ಪ್ರಜಾಪ್ರಭುತ್ವವನ್ನೇ ಕಸದ ಬುಟ್ಟಿಗೆ ಎಸೆದ ನಿರಂಕುಶಾಧಿಕಾರಿ ಮೋದಿ ಸರ್ಕಾರ: ಸಂಸದರ ಅಮಾನತಿಗೆ ಖರ್ಗೆ ಆಕ್ರೋಶ

Date:

ಸಂಸತ್ ಭದ್ರತಾ ಲೋಪ ಪ್ರಕರಣದ ಬಗ್ಗೆ ಪ್ರಧಾನಿ ಹಾಗೂ ಗೃಹ ಸಚಿವರ ಹೇಳಿಕೆಗೆ ಆಗ್ರಹಿಸಿ ಸದನದಲ್ಲಿ ಗದ್ದಲ ಉಂಟು ಮಾಡಿದ್ದಕ್ಕಾಗಿ ಲೋಕಸಭೆಯಿಂದ 47 ಹಾಗೂ ರಾಜ್ಯಸಭೆಯಿಂದ 45 ಸಂಸದರನ್ನು ಅಮಾನತುಗೊಳಿಸಲಾಗಿದೆ. ಸಂಸತ್‌ ಇತಿಹಾಸದಲ್ಲೇ ಅತೀ ಹೆಚ್ಚು ಅಮಾನತು ಬೆಳವಣಿಗೆ ನಡೆದಿದೆ.

ಈ ಹಿನ್ನೆಲೆಯಲ್ಲಿ ಟ್ವೀಟ್ ಮಾಡಿರುವ ಎಐಸಿಸಿ ಅಧ್ಯಕ್ಷ ಹಾಗೂ ರಾಜ್ಯಸಭೆಯ ವಿಪಕ್ಷ ನಾಯಕ ಮಲ್ಲಿಕಾರ್ಜುನ ಖರ್ಗೆ, “ಇಲ್ಲಿಯವರೆಗೆ 92 ಪ್ರತಿಪಕ್ಷದ ಸಂಸದರನ್ನು ಅಮಾನತು ಮಾಡುವ ಮೂಲಕ ನಿರಂಕುಶಾಧಿಕಾರಿ ನರೇಂದ್ರ ಮೋದಿ ಸರ್ಕಾರವು ಎಲ್ಲ ಪ್ರಜಾಪ್ರಭುತ್ವ ವ್ಯವಸ್ಥೆಗಳನ್ನು ಕಸದ ಬುಟ್ಟಿಗೆ ಎಸೆದಿದೆ” ಎಂದು ಆಕ್ರೋಶ ಹೊರಹಾಕಿದ್ದಾರೆ.

“ಡಿಸೆಂಬರ್ 13, 2023 ರಂದು ಸಂಸತ್ತಿನ ಮೇಲೆ ಹೊಗೆ ದಾಳಿ ನಡೆಯಿತು. ಮೋದಿ ಸರ್ಕಾರವು ಇಂದು ಮತ್ತೆ ಸಂಸತ್ತು ಮತ್ತು ಪ್ರಜಾಪ್ರಭುತ್ವದ ಮೇಲೆ ದಾಳಿ ಮಾಡಿದೆ” ಎಂದು ಕಿಡಿಕಾರಿದ್ದಾರೆ.

ಸುದ್ದಿ ನಿರಂತರವಾಗಿ ಉಚಿತವೇ ಆಗಿರುವುದು ಹೇಗೆ ಸಾಧ್ಯ? ಅದಕ್ಕೆ ನಿಮ್ಮ ಬೆಂಬಲವೂ ನಿರಂತರವಾಗಿ ಇದ್ದಾಗ ಮಾತ್ರ ಸಾಧ್ಯ. ಚಂದಾದಾರರಾಗಿ – ಆ ಮೂಲಕ ಸತ್ಯ, ನ್ಯಾಯ, ಪ್ರೀತಿ ಮೌಲ್ಯಗಳನ್ನು ಎಲ್ಲರಿಗೂ ಹರಡಲು ಜೊತೆಯಾಗಿ.

