“ಕಷ್ಟಪಟ್ಟು ಹೋರಾಡಿ ಗಳಿಸಿಕೊಂಡ ನ್ಯಾಯವನ್ನೇ ಕಳೆದುಕೊಳ್ಳುತ್ತಿರುವಂತೆ ಭಾಸವಾಗುತ್ತಿದೆ” : ಬಿಲ್ಕಿಸ್‌ ಬಾನು

Date:

2002ರ ಗುಜರಾತ್‌ ಗಲಭೆಯ ಸಂದರ್ಭದಲ್ಲಿ ತನ್ನ ಮೇಲೆ ಸಾಮೂಹಿಕ ಅತ್ಯಾಚಾರ ಎಸಗಿ, ಕುಟುಂಬದ ಏಳು ಸದಸ್ಯರನ್ನು ಹತ್ಯೆಗೈದ ಪ್ರಕರಣದಲ್ಲಿ ಅಪರಾಧಿಗಳ ಜೀವಾವದಿ ಶಿಕ್ಷೆಯನ್ನು ಅಮಾನತುಗೊಳಿಸಿ ಜಾಮೀನು ನೀಡಿರುವ ಸುಪ್ರೀಂ ಕೋರ್ಟ್‌ ಆದೇಶಕ್ಕೆ ಬಿಲ್ಕಿಸ್‌ ಬಾನು ಆಘಾತ ವ್ಯಕ್ತಪಡಿಸಿದ್ದಾರೆ.

- Advertisement -

ತನ್ನ ಅಹವಾಲು ಆಲಿಸದೆಯೇ ಸುಪ್ರೀಂ ಕೋರ್ಟ್‌ ಈ ಆದೇಶ ಹೊರಡಿಸಿದ್ದು ಇದರಿಂದ ನೋವು, ಆಘಾತ ಮತ್ತು ನಂಬಲಾಗದ ಸ್ಥಿತಿಗೆ ನಾನು ಹೋಗಿದ್ದೇನೆ. ತನ್ನ ಅಹವಾಲನ್ನು ಆಲಿಸದೆಯೇ ಸುಪ್ರೀಂ ಕೋರ್ಟ್‌ ಈ ಆದೇಶ ಹೊರಡಿಸಿದ್ದು, ಈ ವಿಷಯವನ್ನು ಪತ್ರಿಕಾ ವರದಿಗಳ ಮೂಲಕ ತಿಳಿದುಕೊಂಡಿದ್ದಾಗಿ ಮಾಧ್ಯಮಗಳಿಗೆ ಬಿಡುಗಡೆ ಮಾಡಿದ ಹೇಳಿಕೆಯಲ್ಲಿ ತಿಳಿಸಿದ್ದಾರೆ.

ಇನ್ನಷ್ಟು ವಿಶೇಷ ಲೇಖನಗಳಿಗಾಗಿ, ಇಲ್ಲಿ ಕ್ಲಿಕ್ ಮಾಡಿ →

ಸಾಮಾಜಿಕ ಜಾಲತಾಣದಲ್ಲಿ Belonging ಆತ್ಮಕಥನ ಬಿಡುಗಡೆ ಸಮಾರಂಭದ ಪಟಗಳದೇ...

ಒಬ್ಬ ತಾಯಿಯ ಬದುಕಿನ ಪುಟಗಳು ಪುಸ್ತಕವಾಗಿ ಹೊರಬಂದ ದಿನ, ಮಕ್ಕಳ ಕಣ್ಣಲ್ಲಿ ಹೆಮ್ಮೆ ಮತ್ತು ವಾತ್ಸಲ್ಯ ಒಟ್ಟಿಗೆ ತುಂಬಿಕೊಂಡಿತ್ತು. ತಾಯಿಯ ಮಾತುಗಳನ್ನು ತದೇಕಚಿತ್ತದಿಂದ ಆಲಿಸುತ್ತಿದ್ದ ರಾಹುಲ್ ಗಾಂಧಿ, ತನ್ನ ಬದುಕಿನ ಅಮೋಘ ಕ್ಷಣಗಳನ್ನು...

ತಂಬೂರಿಯ ನಾದದಲ್ಲಿ ಜೀವಂತ ಮಂಟೇಸ್ವಾಮಿ ಪರಂಪರೆ: ಶಿಷ್ಯರು, ಮಹಿಳಾ...

