ಉತ್ತರ ಕರ್ನಾಟಕದ ಅಭಿವೃದ್ಧಿಗೆ ಕಿತ್ತೂರು ಕರ್ನಾಟಕ ಮಂಡಳಿ ರಚನೆ: ಸಿಎಂ ಬೊಮ್ಮಾಯಿ

Date:

  • ಉತ್ತರ ಕರ್ನಾಟಕ ಅಭಿವೃದ್ಧಿಗೆ ಹೊಸ ಮಂಡಳಿ ರಚನೆ
  • ಭರವಸೆ ಕೊಟ್ಟು ಮೋಸ ಮಾಡುವುದು ನಮ್ಮ ಕೆಲಸವಲ್ಲ

ಚುನಾವಣೆ ಹೊತ್ತಿನಲ್ಲಿ ಭರ್ಜರಿ ಘೋಷಣೆಗಳ ಮೂಲಕ ಜನ ಸೆಳೆಯುವ ರಾಜ್ಯ ಸರ್ಕಾರದ ಕಾರ್ಯ ಮುಂದುವರೆದಿದೆ. ಅದರ ಮುಂದುವರೆದ ಭಾಗವಾಗಿ ಹೊಸದೊಂದು ಭರವಸೆ ನೀಡಿರುವ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ, ಉತ್ತರ ಕರ್ನಾಟಕ ಅಭಿವೃದ್ದಿಗೆ ಕಿತ್ತೂರು ಕರ್ನಾಟಕ ಮಂಡಳಿ ರಚನೆ ಮಾಡಲಾಗುವುದು ಎಂದು ಹೇಳಿದ್ದಾರೆ.

ವಿಜಯಪುರ ಜಿಲ್ಲೆ ಮುದ್ದೇಬಿಹಾಳ ತಾಲ್ಲೂಕಿನ ನಾಲತವಾಡದಲ್ಲಿನ ವಿವಿಧ ಅಭಿವೃದ್ಧಿ ಕಾಮಗಾರಿಗೆ ಚಾಲನೆ ನೀಡಿದ ಬಳಿಕ ಮಾತನಾಡಿದ ಬಸವರಾಜ ಬೊಮ್ಮಾಯಿ, ಬೇರೆ ಪಕ್ಷದವರ ತರ ಈಡೇರದ ಭರವಸೆಗಳನ್ನು ಕೊಟ್ಟು ಮೋಸ ಮಾಡುವುದು ನಮ್ಮ ಕೆಲಸವಲ್ಲ, ನಮ್ಮ ಸರ್ಕಾರದ ಕೆಲಸಗಳೇ ನಮ್ಮ ಗ್ಯಾರಂಟಿ ಕಾರ್ಡ್‌ ಎಂದರು.

ಕಾಂಗ್ರೆಸ್ ವಿರುದ್ಧ ವಾಗ್ದಾಳಿ ನಡೆಸಿದ ಸಿಎಂ ಸುಳ್ಳು ಆಶ್ವಾಸನೆ ನೀಡುವುದು ಗ್ಯಾರಂಟಿ ಅಲ್ಲ. ಕಾಂಗ್ರೆಸ್ ನ ಗ್ಯಾರಂಟಿಗಳನ್ನು ನಂಬುವುದಕ್ಕೆ ಇದು ಛತ್ತೀಸ್ ಘಡ, ರಾಜಸ್ತಾನ ಅಲ್ಲ. ಇದು ಕರ್ನಾಟಕ. ನಮ್ಮ ಜನ ಬಹಳ ಜಾಣರಿದ್ದಾರೆ ಎಂದರು.

ಕೃಷ್ಣೆಯ ಮೇಲೆ ಅಣೆ ಮಾಡಿ ಅಧಿಕಾರಕ್ಕೆ ಬಂದ ಕಾಂಗ್ರೆಸ್ ನವರು, ಕೃಷ್ಣಾ ಯೋಜನೆಗೆ ವರ್ಷಕ್ಕೆ 10 ಸಾವಿರ ಕೋಟಿ ಕೊಟ್ಟಿದ್ದೇವೆ ಎಂದರು. ಆದರೆ ನೀವು ಕೊಟ್ಟಿರೋದು 6 ಸಾವಿರ ಕೋಟಿ ರೂ. ಮಾತ್ರ ಎಂದು ಸಿಎಂ ಕುಟುಕಿದರು.

