ಆರು ದಿನಗಳ ರಾಜ್ಯ ಪ್ರವಾಸ ನಡೆಸಲಿರುವ ಪೃಥ್ವಿ ರೆಡ್ಡಿ, ಮುಖ್ಯಮಂತ್ರಿ ಚಂದ್ರು

Date:

  • ಆರು ಜಿಲ್ಲೆಗಳಲ್ಲಿ ಆಪ್ ಜನಸಭೆ ಹಾಗೂ ರೋಡ್‌ ಷೋ
  • ಮಾ. 26ರಿಂದ ಮಾ. 31ರವರೆಗೆ ನಡೆಯಲಿರುವ ಪ್ರವಾಸ

ವಿಧಾನಸಭೆ ಚುನಾವಣೆ ಹೊಸ್ತಿಲಿನಲ್ಲಿ ಆಮ್‌ ಆದ್ಮಿ ಪಾರ್ಟಿಯು ಒಟ್ಟು ಆರು ದಿನಗಳ ರಾಜ್ಯ ಪ್ರವಾಸವನ್ನು ಹಮ್ಮಿಕೊಂಡಿದ್ದು, ಇದರ ನೇತೃತ್ವವನ್ನು ರಾಜ್ಯಾಧ್ಯಕ್ಷ ಪೃಥ್ವಿ ರೆಡ್ಡಿ ಹಾಗೂ ಪಕ್ಷದ ಪ್ರಚಾರ ಸಮಿತಿ ಅಧ್ಯಕ್ಷ ಡಾ. ಮುಖ್ಯಮಂತ್ರಿ ಚಂದ್ರು ವಹಿಸಲಿದ್ದಾರೆ.

ಮಾರ್ಚ್‌ 26ರಿಂದ ಮಾರ್ಚ್‌ 31ರವರೆಗೆ ರಾಜ್ಯ ಪ್ರವಾಸ ನಡೆಯಲಿದೆ. ಈ ಆರು ದಿನಗಳಲ್ಲಿ ಆರು ಜಿಲ್ಲೆಗಳಿಗೆ ಭೇಟಿ ನೀಡಿ, ಜನಸಭೆ ಹಾಗೂ ರೋಡ್‌ ಷೋ ನಡೆಸಲಿದ್ದಾರೆ.

ಮಾರ್ಚ್‌ 26ರ ಬೆಳಗ್ಗೆ 11 ಗಂಟೆಗೆ ಬೀದರ್‌ ಜಿಲ್ಲೆಯ ಔರಾದ್‌ನಲ್ಲಿ ಜನಸಭೆ ಹಾಗೂ ಸಂಜೆ 4 ಗಂಟೆಗೆ ಬೀದರ್‌ ದಕ್ಷಿಣದಲ್ಲಿ ಜನಸಭೆ ನಡೆಸಲಿದ್ದಾರೆ. ಮಾರ್ಚ್‌ 27ರ ಬೆಳಗ್ಗೆ 11 ಗಂಟೆಗೆ ವಿಜಯಪುರದ ಇಂಡಿಯಲ್ಲಿ ಜನಸಭೆ ಹಾಗೂ ಸಂಜೆ 4 ಗಂಟೆಗೆ ಬಾಗಲಕೋಟೆಯ ತೇರದಾಳದಲ್ಲಿ ಜನಸಭೆ ನಡೆಸಲಿದ್ದಾರೆ. ಮಾರ್ಚ್‌ 28ರ ಬೆಳಗ್ಗೆ 11 ಗಂಟೆಗೆ ಬಾಗಲಕೋಟೆಯಲ್ಲಿ ರೋಡ್‌ ಷೋ ಹಾಗೂ ಸಂಜೆ 4 ಗಂಟೆಗೆ ಬದಾಮಿಯಲ್ಲಿ ಜನಸಭೆಯಲ್ಲಿ ಭಾಗವಹಿಸಲಿದ್ದಾರೆ.

