ಸಂಸತ್ತು ಅಧಿವೇಶನ | ಪ್ರತಿಪಕ್ಷಗಳ ಗದ್ದಲಕ್ಕೆ ಮತ್ತೆ ಲೋಕಸಭೆ, ರಾಜ್ಯಸಭೆ ಕಲಾಪ ಮುಂದೂಡಿಕೆ

Date:

  • ಅಧಿವೇಶನಕ್ಕೂ ಮುನ್ನ ವಿಪಕ್ಷಗಳು ಸಭೆ
  • ಫೈಜಲ್ ಲೋಕಸಭೆ ಸದಸ್ಯತ್ವ ಮರುಸ್ಥಾಪನೆ

ಸಂಸತ್ತು ಅಧಿವೇಶನ ಆರಂಭವಾದ ಮೂರನೇ ವಾರವೂ ಪ್ರತಿಪಕ್ಷಗಳು ಗದ್ದಲ ಉಂಟು ಮಾಡಿವೆ. ಇದರಿಂದ ಬುಧವಾರದ (ಮಾರ್ಚ್ 29) ಬಜೆಟ್ ಅಧಿವೇಶನದ ಲೋಕಸಭೆ ಮತ್ತು ರಾಜ್ಯಸಭೆಗಳ ಕಲಾಪ ಮಧ್ಯಾಹ್ನದ ವರೆಗೂ ಮುಂದೂಡಿಕೆಯಾಗಿದೆ.

ವಿಪಕ್ಷಗಳ ಕೋಲಾಹಲದಿಂದ ಬೆಳಿಗ್ಗೆ 11 ಗಂಟೆಗೆ ಆರಂಭವಾದ ಲೋಕಸಭೆ ಕಲಾಪ ಮಧ್ಯಾಹ್ನ 12 ಗಂಟೆವರೆಗೂ ಮುಂದೂಡಿಕೆಯಾಗಿದೆ. ರಾಜ್ಯಸಭೆಯ ಕಲಾಪವೂ ಮಧ್ಯಾಹ್ನ 12 ಗಂಟೆವರೆಗೆ ಮುಂದೂಡಲ್ಪಟ್ಟಿದೆ.

ಸದನ ಆರಂಭಕ್ಕೂ ಮುನ್ನ ಸಂಸತ್ತಿನ ವಿಪಕ್ಷಗಳ ನಾಯಕ ಮಲ್ಲಿಕಾರ್ಜುನ ಖರ್ಗೆ ಅವರ ನೇತೃತ್ವದಲ್ಲಿ ಅವರ ಕಚೇರಿಯಲ್ಲಿ ವಿಪಕ್ಷಗಳ ಸಭೆ ನಡೆಯಿತು. ಇದರಲ್ಲಿ ಎನ್‌ಸಿಪಿ ಮುಖ್ಯಸ್ಥ ಶರದ್ ಪವಾರ್, ಎಎಪಿ ನಾಯಕ ರಾಘವ್ ಚಡಾ ಮತ್ತು ಇತರರು ಭಾಗವಹಿಸಿದ್ದರು.

ಸಂಸತ್ತು ಅಧಿವೇಶನದ ಕಲಾಪದ ವೇಳೆ ಕೈಗೊಳ್ಳಬೇಕಾದ ತಂತ್ರಗಳ ಕುರಿತು ಪ್ರತಿಪಕ್ಷಗಳ ಸಭೆಯಲ್ಲಿ ಚರ್ಚಿಸಲಾಗಿದೆ ಎಂದು ವರದಿಯಾಗಿದೆ.

ಎನ್‌ಸಿಪಿಯ ಮೊಹಮ್ಮದ್ ಫೈಜಲ್ ಅನರ್ಹತೆ ಹಿಂಪಡೆತ

ಮೊಹಮ್ಮದ್‌ ಫೈಜಲ್‌

ಬುಧವಾರ ಆರಂಭವಾದ ಲೋಕಸಭೆ ಕಲಾಪದ ವೇಳೆ ಈ ಮುನ್ನ ಅನರ್ಹಗೊಂಡಿದ್ದ ಎನ್ಸಿಪಿ ನಾಯಕ ಮೊಹಮ್ಮದ್ ಫೈಜಲ್ ಪಿ.ಪಿ. ಅವರ ಸದಸ್ಯತ್ವವನ್ನು ಲೋಕಸಭೆ ಕಾರ್ಯಾಲಯ ಮರುಸ್ಥಾಪಿಸಿದೆ.

ಅಪರಾಧ ಪ್ರಕರಣವೊಂದರಲ್ಲಿ 10 ವರ್ಷ ಜೈಲು ಶಿಕ್ಷೆಗೆ ಒಳಗಾಗಿದ್ದ ಮೊಹಮ್ಮದ್ ಫೈಜಲ್ ಅವರನ್ನು ಕಳೆದ ಜನವರಿಯಲ್ಲಿ ಲೋಕಸಭೆಯ ಸದಸ್ಯತ್ವದಿಂದ ಅನರ್ಹಗೊಳಿಸಲಾಗಿತ್ತು.

