ತಮಿಳುನಾಡು | 238 ಬಾರಿ ಚುನಾವಣೆಯಲ್ಲಿ ಸೋತರೂ ದಣಿಯದ ಪದ್ಮರಾಜನ್;‌ ಲೋಕಸಭಾ ಚುನಾವಣೆಯಲ್ಲಿ ಸ್ಪರ್ಧೆ

Date:

ಚುನಾವಣೆಯಲ್ಲಿ ಸ್ಪರ್ಧಿಸಿ ಸೋತರೆ ಯಾರಿಗಾದರೂ ನಿರಾಶೆ ಉಂಟಾಗಬಹುದು. ಆದರೆ ಟೈರ್ ರಿಪೇರಿ ಅಂಗಡಿ ಮಾಲೀಕ ಕೆ ಪದ್ಮರಾಜನ್(65) ಬರೋಬ್ಬರಿ 238 ಬಾರಿ ಚುನಾವಣೆಯಲ್ಲಿ ಸೋತಿದ್ದರೂ ಕೂಡ ನಿರಾಸೆಗೊಳ್ಳದೆ ಈಗ ಮತ್ತೆ ಲೋಕಸಭಾ ಚುನಾವಣೆಯಲ್ಲಿ ಸ್ಪರ್ಧಿಸಲು ಸಿದ್ಧವಾಗಿದ್ದಾರೆ.

ತಮಿಳುನಾಡಿನ ತನ್ನ ತವರು ಮೆಟ್ಟೂರಿನಿಂದ 1988 ರಲ್ಲಿ ಕೆ ಪದ್ಮರಾಜನ್ ಚುನಾವಣೆಯಲ್ಲಿ ಸ್ಪರ್ಧಿಸಲು ಪ್ರಾರಂಭಿಸಿದರು. ಇವರು ಚುನಾವಣಾ ಕಣಕ್ಕೆ ಧುಮುಕಿದಾಗ ಜನರು ಇವರನ್ನು ಕಂಡು ಹಾಸ್ಯ ಚಟಾಕಿ ಹಾರಿಸಿದ್ದರು. ಆದರೆ ಒಬ್ಬ ಸಾಮಾನ್ಯ ವ್ಯಕ್ತಿಯೂ ಕೂಡಾ ಚುನಾವಣೆಯಲ್ಲಿ ಸ್ಪರ್ಧಿಸಬಹುದೆಂದು ಸಾಬೀತುಪಡಿಸಲು ಮುಂದಾದ ಪದ್ಮರಾಜನ್ ಹಿಂಜರಿಯಲಿಲ್ಲ.

ʼಎಲ್ಲ ಅಭ್ಯರ್ಥಿಗಳು ಚುನಾವಣೆಯಲ್ಲಿ ಗೆಲುವನ್ನು ಬಯಸುತ್ತಾರೆ. ಆದರೆ ನಾನು ಹಾಗಲ್ಲʼ ಎಂದು ಭುಜದ ಮೇಲೆ ಹೊದ್ದ ಹಳದಿ ಬಣ್ಣದ ಶಲ್ಯ ಸರಿಪಡಿಸಿಕೊಂಡು ಗತ್ತಿನಿಂದ ಮೀಸೆ ತಿರುವಿ ಹೇಳುತ್ತಾರೆ ಪದ್ಮರಾಜನ್.

ಸುದ್ದಿ ನಿರಂತರವಾಗಿ ಉಚಿತವೇ ಆಗಿರುವುದು ಹೇಗೆ ಸಾಧ್ಯ? ಅದಕ್ಕೆ ನಿಮ್ಮ ಬೆಂಬಲವೂ ನಿರಂತರವಾಗಿ ಇದ್ದಾಗ ಮಾತ್ರ ಸಾಧ್ಯ. ಚಂದಾದಾರರಾಗಿ – ಆ ಮೂಲಕ ಸತ್ಯ, ನ್ಯಾಯ, ಪ್ರೀತಿ ಮೌಲ್ಯಗಳನ್ನು ಎಲ್ಲರಿಗೂ ಹರಡಲು ಜೊತೆಯಾಗಿ.

ಚುನಾವಣೆಯಲ್ಲಿ ಭಾಗವಹಿಸುವುದೇ ಗೆಲುವು, ಅನಿವಾರ್ಯವಾಗಿ ಸೋಲು ಬಂದಾಗ ಸೋಲಿನಲ್ಲಿಯೂ ಖುಷಿ ಕಾಣುತ್ತಾರೆ. ಈ ವರ್ಷ, ಏಪ್ರಿಲ್ 19ರಂದು ಪ್ರಾರಂಭವಾಗುವ ಸಾರ್ವತ್ರಿಕ ಚುನಾವಣೆಯಲ್ಲಿ ಅವರು ತಮಿಳುನಾಡಿನ ಧರ್ಮಪುರಿ ಸಂಸದೀಯ ಸ್ಥಾನಕ್ಕೆ ಸ್ಪರ್ಧಿಸುತ್ತಿದ್ದಾರೆ.

