ಹೊಸ ಮನೆ, ಮನೆ ಶಿಫ್ಟ್ ಮಾಡಿದವರಿಗೂ ಗೃಹಜ್ಯೋತಿ ಸಿಗಲಿದೆ: ಸಚಿವ ಜಾರ್ಜ್

Date:

  • ಮನೆ ಅಗ್ರಿಮೆಂಟ್ ಪತ್ರ, ಅಡ್ರೆಸ್ ಇರುವ ಯಾವುದಾದರೂ ಐಡಿಗೂ ಫ್ರೀ ಕರೆಂಟ್
  • ಸೋಮವಾರ ಇಂಧನ ಇಲಾಖೆ ಸಭೆ ನಡೆಸಿ ಯೋಜನೆ ಜಾರಿ ಸ್ಪಷ್ಟ ಚಿತ್ರಣ ಒದಗಿಸುತ್ತೇವೆ

ಹೊಸ ಮನೆಗಳು ಹಾಗೂ ಮನೆ ಶಿಫ್ಟ್ ಮಾಡಿದವರಿಗೂ ಉಚಿತ ವಿದ್ಯುತ್ ನೀಡಲಾಗುತ್ತದೆ ಎಂದು ಇಂಧನ ಸಚಿವ ಕೆ.ಜೆ ಜಾರ್ಜ್ ತಿಳಿಸಿದ್ದಾರೆ.

ಇಂದು ಬೆಂಗಳೂರಿನಲ್ಲಿ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ಗೃಹಜ್ಯೋತಿ ಯೋಜನೆ ಲಾಭ ಪಡೆಯುವ ವಿಚಾರದಲ್ಲಿ ಗೊಂದಲಗಳಿಗೆ ಸ್ಪಷ್ಟನೆ ನೀಡಿದ್ದಾರೆ.

ಬಾಡಿಗೆ ಮನೆಯವರನ್ನೂ ಒಳಗೊಂಡಂತೆ ಹಲವರಿಗೆ ಉಚಿತ ವಿದ್ಯುತ್ ದೊರೆಯುತ್ತದೋ ಇಲ್ಲವೋ ಎನ್ನುವ ಅನುಮಾನಗಳಿವೆ, ಎಲ್ಲ ಅನುಮಾನಗಳಿಗೂ ಸೋಮವಾರ ಇಂಧನ ಇಲಾಖೆ ಸಭೆ ನಡೆಸಿ ಸ್ಪಷ್ಟ ಚಿತ್ರಣ ಕೊಡುತ್ತೇವೆ ಎಂದರು.

ಹೊಸ ಮನೆಗಳು ಹಾಗೂ ಮನೆ ಶಿಫ್ಟ್ ಮಾಡಿದವರಿಗೂ ಉಚಿತ ವಿದ್ಯುತ್ ನೀಡಲಾಗುತ್ತದೆ. ಆರ್.ಆರ್ ನಂಬರ್ ಗೆ ವೋಟರ್ ಲಿಂಕ್ ಆಗಿದ್ರೆ ಸಾಕು. ಉಚಿತ ವಿದ್ಯುತ್ ನೀಡಲಾಗುತ್ತದೆ. ಮನೆ ಅಗ್ರಿಮೆಂಟ್ ಪತ್ರ ಇದ್ರೂ ಫ್ರಿ ವಿದ್ಯುತ್ ನೀಡುತ್ತೇವೆ. ಅಡ್ರೆಸ್ ಇರುವ ಯಾವುದಾದರೂ ಐಡಿ ಕೊಟ್ಟರೆ ಸಾಕು ಎಂದು ಹೇಳಿದರು.

