ನಾಚಿಕೆ ಇಲ್ಲದ ಮೋದಿ ಸರ್ಕಾರಕ್ಕೆ ಕುಸ್ತಿಪಟು ಸಾಕ್ಷಿ ಮಲಿಕ್ ಕಣ್ಣೀರೇ ಸಾಕ್ಷಿ: ರಣದೀಪ್ ಸಿಂಗ್ ಸುರ್ಜೇವಾಲ

Date:

ಮಹಿಳಾ ಕುಸ್ತಿಪಟುಗಳಿಗೆ ಲೈಂಗಿಕ ಕಿರುಕುಳ ನೀಡಿದ ಆರೋಪ ಎದುರಿಸುತ್ತಿರುವ ಭಾರತದ ಕುಸ್ತಿ ಫೆಡರೇಷನ್‌ನ ಮಾಜಿ ಅಧ್ಯಕ್ಷ ಬ್ರಿಜ್‌ ಭೂಷಣ್ ಶರಣ್ ಸಿಂಗ್ ಅವರ ಆಪ್ತ ಸಂಜಯ್ ಸಿಂಗ್ ಫೆಡರೇಷನ್‌ನ ನೂತನ ಅಧ್ಯಕ್ಷರಾಗಿ ಆಯ್ಕೆಯಾದ ಬೆನ್ನಲ್ಲೇ, ಒಲಿಂಪಿಕ್ಸ್ ಪದಕ ವಿಜೇತೆ ಸಾಕ್ಷಿ ಮಲಿಕ್, ತಾವು ಕುಸ್ತಿ ಕ್ರೀಡೆಯನ್ನು ತ್ಯಜಿಸುವುದಾಗಿ ಘೋಷಿಸಿ, ಕಣ್ಣೀರು ಹಾಕಿದ್ದಾರೆ.

ಈ ಬೆಳವಣಿಗೆಯ ಬಗ್ಗೆ ದೆಹಲಿಯ ಕಾಂಗ್ರೆಸ್ ಕಚೇರಿಯಲ್ಲಿ ಸುದ್ದಿಗೋಷ್ಠಿ ನಡೆಸಿದ ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ಹಾಗೂ ರಾಜ್ಯಸಭಾ ಸಂಸದ ರಣದೀಪ್ ಸಿಂಗ್ ಸುರ್ಜೇವಾಲ, “ಸಾಕ್ಷಿ ಮಲಿಕ್ ನಿವೃತ್ತಿ ದೇಶದ ಕ್ರೀಡಾ ಇತಿಹಾಸದಲ್ಲಿನ ಕರಾಳ ಅಧ್ಯಾಯ. ಆಕೆಯ ಕಣ್ಣೀರು ಮೋದಿ ಸರ್ಕಾರದ ನಾಚಿಕೆಗೇಡಿತನಕ್ಕೆ ಸಾಕ್ಷಿ” ಎಂದು ಆಕ್ರೋಶ ಹೊರಹಾಕಿದ್ದಾರೆ.

“ಒಲಿಂಪಿಕ್ ಪದಕ ಗೆದ್ದ ಮೊದಲ ಮಹಿಳಾ ಕುಸ್ತಿಪಟು ಎಂಬ ಸಾಕ್ಷಿ ಮಲಿಕ್. ಆಕೆಯ ಈ ರೀತಿಯಲ್ಲಿ ಕಣ್ಣೀರು ಹಾಕಿ, ನಿವೃತ್ತಿ ಹೊಂದುವಂತೆ ಮಾಡಿರುವುದು ಭಾರತದ ಕ್ರೀಡಾ ಇತಿಹಾಸದಲ್ಲಿ ಒಂದು ಕರಾಳ ಅಧ್ಯಾಯವಾಗಿದೆ. ರೈತನ ಮಗಳ ಕಣ್ಣಿಂದ ಹೊರಬರುವ ಪ್ರತಿ ಕಣ್ಣೀರು ಮೋದಿ ಸರ್ಕಾರದ ನಾಚಿಕೆಗೇಡಿಗೆ ಸಾಕ್ಷಿಯಾಗಿದೆ. ಹೆಣ್ಣುಮಕ್ಕಳನ್ನು ಅಳುವಂತೆ ಮಾಡಿ, ಹಿಂಸಿಸಿ, ಮನೆಯಲ್ಲಿ ಕೂರಿಸಿಕೊಳ್ಳುವುದೇ ಬಿಜೆಪಿಯ ಘೋಷಣೆ” ಎಂದು ಸುರ್ಜೇವಾಲ ತಿಳಿಸಿದ್ದಾರೆ.

