ಸಾಮಾಜಿಕ ನ್ಯಾಯದ ಕಗ್ಗೊಲೆಗೆ ಸಿದ್ಧವಾದ ಸಿದ್ದರಾಮಯ್ಯ ಸರ್ಕಾರ

Date:

ನಮ್ಮ ಸಂವಿಧಾನಬದ್ಧ ಹಕ್ಕು ಸಿಕ್ಕಿದೆ ಎಂದು ನಾವು ಸಂಭ್ರಮಿಸುತ್ತಿರುವ ಹೊತ್ತಲ್ಲೇ, ಸಿಕ್ಕ ನ್ಯಾಯವನ್ನು ಜಾರಿಗೆ ತರದಂತೆ ವ್ಯವಸ್ಥಿತವಾದ ಒಳಸಂಚು ನಡೆಯುತ್ತಿರುವುದು ಕ್ರೂರ ಅಸ್ಪೃಶ್ಯತೆಯ ಮತ್ತೊಂದು ರೂಪವೇ ಆಗಿದೆ.

ರಾಜ್ಯಪಾಲರು ಒಳಮೀಸಲಾತಿ ಬಿಲ್‌ಗೆ ಅಂಕಿತ ಹಾಕಿದ ಮೇಲೂ, ಸರ್ಕಾರ ಹಳೆಯ ಪದ್ಧತಿಯಲ್ಲೇ 56,432 ಹುದ್ದೆಗಳ ನೇಮಕಾತಿಗೆ ಮುಂದಾಗಿರುವುದು ಕೇವಲ ಆಡಳಿತಾತ್ಮಕ ನಿರ್ಧಾರವಲ್ಲ; ಇದು ಮಾದಿಗ ಮತ್ತು ಇತರ ಶೋಷಿತ ಸಮುದಾಯಗಳ ದಶಕಗಳ ಹೋರಾಟಕ್ಕೆ ಬಗೆದ ದ್ರೋಹ.

- Advertisement -

ಮಾನ್ಯ ಮುಖ್ಯಮಂತ್ರಿ ಹಾಗೂ ಸಚಿವರುಗಳೇ, ಕಣ್ಣೊರೆಸುವ ತಂತ್ರ ಬೇಡ. ಒಂದು ಕೈಯಲ್ಲಿ ‘ಒಳಮೀಸಲಾತಿ’ಯ ಹಕ್ಕು ಕೊಟ್ಟಂತೆ ಕೊಟ್ಟು,ನಟಿಸಿ, ಇನ್ನೊಂದು ಕೈಯಲ್ಲಿ ಸಾವಿರಾರು ಉದ್ಯೋಗಗಳನ್ನು ಹಳೆಯ ಪದ್ಧತಿಯಲ್ಲೇ ಭರ್ತಿ ಮಾಡಲು ಹೊರಟಿರುವುದು ಶೋಷಿತರ ಬದುಕಿನ ಜೊತೆ ಆಡುತ್ತಿರುವ ಕ್ರೂರ ಚೆಲ್ಲಾಟವೇ ಸರಿ. ನಿಮ್ಮ ಸರ್ಕಾರ ಕಾನೂನು ಮತ್ತು ಸಂವಿಧಾನವನ್ನು ಗೌರವಿಸುವುದೇ ಆಗಿದ್ದಲ್ಲಿ ಪ್ರತಿಯೊಂದು ನೇಮಕಾತಿಯಲ್ಲೂ ಒಳಮೀಸಲಾತಿ ಜಾರಿಯಾಗಲೇಬೇಕು. ಇಲ್ಲವಾದಲ್ಲಿ ಮಾದಿಗ ಸಮುದಾಯ ನಿಮ್ಮನ್ನು ಎಂದಿಗೂ ಕ್ಷಮಿಸಲಾರದು. ನಾಡಿನಾದ್ಯಂತ ನಿಮ್ಮ ರಾಜಕೀಯದ ಶಕ್ತಿಯನ್ನು ಕುಗ್ಗಿಸುವುದಕ್ಕೆ ಇಡೀ ಸಮುದಾಯವೇ ಶ್ರಮಿಸುತ್ತದೆ, ಎಚ್ಚರ‌!

ಇನ್ನಷ್ಟು ವಿಶೇಷ ಲೇಖನಗಳಿಗಾಗಿ, ಇಲ್ಲಿ ಕ್ಲಿಕ್ ಮಾಡಿ →

ಲೈಂಗಿಕ ಕಿರುಕುಳ ಆರೋಪಕ್ಕೆ ಜಾತಿದೌರ್ಜನ್ಯ ಗುರಾಣಿಯೇ? ಸಂತ್ರಸ್ತೆಯ ವಿರುದ್ಧ...