“ಚುನಾವಣಾ ರಾಜ” ಎಂದು ಜನಪ್ರಿಯವಾಗಿರುವ ಪದ್ಮರಾಜನ್ ಅವರು ರಾಷ್ಟ್ರಪತಿ ಚುನಾವಣೆಯಿಂದ ಸ್ಥಳೀಯ ಚುನಾವಣೆಗಳವರೆಗಿನ ಚುನಾವಣೆಗಳಲ್ಲಿ ದೇಶಾದ್ಯಂತ ಸ್ಪರ್ಧಿಸಿದ್ದಾರೆ. ಇಷ್ಟು ವರ್ಷಗಳಲ್ಲಿ ಪದ್ಮರಾಜನ್, ಪ್ರಧಾನಿ ನರೇಂದ್ರ ಮೋದಿ, ಮಾಜಿ ಪ್ರಧಾನಿಗಳಾದ ಅಟಲ್ ಬಿಹಾರಿ ವಾಜಪೇಯಿ ಮತ್ತು ಮನಮೋಹನ್ ಸಿಂಗ್ ಮತ್ತು ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿಯವರ ವಿರುದ್ಧ ಸ್ಪರ್ಧಿಸಿ ಸೋತಿದ್ದಾರೆ.

ಚುನಾವಣಾ ರಾಜ ಪದ್ಮರಾನ್

“ಗೆಲುವು ಮುಖ್ಯವಲ್ಲವೇ ಅಲ್ಲ, ನನ್ನ ವಿರುದ್ಧವಿರುವ ಅಭ್ಯರ್ಥಿ ಯಾರು? ಎಂದು ನಾನು ತಲೆಕೆಡಿಸಿಕೊಳ್ಳುವುದೇ ಇಲ್ಲ. ಈಗ ಮುಖ್ಯ ಗುರಿ ಸೋಲಿನ ಸರಣಿಯನ್ನು ವಿಸ್ತರಿಸುವುದು. ಇದೇನೂ ಸುಮ್ಮನೆ ಸಿಕ್ಕಿಲ್ಲ. ಮೂರು ದಶಕಗಳಿಂದ ಚುನಾವಣೆ ಸ್ಪರ್ಧಿಸಲು ನಾಮನಿರ್ದೇಶನ ಸಲ್ಲಿಸುವಾಗ ನಾಮನಿರ್ದೇಶನ ಶುಲ್ಕದಲ್ಲಿ ಸಾವಿರಾರು ಡಾಲರ್‌ಗಳನ್ನು ಖರ್ಚು ಮಾಡಿದ್ದೇನೆ. ಇತ್ತೀಚಿನ ಚುನಾವಣೆಯಲ್ಲಿ ₹25,000 ಭದ್ರತಾ ಠೇವಣಿಯೂ ಸೇರಿದೆ. ಶೇ.16 ಕ್ಕಿಂತ ಹೆಚ್ಚು ಮತಗಳನ್ನು ಗೆಲ್ಲದ ಹೊರತು ಭದ್ರತಾ ಠೇವಣಿಯನ್ನು ಮರುಪಾವತಿಸಯಾಗುವುದಿಲ್ಲ” ಎನ್ನುತ್ತಾರೆ ಪದ್ಮರಾಜನ್.

ಭಾರತದಲ್ಲಿ ಅತಿಹೆಚ್ಚು ಪರಾಭವಗೊಂಡ ಅಭ್ಯರ್ಥಿ ಎಂಬ ಲಿಮ್ಕಾ ಬುಕ್ ಆಫ್ ರೆಕಾರ್ಡ್ಸ್‌ನಲ್ಲಿ ಸ್ಥಾನಗಿಟ್ಟಿಸಿದ್ದೇ ಪದ್ಮರಾಜನ್ ಅವರ ಗೆಲುವು. 2011ರಲ್ಲಿ ಮೆಟ್ಟೂರಿನಲ್ಲಿ ವಿಧಾನಸಭಾ ಚುನಾವಣೆಗೆ ನಿಂತಾಗ ಪದ್ಮರಾಜನ್ ಅವರಿಗೆ 6,273 ಮತಗಳು ಸಿಕ್ಕಿದ್ದವು. ಈ ವೇಳೆ, “ನಾನು ಒಂದು ಮತವನ್ನೂ ನಿರೀಕ್ಷಿಸಿರಲಿಲ್ಲ. ಆದರೆ ಜನರು ನನ್ನನ್ನು ಸ್ವೀಕರಿಸುತ್ತಿದ್ದಾರೆಂದು ಈ ಮತಗಳು ತೋರಿಸಿವೆ” ಎಂದು ಪದ್ಮರಾಜನ್ ಹೇಳಿದ್ದರು.

