ಬಿ.ಗೋಪಾಲ್, ಹೆಣ್ಣೂರು ಶ್ರೀನಿವಾಸ್ ಸೇರಿದಂತೆ ಹಲವು ದಲಿತ ಮುಖಂಡರು ಕಾಂಗ್ರೆಸ್ ಸೇರ್ಪಡೆ

Date:

  • ಜಿ.ಪರಮೇಶ್ವರ್, ಆಂಜನೇಯ, ಕೆ.ಎಚ್ ಮುನಿಯಪ್ಪ ನೇತೃತ್ವದಲ್ಲಿ ಪಕ್ಷ ಸೇರ್ಪಡೆ
  • ಬಿ. ಗೋಪಾಲ್, ಹೆಣ್ಣೂರು ಶ್ರೀನಿವಾಸ್, ನಿಂಬಣ್ಣ ಸೇರಿದಂತೆ ಹಲವರು ಕಾಂಗ್ರೆಸ್ ಪಕ್ಷಕ್ಕೆ

ವಿಧಾನಸಭಾ ಚುನಾವಣೆ ಹೊಸ್ತಿಲಲ್ಲಿ ನಿಂತಿರುವ ರಾಜ್ಯ ಕಾಂಗ್ರೆಸ್ ಪಕ್ಷಕ್ಕೆ ಮತ್ತಷ್ಟು ದಲಿತ ಬಲ ದೊರಕಿದೆ.

ಮಂಗಳವಾರ ಬೆಂಗಳೂರಿನ ಕಾಂಗ್ರೆಸ್ ಕೇಂದ್ರ ಕಚೇರಿಯಲ್ಲಿ ನಡೆದ ಪಕ್ಷ ಸೇರ್ಪಡೆ ಕಾರ್ಯಕ್ರಮದಲ್ಲಿ ದಲಿತ ಸಂಘಟನೆಯ ಅನೇಕ ಮುಖಂಡರು ಕಾಂಗ್ರೆಸ್ ಪಕ್ಷ ಸೇರಿದರು.

ಎಐಸಿಸಿ ಪ್ರಧಾನ ಕಾರ್ಯದರ್ಶಿ ರಣದೀಪ್ ಸಿಂಗ್ ಸುರ್ಜೇವಾಲಾ, ಕೆಪಿಸಿಸಿ ಪ್ರಣಾಳಿಕೆ ಸಮಿತಿ ಅಧ್ಯಕ್ಷ ಡಾ.ಜಿ ಪರಮೇಶ್ವರ್, ಮಾಜಿ ಕೇಂದ್ರ ಸಚಿವ ಕೆ.ಎಚ್ ಮುನಿಯಪ್ಪ ಅವರ ಸಮ್ಮುಖದಲ್ಲಿ ದಲಿತ ಮುಖಂಡರಾದ ಸುಧಾಮ್ ದಾಸ್, ನಿಂಬಣ್ಣ, ಬಿಎಸ್ಪಿ ಪಕ್ಷದ ಬಿ. ಗೋಪಾಲ್, ಹೆಣ್ಣೂರು ಶ್ರೀನಿವಾಸ್ ಸೇರಿದಂತೆ ಅನೇಕರು ಕಾಂಗ್ರೆಸ್ ಪಕ್ಷದ ಸದಸ್ಯರಾದರು.

ಬಿಜೆಪಿ ಆಡಳಿತದ ಅವಧಿಯಲ್ಲಿ ದಲಿತ ಸಂವೇದನೆಗಳಿಗೆ ಪೆಟ್ಟು ಬೀಳುತ್ತಿದ್ದು, ಅದರ ರಕ್ಷಣೆ ಸಲುವಾಗಿ ದಲಿತ ಸಮುದಾಯ ಒಗ್ಗೂಡಬೇಕಿದೆ. ಅದಕ್ಕೆ ರಾಜಕೀಯ ಬೆಂಬಲದ ಅವಶ್ಯಕತೆ ಇದೆ. ಕಾಂಗ್ರೆಸ್ ಪಕ್ಷ ಈ ಹಿಂದಿನಿಂದಲೂ ದಲಿತ ಸಮುದಾಯಗಳ ಹಿತ ಕಾಯ್ದುಕೊಂಡು ಬಂದಿದೆ. ಹೀಗಾಗಿ ನಾವುಗಳು ಪಕ್ಷ ಸೇರ್ಪಡೆಗೊಂಡಿದ್ದೇವೆ ಎಂದು ಮುಖಂಡರು ಹೇಳಿದರು

+ posts

LEAVE A REPLY

Please enter your comment!
Please enter your name here

ಪೋಸ್ಟ್ ಹಂಚಿಕೊಳ್ಳಿ:

Subscribe

ಜನಪ್ರಿಯ

ಈ ರೀತಿಯ ಹೆಚ್ಚು
Related

ಬೆಂಗಳೂರು | ಸಚಿವ ನಾರಾಯಣಗೌಡ ಭಾವಚಿತ್ರವಿರುವ ಬ್ಯಾಗ್‌ಗಳು ವಶ; ಎಫ್‌ಐಆರ್‌ ದಾಖಲು

ಸಚಿವ ಕೆ.ಸಿ ನಾರಾಯಣಗೌಡ ಭಾವಚಿತ್ರ ಮತ್ತು ಬಿಜೆಪಿ ಚಿಹ್ನೆ ಇರುವ ಬ್ಯಾಗ್‌ಗಳು...

ಎಸ್‌ಸಿ/ಎಸ್‌ಟಿ ಗುತ್ತಿಗೆ ಮೀಸಲು ಮೊತ್ತ ₹50 ಲಕ್ಷ ದಿಂದ ₹1 ಕೋಟಿಗೆ ಹೆಚ್ಚಿಸಿ ರಾಜ್ಯ ಸರ್ಕಾರ ಆದೇಶ

2023ರ ಫೆಬ್ರವರಿ 17ರಂದು ಬಜೆಟ್‌ನಲ್ಲಿ ಘೋಷಣೆ ಮಾಡಿದ್ದ ಸಿಎಂ ₹1 ಕೋಟಿ ಮೊತ್ತದ...

ಬೀದರ್‌ | 30 ಕ್ಷೇತ್ರಗಳಲ್ಲಿ ಆರ್‌ಪಿಐ ಅಭ್ಯರ್ಥಿಗಳು ಸ್ಪರ್ಧೆ: ಮಹೇಶ ಗೋರನಾಳಕರ್

ಆರ್‌ಪಿಐ ಡಾ.ಬಿ ಆರ್ ಅಂಬೇಡ್ಕರ್ ಸ್ಥಾಪನೆ ಮಾಡಿದ ಪಕ್ಷ 'ಆರ್‌ಪಿಐಗೆ ಪಕ್ಷಕ್ಕೆ ಬೆಂಬಲ...

ಬೆಂಗಳೂರು | 1.1 ಲಕ್ಷ ದಾಟಿದ ಯುವ ಮತದಾರರ ಸಂಖ್ಯೆ

ಬೆಂಗಳೂರಿನಲ್ಲಿ ಈ ಹಿಂದೆ ಯುವ ಮತದಾರರ ಸಂಖ್ಯೆ 54,000 ಇತ್ತು ಮತದಾನದ...