ಸಿಇಸಿ ಗ್ಯಾನೇಶ್ ಕುಮಾರ್ ರಾಜೀನಾಮೆಗೆ ಆಗ್ರಹಿಸಿ ಜಂತರ್ ಮಂತರ್ ಸಮೀಪ ನಡೆದ ಪ್ರತಿಭಟನೆಯಲ್ಲಿ ಮೂವರು ಮಹಿಳಾ ಪತ್ರಕರ್ತೆಯರಿಗೆ ಲೈಂಗಿಕ ಕಿರುಕುಳ ನೀಡಿದ ಗಂಭೀರ ಆರೋಪ ಎದುರಿಸುತ್ತಿರುವ ದೆಹಲಿ ಪೊಲೀಸ್ ಸಹಾಯಕ ಆಯುಕ್ತ (ಎಸಿಪಿ)...

ಚಿಕ್ಕಬಳ್ಳಾಪುರ ಕಾಂಗ್ರೆಸ್‌ನಲ್ಲಿ ಭಿನ್ನಮತ ಸ್ಫೋಟ: ಶಾಸಕ ಪ್ರದೀಪ್ ಈಶ್ವರ್...

ಚಿಕ್ಕಬಳ್ಳಾಪುರ ಶಾಸಕ ಪ್ರದೀಪ್ ಈಶ್ವರ್ ಅವರು ತಾವು ರಾಜಕೀಯಕ್ಕೆ ಬರಲು ಮತ್ತು ಟಿಕೆಟ್ ಪಡೆಯಲು ಚಿಂತಾಮಣಿ ಶಾಸಕ ಹಾಗೂ ಮಾಜಿ ಸಚಿವ ಡಾ. ಎಂ.ಸಿ. ಸುಧಾಕರ್ ಅವರೇ ಕಾರಣ ಎಂದು ಬಹಿರಂಗವಾಗಿ ಹಲವಾರು...

ಬೆವರಿನ ಹಣಕ್ಕೆ ಮೋದಿ ಸರ್ಕಾರದ ಕಂಟಕ: ಹೊಸ ಪಿಎಫ್...

ತಮ್ಮದೇ ಬೆವರಿನ ಗಳಿಕೆ, ತುರ್ತು ಬದುಕಿನ ಆಸರೆ ಪಿಎಫ್. ಆದರೆ ಇಂದು ಆ ಹಣವನ್ನು ಪಡೆಯಲಾಗದೆ ಗಾರ್ಮೆಂಟ್ಸ್ ಕಾರ್ಮಿಕರು ಕಣ್ಣೀರು ಹಾಕುವಂತಾಗಿದೆ. ಬಟ್ಟೆ ಕಾರ್ಖಾನೆಗಳ ಶ್ರಮಿಕರ ಬದುಕಿಗೆ ಕೇಂದ್ರದ ಮೋದಿ ಸರ್ಕಾರದ ಹೊಸ...

ನಿಮ್ಮ ಸರ್ಕಾರಕ್ಕೆ ಕಿಂಚಿತ್ತಾದರೂ ನೈತಿಕ ಹೊಣೆಗಾರಿಕೆ ಇದೆಯೇ? ನಿಮಗೆ ಬದ್ಧತೆ ಇಲ್ಲವೇ? ನೀವೇ ತಂದ ಕಾನೂನನ್ನು ನೀವೇ ಜಾಣತನದಿಂದ ಕಡೆಗಣಿಸುತ್ತಿರುವುದು ಏಕೆ? ಕಾಗದದ ಮೇಲಷ್ಟೇ ನ್ಯಾಯವೇ? ಗೆಜೆಟ್‌ನಲ್ಲಿ ದಾಖಲಾದ ನ್ಯಾಯದ ಮಾತು ಕಡತದಿಂದ ಕಚೇರಿಯ ನೇಮಕಾತಿ ಪಟ್ಟಿಗೆ ಇಳಿಯದಿದ್ದರೆ ಆ ಮಾತಿಗೆ ಬೆಲೆ ಎಲ್ಲಿದೆ? ಇದು ಸಾಮಾಜಿಕ ನ್ಯಾಯದ ಹೆಸರಲ್ಲಿ ನಡೆಯುತ್ತಿರುವ ಅಕ್ಷರಶಃ ವಂಚನೆ.‌ ಶತಮಾನಗಳಿಂದ ತುಳಿತಕ್ಕೊಳಗಾದ ಸಮುದಾಯಕ್ಕೆ ಇಂದು ಸಿಕ್ಕ ಜಯವನ್ನು ‘ತಾಂತ್ರಿಕ ಕಾರಣ’ ನೀಡಿ ಕಸಿದುಕೊಳ್ಳಲಾಗುತ್ತಿದೆ. ನಮಗೆ ಬೇಕಿರುವುದು ಭರವಸೆಯ ಬಣ್ಣದ ಮಾತುಗಳಲ್ಲ, ಉದ್ಯೋಗಗಳಲ್ಲಿ ನಮ್ಮ ಪಾಲಿನ ಸಾಂವಿಧಾನಿಕ ಹಕ್ಕು. ನಿಮ್ಮಲ್ಲಿ ನಾವು ಬಿಕ್ಷೆ ಬೇಡುತ್ತಿಲ್ಲ, ನಮಗೆ ದಕ್ಕಬೇಕಾದ ನ್ಯಾಯಬದ್ಧ ಹಕ್ಕನ್ನು ಮಾತ್ರವೇ ಕೇಳುತ್ತಿದ್ದೇವೆ.

