ಸಿಇಸಿ ವಿರುದ್ಧದ ಕಾದಾಟಕ್ಕೆ ಸುಪ್ರೀಂ ಕೋರ್ಟ್ಅನ್ನು ಎಳೆಯಬೇಡಿ: ಸಿಜೆಐ ಸೂರ್ಯಕಾಂತ್

Date:

ಮುಖ್ಯ ಚುನಾವಣಾ ಆಯುಕ್ತ (CEC) ಗ್ಯಾನೇಶ್ ಕುಮಾರ್ ವಿರುದ್ಧ ದೆಹಲಿಯಲ್ಲಿ ನಡೆಯುತ್ತಿರುವ ಸರಣಿ ಪ್ರತಿಭಟನೆಗಳು ಮತ್ತು ರಾಜಕೀಯ ಗೊಂದಲಗಳ ಸುಳಿಗೆ ಸುಪ್ರೀಂ ಕೋರ್ಟ್ ಅನ್ನು ಯಾವುದೇ ಕಾರಣಕ್ಕೂ ಎಳೆದು ತರಬಾರದು ಎಂದು ಭಾರತದ ಮುಖ್ಯ ನ್ಯಾಯಮೂರ್ತಿ (CJI) ಸೂರ್ಯಕಾಂತ್ ಹೇಳಿದ್ದಾರೆ.

- Advertisement -

ಸಿಜೆಪಿ ಮತ್ತು ವಿಪಕ್ಷಗಳು ನಡೆಸಿದ ಪ್ರತಿಭಟನೆಗಳ ವೇಳೆ ವಕೀಲರನ್ನು ಪೊಲೀರು ವಶಕ್ಕೆ ಪಡೆದಿದ್ದನ್ನು ಪ್ರಶ್ನಿಸಿ ಸಲ್ಲಿಸಲಾಗಿದ್ದ ಅರ್ಜಿಯನ್ನು ಸೂರ್ಯಕಾಂತ್ ನೇತೃತ್ವದ ತ್ರಿಸದಸ್ಯರ ಪೀಠ ವಿಚಾರಣೆ ನಡೆಸಿದೆ. ಈ ವೇಳೆ ಮಾತನಾಡಿದ ಸಿಜೆಪಿ ಸೂರ್ಯಕಾಂತ್, “ಪ್ರತಿಭಟಿಸುವುದು ದೇಶದ ನಾಗರಿಕರ ಹಕ್ಕು. ಆದಾಗ್ಯೂ, ದೇಶದ ಅತ್ಯುನ್ನತ ನ್ಯಾಯಾಲಯದ ದೈನಂದಿನ ಕಲಾಪಗಳಿಗೆ, ವಕೀಲರು, ಸಿಬ್ಬಂದಿ ಹಾಗೂ ಕಕ್ಷಿದಾರರ ಸಂಚಾರಕ್ಕೆ ಯಾವುದೇ ರೀತಿಯ ಅಡೆತಡೆ ಉಂಟಾಗಬಾರದು” ಎಂದು ಹೇಳಿದ್ದಾರೆ.

ಇನ್ನಷ್ಟು ವಿಶೇಷ ಲೇಖನಗಳಿಗಾಗಿ, ಇಲ್ಲಿ ಕ್ಲಿಕ್ ಮಾಡಿ →

₹2,000 ಕೋಟಿ ಆಸ್ತಿ, 3 ಕೋಟಿಗೆ ಡೀಲ್: ಸಾಲದಾತರಿಗೆ...

ಮುಂಬೈನ BKCಯಲ್ಲಿ ₹2,000 ಕೋಟಿ ಬೆಲೆಬಾಳುವ ಪ್ರಾಜೆಕ್ಟ್ ಕೇವಲ ₹3 ಕೋಟಿಗೆ ಅದಾನಿ ಪಾಲು! ಆಸ್ತಿಯ ಮೌಲ್ಯವನ್ನು ‘ಶೂನ್ಯ’ ಎಂದು ಬಿಂಬಿಸಿದ್ದು ಹೇಗೆ? ಕೊರ್ಬಾ ವೆಸ್ಟ್‌ನಲ್ಲಿ ತನ್ನದೇ ಕಂಪನಿಗೆ ತಾನೇ ಮತ ಹಾಕಿಕೊಂಡ...

