ಅಬಕಾರಿ ನೀತಿ ಪ್ರಕರಣ: 5ನೇ ಬಾರಿಯೂ ವಿಚಾರಣೆಗೆ ಹಾಜರಾಗದ ಕೇಜ್ರಿವಾಲ್; ಹೈಕೋರ್ಟ್‌ ಮೊರೆ ಹೋದ ಇಡಿ

Date:

ಅಬಕಾರಿ ನೀತಿ ಪ್ರಕರಣದಲ್ಲಿ ವಿಚಾರಣೆಗೆ ಹಾಜರಾಗುವಂತೆ ದೆಹಲಿ ಮುಖ್ಯಮಂತ್ರಿ ಅರವಿಂದ ಕೇಜ್ರಿವಾಲ್ ಅವರಿಗೆ ಇಡಿ 5ನೇ ಬಾರಿಗೆ ಸಮನ್ಸ್‌ ಜಾರಿ ಮಾಡಿತ್ತು. ಆದರೆ, ಕೇಜ್ರಿವಾಲ್ ಅವರು ಇಡಿ ಕಚೇರಿಗೆ ಹಾಜರಾಗಲು ನಿರಾಕರಿಸಿದ್ದಾರೆ. ಹೀಗಾಗಿ, ಕಂಗೆಟ್ಟಿರುವ ಇಡಿ ಕೇಜ್ರಿವಾಲ್ ವಿರುದ್ಧ ದೆಹಲಿ ಹೈಕೋರ್ಟ್‌ ಮೊರೆಹೋಗಿದೆ. ಹೈಕೋರ್ಟ್‌ನಲ್ಲಿ ದೂರು ದಾಖಲಿಸಿದೆ.

ಇಡಿ ದಾಖಲಿಸಿರುವ ದೂರಿನ ವಿಚಾರಣೆಯಲ್ಲಿ ಫೆಬ್ರವರಿ 7ರಂದು ಹೆಚ್ಚುವರಿ ಮುಖ್ಯ ಮೆಟ್ರೋಪಾಲಿಟನ್ ಮ್ಯಾಜಿಸ್ಟ್ರೇಲ್‌ ದಿವ್ಯಾ ಮಲ್ಹೋತ್ರಾ ಅವರು ವಿಚಾರಣೆ ನಡೆಸಲಿದ್ದಾರೆ. ಅವರ ಮುಂದೆ ಇಡಿ ತನ್ನ ಪ್ರಸ್ತಾಪಗಳನ್ನು ಸಲ್ಲಿಸಿದೆ ಎಂಧು ವರದಿಯಾಗಿದೆ.

ಎಎಪಿ ಸರ್ಕಾರ ರದ್ದುಪಡಿಸಿರುವ ಅಬಕಾರಿ ನೀತಿಗೆ ಸಂಬಂಧಿಸಿದ ಪ್ರಕರಣದಲ್ಲಿ ಕೇಜ್ರಿವಾಲ್ ಅವರನ್ನು ವಿಚಾರಣೆ ಒಳಪಡಿಸಲು ಇಡಿ ಪ್ರಯತ್ನಿಸುತ್ತಿದೆ. ಆದರೆ, ಇಡಿ ನೀಡುತ್ತಿರುವ ಸಮನ್ಸ್‌ಅನ್ನು ಕೇಜ್ರಿವಾಲ್ ‘ಅಕ್ರಮ’ವೆಂದು ಕರೆದಿದ್ದಾರೆ. ಪ್ರಕರಣದಲ್ಲಿ ತನ್ನನ್ನು ಆರೋಪಿಯೆಂದು ಹೆಸರಿಸಿಲ್ಲ ಎಂದು ಸಮನ್ಸ್‌ಅನ್ನು ನಿರಾಕರಿಸಿದ್ದಾರೆ.