ಧರೆಗೆ ದೊಡ್ಡವರ ತತ್ವ, ಶಿಷ್ಯರ ಸಾಮಾಜಿಕ ಕೊಡುಗೆ, ಜನಪದ ಜ್ಞಾನದ ಉಳಿವು ಮತ್ತು ಮುಂದಿನ ಪೀಳಿಗೆಯ ಜವಾಬ್ದಾರಿ. ಒಂದು ಪರಂಪರೆಯ ಮಹತ್ವವನ್ನು ಅದರ ಸ್ಥಾಪಕನ ಜೀವನದಿಂದ ಮಾತ್ರ ಅಳೆಯಲಾಗದು. ಆ ಪರಂಪರೆಯ ವಿಚಾರಗಳನ್ನು...

ಸಿಜೆಐ ವಿರುದ್ಧ ವಕೀಲರ ಆಕ್ರೋಶ: ನ್ಯಾಯಾಂಗದ ಘನತೆಗೆ ಧಕ್ಕೆ...

ಸುಪ್ರೀಂ ಕೋರ್ಟ್ ಮುಖ್ಯ ನ್ಯಾಯಮೂರ್ತಿ ಸೂರ್ಯಕಾಂತ್ ವಿರುದ್ಧ ನ್ಯಾಯಾಲಯದಲ್ಲೇ ವಕೀಲರೊಬ್ಬರು ಆಕ್ರೋಶ ವ್ಯಕ್ತಪಡಿಸಿದ್ದಾರೆ. ಈ ಘಟನೆ ನ್ಯಾಯಾಂಗದ ಘನತೆ, ನ್ಯಾಯಾಧೀಶರ ನಿಷ್ಪಕ್ಷಪಾತತೆ ಹಾಗೂ ಜನಸಾಮಾನ್ಯರಿಗೆ ನ್ಯಾಯಾಂಗದ ಮೇಲಿರುವ ವಿಶ್ವಾಸದ ಕುರಿತು ಮಹತ್ವದ ಚರ್ಚೆಗೆ...

ಘಟನೆ ನಡೆದಾಗ ನನ್ನ ವಯಸ್ಸು ಕೇವಲ 19 ವರ್ಷವಾಗಿತ್ತು. ಲಕ್ಷಾಂತರ ಜನರ ಬೆಂಬಲದೊಂದಿಗೆ ಕಳೆದ 24 ವರ್ಷಗಳಿಂದ ನನಗಾಗಿ ಹಾಗೂ ನನ್ನಂತೆ ನೋವನ್ನು ಅನುಭವಿಸಿರುವ ಮಹಿಳೆಯರಿಗಾಗಿ ನ್ಯಾಯ ಪಡೆಯಲು ಹೋರಾಡುತ್ತಲೇ ಬಂದಿದ್ದೇನೆ.

ನ್ಯಾಯಮೂರ್ತಿಗಳಾದ ಎಂ.ಎಂ. ಸುಂದರೇಶ್‌ ಮತ್ತು ಪಿ.ಬಿ. ವರಾಳೆ ಅವರನ್ನೊಳಗೊಂಡ ಸುಪ್ರೀಂ ಕೋರ್ಟ್‌ ಪೀಠವು ಬಿಪಿನ್‌ ಚಂದ್ರ ಜೋಶಿ ಮತ್ತು ಪ್ರದೀಪ್‌ ಮೋರ್ಡಿಯಾ ಎಂಬ ಇಬ್ಬರು ಅಪರಾಧಿಗಳಿಗೆ 17 ವರ್ಷಗಳಿಗೂ ಹೆಚ್ಚು ಕಾಲ ಜೈಲಿನಲ್ಲಿರುವುದನ್ನು ಪರಿಗಣಿಸಿ ಜಾಮೀನು ಮಂಜೂರು ಮಾಡಿದೆ

ಮೇಲ್ಮನವಿದಾರರಲ್ಲಿ ಒಬ್ಬರು ತೀವ್ರ ಅಂಗವೈಕಲ್ಯದಿಂದ ಬಳಲುತ್ತಿದ್ದಾರೆ. ಈ ಮೇಲ್ಮನವಿಯಲ್ಲಿ ವಾಸ್ತವಾಂಶ ಮತ್ತು ಕಾನೂನು ಎರಡಕ್ಕೂ ಸಂಬಂಧಿಸಿದಂತೆ ನಿರ್ಧರಿಸಬೇಕಾದ ಹಲವು ವಿಚಾರಗಳಿವೆ” ಎಂದು ಸುಪ್ರೀಂ ಕೋರ್ಟ್‌ ಅಕ್ಟೋಬರ್‌ 28ರಂದು ಹೊರಡಿಸಿದ ಆದೇಶದಲ್ಲಿ ತಿಳಿಸಿದೆ. ಈ ಆದೇಶವನ್ನು ಇದೀಗ ಸಾರ್ವಜನಿಕವಾಗಿ ಪ್ರಕಟಿಸಲಾಗಿದೆ.

