ಏರ್‌ ಇಂಡಿಯಾದಲ್ಲಿ ಸಿಬ್ಬಂದಿ ಕೊರತೆ ; ಹಲವು ವಿಮಾನಗಳ ಕಡಿತ

Date:

  • ನ್ಯೂಯಾರ್ಕ್‌, ಸ್ಯಾನ್‌ ಫ್ರಾನ್ಸಿಸ್ಕೊದ ತಲಾ 3 ವಿಮಾನ ಕಡಿತ
  • ಏರ್‌ ಇಂಡಿಯಾದಿಂದ ಅಮೆರಿಕಕ್ಕೆ ವಾರಕ್ಕೆ 47 ವಿಮಾನ ಕಾರ್ಯ

ಏರ್‌ ಇಂಡಿಯಾ ವಿಮಾನ ಸಂಸ್ಥೆಯಲ್ಲಿ ಸಿಬ್ಬಂದಿ ಕೊರತೆಯೊಂದಾಗಿ ಭಾರತದಿಂದ ಅಮೆರಿಕಕ್ಕೆ ತೆರಳುವ ಹಲವು ವಿಮಾನಗಳನ್ನು ಕಡಿತಗೊಳಿಸಲಾಗಿದೆ.

“ನ್ಯೂಯಾರ್ಕ್‌ ಮತ್ತು ಸ್ಯಾನ್‌ ಫ್ರಾನ್ಸಿಸ್ಕೊಗೆ ತೆರಳುವ ತಲಾ ಮೂರು ವಿಮಾನಗಳ ಹಾರಾಟವನ್ನು ಸಿಬ್ಬಂದಿ ಕೊರತೆಯಿಂದ ಮುಂದಿನ 2-3 ತಿಂಗಳ ಕಾಲ ಕಡಿತಗೊಳಿಸಲಾಗುವುದು” ಎಂದು ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಕ್ಯಾಂಪ್‌ಬೆಲ್ ವಿಲ್ಸನ್ ಸೋಮವಾರ (ಮಾರ್ಚ್‌ 20) ತಿಳಿಸಿದ್ದಾರೆ.

ಏರ್ ಇಂಡಿಯಾದ ದೆಹಲಿಯಿಂದ ಸ್ಯಾನ್ ಫ್ರಾನ್ಸಿಸ್ಕೊಗೆ ತೆರಳುವ ವಿಮಾನ ಮೂರು ತಿಂಗಳ ಕಾಲ ರದ್ದುಗೊಳ್ಳುತ್ತದೆ. ನೆವಾರ್ಕ್‌ಗೆ ತೆರಳುವ ವಿಮಾನ ಒಂದು ತಿಂಗಳಿಗೂ ಹೆಚ್ಚು ಕಾಲ ರದ್ದಾಗಲಿದೆ. ಮುಂಬೈನಿಂದ ನ್ಯೂಯಾರ್ಕ್‌ಗೆ ಹಾರುವ ವಿಮಾನದ ಪ್ರಯಾಣವನ್ನು ಮೇ ತಿಂಗಳು ಪೂರ್ತಿ ನಿಲ್ಲಿಸಲಾಗುವುದು ಎಂದು ವಿಮಾನಯಾನ ಸಂಸ್ಥೆಯ ಆಂತರಿಕ ಸಂವಹನ ವಿಭಾಗ ಹೇಳಿದೆ.

ಸುದ್ದಿ ನಿರಂತರವಾಗಿ ಉಚಿತವೇ ಆಗಿರುವುದು ಹೇಗೆ ಸಾಧ್ಯ? ಅದಕ್ಕೆ ನಿಮ್ಮ ಬೆಂಬಲವೂ ನಿರಂತರವಾಗಿ ಇದ್ದಾಗ ಮಾತ್ರ ಸಾಧ್ಯ. ಚಂದಾದಾರರಾಗಿ – ಆ ಮೂಲಕ ಸತ್ಯ, ನ್ಯಾಯ, ಪ್ರೀತಿ ಮೌಲ್ಯಗಳನ್ನು ಎಲ್ಲರಿಗೂ ಹರಡಲು ಜೊತೆಯಾಗಿ.

