನ, ಆಂಧ್ರ, ತೆಲಂಗಾಣ ಸೇರಿದಂತೆ ಅನೇಕ ರಾಜ್ಯಗಳ ಪ್ರಸ್ತಾವನೆ ಕೇಂದ್ರ ಸರ್ಕಾರದ ಮುಂದೆ ಬಾಕಿ ಇದೆ.

2004ರಲ್ಲಿ ಸಂತೋಷ್ ಹೆಗಡೆ ಅವರ ನೇತೃತ್ವದಲ್ಲಿ ಸಂವಿಧಾನ ಪೀಠವು ರಾಜ್ಯ ಸರ್ಕಾರ ಸಭೆಗಳು ಹಾಗೂ ರಾಜ್ಯ ಸರ್ಕಾರ ತೀರ್ಮಾನಿಸುವ ಶಿಫಾರಸ್ಸಿನ ಮೇಲೆ ಈ ಒಳಮೀಸಲಾತಿ ಜಾರಿಗೊಳಿಸಲು ಸಾಧ್ಯವಿಲ್ಲ ಎಂದು ತೀರ್ಪು ನೀಡಿದೆ. ತೀರ್ಪು ಪರಿಶೀಲನೆ ಕುರಿತಂತೆ 2007ರಲ್ಲಿ ಯುಪಿಎ ಸರ್ಕಾರ ಉಷಾ ಮೆಹ್ರಾ ಸಮಿತಿ ನೇಮಿಸಿತ್ತು. ಇದನ್ನು ಕಾನೂನಾತ್ಮಕ ಜಾರಿಗೆ ವರದಿ ನೀಡುವಂತೆ ಸೂಚಿಸಿತ್ತು. 2008ರಲ್ಲಿ ಈ ಸಮಿತಿ ವರದಿ ಸಲ್ಲಿಸಿದೆ.

ಇದರಲ್ಲಿ 2 ಮಾರ್ಗೋಪಾಯ ಸೂಚಿಸಿದ್ದು, ಐದು ಸದಸ್ಯರ ಸಂವಿಧಾನ ಪೀಠ ತೀರ್ಪು ನೀಡಿರುವ ಹಿನ್ನೆಲೆಯಲ್ಲಿ ಈ ವಿಚಾರವನ್ನು ಏಳು ಸದಸ್ಯರ ಸಂವಿಧಾನ ಪೀಠ ಪರಿಶೀಲಿಸಿ, ಜಾರಿಗೆ ಪೂರಕವಾಗಿ ಆದೇಶ ಬಂದರೆ ಜಾರಿ ಮಾಡಬಹುದು ಎಂದು ತಿಳಿಸಿದೆ. ಇನ್ನು ಪರಿಚ್ಛೇಧ 341ಕ್ಕೆ ತಿದ್ದುಪಡಿ ತಂದು ರಾಜ್ಯಪಾಲರ ಅನುಮೋದನೆ ಪಡೆದರೆ ಮೀಸಲಾತಿ ಜಾರಿ ಮಾಡಬಹುದು. ಇದನ್ನು ಮಾಡಲು ಬಿಜೆಪಿಯ ಡಬಲ್ ಇಂಜಿನ್ ಸರ್ಕಾರಕ್ಕೆ ಯಾವುದೇ ಉದ್ದೇಶವಿಲ್ಲ. ಇದು ಬರೀ ನಾಟಕ ಎಂದು ಸುಧಾಮ್ ದಾಸ್ ಹೇಳಿದರು.

ಈ ಸುದ್ದಿ ಓದಿದ್ದೀರಾ? : ಮೀಸಲು ಹಂಚಿಕೆ | ಜಾತ್ರೆಯ ಬೆಂಡು-ಬತ್ತಾಸು ಹಂಚಿಕೆಯೂ ಇಷ್ಟೊಂದು ಕಳಪೆಯಾಗಿ ಇರುವುದಿಲ್ಲ ಎಂದ ಜೆಡಿಎಸ್‌

ಬಳಿಕ ಮಾತನಾಡಿದ ಹೆಣ್ಣೂರು ಶ್ರೀನಿವಾಸ್ ಹಾಗೂ ಬಿ ಗೋಪಾಲ್ ಬೊಮ್ಮಾಯಿ ಸಂಪುಟ ನಿರ್ಧಾರವನ್ನು ಖಂಡಿಸಿದರು. ಪರಿಶಿಷ್ಟ ಜಾತಿಗೆ ಒಳ ಮೀಸಲಾತಿ ನೀಡುವ ಸಚಿವ ಸಂಪುಟದ ತೀರ್ಮಾನ ಅವೈಜ್ಞಾನಿಕವಾಗಿದ್ದು, ಕಳೆದ 30 ವರ್ಷಗಳಿಂದ ಸದಾಶಿವ ಆಯೋಗ ನೀಡಿರುವ ವರದಿ ಆಧಾರದ ಮೇಲೆ ಒಳಮೀಸಲಾತಿ ನೀಡಬೇಕು ಎಂದು ಆಗ್ರಹಿಸಲಾಗುತ್ತಿದೆ.