ನ್ಯಾಯಕ್ಕಾಗಿ ನಾನು ಹಲವಾರು ನ್ಯಾಯಾಲಯಗಳ ಮೆಟ್ಟಿಲೇರಿದ್ದೇನೆ. ಪ್ರತಿ ಬಾರಿ ನ್ಯಾಯ ಸಿಕ್ಕಾಗ ನ್ಯಾಯಾಂಗದ ಮೇಲಿನ ನಂಬಿಕೆ ಮರುಸ್ಥಾಪನೆಯಾಗಿ ಕೃತಜ್ಞಳಾಗಿದ್ದೇನೆ. ಕುಟುಂಬ ಮತ್ತು ಸ್ನೇಹಿತರ ಪ್ರೀತಿಯ ನೆರವಿನಿಂದ ನನ್ನ ಬದುಕಿನ ಅವಶೇಷಗಳಿಂದ ಮತ್ತೆ ಜೀವನ ಕಟ್ಟಿಕೊಂಡಿದ್ದೇನೆ. ನೆಮ್ಮದಿಗಾಗಿ ಹಂಬಲಿಸಿದ್ದೇನೆ. ಮತ್ತೆ ನಗುವುದನ್ನು ಕಲಿತಿದ್ದೇನೆ.

ಆದರೆ, ಇಂದು ನಾನು ಕಷ್ಟಪಟ್ಟು ಹೋರಾಡಿ ಗಳಿಸಿಕೊಂಡ ನ್ಯಾಯವನ್ನೇ ಕಳೆದುಕೊಳ್ಳುತ್ತಿರುವಂತೆ ಭಾಸವಾಗುತ್ತಿದೆ. ಹಿಂದಿನ ಭಯಗಳು ಮತ್ತೆ ಕಾಡಲಾರಂಭಿಸಿವೆ. ನ್ಯಾಯದ ಮೇಲಿನ ನಂಬಿಕೆಯನ್ನು ಮತ್ತೊಮ್ಮೆ ಕಳೆದುಕೊಳ್ಳುವ ಆತಂಕವೂ ನನ್ನನ್ನು ಕಾಡುತ್ತಿದೆ.

ಅನ್ಯಾಯ ಎಸಗಿದ ವ್ಯಕ್ತಿಗಳ ಶಿಕ್ಷೆಯನ್ನು ಸುಪ್ರೀಂ ಕೋರ್ಟ್‌ ಸುಮ್ಮನೆ ಅಮಾನತುಗಳಿಸಲು ಹೇಗೆ ಸಾಧ್ಯ? ಈ ಬಗ್ಗೆ ಮಾಹಿತಿಯನ್ನೂ ನೀಡದೆ ನನ್ನ ಧ್ವನಿ ಕೇಳುವಂತೆ ನೋಡಿಕೊಳ್ಳದಿರುವುದು ಹೇಗೆ? ಎಂದು ಪ್ರಶ್ನಿಸಿದ್ದಾರೆ.

ಬದುಕುವ ಹಕ್ಕನ್ನು ಹೊಂದಿದ್ದ ನನ್ನ ಮೂರು ವರ್ಷದ ಪುಟ್ಟ ಮಗಳು ಸಲೇಹಾಗಾಗಿ ನಾನು ಈ ಹೋರಾಟ ಮಾಡುತ್ತಿದ್ದೇನೆ. ತನ್ನ ಮಕ್ಕಳು ಜೀವನದುದ್ದಕ್ಕೂ ಭಯ ಮತ್ತು ನೋವಿನ ಗಾಯಗಳೊಂದಿಗೆ ಬದುಕುವ ಪರಿಸ್ಥಿತಿ ಬರಬಾರದು. ಹೀಗಾಗಿ ಈ ಆದೇಶದ ವಿರುದ್ಧ ತಾನು ಹೋರಾಟ ಮುಂದುವರಿಸುವುದಾಗಿ ಹೇಳಿದ ಬಿಲ್ಕಿಸ್‌ ಬಾನು, ಎಲ್ಲ ಮಹಿಳೆಯರಿಗಾಗಿ ನಾನು ಹೋರಾಡುತ್ತಿದ್ದೇನೆ. ಏಕೆಂದರೆ, ಯಾವುದೇ ಮಹಿಳೆಗೂ ನ್ಯಾಯಕ್ಕಾಗಿ ಬದುಕಿನ ಕೊನೆಯವರೆಗೂ ಹೋರಾಡುವ ಅನಿವಾರ್ಯತೆ ಬರಬಾರದು ಎಂದು ಹೇಳಿದ್ದಾರೆ.