Website | + posts

ಪೋಸ್ಟ್ ಹಂಚಿಕೊಳ್ಳಿ:

LEAVE A REPLY

Please enter your comment!
Please enter your name here

ಪೋಸ್ಟ್ ಹಂಚಿಕೊಳ್ಳಿ:

ಹೆಚ್ಚು ಓದಿಸಿಕೊಂಡ ಲೇಖನಗಳು

ವಿಡಿಯೋ

ಸುದ್ದಿ ನಿರಂತರವಾಗಿ ಉಚಿತವೇ ಆಗಿರುವುದು ಹೇಗೆ ಸಾಧ್ಯ? ಅದಕ್ಕೆ ನಿಮ್ಮ ಬೆಂಬಲವೂ ನಿರಂತರವಾಗಿ ಇದ್ದಾಗ ಮಾತ್ರ ಸಾಧ್ಯ. ಚಂದಾದಾರರಾಗಿ – ಆ ಮೂಲಕ ಸತ್ಯ, ನ್ಯಾಯ, ಪ್ರೀತಿ ಮೌಲ್ಯಗಳನ್ನು ಎಲ್ಲರಿಗೂ ಹರಡಲು ಜೊತೆಯಾಗಿ.
Related

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ಅಮೃತ್ ಭಾರತ್ ನಿಲ್ದಾಣ ಯೋಜನೆಯಡಿ 15 ನಿಲ್ದಾಣಗಳ ಆಧುನೀಕರಣ: ಯೋಗೇಶ್ ಮೋಹನ್

“ಬಂಗಾರಪೇಟೆ, ಕೆಂಗೇರಿ, ಕೃಷ್ಣರಾಜಪುರ, ಮಂಡ್ಯ, ಚನ್ನಪಟ್ಟಣ, ಹೊಸೂರು, ಹಿಂದೂಪುರ, ಕುಪ್ಪಂ, ಮಾಲೂರು,...

ಶೂದ್ರರು, ದಲಿತರಿಗೆ ಆರ್‌ಎಸ್‌ಎಸ್‌ ಗರ್ಭಗುಡಿಗೆ ಪ್ರವೇಶ ಇಲ್ಲ ಎಂಬುದು ಮತ್ತೆ ಸಾಬೀತು: ಸಿದ್ದರಾಮಯ್ಯ

ಹೊರಬಾಗಿಲಲ್ಲಿ ನಿಂತು 'ಜೀ..ಜೀ..ಹುಜೂರ್' ಎಂದಷ್ಟೇ ಹೇಳಬೇಕು:‌ ಸಿದ್ದರಾಮಯ್ಯ ಗೂಳಿಹಟ್ಟಿ ಶೇಖರ್...

ಪ್ರಜಾಪ್ರಭುತ್ವ, ಜಾತ್ಯತೀತತೆ ಹಾಗೂ ಮಾನವ ಹಕ್ಕುಗಳ ಉಳಿವಿಗಾಗಿ ಆಂದೋಲನಕ್ಕೆ ಕರೆ

ಸೆಂಟರ್ ಫಾರ್ ಪ್ರೊಟೆಕ್ಟಿಂಗ್ ಡೆಮಾಕ್ರೆಟಿಕ್ ರೈಟ್ಸ್ ಅಂಡ್ ಸೆಕ್ಯುಲರಿಸಂ ಕರೆ ...

ವಿಜಯಪುರ | ಅಂಬೇಡ್ಕರ 67ನೇ ಮಹಾ ಪರಿನಿರ್ವಾಣ ಶೋಕ ಆಚರಿಸಿದ ದಲಿತ ವಿದ್ಯಾರ್ಥಿ ಪರಿಷತ್

ವಿಜಯಪುರ ನಗರದ ದಲಿತ ವಿದ್ಯಾರ್ಥಿ ಪರಿಷತ್ ಜಿಲ್ಲಾ ಕಚೇರಿಯಲ್ಲಿ ಡಾ. ಬಾಬಾ...