ದೆಹಲಿಯ ಬಂಧನಗಳು ಮತ್ತು ಮಹಾತ್ಮ ಗಾಂಧಿ

ವ್ಯವಸ್ಥೆಗಳು ದುರ್ಬಲವಾಗುತ್ತಿರುವ ಇಂದಿನ ಕಾಲದಲ್ಲಿ, ಕೋಪಗೊಂಡ ಯುವಕರ ಬೀದಿ ಪ್ರತಿಭಟನೆಗಳೇ ಒಂದು ಹೊಸ ನಿಯಂತ್ರಣ ವ್ಯವಸ್ಥೆಯಾಗಿ ನಿಲ್ಲುತ್ತಿವೆ ಎಂದೆನಿಸುತ್ತದೆ. ಜನರಿಗೆ ಮತದಾನದ ಹಕ್ಕನ್ನು ಮತ್ತೆ ದೊರಕಿಸಿಕೊಡುವುದಕ್ಕೂ ಇಂತಹ ಹೋರಾಟಗಳತ್ತ ಮುಖ ಮಾಡಬೇಕಾಗಿದೆ. ಸಾರ್ವಜನಿಕರು...

ಶಿಕ್ಷಣ ಮಾರಾಟ ಮಾಡಿದ ಶಾಲೆಗಳೇ ಈಗ ಮಾರಾಟಕ್ಕೆ!

ಕರ್ನಾಟಕದಲ್ಲಿ ಖಾಸಗಿ ಶಾಲೆಗಳು ಮುಚ್ಚುವ ಹಂತಕ್ಕೆ ತಲುಪಿದ್ದು, ಮಾರಾಟಕ್ಕೆ ಸಜ್ಜಾಗಿವೆ. ಕೋವಿಡ್-19 ಆಕ್ರಮಣದ ನಂತರದಲ್ಲಿ ಖಾಸಗಿ ಶಾಲೆಗಳಲ್ಲಿ ದಾಖಲಾತಿಯಲ್ಲಿ ಭಾರೀ ಕುಸಿತ, ಪ್ರತಿಷ್ಠಿತ ಶಾಲೆಗಳ ಜೊತೆಗೆ ಪೈಪೋಟಿ, ಮೂಲಭೂತ ಸೌಕರ್ಯಕ್ಕೆ ತಕ್ಕಂತೆ ಲಾಭದ...

 “ಪ್ರಜಾಪ್ರಭುತ್ವಯಲ್ಲಿ ಎಲ್ಲ ರೀತಿಯ ಶಾಂತಿಯುತ ಚಟುವಟಿಕೆಗಳು ನಡೆಯಲಿ. ಆದರೆ, ಕನಿಷ್ಠ ಸುಪ್ರೀಂ ಕೋರ್ಟ್ ಕಾರ್ಯಾಚರಣೆ ಮತ್ತು ಪ್ರಕ್ರಿಯೆಗಳಿಗೆ ತೊಂದರೆಯಾಗಬಾರದು. ನಾನು ಪ್ರತಿಭಟನಾಕಾರರಲ್ಲೂ ಮನವಿ ಮಾಡಿದ್ದೇನೆ. ಈ ರೀತಿಯ ಯಾವುದೇ ರಾಜಕೀಯ ಘಟನಾವಳಿಗಳಿಗೆ ಸುಪ್ರೀಂ ಕೋರ್ಟ್ ಅನ್ನು ಎಳೆದು ತರಬೇಡಿ” ಎಂದಿದ್ದಾರೆ.

ಇದೆಲ್ಲದರ ನಡುವೆ, ಎಸ್‌ಐಆರ್‌ ರದ್ದತಿ ಮತ್ತು ಗ್ಯಾನೇಶ್ ಕುಮಾರ್ ವಜಾಗಾಗಿ ಒತ್ತಾಯಿಸಿರುವ ರಾಹುಲ್ ಗಾಂಧಿ ನೇತೃತ್ವದ ಕಾಂಗ್ರೆಸ್ ಮತ್ತು ವಿಪಕ್ಷಗಳ ನಿಯೋಗವು ಸುಪ್ರೀಂ ಕೋರ್ಟ್‌ಗೆ ಪಾದಯಾತ್ರೆ ನಡೆಸಲು ನಿರ್ಧರಿಸಿತ್ತು. ಆದರೆ, ಪ್ರಕಟಿತ ಪ್ರಕರಣಗಳ ವಿಚಾರಣೆ ಬಾಕಿ ಇರುವುದು ಹಾಗೂ ಆಡಳಿತಾತ್ಮಕ ಮಾರ್ಗಗಳ ಮೂಲಕ ಇಂತಹ ಕುಂದುಕೊರತೆಗಳನ್ನು ಪರಿಹರಿಸಲು ಸಾಧ್ಯವಿಲ್ಲ ಎಂಬ ಕಾರಣ ನೀಡಿರುವ ಸಿಜೆಐ, ಭೇಟಿಗೆ ಕೋರಿದ್ದ ಮನವಿಯನ್ನು ತಿರಸ್ಕರಿಸಿದ್ದರು.