eedina
ಈ ದಿನ ಡೆಸ್ಕ್‌
Website | + posts

<p><iframe src="https://www.youtube.com/embed/8qwx4L0lKFQ?autoplay=1&mute=1&loop=1&playlist=8qwx4L0lKFQ&controls=0&modestbranding=1&showinfo=0" width="560" height="315" frameborder="0" allowfullscreen="allowfullscreen"></iframe></p>

ಪೋಸ್ಟ್ ಹಂಚಿಕೊಳ್ಳಿ:

ಪೋಸ್ಟ್ ಹಂಚಿಕೊಳ್ಳಿ:

ಈ ಹೊತ್ತಿನ ಪ್ರಮುಖ ಸುದ್ದಿ

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ಕ್ಯಾಪ್ಟನ್‌ ಅಮರಿಂದರ್‌ ಸಿಂಗ್‌ ಕಾಂಗ್ರೆಸ್‌ಗೆ ಮರಳುವುದಿಲ್ಲ: ಚರಣ್‌ಜಿತ್‌ ಸಿಂಗ್‌ ಚನ್ನಿ

ಪಂಜಾಬ್‌ ಮಾಜಿ ಮುಖ್ಯಮಂತ್ರಿ ಕ್ಯಾಪ್ಟನ್‌ ಅಮರಿಂದರ್‌ ಸಿಂಗ್‌ ಅವರ ವಿರುದ್ಧ ಹಲವಾರು...

ವಿಜಯಪುರ |ಜೀವನಶೈಲಿ ಬದಲಾವಣೆಯಿಂದ ಮಧುಮೇಹ ಹೆಚ್ಚಳ;ಡಾ. ತೇಜಶ್ವಿನಿ ವಲ್ಲಭ

ಬದಲಾಗುತ್ತಿರುವ ಜೀವನಶೈಲಿಯಿಂದ ದೇಶದಲ್ಲಿ ಮಧುಮೇಹಿಗಳ ಸಂಖ್ಯೆ ಹೆಚ್ಚುತ್ತಿದ್ದು, ಕಾಯಿಲೆ ಬಂದ ನಂತರ...

ಸರ್ಕಾರಿ ಉದ್ಯೋಗ ಪರೀಕ್ಷೆಗೆ ಇನ್ನು ಶುಲ್ಕವಿಲ್ಲ: ಬಂಗಾಳ ಸಿಎಂ ಸುವೇಂದು ಅಧಿಕಾರಿ ಘೋಷಣೆ!

ಪಶ್ಚಿಮ ಬಂಗಾಳದ ಯುವಜನತೆ ಮತ್ತು ಉದ್ಯೋಗ ಆಕಾಂಕ್ಷಿಗಳಿಗೆ ಮುಖ್ಯಮಂತ್ರಿ ಸುವೇಂದು ಅಧಿಕಾರಿ...

ಆಯೋಗವು ಧರ್ಮ/ಜಾತಿ ದತ್ತಾಂಶ ನಿರ್ವಹಿಸುವುದಿಲ್ಲ; ಯೋಗಿಯ ‘ಹಿಂದು ಮತಗಳ ಡಿಲೀಟ್’ ಆರೋಪಕ್ಕೆ ಚುನಾವಣಾಧಿಕಾರಿ ಪ್ರತಿಕ್ರಿಯೆ

ಉತ್ತರ ಪ್ರದೇಶದಲ್ಲಿ ನಡೆಯುತ್ತಿರುವ ಎಸ್‌ಐಆರ್‌ ಪ್ರಕ್ರಿಯೆಯಲ್ಲಿ ಮತಪಟ್ಟಿಯಿಂದ 1.27 ಕೋಟಿ ಹಿಂದು...