‘ಹೊಲೆಗೇರಿ’ ಹೇಳಿಕೆ | ಸಿಎಂ ಜೊತೆ ಚರ್ಚಿಸಿ ಕಾನೂನು ಕ್ರಮ: ಗೃಹ ಸಚಿವ ಪರಮೇಶ್ವರ್

Date:

  • ಹೀಗೆ ಮಾತನಾಡೋದು ಒಂದು ಸಮುದಾಯಕ್ಕೆ ಮಾಡಿದ ಅವಮಾನ ಅಲ್ಲವಾ?
  • ಕೀಳಾಗಿ ಮಾತನಾಡೋದು ಯಾರೇ ಆದರೂ ನಿಲ್ಲಿಸಬೇಕು: ಪರಮೇಶ್ವರ್

ನಟ ಉಪೇಂದ್ರ ಹಾಗೂ ಸಚಿವ ಮಲ್ಲಿಕಾರ್ಜುನ ಅವರ ‘ಹೊಲೆಗೇರಿ’ ಹೇಳಿಕೆಗಳ ಬಗೆಗಿನ ದೂರಿನ ಬಗ್ಗೆ ಸಿಎಂ ಜೊತೆಗೆ ಚರ್ಚಿಸಿದ ಬಳಿಕ ಕಾನೂನು ಕ್ರಮ ತೆಗೆದುಕೊಳ್ಳುತ್ತೇವೆ ಎಂದು ಗೃಹ ಸಚಿವ ಡಾ. ಜಿ.ಪರಮೇಶ್ವರ್ ಹೇಳಿದರು.

ಬೆಂಗಳೂರಿನಲ್ಲಿ ಇಂದು ಮಾತನಾಡಿದ ಅವರು, ಪರಿಶಿಷ್ಟ ಜಾತಿಯವರ ವಿರುದ್ಧ ಉಪೇಂದ್ರ ಮತ್ತು ಸಚಿವ ಮಲ್ಲಿಕಾರ್ಜುನ ಹೇಳಿಕೆ ವಿಚಾರವನ್ನು ನಾನೂ ಕೂಡ ಪತ್ರಿಕೆ ಹಾಗೂ ಮಾಧ್ಯಮಗಳಲ್ಲಿ ಗಮನಿಸಿದೆ. ಯಾರೂ ಕೂಡ ಇಂತಹ ಹೇಳಿಕೆಗಳನ್ನು ಸಹಿಸಲ್ಲ. ಹೀಗೆ ಮಾತನಾಡುವವರು ಇದನ್ನು ಅರ್ಥ ಮಾಡಿಕೊಳ್ಳಬೇಕು. ಒಂದು ಸಮುದಾಯದ ಬಗ್ಗೆ ಕೀಳಾಗಿ ಮಾತನಾಡೋದು ಯಾರೇ ಆದರು ನಿಲ್ಲಿಸಬೇಕು. ಗಾದೆ ಇದೆ ಅಂತ ಹೇಳಿ ಕೀಳಾಗಿ ಮಾತನಾಡೋದು ಸರಿಯಲ್ಲ. ಜಾತಿ ನಿಂದನೆ ಮಾಡಿರುವುದು ಉಪೇಂದ್ರ ಆಗ್ಲಿ, ನಮ್ಮದೇ ಸಚಿವರಾಗಲಿ. ತಪ್ಪು ತಪ್ಪೇ ಎಂದು ತಿಳಿಸಿದರು.

ಇದನ್ನು ಓದಿದ್ದೀರಾ? ಹೊಲಗೇರಿ ಇದ್ದ ಕಡೆಗೆ ಊರಿನ ಜನ ಬಂದರೆ ಹೊರತು- ಊರು ಇದ್ದ ಕಡೆ ಹೊಲಗೇರಿ ಎಂದಿಗೂ ಹೋಗಿಲ್ಲ

ಸುದ್ದಿ ನಿರಂತರವಾಗಿ ಉಚಿತವೇ ಆಗಿರುವುದು ಹೇಗೆ ಸಾಧ್ಯ? ಅದಕ್ಕೆ ನಿಮ್ಮ ಬೆಂಬಲವೂ ನಿರಂತರವಾಗಿ ಇದ್ದಾಗ ಮಾತ್ರ ಸಾಧ್ಯ. ಚಂದಾದಾರರಾಗಿ – ಆ ಮೂಲಕ ಸತ್ಯ, ನ್ಯಾಯ, ಪ್ರೀತಿ ಮೌಲ್ಯಗಳನ್ನು ಎಲ್ಲರಿಗೂ ಹರಡಲು ಜೊತೆಯಾಗಿ.