ಟೈರ್ ರಿಪೇರಿ ಅಂಗಡಿಯ ಜತೆಗೆ, ಪದ್ಮರಾಜನ್ ಹೋಮಿಯೋಪತಿ ಪರಿಹಾರಗಳನ್ನು ಒದಗಿಸುತ್ತಾರೆ. ಸ್ಥಳೀಯ ಮಾಧ್ಯಮಗಳಿಗೆ ಸಂಪಾದಕರಾಗಿ ಕೆಲಸ ಮಾಡುತ್ತಾರೆ. ಆದರೆ ಅವರ ಎಲ್ಲ ಕೆಲಸಗಳಲ್ಲಿ ಚುನಾವಣೆ ಹೋರಾಟವೇ ಪ್ರಮುಖವಾಗಿತ್ತು ಎನ್ನುತ್ತಾರೆ.

“ಚುನಾವಣೆ ಒಳಗೊಳ್ಳುವಿಕೆಗೆ ಸಂಬಂಧಿಸಿದ್ದು, ಜನರು ತಮ್ಮ ನಾಮನಿರ್ದೇಶನಗಳನ್ನು ನೀಡಲು ಹಿಂಜರಿಯುತ್ತಾರೆ. ಹಾಗಾಗಿ ಈ ಬಗ್ಗೆ ಜಾಗೃತಿ ಮೂಡಿಸಿ ನಾನು ಮಾದರಿಯಾಗಲು ಬಯಸುತ್ತೇನೆ” ಎಂದು ಹೇಳಿದ್ದಾರೆ.

ಪದ್ಮರಾಜನ್ ಅವರು ನಾಮನಿರ್ದೇಶನ ಪತ್ರಗಳು ಮತ್ತು ಗುರುತಿನ ಕಾರ್ಡ್‌ಗಳ ವಿವರವಾದ ದಾಖಲೆಗಳನ್ನು ಸುರಕ್ಷಿತವಾಗಿ ನಿರ್ವಹಿಸುತ್ತಾರೆ. ಅವರ ಪ್ರತಿಯೊಂದು ವಿಫಲವಾದ ರಾಜಪ್ರಭುತ್ವದ ಬಿಡ್‌ಗಳಿಂದ, ಎಲ್ಲವನ್ನೂ ಸುರಕ್ಷಿತವಾಗಿಟ್ಟುಕೊಳ್ಳು ಲ್ಯಾಮಿನೇಟ್ ಮಾಡಲಾಗಿದೆ. ಅವರು ಮೀನು, ಉಂಗುರ, ಟೋಪಿ, ದೂರವಾಣಿ, ಮತ್ತು ಟೈರ್ ಸೇರಿದಂತೆ ಹಲವು ಚಿಹ್ನೆಗಳ ಗುರುತುಗಳಲ್ಲಿ ಸ್ಪರ್ಧಿಸಿದ್ದಾರೆ.

ಒಮ್ಮೆ ಹಾಸ್ಯಾಸ್ಪದ ವಿಷಯವಾಗಿದ್ದ ಪದ್ಮರಾಜನ್ ಈಗ ಸೋಲನ್ನೂ ದಿಟ್ಟತನದಿಂದ ಸ್ವೀಕರಿಸುವುದು ಹೇಗೆ ಎಂಬುದನ್ನು ವಿದ್ಯಾರ್ಥಿಗಳಿಗೆ ಹೇಳಿಕೊಡುತ್ತಾರೆ. “ನಾನು ಗೆಲ್ಲುವ ಬಗ್ಗೆ ಯೋಚಿಸುವುದಿಲ್ಲ. ಸೋಲು ಒಳ್ಳೆಯದು. ನಾವು ಅಂತಹ ಮನಸ್ಸಿನಲ್ಲಿದ್ದರೆ, ನಾವು ಒತ್ತಡಕ್ಕೆ ಒಳಗಾಗುವುದಿಲ್ಲ” ಎಂದಿದ್ದಾರೆ ಅವರು.

