ಬಿಜೆಪಿ-ಜೆಡಿಎಸ್ ಒಟ್ಟಾಗಿ ಹೋಗಲು ಚರ್ಚೆಯಾಗಿದೆ, ಮೈತ್ರಿಯಲ್ಲಿ ಬಿರುಕು ಇಲ್ಲ: ಕುಮಾರಸ್ವಾಮಿ

Date:

ಜೆಡಿಎಸ್​-ಬಿಜೆಪಿ ನಾಯಕರ ನಡುವೆ ಯಾವುದೇ ವಿಶ್ವಾಸ ಕಡಿಮೆಯಾಗಿಲ್ಲ. ನಮ್ಮ ಶಕ್ತಿ ಬಗ್ಗೆ ಮಾತನಾಡಿದ್ದೇವೆ. ಬಿಜೆಪಿ ಹೈಕಮಾಂಡ್‌ ನಾಯಕರು ನಮ್ಮನ್ನು ತುಂಬಾ ಗೌರವಯುತವಾಗಿ ನೋಡಿಕೊಂಡಿದ್ದಾರೆ ಎಂದು ಮಾಜಿ ಸಿಎಂ ಎಚ್‌ ಡಿ ಕುಮಾರಸ್ವಾಮಿ ಹೇಳಿದರು.

ಮಂಗಳವಾರ ಸುದ್ದಿಗೋಷ್ಠಿ ಕರೆದು ಮಾತನಾಡಿದ ಅವರು, “ಪ್ರಾರಂಭದಿಂದಲೂ ನಾವು ಮೂರು ಕ್ಷೇತ್ರ ಕೇಳಿದ್ದೇವೆ. ನಾವು ಕೇಳಿದ್ದನ್ನು ಕೇಂದ್ರ ಗೃಹ ಸಚಿವ ಅಮಿತ್ ಶಾ ಗೌರವಿಸಿದ್ದಾರೆ. ಸೋಮವಾರದ ಸಭೆಯಲ್ಲಿ 28 ಕ್ಷೇತ್ರದಲ್ಲೂ ಬಿಜೆಪಿ-ಜೆಡಿಎಸ್ ಒಟ್ಟಾಗಿ ಹೋಗಬೇಕು ಅಂತ ಚರ್ಚೆಯಾಗಿದೆ” ಎಂದರು.

ಬಿಜೆಪಿ ಜೊತೆಗಿನ ಮೈತ್ರಿಗೆ ಕಾಂಗ್ರೆಸ್ ಕಾರಣ​

ಸುದ್ದಿ ನಿರಂತರವಾಗಿ ಉಚಿತವೇ ಆಗಿರುವುದು ಹೇಗೆ ಸಾಧ್ಯ? ಅದಕ್ಕೆ ನಿಮ್ಮ ಬೆಂಬಲವೂ ನಿರಂತರವಾಗಿ ಇದ್ದಾಗ ಮಾತ್ರ ಸಾಧ್ಯ. ಚಂದಾದಾರರಾಗಿ – ಆ ಮೂಲಕ ಸತ್ಯ, ನ್ಯಾಯ, ಪ್ರೀತಿ ಮೌಲ್ಯಗಳನ್ನು ಎಲ್ಲರಿಗೂ ಹರಡಲು ಜೊತೆಯಾಗಿ.

“ಮೈತ್ರಿ ಮಾಡಿಕೊಳ್ಳಲು ಮೂಲ ಕಾರಣವೇ ಕಾಂಗ್ರೆಸ್. ಕಾಂಗ್ರೆಸ್​-ಜೆಡಿಎಸ್​ ಮೈತ್ರಿ ಸರ್ಕಾರವನ್ನು ದುರ್ಬಳಕೆ ಮಾಡಿಕೊಂಡಿದ್ದೀರಿ. ಜನ ತಿರಸ್ಕಾರ ಮಾಡಿದಾಗ ನಮ್ಮ ಮನೆ ಬಾಗಿಲಿಗೆ ಬಂದ್ದಿದ್ದು ನೀವು. ಈಗ ಬನ್ನಿ ಕಾಂಗ್ರೆಸ್​ಗೆ ಅಂತ ಡಿ ಕೆ ಶಿವಕುಮಾರ್ ಕರೆಯುತ್ತಿದ್ದಾರೆ” ಎಂದರು.