ಈ ಸುದ್ದಿ ಓದಿದ್ದೀರಾ?:‘ಕರ್ನಾಟಕ’ ನಾಮಕರಣಕ್ಕೆ 50ರ ಸಂಭ್ರಮ | ವರ್ಷವಿಡಿ ವಿಶೇಷ ಕಾರ್ಯಕ್ರಮ: ಸಚಿವ ಶಿವರಾಜ್ ತಂಗಡಗಿ

ಆಗಸ್ 1 ರಿಂದ ಗೃಹಜ್ಯೋತಿ ಯೋಜನೆ ಜಾರಿಯಾಗಲಿದೆ. ಜೂನ್ ತಿಂಗಳ ಬಿಲ್ ಮಾತ್ರ ಕಟ್ಟಬೇಕು. ಕಲಬುರಗಿಯಲ್ಲಿ ಯೋಜನೆಗೆ ಚಾಲನೆ ನೀಡುವ ಸಾಧ್ಯತೆ ಇದೆ. ಜನರಿಗೆ ಯೋಜನೆ ಸರಳವಾಗಿ ತಲುಪಿಸುವ ವ್ಯವಸ್ಥೆ ಮಾಡುತ್ತೇವೆ ಎಂದು ಜಾರ್ಜ್ ಹೇಳಿದರು.

ಪೋಸ್ಟ್ ಹಂಚಿಕೊಳ್ಳಿ:

LEAVE A REPLY

Please enter your comment!
Please enter your name here

ಪೋಸ್ಟ್ ಹಂಚಿಕೊಳ್ಳಿ:

ಹೆಚ್ಚು ಓದಿಸಿಕೊಂಡ ಲೇಖನಗಳು

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ಮಹಿಳಾ ಮೀಸಲಾತಿ ಮಸೂದೆಗೆ ರಾಷ್ಟ್ರಪತಿ ಅಂಕಿತ

ಲೋಕಸಭೆ ಹಾಗೂ ರಾಜ್ಯಸಭೆಯಲ್ಲಿ ಅಂಗೀಕಾರಗೊಂಡಿದ್ದ ಮಹಿಳಾ ಮೀಸಲಾತಿ ಮಸೂದೆಗೆ ರಾಷ್ಟ್ರಪತಿ ದ್ರೌಪದಿ...

ಕರ್ನಾಟಕಕ್ಕೆ ನೀಡಲು ‘ಇಲ್ಲ’ ಎಂದಿದ್ದ ‘ಅಕ್ಕಿ’ ಸಿಂಗಾಪುರಕ್ಕೆ ರಫ್ತು ಮಾಡಲು ಹೊರಟ ಕೇಂದ್ರ ಸರ್ಕಾರ!

ಕರ್ನಾಟಕ ಸರ್ಕಾರವು ಅನ್ನಭಾಗ್ಯ ಯೋಜನೆಗೆ ಹೆಚ್ಚುವರಿ ಅಕ್ಕಿ ನೀಡುವಂತೆ ಕೇಳಿದಾಗ 'ನಿಮಗೆ...

ಬೆಳಗಾವಿ | ಆಪರೇಷನ್ ಹಸ್ತದ ಬಗ್ಗೆ ಲಕ್ಷ್ಮಣ್ ಸವದಿ ಮಾರ್ಮಿಕ ಹೇಳಿಕೆ

ಬಹಳಷ್ಟು ಮಂದಿ ಜೆಡಿಎಸ್‌-ಬಿಜೆಪಿ ತೊರೆದು ಕಾಂಗ್ರೆಸ್‌ಗೆ ಬರುಲು ಸಿದ್ದರಾಗಿದ್ದಾರೆ. ಎಲ್ಲದಕ್ಕೂ ಕಾಲ...

ಕಟುಕ, ಕಟಿಕ ಸಮಾಜವನ್ನು ಪರಿಶಿಷ್ಟ ಜಾತಿಗೆ ಸೇರ್ಪಡೆ ಮಾಡಲು ಸಿಎಂಗೆ ಮನವಿ

ರಾಜ್ಯ ಕಟಿಕ ಸಮಾಜದ ನಿಯೋಗವು ಶುಕ್ರವಾರ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರನ್ನು ಭೇಟಿಯಾಗಿ...