ಸುದ್ದಿ ನಿರಂತರವಾಗಿ ಉಚಿತವೇ ಆಗಿರುವುದು ಹೇಗೆ ಸಾಧ್ಯ? ಅದಕ್ಕೆ ನಿಮ್ಮ ಬೆಂಬಲವೂ ನಿರಂತರವಾಗಿ ಇದ್ದಾಗ ಮಾತ್ರ ಸಾಧ್ಯ. ಚಂದಾದಾರರಾಗಿ – ಆ ಮೂಲಕ ಸತ್ಯ, ನ್ಯಾಯ, ಪ್ರೀತಿ ಮೌಲ್ಯಗಳನ್ನು ಎಲ್ಲರಿಗೂ ಹರಡಲು ಜೊತೆಯಾಗಿ.

ಮೂವರು ಹಿರಿಯ ಎಎಪಿ ನಾಯಕರನ್ನು – ಮಾಜಿ ಉಪಮುಖ್ಯಮಂತ್ರಿ ಮನೀಶ್ ಸಿಸೋಡಿಯಾ, ರಾಜ್ಯಸಭಾ ಸಂಸದ ಸಂಜಯ್ ಸಿಂಗ್ ಮತ್ತು ಎಎಪಿ ಸಂವಹನ ಉಸ್ತುವಾರಿ ವಿಜಯ್ ನಾಯರ್ – ಅಬಕಾರಿ ನೀತಿ ಪ್ರಕರಣದಲ್ಲಿ ಈಗಲಾಗಲೇ ಇಡಿ ಬಂಧಿಸಿದೆ.

ಸಿಸೋಡಿಯಾ (ಫೆಬ್ರವರಿ 26, 2023) ಮತ್ತು ಸಿಂಗ್ (ಅಕ್ಟೋಬರ್ 4, 2023) ಇಬ್ಬರನ್ನೂ ವಿಚಾರಣೆ ಒಳಪಡಿಸಿದ ಇಡಿ, ಅದೇ ದಿನ ಬಂಧಿಸಿದೆ. ಈಗ ಕೇಜ್ರಿವಾಲ್ ಅವರನ್ನು ವಿಚಾರಣೆಗೆ ಕರೆಸಿ ಬಂಧಿಸಲು ಇಡಿ ಯತ್ನಿಸುತ್ತಿದೆ ಎಂಧು ಎಎಪಿ ಈ ಹಿಂದೆಯೇ ಆರೋಪಿಸಿತ್ತು.

“ಕೇಜ್ರಿವಾಲ್ ಅವರನ್ನು ಬಂಧಿಸಿ ದೆಹಲಿ ಸರ್ಕಾರವನ್ನು ಉರುಳಿಸುವುದು ಪ್ರಧಾನಿ ನರೇಂದ್ರ ಮೋದಿ ಅವರ ಉದ್ದೇಶವಾಗಿದೆ. ಇಡಿ ಯಾವ ಉದ್ದೇಶವಿಟ್ಟುಕೊಂಡು ಕೇಜ್ರಿವಾಲ್‌ಗೆ ಸಮನ್ಸ್‌ ನೀಡುತ್ತಿದೆ” ಎಂದೂ ಎಎಪಿ ಪ್ರಶ್ನಿಸಿದೆ.

ನವೆಂಬರ್ 2 ರಂದು ವಿಚಾರಣೆಗೆ ಹಾಜರಾಗಬೇಕೆಂದು 2023ರ ಅಕ್ಟೋಬರ್‌ನಲ್ಲಿ ಇಡಿ ಮೊದಲ ಬಾರಿಗೆ ಕೇಜ್ರಿವಾಲ್‌ ಅವರಿಗೆ ಸಮನ್ಸ್‌ ನೀಡಿತ್ತು. ದೆಹಲಿ ಆಡಳಿತ-ಸಂಬಂಧಿತ ಕೆಲಸಗಳನ್ನು ಹಾಗೂ ಮಧ್ಯಪ್ರದೇಶ ಮತ್ತು ಛತ್ತೀಸ್‌ಗಢದ ವಿಧಾನಸಭಾ ಚುನಾವಣೆಯಲ್ಲಿ ಪಕ್ಷದ ಪ್ರಚಾರಗಳನ್ನು ಉಲ್ಲೇಖಿಸಿ ಕೇಜ್ರಿವಾಲ್ ಹಾಜರಾಗಲು ನಿರಾಕರಿಸಿದ್ದರು.