ಮಾದಿಗ ಸಮುದಾಯದ ಬಂಧುಗಳೇ, ಇನ್ನೂ ನಾವು ಜಾಗೃತರಾಗದಿದ್ದರೆ ನಷ್ಟವಾಗುವುದು ನಮಗೇ, ನಮ್ಮ ಭವಿಷ್ಯಕ್ಕೇ, ನೆನಪಿರಲಿ! ಎಚ್ಚರಗೊಳ್ಳಿ, ಸರ್ಕಾರವು ಸಾಮಾಜಿಕ ನ್ಯಾಯಕ್ಕೆ ಬಗೆಯುತ್ತಿರುವ ದ್ರೋಹವನ್ನು ಕಂಡಕಂಡಲ್ಲಿ ಖಂಡಿಸಿ. ಹೋರಾಟದ ಹಾದಿಗೆ ಮತ್ತೆ ನಾವು ಸಿದ್ಧರಾಗಬೇಕಿದೆ, ನಮ್ಮ ಹಕ್ಕನ್ನು ನಾವು ಪಡೆದೇ ತೀರಬೇಕಿದೆ.

ಈ ಲೇಖನ ಓದಿದ್ದೀರಾ?: ದೆಹಲಿ vs ಹಿಮಾಚಲ ಪ್ರದೇಶ ಪೊಲೀಸ್: ಒಂದು ರಾಜ್ಯದ ಪೊಲೀಸರು ಮತ್ತೊಂದು ರಾಜ್ಯದ ಪೊಲೀಸರನ್ನು ಬಂಧಿಸಬಹುದೇ?

ನಮ್ಮ ಸಂವಿಧಾನಬದ್ಧ ಹಕ್ಕು ಸಿಕ್ಕಿದೆ ಎಂದು ನಾವು ಸಂಭ್ರಮಿಸುತ್ತಿರುವ ಹೊತ್ತಲ್ಲೇ, ಸಿಕ್ಕ ನ್ಯಾಯವನ್ನು ಜಾರಿಗೆ ತರದಂತೆ ವ್ಯವಸ್ಥಿತವಾದ ಒಳಸಂಚು ನಡೆಯುತ್ತಿರುವುದು ಕ್ರೂರ ಅಸ್ಪೃಶ್ಯತೆಯ ಮತ್ತೊಂದು ರೂಪವೇ ಆಗಿದೆ. 56,432 ಹುದ್ದೆಗಳು ಹಳೆಯ ಮೀಸಲಾತಿಯಡಿ ಭರ್ತಿಯಾದರೆ, ನಮ್ಮ ಯುವಕರ ಭವಿಷ್ಯ ಮತ್ತೆ ಇಪ್ಪತ್ತು ವರ್ಷಗಳ ಕಾಲ ಕಗ್ಗತ್ತಲಿಗೆ ಸರಿಯಲಿದೆ. ಈಗ ಎಚ್ಚೆತ್ತು ಧ್ವನಿ ಎತ್ತದಿದ್ದರೆ, ಮಾದಿಗರಿಗೆ ಸರ್ಕಾರದಿಂದ ಮರಣ ಶಾಸನ ಗ್ಯಾರಂಟಿ.