ಮಾರ್ಚ್‌ 29ರ ಬೆಳಗ್ಗೆ 11 ಗಂಟೆಗೆ ಬೆಳಗಾವಿ ಜಿಲ್ಲೆಯ ಬೈಲಹೊಂಗಲದಲ್ಲಿ ಜನಸಭೆ ಹಾಗೂ ಸಂಜೆ 4 ಗಂಟೆಗೆ ಧಾರವಾಡದ ಕಲಘಟಗಿಯಲ್ಲಿ ಜನಸಭೆ ನಡೆಸಲಿದ್ದಾರೆ. ಮಾರ್ಚ್‌ 30ರ ಬೆಳಗ್ಗೆ 10 ಗಂಟೆಗೆ ಧಾರವಾಡದಲ್ಲಿ ರೋಡ್‌ ಷೋ ಹಾಗೂ ಜನಸಭೆಯಲ್ಲಿ ಭಾಗವಹಿಸಿ, ಅದೇ ದಿನ ಸಂಜೆ 4 ಗಂಟೆಗೆ ಹಾವೇರಿಯ ಬ್ಯಾಡಗಿಯಲ್ಲಿ ಜನಸಭೆ ಉದ್ದೇಶಿಸಿ ಮಾತನಾಡಲಿದ್ದಾರೆ. ಮಾರ್ಚ್‌ 31ರ ಬೆಳಗ್ಗೆ ಹಾವೇರಿ ಜಿಲ್ಲೆಯ ರಾಣೆಬೆನ್ನೂರಿನಲ್ಲಿ ಜನಸಭೆ ನಡೆಸುವುದರೊಂದಿಗೆ ಈ ರಾಜ್ಯಪ್ರವಾಸ ಅಂತ್ಯಗೊಳ್ಳಲಿದೆ ಎಂದು ಪಕ್ಷ ತಿಳಿಸಿದೆ.

ಪೋಸ್ಟ್ ಹಂಚಿಕೊಳ್ಳಿ:

LEAVE A REPLY

Please enter your comment!
Please enter your name here

ಪೋಸ್ಟ್ ಹಂಚಿಕೊಳ್ಳಿ:

ಹೆಚ್ಚು ಓದಿಸಿಕೊಂಡ ಲೇಖನಗಳು

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ಬೆಂಗಳೂರು ಬಂದ್ |ರಾಜಭವನ ಮುತ್ತಿಗೆಗೆ ಯತ್ನಿಸಿದ ವಾಟಾಳ್ ನಾಗರಾಜ್ ಮತ್ತಿತರರು ಪೊಲೀಸರ ವಶಕ್ಕೆ

ತಮಿಳುನಾಡಿಗೆ ಕಾವೇರಿ ನದಿ ನೀರು ಹರಿಸುತ್ತಿರುವುದನ್ನು ಖಂಡಿಸಿ ಸೆ.26 ರಂದು ‘ಬೆಂಗಳೂರು...

ಬೆಂಗಳೂರು ಬಂದ್ | ‘ಕಾವೇರಿ’ ಹೋರಾಟದ ಕಿಚ್ಚು: ಪ್ರತಿಭಟನಾಕಾರರ ಬಂಧನಕ್ಕೆ ಮುಖ್ಯಮಂತ್ರಿ ಚಂದ್ರು ಕಿಡಿ

ತಕ್ಷಣವೇ ತಮಿಳುನಾಡಿಗೆ ಬಿಡುತ್ತಿರುವ ಕಾವೇರಿ ನೀರನ್ನು ನಿಲ್ಲಿಸಬೇಕು. ಸರ್ಕಾರ ಈಗಲೇ ಎಚ್ಚೆತ್ತುಕೊಳ್ಳದಿದ್ದರೆ...

ಮೋದಿ ಗೆಲುವಿಗಾಗಿ ರಾಮಮಂದಿರಕ್ಕೆ ಬಿಜೆಪಿಯೇ ಬಾಂಬ್ ಹಾಕಬಹುದು: ಬಿ.ಆರ್‌ ಪಾಟೀಲ್

ಮುಂದಿನ ಲೋಕಸಭಾ ಚುನಾವಣೆಯಲ್ಲಿ ಮೋದಿಯನ್ನು ಗೆಲ್ಲಿಸಲು ಬಿಜೆಪಿಗರೇ ರಾಮಮಂದಿರದ ಮೇಲೆ ಬಾಂಬ್‌...

ಕಾವೇರಿ ವಿವಾದ | ಜನರ ಹಿತದೃಷ್ಟಿಯಿಂದ ಬಿಜೆಪಿ, ಜೆಡಿಎಸ್ ಹೋರಾಡುತ್ತಿಲ್ಲ: ಸಿದ್ದರಾಮಯ್ಯ

ರಾಜ್ಯ ಸರ್ಕಾರ ವಿಫಲವಾಗಿದೆ ಎನ್ನುವುದು ರಾಜಕಾರಣ ಇತರರ ಮೂಲಭೂತ ಹಕ್ಕುಗಳ ರಕ್ಷಣೆ ಕೂಡ...