ಇಷ್ಟೇ ಅಲ್ಲದೆ, ನವದೆಹಲಿಯ ವಿಜ್ಞಾನ ಭವನದಲ್ಲಿ ನಡೆದ ರಾಷ್ಟ್ರೀಯ ಮಾನವ ಹಕ್ಕುಗಳ ಆಯೋಗದ (NHRC) 33ನೇ ವಾರ್ಷಿಕೋತ್ಸವದಲ್ಲಿ ಭಾಗವಹಿಸಿದ್ದ ಸಿಜೆಐ ಸೂರ್ಯಕಾಂತ್ ಅವರನ್ನು ಪ್ರತಿಭಟನೆ ಕುರಿತು ಸುದ್ದಿಗಾರರು ಪ್ರಶ್ನಿಸಿದ್ದಾರೆ. ಇದಕ್ಕೆ ಪ್ರಕ್ರಿಯಿಸಿದ ಸೂರ್ಯಕಾಂತ್, “ಇದು ನನ್ನ ವಿಷಯವಲ್ಲ, ಇದು ಕಾನೂನು ಮತ್ತು ಸುವ್ಯವಸ್ಥೆಗೆ ಸಂಬಂಧಿಸಿದ ವಿಷಯವಾದ್ದರಿಂದ ನನ್ನ ವ್ಯಾಪ್ತಿಗೆ ಬರುವುದಿಲ್ಲ” ಎಂದು ಹೇಳಿದ್ದು, ವಿವಾದದಿಂದ ದೂರ ಉಳಿದಿದ್ದಾರೆ.  

ಪೋಸ್ಟ್ ಹಂಚಿಕೊಳ್ಳಿ:

ಪೋಸ್ಟ್ ಹಂಚಿಕೊಳ್ಳಿ:

ಈ ಹೊತ್ತಿನ ಪ್ರಮುಖ ಸುದ್ದಿ

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

₹2,000 ಕೋಟಿ ಆಸ್ತಿ, 3 ಕೋಟಿಗೆ ಡೀಲ್: ಸಾಲದಾತರಿಗೆ ನಾಮ ಹಾಕಿದ ಅದಾನಿ ವೃತ್ತಾಂತ

ಮುಂಬೈನ BKCಯಲ್ಲಿ ₹2,000 ಕೋಟಿ ಬೆಲೆಬಾಳುವ ಪ್ರಾಜೆಕ್ಟ್ ಕೇವಲ ₹3 ಕೋಟಿಗೆ...

ರಾಹುಲ್ ಗಾಂಧಿ-ಖರ್ಗೆ ಭೇಟಿ ಮನವಿ ತಿರಸ್ಕರಿಸಿದ CJI ಸೂರ್ಯಕಾಂತ್!

ಮತದಾರರ ಪಟ್ಟಿ ಅಕ್ರಮ ಹಾಗೂ ‘ವೋಟ್ ಚೋರಿ’ ಆರೋಪಗಳ ಕುರಿತು ಮಾಹಿತಿ...

ನಿಮ್ಮ ಬ್ಯಾಂಕ್ ಖಾತೆಗೆ ದಿಢೀರ್ ಹಣ ಬಂತೇ? ಎಚ್ಚರ, ಇದು ‘ಹಣ ಜಮೆ ಮಾಡುವ’ ವಂಚಕರ ಹೊಸ ಜಾಲ!

ನಿಮ್ಮ ಬ್ಯಾಂಕ್ ಖಾತೆಗೆ ಅಪರಿಚಿತ ಮೂಲಗಳಿಂದ ಆಕಸ್ಮಿಕ ವಾಗಿ ಹಣ ಜಮೆಯಾಗಿದೆಯೆ?...

ದೆಹಲಿ ಪೊಲೀಸರ ಭೇಟಿಗೆ ಮುಂದಾದ ಸಿಜೆಪಿ ನಾಯಕರು: ಪ್ರತಿಭಟನೆಗೆ ಅನುಮತಿ ಕೋರಲು ನಿರ್ಧಾರ

ಏಕಪಕ್ಷೀಯ ನಿರ್ಧಾರ ಕೈಗೊಂಡ ಮುಖ್ಯ ಚುನಾವಣಾ ಆಯುಕ್ತ (ಸಿಇಸಿ) ಗ್ಯಾನೇಶ್ ಕುಮಾರ್...