“ಕಾಂಗ್ರೆಸ್ ಜತೆ ಸರ್ಕಾರ ಮಾಡಿದಾಗ ಪಕ್ಷ ನಾಶಕ್ಕೆ ಹೊರಟಿದ್ದರು. ನಮ್ಮ ಶಾಸಕರಿಗೆ ಬ್ರೈನ್ ವಾಶ್ ಮಾಡಿ ಪಕ್ಷಕ್ಕೆ ಸೇರಿಸಿಕೊಂಡರು. ಹಂತ ಹಂತವಾಗಿ ರಾಜಕೀಯವಾಗಿ ಮುಗಿಸಲು ಪ್ರಯತ್ನ ಮಾಡಿದ್ರಿ. ಯಾವ ರೀತಿ ನಮ್ಮ ಶಕ್ತಿ ಕುಂದಿಸಲು ಯತ್ನಿಸಿದ್ದೀರಿ” ಎಂದು ಗೊತ್ತು ಎಂದು ಡಿಕೆಶಿ ವಿರುದ್ಧ ಹರಿಹಾಯ್ದರು.

ಈ ಸುದ್ದಿ ಓದಿದ್ದೀರಾ? ಬಿಜೆಪಿ-ಜೆಡಿಎಸ್ ಮೈತ್ರಿಯಲ್ಲಿ ಬಿರುಕು; ಜೆಡಿಎಸ್ ನಾಯಕರಿಂದ ಅಸಮಾಧಾನ ಸ್ಪೋಟ!

“ಬಿಜೆಪಿ ಜೊತೆಗಿನ ಮೈತ್ರಿ ಬಗ್ಗೆ ಡಿ ಕೆ ಶಿವಕುಮಾರ್ ಅಯ್ಯೋ ಪಾಪ ಎಂದಿದ್ದಾರೆ. ಕಳೆದ ಲೋಕಸಭೆ ಚುನಾವಣೆಯಲ್ಲಿ ನೀವು ಮಂಡ್ಯದಲ್ಲಿ ಏನೂ ಮಾಡಿದ್ದಿರಾ ಅಂತ ಗೋತ್ತಿದೆ. ಬೆಂಗಳೂರು ಗ್ರಾಮಾಂತರದಲ್ಲಿ ಜಯದೇವ ಮಂಜುನಾಥ್ ಅವರನ್ನು ಕಣಕ್ಕಿಳಿಸಲು ನೀವು ಕಾರಣ” ಎಂದರು.

“ನಮ್ಮ ಕಾರ್ಯಕರ್ತರಿಗೆ ಕಾಂಗ್ರೆಸ್​ಗೆ ಬನ್ನಿ ಎಂದು ಕರೆ ಕೊಡುತ್ತಿರಾ? ನನ್ನ ಕಾರ್ಯಕರ್ತರಿಗೆ ನಿಮ್ಮಿಂದ ರಕ್ಷಣೆ ಪಡೆಯುವ ದುಸ್ಥಿತಿ ಬಂದಿಲ್ಲ. ಪದೇ ಪದೇ ಬಿಜೆಪಿ ಬಿಟೀಮ್ ಎಂದು ಹೇಳಿದ್ರಿ. ಹಂತ ಹಂತವಾಗಿ ನಮ್ಮ ಪಕ್ಷ ಮುಗಿಸಲು ಪ್ರಯತ್ನ ಪಟ್ಟಿದ್ದೀರಿ, ರಾಜಕೀಯವಾಗಿ ನಮಗೆ ವಿಷ ಹಾಕಿದ್ದೀರಿ” ಎಂದು ಆಕ್ರೋಶ ವ್ಯಕ್ತಪಡಿಸಿದರು.