ಸುದ್ದಿ ನಿರಂತರವಾಗಿ ಉಚಿತವೇ ಆಗಿರುವುದು ಹೇಗೆ ಸಾಧ್ಯ? ಅದಕ್ಕೆ ನಿಮ್ಮ ಬೆಂಬಲವೂ ನಿರಂತರವಾಗಿ ಇದ್ದಾಗ ಮಾತ್ರ ಸಾಧ್ಯ. ಚಂದಾದಾರರಾಗಿ – ಆ ಮೂಲಕ ಸತ್ಯ, ನ್ಯಾಯ, ಪ್ರೀತಿ ಮೌಲ್ಯಗಳನ್ನು ಎಲ್ಲರಿಗೂ ಹರಡಲು ಜೊತೆಯಾಗಿ.

ಒಲಿಂಪಿಕ್‌ನಲ್ಲಿ ಮೊದಲ ಪದಕ ಗೆದ್ದಿರುವ ಹರಿಯಾಣದ ಸಾಮಾನ್ಯ ರೈತ ಕುಟುಂಬದ ಮಗಳು ಮೋದಿ ಸರ್ಕಾರದ ಈ ನಡೆಯಿಂದ ಇಂದು ಮನೆಗೆ ಮರಳುವ ಸ್ಥಿತಿ ಬಂದಿರುವುದು ದೇಶದ ದೌರ್ಭಾಗ್ಯ. ಕುಸ್ತಿಪಟು ಹೆಣ್ಣು ಮಕ್ಕಳು ನ್ಯಾಯಕ್ಕಾಗಿ ಜಂತರ್ ಮಂತರ್‌ನಲ್ಲಿ ಕುಳಿತುಕೊಂಡರು. ಆದರೆ ಬಿಜೆಪಿ ಸರ್ಕಾರ ಅವರನ್ನು ದೆಹಲಿ ಪೊಲೀಸರ ಬೂಟುಗಳ ಮೂಲಕ ದೌರ್ಜನ್ಯವೆಸಗಿತು. ನ್ಯಾಯಕ್ಕಾಗಿ ಮಹಿಳಾ ಕುಸ್ತಿಪಟುಗಳು ಸ್ವತಃ ಪ್ರಧಾನಿ ಮೋದಿ, ಗೃಹ ಸಚಿವರು ಮತ್ತು ಕ್ರೀಡಾ ಸಚಿವರಿಗೆ ಮನವಿ ಮಾಡಿದ್ದರು. ಸುಪ್ರೀಂ ಕೋರ್ಟ್‌ನ ಆದೇಶದ ನಂತರ, ಎಫ್‌ಐಆರ್ ದಾಖಲಿಸಲಾಗಿದೆ. ಆದರೆ ಬಿಜೆಪಿ ಸಂಸದ ಬ್ರಿಜ್ ಭೂಷಣ್ ಶರಣ್ ಸಿಂಗ್ ಅವರನ್ನು ಈವರೆಗೆ ಬಂಧಿಸಲಾಗಿಲ್ಲ” ಎಂದು ದೂರಿದರು.