ಎರಡನೇ ಸಮನ್ಸ್‌ ನೀಡಿದಾಗ ವಿಪಸ್ಸನಾ ಅಧಿವೇಶನದಲ್ಲಿ ಪಾಲ್ಗೊಳ್ಳಬೇಕು ಎಂದು ಕೇಜ್ರಿವಾಲ್ ಹೇಳಿದ್ದರು. ರಾಜ್ಯಸಭಾ ಚುನಾವಣೆ, ಗಣರಾಜ್ಯೋತ್ಸವ ಹಾಗೂ ಇಡಿಯ ಧೋರಣಾತ್ಮಕ ವಿಧಾನಗಳನ್ನು ಉಲ್ಲೇಖಿಸಿ ಮೂರನೇ ಸಮನ್ಸ್‌ಗೆ ಉತ್ತರಿಸಲಿಲ್ಲ.

ಜನವರಿ 18-20ರೊಳಗೆ ವಿಚಾರಣೆ ಹಾಜರಾಗಬೇಕೆಂದು ಇಡಿ ನಾಲ್ಕನೇ ಸಮನ್ಸ್‌ ನೀಡಿತ್ತು. ಆದರೆ, ಅವರು ಪೂರ್ವ ನಿಗದಿತ ಕಾರ್ಯಕ್ರಮದಲ್ಲಿ ಹಾಜರಾಗಲು ಗೋವಾಕ್ಕೆ ತೆರಳಿದ್ದರು.

ಇದೀಗ, ಬುಧವಾರ ಐದನೇ ಸಮನ್ಸ್ ಜಾರಿ ಮಾಡಿದ್ದು, ಶುಕ್ರವಾರ ವಿಚಾರಣೆಗೆ ಹಾಜರಾಗುವಂತೆ ಸೂಚಿಸಿತ್ತು. ಆದರೆ, ಇಡಿ ನೀಡಿರುವ ಸಮನ್ಸ್‌ ಅಕ್ರಮವೆಂದು ವಿಚಾರಣೆಗೆ ಹಾಜರಾಗಲು ಕೇಜ್ರಿವಾಲ್ ನಿರಾಕರಿಸಿದ್ದರು.

ಇಡಿಯ ನಿರಂತರ ಸಮನ್ಸ್‌ ಬಗ್ಗೆ ಪ್ರತಿಕ್ರಿಯಿಸಿರುವ ಎಎಪಿ ರಾಷ್ಟ್ರೀಯ ವಕ್ತಾರ ಪ್ರಿಯಾಂಕಾ ಕಕ್ಕರ್, “ಇಡಿ ತನಿಖೆಯು ‘ರಾಜಕೀಯ ಪ್ರೇರಿತ’ವಾಗಿದೆ. ಈಗ ಇಡಿ ನ್ಯಾಯಾಲಯದ ಮೊರೆ ಹೋಗಿದೆ. ಎಎಪಿ ನ್ಯಾಯಾಲಯದಲ್ಲಿಯೇ ಇದಕ್ಕೆ ಪ್ರತಿಕ್ರಿಯಿಸುತ್ತದೆ” ಎಂದು ಹೇಳಿದ್ದಾರೆ.