ಈ ದಿನ ಡೆಸ್ಕ್
+ posts

ಪೋಸ್ಟ್ ಹಂಚಿಕೊಳ್ಳಿ:

LEAVE A REPLY

Please enter your comment!
Please enter your name here

ಪೋಸ್ಟ್ ಹಂಚಿಕೊಳ್ಳಿ:

ನಮ್ಮನ್ನು ಬೆಂಬಲಿಸಿ

ಹೆಚ್ಚು ಓದಿಸಿಕೊಂಡ ಲೇಖನಗಳು

ವಿಡಿಯೋ

ಸುದ್ದಿ ನಿರಂತರವಾಗಿ ಉಚಿತವೇ ಆಗಿರುವುದು ಹೇಗೆ ಸಾಧ್ಯ? ಅದಕ್ಕೆ ನಿಮ್ಮ ಬೆಂಬಲವೂ ನಿರಂತರವಾಗಿ ಇದ್ದಾಗ ಮಾತ್ರ ಸಾಧ್ಯ. ಚಂದಾದಾರರಾಗಿ – ಆ ಮೂಲಕ ಸತ್ಯ, ನ್ಯಾಯ, ಪ್ರೀತಿ ಮೌಲ್ಯಗಳನ್ನು ಎಲ್ಲರಿಗೂ ಹರಡಲು ಜೊತೆಯಾಗಿ.
Related

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ವೇದಿಕೆಯಲ್ಲೇ ಮಾಜಿ ರಾಜ್ಯಪಾಲೆ ತಮಿಳ್‌ಸೈಗೆ ಎಚ್ಚರಿಕೆ ನೀಡಿದ ಅಮಿತ್ ಶಾ: ವಿಡಿಯೋ ವೈರಲ್

ಆಂಧ್ರ ಪ್ರದೇಶದ ಮುಖ್ಯಮಂತ್ರಿಯಾಗಿ ಎನ್ ಚಂದ್ರಬಾಬು ನಾಯ್ಡು ಅವರು ಪ್ರಮಾಣ ವಚನ...

ಜೂನ್ 15, 16ರಂದು ಬೆಂಗಳೂರಿನಲ್ಲಿ ‘ದಕ್ಷಿಣ ಭಾರತ ಉತ್ಸವ’: ಸಚಿವ ಡಾ. ಎಚ್ ಕೆ ಪಾಟೀಲ್

ದಕ್ಷಿಣ ಭಾರತದ ರಾಜ್ಯಗಳ ಪ್ರವಾಸೋದ್ಯಮ ಕ್ಷೇತ್ರದಲ್ಲಿ ಹೂಡಿಕೆಯ ಅವಕಾಶ, ಉದ್ಯೋಗ ಸೃಷ್ಟಿಗೆ...

ಮಹಿಳೆಯರ ಕೊಲೆ | ಪೊಲೀಸರ ತನಿಖೆಯಲ್ಲೇ ಲೋಪವಿದೆ: ಬಾಲನ್‌

"ಇತ್ತೀಚೆಗೆ ಹೆಚ್ಚು ಹೆಣ್ಣುಮಕ್ಕಳ ಕೊಲೆಗಳಾಗುತ್ತಿದೆ. ಕೋರ್ಟ್‌ನಲ್ಲೂ ಹಲವು ಪ್ರಕರಣಗಳು ಬಾಕಿ ಇವೆ....

ನೀಟ್ ಅಕ್ರಮ | ಹಣಕ್ಕಾಗಿ ಬದ್ಧತೆ ಮರೆತವಾ ಮಾಧ್ಯಮಗಳು?

ಸದ್ಯ ದೇಶಾದ್ಯಂತ ನೀಟ್-ಯುಜಿ ವೈದ್ಯಕೀಯ ಪ್ರವೇಶ ಪರೀಕ್ಷೆ ದೊಡ್ಡ ಚರ್ಚೆಯಾಗಿದೆ. ವೈದ್ಯಕೀಯ...