ಸದಾಶಿವ ಆಯೋಗ ನೀಡಿರುವ ವರದಿಯಲ್ಲಿ 6, 3, 5, 1ರಂತೆ ಒಳ ಮೀಸಲಾತಿ ನೀಡಬೇಕಿತ್ತು. ಆದರೆ ಅದನ್ನು ಸರ್ಕಾರ ಪಾಲಿಸಿಲ್ಲ ಎಂದು ಹೆಣ್ಣೂರು ಶ್ರೀನಿವಾಸ್ ಆಕ್ರೋಶ ವ್ಯಕ್ತಪಡಿಸಿದರು. ಸದ್ಯ ಸುಪ್ರೀಂ ಕೋರ್ಟ್ ಆದೇಶದ ಪ್ರಕಾರ ಮೀಸಲಾತಿ ಪ್ರಮಾಣ ಶೇ.50ಕ್ಕಿಂತ ಹೆಚ್ಚಾಗಬಾರದು ಎಂದಿದೆ. ಇಡಬ್ಲ್ಯೂಎಸ್ ನಲ್ಲಿ ಮೇಲ್ಜಾತಿಗಳಿಗೆ ಶೇ.10ರಷ್ಟು ನೀಡಿದ್ದಾರೆ.

ಆ ಮೂಲಕ ಶೇ.49 ಹಾಗೂ ಈ ಶೇ.10 ಸೇರಿ 59% ಆಗಿದೆ. ಈಗ ಪರಿಶಿಷ್ಟರಿಗೆ ಹೆಚ್ಚು ಮಾಡಿದರೆ ಇದರ ಪ್ರಮಾಣ ಶೇ.64ಕ್ಕೆ ಏರಿಕೆಯಾಗಲಿದೆ. ಆದರೆ ಇದಕ್ಕೆ ಕಾನೂನಿನ ಒಪ್ಪಿಗೆ ಇರುವುದಿಲ್ಲ. ಹೀಗಾಗಿ ಈ ಮೀಸಲಾತಿ ಹೆಚ್ಚಳ ಕಾರ್ಯಸಾಧುವಾಗುವುದಿಲ್ಲ ಎಂದು ಬಿ ಗೋಪಾಲ್ ಹೇಳಿದರು.

ಈ ದಿನ ಡೆಸ್ಕ್‌
Website | + posts

ಪೋಸ್ಟ್ ಹಂಚಿಕೊಳ್ಳಿ:

LEAVE A REPLY

Please enter your comment!
Please enter your name here

ಪೋಸ್ಟ್ ಹಂಚಿಕೊಳ್ಳಿ:

Subscribe

ಹೆಚ್ಚು ಓದಿಸಿಕೊಂಡ ಲೇಖನಗಳು

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ನಮ್ಮಲ್ಲಿನ ಕೆಲವರ ರಾಜಿ ರಾಜಕಾರಣದಿಂದ ಬಿಜೆಪಿಗೆ ಸೋಲು: ಸ್ವಪಕ್ಷಿಯರ ವಿರುದ್ಧ ಸಿ ಟಿ ರವಿ ಕಿಡಿ

ನಮ್ಮಲ್ಲೂ ರಾಜಿ ರಾಜಕಾರಣ ಮಾಡಿ ತಪ್ಪು ಮಾಡಿದ್ದಾರೆ ಹೊಂದಾಣಿಕೆ ರಾಜಕಾರಣದಿಂದಲೇ ಬಿಜೆಪಿಗೆ ಸೋಲಾಗಿದೆ ಪಕ್ಷದೊಳಗಿನ...

ಸಂವಿಧಾನ ಬದಲಾಯಿಸಲು ಬಂದವರನ್ನೇ ನಾವು-ನೀವು ಬದಲಾಯಿಸಿದ್ದೀವಿ: ಸಿಎಂ ಸಿದ್ದರಾಮಯ್ಯ

ಮನುಸ್ಮೃತಿಯ ಆರಾಧಕರಾದ ಬಿಜೆಪಿ, ಆರ್ ಎಸ್ ಎಸ್ ನವರು ಸಂವಿಧಾನ ವಿರೋಧಿಗಳು ಟೌನ್‌ಹಾಲ್...

ಪಠ್ಯ ಪರಿಷ್ಕರಣೆ | ಕಾಂಗ್ರೆಸ್‌ ವಿರುದ್ಧ ಕೋಟ ಶ್ರೀನಿವಾಸ ಪೂಜಾರಿ, ಸಿ ಟಿ ರವಿ ವಾಗ್ದಾಳಿ

ಬನ್ನಂಜೆ ಗೋವಿಂದಾಚಾರ್ಯರ ಪಾಠ ಹಿಂಪಡೆದಿದ್ದು ಖಂಡನಾರ್ಹ: ಕೋಟಾ ಶ್ರೀನಿವಾಸ ಪೂಜಾರಿ ಕಾರ್ಲ್ ಮಾರ್ಕ್ಸ್...

ಅಭಿಷೇಕ್‌ ಬ್ಯಾನರ್ಜಿಗೆ ಇ.ಡಿ ಸಮನ್ಸ್‌ | ವಿಚಾರಣೆಗೆ ಹಾಜರಾಗುವುದಿಲ್ಲ ಎಂದ ಟಿಎಂಸಿ ನಾಯಕ

ಪ್ರಾಥಮಿಕ ಶಾಲಾ ನೇಮಕಾತಿ ಹಗರಣದಲ್ಲಿ ಅಭಿಷೇಕ್‌ ಬ್ಯಾನರ್ಜಿ ಪ್ರಶ್ನಿಸಿದ್ದ ಸಿಬಿಐ ಪಂಚಾಯತ್‌ ಚುನಾವಣೆಯ...