“ಏರ್ ಇಂಡಿಯಾದ ಎಐ 105/106 ವಿಮಾನ ಮಾರ್ಚ್ 26 ರಿಂದ ಏಪ್ರಿಲ್ 29ರವರೆಗೆ ರದ್ದುಗೊಳ್ಳಲಿದೆ. ಮುಂಬೈನಿಂದ ನ್ಯೂಯಾರ್ಕ್‌ಗೆ ತೆರಳುವ ಎಐ 119/116 ವಿಮಾನ ಸಂಪೂರ್ಣ ಮೇ ತಿಂಗಳವರೆಗೆ ಇರುವುದಿಲ್ಲ. ದೆಹಲಿಯಿಂದ ಸ್ಯಾನ್ ಫ್ರಾನ್ಸಿಸ್ಕೊಗೆ ಹಾರುವ ಎಐ 173/174 ವಿಮಾನ ಸೇವೆಯನ್ನು ಮಾರ್ಚ್ 26 ರಿಂದ ಜೂನ್ 29ರವರೆಗೆ ರದ್ದುಗೊಳಿಸಲಾಗಿದೆ” ಎಂದು ಅಧಿಕಾರಿಯೊಬ್ಬರು ತಿಳಿಸಿದ್ದಾರೆ.

ಏರ್ ಇಂಡಿಯಾ ಸಂಸ್ಥೆಯು ಅಮೆರಿಕಕ್ಕೆ ವಾರದಲ್ಲಿ 47 ವಿಮಾನಗಳನ್ನು ನಿರ್ವಹಿಸುತ್ತದೆ. ಇದರಲ್ಲಿ ಏಳು ಶಿಕಾಗೊ, 14 ನ್ಯೂಯಾರ್ಕ್, ಆರು ನೆವಾರ್ಕ್, 17 ಸ್ಯಾನ್ ಫ್ರಾನ್ಸಿಸ್ಕೊ ಮತ್ತು ಮೂರು ಡಲ್ಲೆಸ್‌ಗೆ ಸಂಚರಿಸುತ್ತವೆ ಎಂದು ವಿಮಾನಯಾನ ಸಂಸ್ಥೆಯ ವಕ್ತಾರೊಬ್ಬರು ತಿಳಿಸಿದರು.

“ನಾವು ಒಂದೇ ಮಾರ್ಗಗಳಲ್ಲಿ ಪುನರಾವರ್ತನೆಯಾಗುವ ವಿಮಾನಗಳನ್ನು ಕಡಿತಗೊಳಿಸುತ್ತಿದ್ದೇವೆ. ಇದರಿಂದ ಪ್ರಯಾಣಿಕರಿಗೆ ಯಾವುದೇ ತೊಂದರೆ ಉಂಟಾಗುವುದಿಲ್ಲ” ಎಂದು ಕ್ಯಾಪ್‌ಬೆಲ್‌ ವಿಲ್ಸನ್‌ ಹೇಳಿದರು.

ಸಿಬ್ಬಂದಿ ಕೊರತೆಯಿಂದ ವಿಮಾನಯಾನ ಸಂಸ್ಥೆಯು ತನ್ನ ಬಿ787 ವಿಮಾನವನ್ನು ನಿರ್ವಹಿಸುವ ಬದಲು ದುಬೈ ಮತ್ತು ಬ್ಯಾಂಕಾಕ್‌ಗೆ ಸಣ್ಣ ಗಾತ್ರದ ವಿಮಾನವನ್ನು ನಿರ್ವಹಿಸುತ್ತಿದೆ. ಗರಿಷ್ಠ ಚಳಿಗಾಲದ ಪ್ರಯಾಣದ ಅವಧಿಯಲ್ಲಿ ವಿಮಾನಯಾನ ಸಂಸ್ಥೆಯು ನ್ಯೂಯಾರ್ಕ್, ವಿಯೆನ್ನಾ, ಕೋಪನ್ ಹ್ಯಾಗನ್ ಮತ್ತು ಮಿಲನ್‌ಗೆ ತೆರಳುವ ವಿಮಾನಗಳನ್ನು ರದ್ದುಗೊಳಿಸಿತ್ತು.