“ಪ್ರತಿಪಕ್ಷಗಳದ್ದು ಎರಡು ಸರಳ ಮತ್ತು ಸುಲಭವಾದ ಬೇಡಿಕೆಗಳಷ್ಟೇ. ಒಂದು ಸಂಸತ್ತಿನ ಭದ್ರತೆಯಲ್ಲಾದ ಗಂಭೀರ ಉಲ್ಲಂಘನೆಯ ಕುರಿತು ಕೇಂದ್ರ ಗೃಹ ಸಚಿವರು ಸಂಸತ್ತಿನ ಉಭಯ ಸದನಗಳಲ್ಲಿ ಹೇಳಿಕೆ ನೀಡಬೇಕು ಮತ್ತು ಇನ್ನೊಂದು ಇದರ ಬಗ್ಗೆ ವಿಸ್ತೃತ ಚರ್ಚೆ ನಡೆಯಬೇಕು” ಎಂದು ಪ್ರತಿಪಕ್ಷಗಳ ‘ಇಂಡಿಯಾ’ ಮೈತ್ರಿಕೂಟದ ಮುಖಂಡರೂ ಆಗಿರುವ ಮಲ್ಲಿಕಾರ್ಜುನ ಖರ್ಗೆ ತಿಳಿಸಿದ್ದಾರೆ.

“ಪ್ರಧಾನಮಂತ್ರಿಗಳಿಗೆ ಪತ್ರಿಕೆಗೆ ಸಂದರ್ಶನ ನೀಡಲಿಕ್ಕೆ ಸಾಧ್ಯವಾಗುತ್ತದೆ. ಗೃಹ ಸಚಿವರು ಟಿವಿ ಚಾನೆಲ್‌ಗಳಿಗೆ ಸಂದರ್ಶನ ನೀಡುತ್ತಾರೆ. ಆದರೆ, ಭಾರತದ ಸಂಸತ್ತಿನಲ್ಲಿರುವ ಪ್ರತಿಪಕ್ಷಗಳ ಸಂಸದರು ದೇಶ ಮತ್ತು ಪಕ್ಷಗಳೆರಡನ್ನೂ ಪ್ರತಿನಿಧಿಸುತ್ತಾರೆ. ಇಲ್ಲಿ ಬಿಜೆಪಿ ಉತ್ತರ ನೀಡುವ ಬದಲು ತನ್ನ ಹೊಣೆಗಾರಿಕೆಯಿಂದ ನುಣುಚಿಕೊಳ್ಳುತ್ತಿದೆ” ಎಂದು ಖರ್ಗೆ ಕೆಂಡಕಾರಿದ್ದಾರೆ.

“ವಿರೋಧ ಪಕ್ಷವಿಲ್ಲದ ಸಂಸತ್ತಿನಲ್ಲಿ, ಮೋದಿ ಸರ್ಕಾರವು ಯಾವುದೇ ಚರ್ಚೆ ಅಥವಾ ಭಿನ್ನಾಭಿಪ್ರಾಯವಿಲ್ಲದೆ ಬಹುಮತದ ಬಲದಿಂದ ಪ್ರಮುಖ ಬಾಕಿ ಇರುವ ಕಾನೂನುಗಳನ್ನು ಅಂಗೀಕರಿಸಲೂಬಹುದು” ಎಂದು ಕಾಂಗ್ರೆಸ್ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ತಿಳಿಸಿದ್ದಾರೆ.

MODI – Murder Of Democracy in India ಎಂದ ಜೈರಾಮ್ ರಮೇಶ್

ಮೋದಿ ಎಂದರೆ ಮರ್ಡರ್ ಆಫ್ ಡೆಮಾಕ್ರಸಿ ಇನ್ ಇಂಡಿಯಾ(MODI-Murder Of Democracy in India) ಎಂದು ಹಿರಿಯ ಕಾಂಗ್ರೆಸ್ ಮುಖಂಡ, ರಾಜ್ಯಸಭಾ ಸದಸ್ಯ ಜೈರಾಮ್ ರಮೇಶ್ ವಾಗ್ದಾಳಿ ನಡೆಸಿದ್ದಾರೆ.

“ಲೋಕಸಭೆಯಲ್ಲಿ ಮಾತ್ರವಲ್ಲದೆ, ಇಂದು ರಾಜ್ಯಸಭೆಯಲ್ಲೂ ರಕ್ತದೋಕುಳಿ ನಡೆದಿದೆ. ಡಿಸೆಂಬರ್ 13 ರಂದು ಸಂಭವಿಸಿದ ಭದ್ರತಾ ಲೋಪದ ಕುರಿತು ಗೃಹ ಸಚಿವರ ಹೇಳಿಕೆಗೆ ಒತ್ತಾಯಿಸಿದ ಸಂಸದರನ್ನು ಅಮಾನತುಗೊಳಿಸಲಾಗಿದೆ. ನನ್ನ 19 ವರ್ಷಗಳ ಸಂಸದೀಯ ವೃತ್ತಿ ಜೀವನದಲ್ಲಿ ಮೊದಲ ಬಾರಿಗೆ ನಾನು ಕೂಡ ಈ ‘ಗೌರವ ಪಟ್ಟಿ’ಯಲ್ಲಿ ಸೇರಿದ್ದೇನೆ. ಸರ್ವಾಧಿಕಾರದ ಇನ್ನೊಂದು ಹೆಸರು ಮೋದಿಶಾಹಿ. ಇದು ಸಂಸದರ ಅಮಾನತು ಮಾತ್ರವಲ್ಲ, ಪ್ರಜಾಪ್ರಭುತ್ವದ ಅಮಾನತು” ಎಂದು ಜೈರಾಮ್ ರಮೇಶ್ ಕಿಡಿಕಾರಿದ್ದಾರೆ.