ಮೊಹಮ್ಮದ್‌ ಫೈಜಲ್‌ ಲಕ್ಷದ್ವೀಪದ ಸಂಸದರಾಗಿದ್ದಾರೆ. ತಮಗೆ ಶಿಕ್ಷೆ ನೀಡಿರುವ ಸೆಷನ್ಸ್‌ ನ್ಯಾಯಾಲಯದ ಆದೇಶವನ್ನು ಪ್ರಶ್ನಿಸಿ ಫೈಜಲ್‌ ಕೇರಳ ಹೈಕೋರ್ಟ್‌ಗೆ ಮನವಿ ಸಲ್ಲಿಸಿದ್ದರು. ತಮಗೆ ಅಪರಾಧ ಹಾಗೂ ವಿಧಿಸಿರುವ ಶಿಕ್ಷೆ ಅಮಾನತುಗೊಳಿಸುವಂತೆ ಕೋರಿದ್ದರು. ಏಪ್ರಿಲ್‌ 13ಕ್ಕೆ ಸಂಸತ್ತು ಅಧಿವೇಶನ ಕೊನೆಗೊಳ್ಳಲಿದೆ.

+ posts

ಪೋಸ್ಟ್ ಹಂಚಿಕೊಳ್ಳಿ:

LEAVE A REPLY

Please enter your comment!
Please enter your name here

ಪೋಸ್ಟ್ ಹಂಚಿಕೊಳ್ಳಿ:

ಹೆಚ್ಚು ಓದಿಸಿಕೊಂಡ ಲೇಖನಗಳು

ವಿಡಿಯೋ

ಸತ್ಯದ ಪಥಕ್ಕೆ ಬಲ ತುಂಬಲು ದೇಣಿಗೆ ನೀಡಿ. ನಿಮ್ಮಗಳ ಬೆಂಬಲವೇ ನಮಗೆ ಬಲ. ಈ ಕೆಳಗಿನ ಲಿಂಕ್ ಮೂಲಕ ದೇಣಿಗೆ ನೀಡಿ
Related

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ಹಾವೇರಿ | ಡಿಕೆಶಿ ಜೈಲಿಗೆ ಹೋಗೋದು ಖಚಿತ: ಈಶ್ವರಪ್ಪ

ಲೋಕಸಭಾ ಚುನಾವಣೆಗೂ ಮುನ್ನ ಅಥವಾ ನಂತರದಲ್ಲಿ ಉಪಮುಖ್ಯಮಂತ್ರಿ ಡಿ.ಕೆ ಶಿವಕುಮಾರ್ ಜೈಲಿಗೆ...

ಸಿಎಂ ಕಚೇರಿಯ ಗಮನ ಸೆಳೆದ ಉಳ್ಳಾಲ ನಗರಸಭೆಯ ಕಸದ ವಾಹನ: ವಿಡಿಯೋ ವೈರಲ್

ಮುಖ್ಯಮಂತ್ರಿ ಸಿದ್ದರಾಮಯ್ಯನವರು ಇತ್ತೀಚೆಗೆ(ನ.27) ನಡೆಸಿದ ಜನಸ್ಪಂದನಕ್ಕೆ ಅಭೂತಪೂರ್ವವಾದ ಪ್ರತಿಕ್ರಿಯೆ ವ್ಯಕ್ತವಾಗಿತ್ತು. ಸತತ...

ಪ್ರೊ. ಅರ್ನಾಲ್ಡ್ ಡಿಕ್ಸ್ : ಉತ್ತರಾಖಂಡ ಸುರಂಗ ರಕ್ಷಣಾ ಕಾರ್ಯಾಚರಣೆಯ ಹಿಂದಿನ ಶಕ್ತಿ

ಉತ್ತರಾಖಂಡನ ಸಿಲ್ಕ್ಯಾರಾ ಸುರಂಗದಲ್ಲಿ 17 ದಿನಗಳ ಕಾಲ ಸಿಲುಕಿಕೊಂಡಿದ್ದ 41 ಕಾರ್ಮಿಕರನ್ನು...

ಮೈತ್ರಿ ಕಗ್ಗಂಟು | ಪ್ರತಾಪ್ ಸಿಂಹಗೆ ಬಿಜೆಪಿ ಟಿಕೆಟ್ ಸಿಗುವುದೇ ಡೌಟು!

ಲೋಕಸಭಾ ಚುನಾವಣೆಗಾಗಿ ರಾಜ್ಯದಲ್ಲಿ ಬಿಜೆಪಿ ಮತ್ತು ಜೆಡಿಎಸ್‌ ಮೈತ್ರಿ ಮಾಡಿಕೊಂಡಿವೆ. ರಾಜ್ಯದಲ್ಲಿ...