“ಮೋದಿ ಸರ್ಕಾರಕ್ಕೆ ದೇಶದ ಹೆಣ್ಣು ಮಕ್ಕಳು ಪ್ರಶ್ನೆಗಳನ್ನು ಕೇಳುತ್ತಿದ್ದಾರೆ. ಇಷ್ಟೆಲ್ಲ ಬೆಳವಣಿಗೆಗಳಾದರೂ ಮೋದಿ ಸರ್ಕಾರ ಏಕೆ ಮೌನವಾಗಿದೆ? ಕುಸ್ತಿಪಟು ಹೆಣ್ಣು ಮಕ್ಕಳಿಗೆ ಆಗುತ್ತಿರುವ ಅವಮಾನದ ಬಗ್ಗೆ ದೇಶದ ಸಂಸತ್ತು ಮೌನವಾಗಿರುವುದೇಕೆ? ದೇಶದ ರಾಷ್ಟ್ರಪತಿ ಮಹಿಳೆಯೇ ಆಗಿದ್ದಾರೆ. ಈ ಬಗ್ಗೆ ಒಂದೇ ಒಂದು ಹೇಳಿಕೆ ನೀಡುತ್ತಿಲ್ಲ. ಪ್ರಧಾನಿ, ಲೋಕಸಭೆ, ರಾಜ್ಯಸಭೆ ಅಧ್ಯಕ್ಷರು, ಖ್ಯಾತ ಕ್ರೀಡಾ ಪಟುಗಳು ಏಕೆ ಮೌನವಾಗಿದ್ದಾರೆ? ಈ ಪ್ರಾಬಲ್ಯ, ಭಯ, ಬೆದರಿಕೆ ಮತ್ತು ಅನ್ಯಾಯಗಳು ಹೊಸ ಭಾರತದಲ್ಲಿ ಸಾಮಾನ್ಯ ಎಂದು ಜನರು ಊಹಿಸಬಹುದು” ಎಂದು ರಾಜ್ಯಸಭಾ ಸಂಸದ ಸುರ್ಜೇವಾಲ ತಿಳಿಸಿದ್ದಾರೆ.

”ಲೈಂಗಿಕ ಕಿರುಕುಳ ಪ್ರಕರಣದಲ್ಲಿ ಸರ್ಕಾರದಿಂದ ನ್ಯಾಯ ಸಿಗದ ಕಾರಣ ಕುಸ್ತಿಯನ್ನು ತೊರೆದ ಸಾಕ್ಷಿ ಮಲಿಕ್‌ ಅವರ ವೇದನೆಯನ್ನು ಓರ್ವ ಕ್ರೀಡಾಪಟುವಾಗಿ ನಾನು ಕೂಡ ಅರ್ಥ ಮಾಡಿಕೊಳ್ಳಬಲ್ಲೆ. ದೇಶಕ್ಕಾಗಿ ಪದಕಗಳನ್ನು ತಂದುಕೊಟ್ಟ ಕ್ರೀಡಾಪಟುಗಳಿಗೆ ಹೀಗಾದರೆ ಸಾಮಾನ್ಯ ಜನರಿಗೆ ಏನಾಗಬಹುದು. ಸಾಕ್ಷಿ ಮಲಿಕ್ ಘಟನೆ ದೇಶದ ಕ್ರೀಡೆ ಹಾಗೂ ಕ್ರೀಡಾಪಟುಗಳ ಭವಿಷ್ಯಕ್ಕೆ ಒಂದು ಕಪ್ಪು ಚುಕ್ಕೆ” ಎಂದು ಕಾಂಗ್ರೆಸ್ ನಾಯಕ ಹಾಗೂ ಬಾಕ್ಸರ್ ಆಗಿರುವ ವಿಜೇಂದರ್ ಸಿಂಗ್ ಬೇಸರಿಸಿದ್ದಾರೆ.