ಈ ದಿನ ಡೆಸ್ಕ್‌
Website | + posts

ಪೋಸ್ಟ್ ಹಂಚಿಕೊಳ್ಳಿ:

LEAVE A REPLY

Please enter your comment!
Please enter your name here

ಪೋಸ್ಟ್ ಹಂಚಿಕೊಳ್ಳಿ:

ಹೆಚ್ಚು ಓದಿಸಿಕೊಂಡ ಲೇಖನಗಳು

ವಿಡಿಯೋ

ಸುದ್ದಿ ನಿರಂತರವಾಗಿ ಉಚಿತವೇ ಆಗಿರುವುದು ಹೇಗೆ ಸಾಧ್ಯ? ಅದಕ್ಕೆ ನಿಮ್ಮ ಬೆಂಬಲವೂ ನಿರಂತರವಾಗಿ ಇದ್ದಾಗ ಮಾತ್ರ ಸಾಧ್ಯ. ಚಂದಾದಾರರಾಗಿ – ಆ ಮೂಲಕ ಸತ್ಯ, ನ್ಯಾಯ, ಪ್ರೀತಿ ಮೌಲ್ಯಗಳನ್ನು ಎಲ್ಲರಿಗೂ ಹರಡಲು ಜೊತೆಯಾಗಿ.
Related

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ಸಿಎಎ ರದ್ದಾಗದಿದ್ದರೆ ಬೃಹತ್ ಹೋರಾಟ; ಅಸ್ಸಾಂ ವಿಪಕ್ಷಗಳ ಎಚ್ಚರಿಕೆ

ವಿವಾದಾತ್ಮಕ ಪೌರತ್ವ ತಿದ್ದುಪಡಿ ಕಾಯ್ದೆಯನ್ನು (ಸಿಎಎ) ಅನುಷ್ಠಾನಗೊಳಿಸದಂತೆ ಅಸ್ಸಾಂನ 16 ಪಕ್ಷಗಳ...

ರಾಮೇಶ್ವರ ಕೆಫೆ ಬಾಂಬ್ ಪ್ರಕರಣ | ಅಗತ್ಯ ಬಿದ್ದರೆ ತನಿಖೆ ಎನ್‌ಐಎಗೆ ವಹಿಸುತ್ತೇವೆ: ಸಿಎಂ ಸಿದ್ದರಾಮಯ್ಯ

"ರಾಮೇಶ್ವರ ಕೆಫೆ ಬಾಂಬ್ ಸ್ಫೋಟ ಪ್ರಕರಣವನ್ನು ಎನ್‌ಐಎಗೆ ವಹಿಸುವ ಬಗ್ಗೆ ಅಗತ್ಯ...

ಮೋದಿಯ ‘ದ್ರೋಹದ ಗ್ಯಾರಂಟಿ’; ರೈಲ್ವೆ ಪಾಲಿಸಿ ವಿರುದ್ಧ ರಾಹುಲ್ ಕಿಡಿ

ಕೇಂದ್ರ ರೈಲ್ವೆ ಸಚಿವಾಲಯವು ಹಿರಿಯ ನಾಗರಿಕರಿಗಿದ್ದ ವಿನಾಯತಿಯನ್ನೂ ಕಿತ್ತುಕೊಂಡು 3,700 ಕೋಟಿ...

ಪೋಲಿಯೊ ನಿರ್ಮೂಲನೆ ಸ್ಥಿತಿಯನ್ನು ಕಾಯ್ದುಕೊಳ್ಳುವುದು ಮುಖ್ಯ: ಆರೋಗ್ಯ ಸಚಿವ ದಿನೇಶ್ ಗುಂಡೂರಾವ್

ಭಾರತ ಪೋಲಿಯೊ ಮುಕ್ತ ರಾಷ್ಟ್ರವಾಗಿದ್ದನ್ನ ನಾವು ಮುಂದಿನ ದಿನಗಳಲ್ಲೂ ಕಾಯ್ದುಕೊಳ್ಳುವುದು ಮುಖ್ಯವಾಗಿದೆ....