ಈ ಸುದ್ದಿ ಓದಿದ್ದೀರಾ? ಮುಂಬೈ | ಸಾಂಗ್ಲಿಯಿಂದ ಶಿವಸೇನೆ ಸ್ಪರ್ಧೆ; ಬಿಜೆಪಿಗೆ ನೆರವು ನೀಡದಂತೆ ಸಂಜಯ್ ರಾವತ್ ಕರೆ

“ದೇಶದ ಪ್ರತಿಯೊಬ್ಬ ಪ್ರಜೆಯೂ ತಮ್ಮ ಹಕ್ಕು ಚಲಾಯಿಸುವುದು ಹಿಂದೆಂದಿಗಿಂತಲೂ ಈಗ ಮುಖ್ಯವಾಗಿದೆ. ಇದು ಅವರ ಹಕ್ಕು, ಅವರು ಮತ ಚಲಾಯಿಸಬೇಕು. ಆ ನಿಟ್ಟಿನಲ್ಲಿ ಸೋಲು-ಗೆಲುವು ಇಲ್ಲ. ತನ್ನ ಕೊನೆಯ ಉಸಿರು ಇರುವವರೆಗೂ ಚುನಾವಣೆಯಲ್ಲಿ ಹೋರಾಡುವುದನ್ನು ಮುಂದುವರೆಸುತ್ತೇನೆ ಎಂದು ಹೇಳುತ್ತಾ ಚುನಾವಣೆ ಗೆದ್ದರೆ ನನಗೆ ಸಹಿಸಲು ಆಗಲ್ಲ. ಓಮದು ವೇಳೆ ಗೆದ್ದರೆ, ಗೆಲುವಿನ ಸಂತಸದ ಆಘಾತದಲ್ಲಿ ನನಗೆ ಹೃದಯಾಘಾತವೇ ಆಗಿಬಿಡುತ್ತದೇನೋ” ಎಂದು ಪದ್ಮರಾಜನ್ ಗಹಗಹಿಸಿ ನಗುತ್ತಾರೆ.

ಪೋಸ್ಟ್ ಹಂಚಿಕೊಳ್ಳಿ:

LEAVE A REPLY

Please enter your comment!
Please enter your name here

ಪೋಸ್ಟ್ ಹಂಚಿಕೊಳ್ಳಿ:

ಹೆಚ್ಚು ಓದಿಸಿಕೊಂಡ ಲೇಖನಗಳು

ವಿಡಿಯೋ

ಸುದ್ದಿ ನಿರಂತರವಾಗಿ ಉಚಿತವೇ ಆಗಿರುವುದು ಹೇಗೆ ಸಾಧ್ಯ? ಅದಕ್ಕೆ ನಿಮ್ಮ ಬೆಂಬಲವೂ ನಿರಂತರವಾಗಿ ಇದ್ದಾಗ ಮಾತ್ರ ಸಾಧ್ಯ. ಚಂದಾದಾರರಾಗಿ – ಆ ಮೂಲಕ ಸತ್ಯ, ನ್ಯಾಯ, ಪ್ರೀತಿ ಮೌಲ್ಯಗಳನ್ನು ಎಲ್ಲರಿಗೂ ಹರಡಲು ಜೊತೆಯಾಗಿ.
Related

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ಪೆನ್‌ಡ್ರೈವ್‌ ಪ್ರಕರಣ; ಅಪ್ಪ- ಮಗ ಇಬ್ಬರಿಂದಲೂ ಲೈಂಗಿಕ ಕಿರುಕುಳ- ಸಂತ್ರಸ್ತೆ ದೂರು

ಹಾಸನದ ಪ್ರಭಾವಿ ರಾಜಕೀಯ ಕುಟುಂಬಕ್ಕೆ ಸಂಬಂಧಿಸಿದ ಲೈಂಗಿಕ ಹಗರಣ ಹಲವು ತಿರುವುಗಳನ್ನು...

ಹಾಸನ ಪೆನ್‌ಡ್ರೈವ್ ಪ್ರಕರಣ | ವಿಶೇಷ ತನಿಖಾ ತಂಡ ರಚಿಸಲು ಸರ್ಕಾರ ನಿರ್ಧಾರ

ಹಾಸನದ ಜೆಡಿಎಸ್ ಸಂಸದ ಪ್ರಜ್ವಲ್ ರೇವಣ್ಣ ಅವರದ್ದು ಎನ್ನಲಾದ ಅಶ್ಲೀಲ ವಿಡಿಯೋ...

ಮೋದಿ ಸುಳ್ಳುಗಳು: ಭಾಗ-1 | ಕಳೆದ 10 ವರ್ಷಗಳಲ್ಲಿ ವಿಶ್ವಾದ್ಯಂತ ಭಾರತದ ವಿಶ್ವಾಸಾರ್ಹತೆ ಹೆಚ್ಚಾಗಿದೆಯೇ? ವಾಸ್ತವ ಏನು?

ಮುಸಲ್ಮಾನರಿಗೆ ಕಳೆದ 30 ವರ್ಷದಿಂದ ಮೀಸಲಾತಿ ಜಾರಿಯಲ್ಲಿದೆ. ನಂತರ ಬಸವರಾಜ ಬೊಮ್ಮಾಯಿ...