ಇದನ್ನು ನಿಲ್ಲಿಸಿದರೆ ಒಳ್ಳೆಯದು. ಇದನ್ನು ನಾನು ಕೂಡಾ ಸಹಿಸಲ್ಲ. ಸಾರ್ವಜನಿಕ ಜೀವನದಲ್ಲಿ ಇರುವವರು ಹೀಗೆ ಮಾತನಾಡೋದು ಒಂದು ಸಮುದಾಯಕ್ಕೆ ಮಾಡಿದ ಅವಮಾನ ಅಲ್ಲವಾ? ಇದು ಸರಿಯಲ್ಲ. ಸಚಿವರೇ ಆಗಲಿ ಯಾರೇ ಆಗಲಿ. ಕಾನೂನು ಪ್ರಕಾರ ಕ್ರಮ ತೆಗೆದುಕೊಳ್ಳುತ್ತೇವೆ. ಉಪೇಂದ್ರ ಮತ್ತು ಸಚಿವ ಮಲ್ಲಿಕಾರ್ಜುನ ಕೇಸ್ ಬಗ್ಗೆ ಸಿಎಂ ಜೊತೆ ಚರ್ಚೆ ಮಾಡುತ್ತೇನೆ ಎಂದು ಗೃಹ ಸಚಿವ ಡಾ. ಜಿ.ಪರಮೇಶ್ವರ್ ಹೇಳಿದರು.

ಈ ದಿನ ಡೆಸ್ಕ್‌
Website | + posts

ಪೋಸ್ಟ್ ಹಂಚಿಕೊಳ್ಳಿ:

LEAVE A REPLY

Please enter your comment!
Please enter your name here

ಪೋಸ್ಟ್ ಹಂಚಿಕೊಳ್ಳಿ:

ಹೆಚ್ಚು ಓದಿಸಿಕೊಂಡ ಲೇಖನಗಳು

ವಿಡಿಯೋ

ಸುದ್ದಿ ನಿರಂತರವಾಗಿ ಉಚಿತವೇ ಆಗಿರುವುದು ಹೇಗೆ ಸಾಧ್ಯ? ಅದಕ್ಕೆ ನಿಮ್ಮ ಬೆಂಬಲವೂ ನಿರಂತರವಾಗಿ ಇದ್ದಾಗ ಮಾತ್ರ ಸಾಧ್ಯ. ಚಂದಾದಾರರಾಗಿ – ಆ ಮೂಲಕ ಸತ್ಯ, ನ್ಯಾಯ, ಪ್ರೀತಿ ಮೌಲ್ಯಗಳನ್ನು ಎಲ್ಲರಿಗೂ ಹರಡಲು ಜೊತೆಯಾಗಿ.
Related

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ವಿಜಯಪುರ | 29ರಂದು ಚಡಚಣ ಬ್ಲಾಕ್‌ ಕಾಂಗ್ರೆಸ್‌ ಸಮಿತಿಯಿಂದ ಜಾಗೃತಿ ಸಭೆ

ವಿಜಯಪುರ ಜಿಲ್ಲೆಯ ಚಡಚಣ ಬ್ಲಾಕ್‌ ಕಾಂಗ್ರೆಸ್‌ ಸಮಿತಿಯಿಂದ ಫೆಬ್ರವರಿ 29ರಂದು ಜಾಗೃತಿ...

ನಾಳೆ ಜಾತಿ ಸಮೀಕ್ಷೆ ವರದಿ ಸರ್ಕಾರಕ್ಕೆ ಸಲ್ಲಿಕೆ: ಹಿಂದುಳಿದ ವರ್ಗಗಳ ಆಯೋಗದ ಅಧ್ಯಕ್ಷ ಜಯಪ್ರಕಾಶ್ ಹೆಗ್ಡೆ

ಕರ್ನಾಟಕದ ಸಾಮಾಜಿಕ-ಆರ್ಥಿಕ ಸಮೀಕ್ಷೆ ಎಂದೇ ಪರಿಗಣಿತವಾಗಿರುವ ಜಾತಿ ಸಮೀಕ್ಷೆಯ ವರದಿಯನ್ನು ನಾಳೆ(ಫೆ.28)...

ಬಾಗಲಕೋಟೆ | ಶೇ.60ರಷ್ಟು ಕನ್ನಡ ಬಳಸದ, ಅನ್ಯ ಭಾಷೆಯ ನಾಮಫಲಕಗಳ ತೆರವಿಗೆ ಆಗ್ರಹ

ರಾಜ್ಯ ಸರ್ಕಾರದ ಆದೇಶದಂತೆ ನಾಮಫಲಕದಲ್ಲಿ ಶೇ.60ರಷ್ಟು ಕನ್ನಡ ಬಳಸದ, ಅನ್ಯ ಭಾಷೆಯ...

ಕುಡಿಯುವ ನೀರು ಕೊಡದೆ ಯಾವ ಬ್ರ್ಯಾಂಡ್ ಬೆಂಗಳೂರು ಮಾಡ್ತೀರಾ; ಮೋಹನ್ ದಾಸರಿ ಪ್ರಶ್ನೆ

ಟ್ಯಾಂಕರ್ ಮಾಫಿಯಾದಲ್ಲಿ ಕಾರ್ಪೊರೇಟರ್‌ಗಳು, ಮಾಜಿ ಕಾರ್ಪೊರೇಟರ್‌ಗಳು, ಶಾಸಕರ ಸಂಬಂಧಿಗಳು ಮತ್ತು ಶಾಸಕರ...