ಮಾನ್ಯ ಮುಖ್ಯಮಂತ್ರಿಗಳೇ , ಸಚಿವರುಗಳೇ, ಶಾಸಕರುಗಳೇ… ಸಮತೆ, ಸಾಮಾಜಿಕ ನ್ಯಾಯ, ಸಂವಿಧಾನಕ್ಕೆ ಬದ್ಧರಾಗಿದ್ದೇವೆ ಎಂದು ಉದ್ದುದ ಭಾಷಣ ಬಿಗಿಯುತ್ತೀರಿ! ಅದಕ್ಕೆ ತಕ್ಕುದಾದ ಬದ್ಧತೆ ಇರಬೇಕಾದದ್ದು ಬರೀ ಭಾಷಣದಲ್ಲಲ್ಲ, ನಿಮ್ಮ ನಡೆಯಲ್ಲೂ ಇರಬೇಕು. ರಾಜ್ಯಪಾಲರ ಅಂಕಿತದ ನಂತರವೂ ಹಳೆಯ ಪದ್ಧತಿಯನ್ನು ಅನುಸರಿಸುವುದು ಸಂವಿಧಾನದ ನಿಂದನೆ ಮಾತ್ರವಲ್ಲ, ಜನರ ನಂಬಿಕೆಗೆ ಮಾಡುವ ಅಪಚಾರ, ಮಾದಿಗ ಸಮುದಾಯಕ್ಕೆ ಎಸೆದ ಅತಿದೊಡ್ಡ ದ್ರೋಹ ಕೂಡ. ಹಾಗಾಗಿ, 56,432 ಹುದ್ದೆಗಳ ನೇಮಕಾತಿ ಪ್ರಕ್ರಿಯೆಯಲ್ಲಿ ರಾಜ್ಯಪಾಲರ ಅಂಕಿತದ ಅನುಸಾರದಂತೆ ಒಳಮೀಸಲಾತಿಯನ್ನು ಜಾರಿಗೆ ತರುವಂತೆ ಶೀಘ್ರಾತಿಶೀಘ್ರದಲ್ಲಿ ಆದೇಶ ಹೊರಡಿಸಬೇಕು, ಇಲ್ಲವೇ, ಮಾದಿಗರ, ಮಾದಿಗ ಸಂಬಂಧಿತ ಎಲ್ಲ‌ ಜಾತಿಸಮುದಾಯಗಳ ಹಾಗೂ ಸಾಮಾಜಿಕ ನ್ಯಾಯದ ಪರವಾಗಿರುವ ಎಲ್ಲ ನಾಗರಿಕರ ಕಟು ವಿರೋಧಕ್ಕೆ- ನಿಮ್ಮ ಮುಂದಿನ‌ ಚುನಾವಣಾ ಭವಿಷ್ಯವನ್ನೇ ನಿರ್ಧರಿಸುವಂತಹ ನಿರ್ಣಾಯಕ ವಿರೋಧಕ್ಕೆ- ನೀವು‌ ಗುರಿಯಾಗಬೇಕು. ಆಯ್ಕೆ ನಿಮ್ಮದು.

ಪೋಸ್ಟ್ ಹಂಚಿಕೊಳ್ಳಿ:

ಗಂಗಾಧರ್ ಬಿ ಎಂ ಬಾಣಸಂದ್ರ
ಗಂಗಾಧರ್ ಬಿ ಎಂ ಬಾಣಸಂದ್ರ
ಸಂಶೋಧನಾ ವಿದ್ಯಾರ್ಥಿ, ತುಮಕೂರು ವಿಶ್ವವಿದ್ಯಾಲಯ

ಪೋಸ್ಟ್ ಹಂಚಿಕೊಳ್ಳಿ:

ಈ ಹೊತ್ತಿನ ಪ್ರಮುಖ ಸುದ್ದಿ

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ಜಂತರ್ ಮಂತರ್ ಧರಣಿ ಸ್ಥಳ ರದ್ದತಿ ಖಂಡಿಸಿ ಎಸ್‌ಎಫ್‌ಐ, ಡಿವೈಎಫ್‌ಐ ಪ್ರತಿಭಟನಾ ಮೆರವಣಿಗೆ: ಹಲವು ನಾಯಕರು ಪೊಲೀಸ್ ವಶಕ್ಕೆ

ದೇಶದ ರಾಜಧಾನಿ ದೆಹಲಿಯ ಐತಿಹಾಸಿಕ 'ಜಂತರ್ ಮಂತರ್' ಅನ್ನು ಪ್ರಜಾಸತ್ತಾತ್ಮಕ ಪ್ರತಿಭಟನಾ...

ಎಸ್‌ಐಆರ್ ವಿರುದ್ಧ ಸುಪ್ರೀಂ ಕೋರ್ಟ್ ಮೆಟ್ಟಿಲೇರಿದ ಓವೈಸಿ: ಅರ್ಜಿಯ ತುರ್ತು ವಿಚಾರಣೆಗೆ ಮನವಿ

ಮತದಾರರ ಪಟ್ಟಿಯ 'ವಿಶೇಷ ತೀವ್ರ ಪರಿಷ್ಕರಣೆ' (ಎಸ್‌ಐಆರ್) ನಡೆಸುತ್ತಿರುವ ಚುನಾವಣಾ ಆಯೋಗದ...