+ posts

ಪೋಸ್ಟ್ ಹಂಚಿಕೊಳ್ಳಿ:

LEAVE A REPLY

Please enter your comment!
Please enter your name here

ಪೋಸ್ಟ್ ಹಂಚಿಕೊಳ್ಳಿ:

ಹೆಚ್ಚು ಓದಿಸಿಕೊಂಡ ಲೇಖನಗಳು

ವಿಡಿಯೋ

ಸುದ್ದಿ ನಿರಂತರವಾಗಿ ಉಚಿತವೇ ಆಗಿರುವುದು ಹೇಗೆ ಸಾಧ್ಯ? ಅದಕ್ಕೆ ನಿಮ್ಮ ಬೆಂಬಲವೂ ನಿರಂತರವಾಗಿ ಇದ್ದಾಗ ಮಾತ್ರ ಸಾಧ್ಯ. ಚಂದಾದಾರರಾಗಿ – ಆ ಮೂಲಕ ಸತ್ಯ, ನ್ಯಾಯ, ಪ್ರೀತಿ ಮೌಲ್ಯಗಳನ್ನು ಎಲ್ಲರಿಗೂ ಹರಡಲು ಜೊತೆಯಾಗಿ.
Related

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ಚುನಾವಣೆ ಈಗಾಗಲೇ ಮೋದಿ ಕೈ ತಪ್ಪಿದೆ, ಇದು ಅವರಿಗೂ ತಿಳಿದಿದೆ: ರಾಹುಲ್ ಗಾಂಧಿ

ಕಾಂಗ್ರೆಸ್‌ನ ಗ್ಯಾರಂಟಿ ಮತ್ತು ಮೋದಿ ಕಿ ಗ್ಯಾರಂಟಿಯ ನಡುವೆ ಅಗಾಧ ವ್ಯತ್ಯಾಸವಿದೆ...

ಮುಸ್ಲಿಮರು ಮತ್ತು ಮೋದಿ ಸುಳ್ಳು; ಮುಸ್ಲಿಂ ಮೀಸಲಾತಿ ವಿಚಾರದಲ್ಲಿ ಆಯೋಗಗಳು ಹೇಳಿದ್ದೇನು? ಡೀಟೇಲ್ಸ್‌

ಮುಸ್ಲಿಮರ ಓಲೈಕೆಗಾಗಿ ಕಾಂಗ್ರೆಸ್‌ ಸರ್ಕಾರಗಳು ಮುಸ್ಲಿಮರಿಗೆ ಮೀಸಲಾತಿಯನ್ನ ನೀಡಿವೆ. ಅದಕ್ಕಾಗಿ, ಹಿಂದುಳಿದವರು...

ವಿವಿಯ ಉತ್ತರ ಪತ್ರಿಕೆಯಲ್ಲಿ ‘ಜೈ ಶ್ರೀರಾಮ್’ ಎಂದು ಬರೆದ ವಿದ್ಯಾರ್ಥಿಗಳಿಗೆ ಶೇ.50 ರಷ್ಟು ಹೆಚ್ಚು ಅಂಕ

ಅಂಕಗಳನ್ನು ವಿದ್ಯಾರ್ಥಿ ಬರೆದ ಗುಣಮಟ್ಟದ ಉತ್ತರದ ಆಧಾರದ ಮೇಲೆ ನೀಡಲಾಗುತ್ತದೆ. ಆದರೆ...

ಪಾಟ್ನಾ| ರೈಲ್ವೆ ನಿಲ್ದಾಣದ ಬಳಿಯ ಹೋಟೆಲ್‌ನಲ್ಲಿ ಅಗ್ನಿ ಅವಘಡ, ಆರು ಮಂದಿ ಸಾವು

ಪಾಟ್ನಾ ಜಂಕ್ಷನ್ ರೈಲ್ವೆ ನಿಲ್ದಾಣದ ಸಮೀಪವಿರುವ ಹೋಟೆಲ್‌ನಲ್ಲಿ ಅಗ್ನಿ ಅವಘಡ ಸಂಭವಿಸಿದ್ದು...