ಈ ದಿನ ಡೆಸ್ಕ್‌
Website | + posts

ಪೋಸ್ಟ್ ಹಂಚಿಕೊಳ್ಳಿ:

LEAVE A REPLY

Please enter your comment!
Please enter your name here

ಪೋಸ್ಟ್ ಹಂಚಿಕೊಳ್ಳಿ:

ಹೆಚ್ಚು ಓದಿಸಿಕೊಂಡ ಲೇಖನಗಳು

ವಿಡಿಯೋ

ಸುದ್ದಿ ನಿರಂತರವಾಗಿ ಉಚಿತವೇ ಆಗಿರುವುದು ಹೇಗೆ ಸಾಧ್ಯ? ಅದಕ್ಕೆ ನಿಮ್ಮ ಬೆಂಬಲವೂ ನಿರಂತರವಾಗಿ ಇದ್ದಾಗ ಮಾತ್ರ ಸಾಧ್ಯ. ಚಂದಾದಾರರಾಗಿ – ಆ ಮೂಲಕ ಸತ್ಯ, ನ್ಯಾಯ, ಪ್ರೀತಿ ಮೌಲ್ಯಗಳನ್ನು ಎಲ್ಲರಿಗೂ ಹರಡಲು ಜೊತೆಯಾಗಿ.
Related

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ಸಿಎಎ ರದ್ದಾಗದಿದ್ದರೆ ಬೃಹತ್ ಹೋರಾಟ; ಅಸ್ಸಾಂ ವಿಪಕ್ಷಗಳ ಎಚ್ಚರಿಕೆ

ವಿವಾದಾತ್ಮಕ ಪೌರತ್ವ ತಿದ್ದುಪಡಿ ಕಾಯ್ದೆಯನ್ನು (ಸಿಎಎ) ಅನುಷ್ಠಾನಗೊಳಿಸದಂತೆ ಅಸ್ಸಾಂನ 16 ಪಕ್ಷಗಳ...

ರಾಮೇಶ್ವರ ಕೆಫೆ ಬಾಂಬ್ ಪ್ರಕರಣ | ಅಗತ್ಯ ಬಿದ್ದರೆ ತನಿಖೆ ಎನ್‌ಐಎಗೆ ವಹಿಸುತ್ತೇವೆ: ಸಿಎಂ ಸಿದ್ದರಾಮಯ್ಯ

"ರಾಮೇಶ್ವರ ಕೆಫೆ ಬಾಂಬ್ ಸ್ಫೋಟ ಪ್ರಕರಣವನ್ನು ಎನ್‌ಐಎಗೆ ವಹಿಸುವ ಬಗ್ಗೆ ಅಗತ್ಯ...

ಮೋದಿಯ ‘ದ್ರೋಹದ ಗ್ಯಾರಂಟಿ’; ರೈಲ್ವೆ ಪಾಲಿಸಿ ವಿರುದ್ಧ ರಾಹುಲ್ ಕಿಡಿ

ಕೇಂದ್ರ ರೈಲ್ವೆ ಸಚಿವಾಲಯವು ಹಿರಿಯ ನಾಗರಿಕರಿಗಿದ್ದ ವಿನಾಯತಿಯನ್ನೂ ಕಿತ್ತುಕೊಂಡು 3,700 ಕೋಟಿ...

ಪೋಲಿಯೊ ನಿರ್ಮೂಲನೆ ಸ್ಥಿತಿಯನ್ನು ಕಾಯ್ದುಕೊಳ್ಳುವುದು ಮುಖ್ಯ: ಆರೋಗ್ಯ ಸಚಿವ ದಿನೇಶ್ ಗುಂಡೂರಾವ್

ಭಾರತ ಪೋಲಿಯೊ ಮುಕ್ತ ರಾಷ್ಟ್ರವಾಗಿದ್ದನ್ನ ನಾವು ಮುಂದಿನ ದಿನಗಳಲ್ಲೂ ಕಾಯ್ದುಕೊಳ್ಳುವುದು ಮುಖ್ಯವಾಗಿದೆ....