ಏತನ್ಮಧ್ಯೆ, ದೆಹಲಿ ಪೊಲೀಸ್ ಕ್ರೈಂ ಬ್ರಾಂಚ್ ಕೂಡ ಕೇಜ್ರಿವಾಲ್ ಅವರಿಗೆ ಸಂಬಂಧವಿಲ್ಲದ ಪ್ರಕರಣದಲ್ಲಿ ಶನಿವಾರ ನೋಟಿಸ್ ನೀಡಿದೆ. ‘ಏಳು ಎಎಪಿ ಶಾಸಕರನ್ನು ಬಿಜೆಪಿ ಬೇಟೆಯಾಡಲು ಪ್ರಯತ್ನಿಸಿದೆ’ ಎಂಬ ಕೇಜ್ರಿವಾಲ್ ಹೇಳಿಕೆಗೆ ಸಂಬಂಧಿಸಿದಂತೆ ಮೂರು ದಿನಗಳಲ್ಲಿ ಉತ್ತರಿಸುವಂತೆ ಕೇಳಿದೆ.

ಪೋಸ್ಟ್ ಹಂಚಿಕೊಳ್ಳಿ:

LEAVE A REPLY

Please enter your comment!
Please enter your name here

ಪೋಸ್ಟ್ ಹಂಚಿಕೊಳ್ಳಿ:

ಹೆಚ್ಚು ಓದಿಸಿಕೊಂಡ ಲೇಖನಗಳು

ವಿಡಿಯೋ

ಸುದ್ದಿ ನಿರಂತರವಾಗಿ ಉಚಿತವೇ ಆಗಿರುವುದು ಹೇಗೆ ಸಾಧ್ಯ? ಅದಕ್ಕೆ ನಿಮ್ಮ ಬೆಂಬಲವೂ ನಿರಂತರವಾಗಿ ಇದ್ದಾಗ ಮಾತ್ರ ಸಾಧ್ಯ. ಚಂದಾದಾರರಾಗಿ – ಆ ಮೂಲಕ ಸತ್ಯ, ನ್ಯಾಯ, ಪ್ರೀತಿ ಮೌಲ್ಯಗಳನ್ನು ಎಲ್ಲರಿಗೂ ಹರಡಲು ಜೊತೆಯಾಗಿ.
Related

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ವಿಪಕ್ಷ ನಾಯಕ ಸ್ಥಾನದಿಂದ ಅಶೋಕ್‌ರನ್ನು ಕೆಳಗಿಳಿಸಿ: ಬಿಜೆಪಿ ರಾಜ್ಯಾಧ್ಯಕ್ಷರಿಗೆ ಬಜರಂಗದಳ ಒತ್ತಾಯ

ಬಜೆಟ್ ಅಧಿವೇಶನದ ವೇಳೆ ಮಾತನಾಡುತ್ತಿದ್ದ ಸಂದರ್ಭದಲ್ಲಿ ವಿಪಕ್ಷ ನಾಯಕ ಆರ್. ಅಶೋಕ್,...

ಪುಲ್ವಾಮ ದುರಂತದ ಬಗ್ಗೆ ಸತ್ಯ ಹೇಳಿದ್ದಕ್ಕೆ ಸತ್ಯಪಾಲ್ ಮಲಿಕ್‌ ಮೇಲೆ ಸಿಬಿಐ ದಾಳಿ: ಸಿಎಂ ಸಿದ್ದರಾಮಯ್ಯ

ಮಾಜಿ ರಾಜ್ಯಪಾಲರು ಮತ್ತು ಬಿಜೆಪಿಯ ಮಾಜಿ ರಾಷ್ಟ್ರೀಯ ಉಪಾಧ್ಯಕ್ಷರಾದ ಸತ್ಯಪಾಲ್ ಮಲಿಕ್...

ಕೃಷ್ಣಾ ನದಿ ಸೇತುವೆ ಕಾಮಗಾರಿ | ಅಂದಾಜು ವೆಚ್ಚ ₹60ರಿಂದ ₹99 ಕೋಟಿಗೆ ಏರಿಕೆ: ಡಿಕೆ ಶಿವಕುಮಾರ್

"ಜಮಖಂಡಿ ಮತ್ತು ಅಥಣಿ ನಡುವೆ ಕೃಷ್ಣಾ ನದಿಯ ಸೇತುವೆ ನಿರ್ಮಾಣದ ಯೋಜನೆಯ...